
ನಟಿ ದೀಪಿಕಾ ದಾಸ್ ಕಿರುತೆರೆಯಲ್ಲಿ ಆಕ್ಟಿವ್ ಆಗಿದ್ದ ನಟಿ. ಇವರ ನಟನೆಯ ನಾಗಿನಿ ಸೀರಿಯಲ್ ಸಖತ್ ಫೇಮಸ್ ಆಗಿತ್ತು. ಆ ಮೇಲೆ ಬಿಗ್‌ಬಾಸ್‌ಗೆ ಹೋದ ನಟಿ ಅಲ್ಲೂ ಸದ್ದು ಮಾಡಿದ್ದರು. ಬಿಗ್ ಬಾಸ್’ ಸೀಸನ್ 9 ಶೋ ಮುಗಿದ ಮೇಲೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸಿದ್ದರೂ ಅದೇನು ಅಂಥಾ ಹೆಸರು ತರಲಿಲ್ಲ. ಆದರೆ ಕಿರುತೆರೆಯಲ್ಲಿ ಇವರ ನಟನೆಯ ಕೃಷ್ಣ ರುಕ್ಮಿಣಿ, ನಾಗಿಣಿ, ಬಿಗ್ ಬಾಸ್ ಶೋಗಳು ಸಖತ್ ಪಾಪ್ಯುಲರ್ ಆದವು. ಈ ಸೀರಿಯಲ್, ಬಿಗ್‌ಬಾಸ್ ಅಂತೆಲ್ಲ ಸುದ್ದಿಯಲ್ಲಿದ್ದ ನಟಿ ಏಕ್‌ದಂ ತನಗೆ ಮದುವೆ ಆಗಿದೆ ಅಂತ ಹೇಳ್ಬಿಟ್ರೆ ಅವರನ್ನೇ ನಂಬಿರೋ ಗಂಡು ಫ್ಯಾನ್ಸ್ ಕಥೆ ಏನಾಗಬೇಡ.. ಆದರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳೋದೆ ನಾಗಿನಿ ನಟಿ ತನ್ನ ಹನಿಮೂನ್ ಫೋಟೋಗಳನ್ನೂ ಪೋಸ್ಟ್ ಮಾಡತೊಡಗಿದರು. ಮದುವೆಗೆ ಮೊದಲೂ ಸಾಕಷ್ಟು ಸುತ್ತಾಡುತ್ತಿದ್ದ ದೀಪಿಕಾ ದಾಸ್ ಅವರು ಈಗ ಪತಿಯೊಂದಿಗೆ ಹೊಸ ಹೊಸ ರಾಷ್ಟ್ರಗಳಿಗೆ ಪ್ರವಾಸ ಹೋಗುತ್ತಿದ್ದಾರೆ. ಫೋಟೋಸ್ ಕೂಡಾ ಶೇರ್ ಮಾಡುತ್ತಿದ್ದಾರೆ.
ಅದರಲ್ಲೂ ಫೇರಿ ಚಿಮ್ನೀಸ್ ವ್ಯಾಲಿಯಲ್ಲಿ ನಟಿ ಆಕರ್ಷಕವಾಗಿ ಪೋಸ್ ಕೊಟ್ಟಿದ್ದು ಸಖತ್ ವೈರಲ್ ಆಗಿತ್ತು. ಆಕರ್ಷಕವಾಗಿದ್ದ ಲೊಕೇಷನ್ ಎಕ್ಸ್ಪ್ಲೋರ್ ಮಾಡಿದ ನಟಿ ಸೂಪರ್ ಆಗಿ ಪೋಸ್ ಕೊಟ್ಟಿದ್ದು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದರು.
ಹಾಗೆ ನೋಡಿದರೆ ಕನ್ನಡ ಕಿರುತೆರೆಯ ನಾಗಿಣಿ ಧಾರಾವಾಹಿ ನಟಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಯಾವ ಧಾರಾವಾಹಿ ಹಾಗೂ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳದೇ ಪತಿ ಜೊತೆ ಪ್ರವಾಸದಲ್ಲಿ ಸಖತ್ ಬ್ಯುಸಿಯಾಗಿ ಬಿಟ್ಟರು. ಸುಂದರ ಸ್ಥಳಗಳಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಇನ್‌ಸ್ಟಾಗ್ರಾಂನಲ್ಲಿ ದೀಪಿಕಾ ದಾಸ್ ಆ್ಯಕ್ಟಿವ್ ಆಗಿ ಬಿಟ್ಟರು
ಸರಿ ಇನ್ಮೇಲೆ ಇವ್ರು ಫುಲ್ ಟೈಮ್ ಫ್ಯಾಮಿಲಿಗೇ ಕೊಡ್ತಾರೇನೋ ಅಂತ ಅಂದುಕೊಂಡಿದ್ದ ಇವರ ಫ್ಯಾನ್ಸ್‌ಗೆ ಇವರು ‘ಅಂತರಪಟʼ ಧಾರಾವಾಹಿಯಲ್ಲಿ ಕಾಣಿಸಿಕೊಂಡಾಗ ಅಚ್ಚರಿ ಆಗಿತ್ತು. ಈ ಸೀರಿಯಲ್‌ನಲ್ಲಿ ನಟಿ ದೀಪಿಕಾ ದಾಸ್ ಸಮೀರಾ ಪಾತ್ರದ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ಸಂಸ್ಥೆಯೊಂದರ ಸಿಇಓ ಆಗಿ ಬಣ್ಣ ಹಚ್ಚಿದ್ದಾರೆ. ಈ ಮೂಲಕ ದೀಪಿಕಾ ದಾಸ್ ‘ಅಂತರಪಟ’ ಸೀರಿಯಲ್‌ಗೆ ಸಾಥ್ ನೀಡಿದ್ದಾರೆ. ಅತಿಥಿ ಪಾತ್ರದಲ್ಲಿ ನಟಿ ಅಭಿನಯಿಸಿದ್ದಾರೆ. ಆದರೆ ಇದು ಕೇವಲ ಅತಿಥಿ ಪಾತ್ರ ಮಾತ್ರ. ಆದರೆ ದೀಪಿಕಾ ದಾಸ್ ರಂಥಾ ಬೇಡಿಕೆಯ ನಟಿ ಮತ್ತೇನೋ ಪ್ಲಾನ್‌ಗೆ ಸ್ಕೆಚ್ ಹಾಕ್ತಿದ್ದಾರ ಅನ್ನೋ ಅವರ ಫ್ಯಾನ್ಸ್ ಅನುಮಾನ ಇದೀಗ ನಿಜ ಆಗೋದ್ರಲ್ಲಿದೆ.
ಈ ನಟಿ ಏಕಾಏಕಿ ಗುಡ್ ನ್ಯೂಸ್ ಕೊಡೋದ್ರಲ್ಲಿದ್ದಾರೆ. ಇವತ್ತು ಸಂಜೆ ಹೊತ್ತಿಗೆ ಆ ಗುಡ್ ನ್ಯೂಸ್ ಏನು ಅನ್ನೋದು ಅನೌನ್ಸ್ ಆಗಲಿದೆ. ಮದುವೆ ಆದ್ಮೇಲೆ ಹೊಸ ಅನೌನ್ಸ್ ಮೆಂಟ್ ಇದೆ ಅಂದಾಕ್ಷಣ ಮನಸ್ಸಿಗೆ ಬರೋದೇ ಗುಡ್‌ನ್ಯೂಸ್ ಏನಾದ್ರೂ ಇದೆಯಾ, ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಒಂದಿಷ್ಟು ಜನ ಬೇಬಿ ಬಂಪ್‌ನಲ್ಲಿ ಓಡಾಡ್ತಿರುವಾಗ ದೀಪಿಕಾ ಅವ್ರೂ ಈ ಸಾಲಿಗೆ ಸೇರ್ತಾರ ಅನ್ನೋದು. ಆದರೆ ಮಾಹಿತಿಯ ಪ್ರಕಾರ ಅವರು ಇವತ್ತು ಸಂಜೆ ತನ್ನ ಹೊಸ ಸಿನಿಮಾದ ಅನೌನ್ಸ್‌ಮೆಂಟ್ ಮಾಡುವ ನಿರೀಕ್ಷೆ ಇದೆ. ಆ ಸಿನಿಮಾಕ್ಕೆ ಇವರು ನಿರ್ಮಾಣ ಮಾಡ್ತಾರ ಇಲ್ಲ ನಟಿಸ್ತಾರ ಅನ್ನೋದು ಸಂಜೆ ಹೊತ್ತಿಗೆ ಗೊತ್ತಾಗುತ್ತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.