ಸೀತಾರಾಮ ಸೀರಿಯಲ್‌- ಡಾನ್ಸ್‌ ಕರ್ನಾಟಕ ಡಾನ್ಸ್‌ ಷೋನಿಂದ ಮೇಘನಾ ತುರ್ತು ಔಟ್‌! ಫ್ಯಾನ್ಸ್‌ ಶಾಕ್‌

By Suchethana D  |  First Published Sep 2, 2024, 1:37 PM IST

ಸೀತಾರಾಮ ಸೀರಿಯಲ್‌ನಲ್ಲಿ ಪ್ರಿಯಾ ಪಾತ್ರಧಾರಿಯಾಗಿರುವ ಹಾಗೂ ಡಾನ್ಸ್‌ ಕರ್ನಾಟಕ ಡಾನ್ಸ್‌ ಷೋನಲ್ಲಿ ಸ್ಪರ್ಧಿಯಾಗಿರುವ ಮೇಘನಾ ಶಂಕರಪ್ಪ ಕೆಲ ದಿನಗಳ ಮಟ್ಟಿಗೆ ಮಿಸ್‌ ಆಗಲಿದ್ದಾರೆ. ಏನಾಯ್ತು ನಟಿಗೆ?
 


ಮೇಘನಾ ಶಂಕರಪ್ಪ ಎಂದರೆ ಹೆಚ್ಚಿನವರಿಗೆ ತಿಳಿಯಲಿಕ್ಕಿಲ್ಲ. ಆದರೆ, ಸೀತಾರಾಮ ಸೀರಿಯಲ್‌ ಪ್ರಿಯಾ ಎಂದರೆ ಎಲ್ಲರ ಕಣ್ಣಮುಂದೆ ಬರುವುದು ಚಿನಕುರುಳಿ ನಟಿ. ಸೀರಿಯಲ್‌ನಲ್ಲಿ ಮಾತ್ರವಲ್ಲದೇ, ನಿಜ ಜೀವನದಲ್ಲಿಯೂ ಪಟಪಟ ಎಂದು ಮಾತನಾಡುವ ಪ್ರಿಯಾಳನ್ನು ಸದ್ಯ ಸೀತಾರಾಮ ಮತ್ತು ಡಾನ್ಸ್‌ ಕರ್ನಾಟಕ ಡಾನ್ಸ್‌ ಷೋ ವೀಕ್ಷಕರು ಮಿಸ್‌ ಮಾಡಿಕೊಳ್ಳಲಿದ್ದಾರೆ. ಸೀತಾರಾಮ ಸೀರಿಯಲ್‌ನಲ್ಲಿ ಸದ್ಯ ನಟಿಗೆ ಕ್ಯಾನ್ಸರ್‌ ಇರುವಂತೆ ತೋರಿಸಲಾಗಿದೆ. ಇದು ಸೀರಿಯಲ್‌ ಪ್ರೇಮಿಗಳಿಗೆ ನೋವು ಉಂಟು ಮಾಡಿದ್ದಂತೂ ನಿಜ. ಅಮ್ಮನಾಗಲು ಬಯಸಿರುವ ಪ್ರಿಯಾಳಿಗೆ  ಬ್ರೆಸ್ಟ್‌ ಕ್ಯಾನ್ಸರ್‌ ಇರುವಂತೆ ತೋರಿಸಲಾಗಿದೆ. ಈ ಸತ್ಯ ಸದ್ಯ ಗೊತ್ತಿರುವುದು ಪ್ರಿಯಾ ಗಂಡ ಅಶೋಕ್‌ಗೆ ಮಾತ್ರ. ಈ ಸತ್ಯವನ್ನು ಹೇಳಲೂ ಅಗದೇ, ಮುಚ್ಚಿಡಲೂ ಆಗದೇ ಒದ್ದಾಡುತ್ತಿದ್ದಾನೆ ಅಶೋಕ್‌. ಅದೇ ಇನ್ನೊಂದೆಡೆ, ತನ್ನ ಮಗಳು ಗರ್ಭಿಣಿ ಆಗದೇ ಇರಲು ಅಶೋಕೇ ಕಾರಣ ಎಂದುಕೊಂಡಿದ್ದಾಳೆ ಪ್ರಿಯಾ ಅಮ್ಮ.

ಒಟ್ಟಿನಲ್ಲಿ ಸೀರಿಯಲ್‌ನಲ್ಲಿ ಗಂಭೀರ ಕಾಯಿಲೆಯಿಂದ ಬಳಲುತ್ತಿರೋ ಪ್ರಿಯಾ, ಈಗ ನಿಜ ಜೀವನದಲ್ಲಿಯೂ ಅನಾರೋಗ್ಯಪೀಡಿತರಾಗಿದ್ದಾರೆ. ಕಣ್ಣಿನ ಮೇಲೆ ಗಾಯ ಆಗಿರುವ ಫೋಟೋ ಪೋಸ್ಟ್‌ ಮಾಡಿಕೊಂಡಿರುವ ನಟಿ ಮೇಘನಾ ಶಂಕಪ್ಪ,  ಅನಾರೋಗ್ಯದ ಕಾರಣಕ್ಕೆ ನಾನು ಕೆಲ ದಿನಗಳ ಕಾಲ ‘ಸೀತಾರಾಮ’ ಹಾಗೂ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಷೋನಲ್ಲಿ ಭಾಗಿಯಾಗೋದಿಲ್ಲ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ತಮಗೆ ಏನಾಗಿದೆ ಎಂಬ ಬಗ್ಗೆ ನಟಿ ಸ್ಪಷ್ಟಪಡಿಸಲಿಲ್ಲ. ಆದರೆ, ಅನಾರೋಗ್ಯ ಎಂದು ಹೇಳಿದ್ದಾರೆ. ಆದರೆ ಈ ಫೋಟೋದಲ್ಲಿ ನಟಿಗೆ ಗಾಯ ಆಗಿರುವುದನ್ನು ನೋಡಬಹುದು. 

Tap to resize

Latest Videos

ಮುಗುತಿಯಾಗಿದ್ರೆ ಮೇಘನಾ ಮೂಗಲ್ಲೇ ಇರ್ತಿದ್ದೆ ಎಂದ ಗಾಯಕ! ಹುಷಾರಪ್ಪಾ, ಬಾಯ್​ಫ್ರೆಂಡ್ ಇದ್ದಾನೆ ಅಂತಿದ್ದಾರೆ ಫ್ಯಾನ್ಸ್​

ಇನ್ನು ಮೇಘನಾ ಡಾನ್ಸ್‌ ಕರ್ನಾಟಕ ಡಾನ್ಸ್‌ ವೇದಿಕೆಯಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದ ಸ್ಪರ್ಧಿಗಳಿಗೆ ಸಕತ್‌ ಕಾಂಪಿಟೀಷನ್‌ ಕೊಡುತ್ತಿದ್ದಾರೆ. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಎಲ್ಲಿಯೂ ಸದ್ಯ ನಟಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ಅದರೆ ಯಾವಾಗ ಅವರು ವಾಪಸ್‌ ಬರುತ್ತಾರೆಯೋ ತಿಳಿದುಬಂದಿಲ್ಲ. ಆದ್ದರಿಂದ ಇದಾಗಲೇ ಶೂಟಿಂಗ್‌ ಮುಗಿದಿರುವ ಎಪಿಸೋಡ್‌ಗಳಲ್ಲಷ್ಟೇ ನಟಿ ಕಾಣಿಸಿಕೊಳ್ಳಲಿದ್ದು, ನಂತರ ಮಧ್ಯೆ ಒಂದಿಷ್ಟು ದಿನ ಮಿಸ್‌ ಆಗಲಿದ್ದಾರೆ. 

ಮೇಘನಾ ಶಂಕರಪ್ಪ ಅವರ ಬಣ್ಣದ ಬದುಕಿನ ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್​ಗೂ ಮುನ್ನ ಅವರು,  ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ.  ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.  

ಒಂದು ಜೋಕ್​ ಹೇಳ್ತೀನಿ ಅಂತ ಇಂಥ ಜೋಕ್​ ಹೇಳೋದಾ ಸೀತಾರಾಮ ಪ್ರಿಯಾ?

click me!