ದೇವರೇನು ಹೂವಿನ ಸುರಿಮಳೆ ಸುರಿಸ್ತಾನಾ ಎಂದು ಚಾಂದನಿ ಕೇಳ್ತಿದ್ದಂತೆಯೇ ನಡೆದೇ ಹೋಯ್ತು ಪವಾಡ!

Published : Apr 12, 2024, 10:06 PM IST
ದೇವರೇನು ಹೂವಿನ ಸುರಿಮಳೆ ಸುರಿಸ್ತಾನಾ ಎಂದು ಚಾಂದನಿ ಕೇಳ್ತಿದ್ದಂತೆಯೇ ನಡೆದೇ ಹೋಯ್ತು ಪವಾಡ!

ಸಾರಾಂಶ

ಸೀತಾ-ರಾಮರ ಮೇಲೆ ಹೂವಿನ ಸುರಿಮಳೆಯಾಗಿದೆ. ಇದನ್ನು ನೋಡಿ ಚಾಂದನಿ ಶಾಕ್​ ಆಗಿದ್ದಾಳೆ. ಅಷ್ಟಕ್ಕೂ ಆಗಿದ್ದೇನು?   

ಸೀತಾ-ರಾಮ ಒಂದಾಗುವುದನ್ನು ಚಾಂದನಿಗೆ ನೋಡಲು ಆಗುತ್ತಿಲ್ಲ. ಸೀತಾ ಸಿಕ್ಕಾಗಲೆಲ್ಲಾ ಪದೇ ಪದೇ ಹಂಗಿಸುತ್ತಲೇ ಇರುತ್ತಾಳೆ. ರಾಮ್​ ತನಗೆ ಸಿಗುವುದಿಲ್ಲ ಎಂದು ತಿಳಿದರೂ ಸೀತಾಳನ್ನು ಹೇಗಾದರೂ ಮಾಡಿ ರಾಮ್​ನಿಂದ ದೂರ ಮಾಡುವ ಯೋಚನೆ ಅವಳದ್ದು. ಅದಕ್ಕೆ ತಕ್ಕಂತೆ ಚಿಕ್ಕಮ್ಮ ಭಾರ್ಗವಿ ಕುತಂತ್ರ ಬೇರೆ. ಪ್ರಿಯಾ ಮತ್ತು ಅಶೋಕ್​ ಮದುವೆ ಮುಗಿಯುವುದರೊಳಗೆ ಅವರಿಬ್ಬರನ್ನೂ ಬೇರೆ ಮಾಡುತ್ತೇನೆ ಎಂದಿದ್ದಾಳೆ ಭಾರ್ಗವಿ. ಇದನದ್ನೇ ನಂಬಿಕೊಂಡಿದ್ದಾಳೆ ಚಾಂದನಿ. ಈ ಮಧ್ಯೆಯೇ ಸೀತಾಳಿಗೆ ರಾಮ್​ ಕೊಡಿಸಿರೋ ಸೀರೆ ಮೇಲೆ ಚಾಂದನಿ ಕಣ್ಣು ಬಿದ್ದಿದೆ. ಅದನ್ನು ತನ್ನದು ಮಾಡಿಕೊಳ್ಳಬೇಕು ಎಂದುಕೊಂಡಿದ್ದಳು. ಅದು ಸಾಧ್ಯವಾಗಿರಲಿಲ್ಲ. ಅದಕ್ಕೆ ರಾಮ್​ ಕೊಡಿಸಿದ ಸೀರೆ ನಿನಗೆ ಸಿಕ್ಕಿದೆ, ಆದರೆ ರಾಮ್​ ಸಿಗಲ್ಲ ಎಂದಿದ್ದಾಳೆ.

ಯಾರಿಗೆ ಯಾರು ಸಿಗಬೇಕು ಎನ್ನುವುದನ್ನು ದೇವರೇ ನಿಗದಿ ಮಾಡಿರುತ್ತಾನೆ ಎಂದಿದ್ದಾಳೆ ಸೀತಾ. ಆಗ ಚಾಂದನಿ ಓಹೋ ದೇವರು ನಿಮ್ಮಿಬ್ಬರನ್ನು ಒಂದು ಮಾಡಿ ಹೂವಿನ ಮಳೆ ಸುರಿಸ್ತಾನಾ ಎಂದು ಕೇಳಿದ್ದಾಳೆ. ಅಷ್ಟರಲ್ಲಿಯೇ ಸೀತಾಳಿಗೆ ಹೂವಿನ ಬಟ್ಟಲನ್ನು ಕೊಟ್ಟು ಅದನ್ನು ದೇವರ ಬಳಿ ಇಟ್ಟುಬರುವಂತೆ ಹೇಳಿದ್ದಾಳೆ. ಸೀತಾ ಹೂವಿನ ಬಟ್ಟಲನ್ನು ತೆಗೆದುಕೊಂಡು ಹೋಗುತ್ತಿದ್ದಂತೆಯೇ ರಾಮ್​ ಅಡ್ಡ ಬಂದು ಹೂವಿನ ಬಟ್ಟಲು ಮೇಲೆ ಹಾರಿ ಅವರ ಮೇಲೆ ಹೂವಿನ ಸುರಿಮಳೆಯಾಗುತ್ತದೆ. ಇದನ್ನು ನೋಡಿ ಚಾಂದನಿಗೆ ಶಾಕ್​ ಆಗುತ್ತದೆ. ಮುಂದೇನು ಎನ್ನುವುದು ಈಗಿರುವ ಕುತೂಹಲ. 

ಹೇಳಿ ಕೇಳಿ ಇವಳು ಭೂಮಿಕಾ, ಸುಮ್ನೆ ಬಿಡ್ತಾಳಾ? ಅತ್ಯಮ್ಮಾ ನಿನ್​ ಟೈಂ ಶುರುವಾಯ್ತಮ್ಮೋ ಹುಷಾರ್​ ಅಂದ ಫ್ಯಾನ್ಸ್​

ಇದಕ್ಕೂ ಮುನ್ನ,  ಪ್ರಿಯಾ ಮತ್ತು ಅಶೋಕ್​ ಮದುವೆ ಸಂಭ್ರಮ ಶುರುವಾಗಿದೆ. ಮೆಹಂದಿ ಶಾಸ್ತ್ರದ ಸಮಯದಲ್ಲಿ ಚಾಂದನಿ ರಾಮ್​ ಹೆಸರಿನಲ್ಲಿ ಮೆಹಂದಿ ಹಾಕಿಸಿಕೊಂಡು ಅದನ್ನು ಸೀತಾಳಿಗೆ ತೋರಿಸಿದ್ದಾಳೆ. ಹೀಗೆ ತೋರಿಸುವಾಗ, ರಾಮ್​ ತಾತನಿಗೆ ಹಾರ್ಟ್​ ಎಟ್ಯಾಕ್​ ಆಗಿರುವುದನ್ನು ಹೇಳಿದ್ದಾಳೆ. ಅದು ತನಗೆ ಗೊತ್ತು ಎಂದು ಸೀತಾ ಹೇಳಿದಾಗ, ಅದಕ್ಕೆ ಕಾರಣ ಸೀತಾಳೆ ಎಂದು ಪರೋಕ್ಷವಾಗಿ ಹೇಳಿದ್ದಾಳೆ. ರಾಮ್​ ತಾತನಿಗೆ   ಡಿವೋರ್ಸ್​ ಆದವಳು, ಒಬ್ಬಳು ಮಗಳು ಇದ್ದವಳನ್ನು ರಾಮ್ ಪ್ರೀತಿಸುತ್ತಾನೆ ಎನ್ನುವ ವಿಷಯ ತಿಳಿದಿದ್ದರಿಂದ ಹಾರ್ಟ್​ ಎಟ್ಯಾಕ್​ ಆಗಿದೆ ಎಂದಿದ್ದಾಳೆ. ಇದನ್ನು ಕೇಳಿ ಸೀತಾಳಿಗೆ ಶಾಕ್​ ಆಗಿದೆ.

ಅದೇ ಇನ್ನೊಂದೆಡೆ ರಾಮ್​ ಸೀತಾ ಹೆಸರಿನ ಎಸ್​ ಅನ್ನು ಕೈ ಮೇಲೆ ಬರೆಸಿಕೊಂಡಿದ್ದಾನೆ. ಅದನ್ನು ಸೀತಾಳಿಗೆ ತೋರಿಸಿದ್ದಾನೆ. ಸೀತಾ ನಾಚಿಕೊಂಡಿದ್ದಾಳೆ. ಇದನ್ನು ನೋಡಿ ಚಿಕ್ಕಮ್ಮ ಉರಿದುಕೊಂಡಿದ್ದಾಳೆ. ಸೀತಾ ಮತ್ತು ರಾಮ್​ ಕಣ್ಣಿನಲ್ಲಿಯೇ ಮಾತನಾಡುವುದನ್ನು ಚಿಕ್ಕಮ್ಮ ಮತ್ತು ಚಾಂದನಿಗೆ ಸಹಿಸಲು ಸಾಧ್ಯವಾಗ್ತಿಲ್ಲ. ಹಾಗೆನೇ ಇನ್ನೊಂದೆಡೆ, ತಾತನ ಎದುರು ಸತ್ಯಜೀತ್​, ರಾಮ್​ ಯಾರನ್ನು ಇಷ್ಟಪಡುತ್ತಾನೋ ಅವಳನ್ನೇ ಮದುವೆಯಾಗಬೇಕು ಎನ್ನುತ್ತಿದ್ದಾನೆ. ಒಟ್ಟಿನಲ್ಲಿ ಸೀರಿಯಲ್​ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ. 
ಮಾಜಿ v/s ಹಾಲಿ ಪ್ರೇಯಸಿ: ರಾಮ್​ ಕೈಯಲ್ಲಿ ಸೀತೆ ಹೆಸರ ಮೆಹಂದಿ, ಚಾಂದನಿ ಕೈಯಲ್ಲಿ ರಾಮ್​ ಹೆಸರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?