ಈ ಬಾರಿಯ ಟಿಆರ್‌ಪಿ ಲಿಸ್ಟ್‌ನಲ್ಲಿ ಮೊದಲ ಐದು ಸೀರಿಯಲ್‌ಗಳ್ಯಾವುದು? ಅದ್ರಲ್ಲಿ ನಿಮ್ ಫೇವರಿಟ್ ಸೀರಿಯಲ್ ಸೇರಿದೆಯಾ ನೋಡ್ಕೊಳ್ಳಿ.
ಪ್ರತೀ ಬಾರಿ ಟಿಆರ್‌ಪಿ ಲಿಸ್ಟ್ ಹೊರಬಿದ್ದಾಗಲೂ ನಮ್ಮ ಫೇವರಿಟ್ ಸೀರಿಯಲ್ ಈ ಲಿಸ್ಟ್‌ನಲ್ಲಿದೆಯಾ. ಯಾವೆಲ್ಲ ಸೀರಿಯಲ್‌ಗಳು ಕಳೆದ ಬಾರಿಗಿಂತ ಮುಂದಿನ ಪ್ಲೇಸ್‌ಗೆ ಹೋಗಿವೆ. ಯಾವ ಸೀರಿಯಲ್ ಹಿಂದೆ ಬಿದ್ದಿದೆ ಅನ್ನೋದೆಲ್ಲ ಹಲವರಿಗೆ ಇಂಟೆರೆಸ್ಟಿಂಗ್ ಅನಿಸುತ್ತೆ. ಈ ಬಾರಿಯ ಟಿ ಆರ್ ಪಿ ಲೀಸ್ಟ್ ಅಂಥ ಕುತೂಹಲಿಗಳ ಹುಬ್ಬೇರಿಸುವ ಹಾಗೆ ಮಾಡಿವೆ. ನಾವೀಗ 5ನೇ ಸ್ಥಾನದಲ್ಲಿರುವ ಸೀರಿಯಲ್ ನಿಂದ ಶುರು ಮಾಡಿ ಒಂದನೇ ಸ್ಥಾನದಲ್ಲಿರುವ ಸೀರಿಯಲ್‌ವರೆಗಿನ ಲೀಸ್ಟ್ ನೋಡ್ಕೊಂಡು ಬರೋಣ.
5. ಪಾರು
ಪಾರು ಸೀರಿಯಲ್‌ನಲ್ಲಿ ಈ ಬಾರಿ ವೀಕ್ಷಕರಿಗೆ ಕಚಗುಳಿ ಕೊಟ್ಟಿದ್ದುಪಾರು ಆದಿತ್ಯ ಎಪಿಸೋಡ್. ಈ ಎಪಿಸೋಡ್‌ನಲ್ಲಿ ಆದಿತ್ಯ ಪಾರು ನಡುವಿನ ಒಡನಾಟ, ಪ್ರೀತಿ ಎಲ್ಲವೂ ವೀಕ್ಷಕರಿಗೆ ಇಷ್ಟವಾಗಿದೆ. ಜನ ಈ ಸೀರಿಯಲ್‌ಅನ್ನು ಇಷ್ಟಪಟ್ಟು ನೋಡುತ್ತಿದ್ದಾರೆ. ಈ ಬಾರಿಯ ವ್ಯಾಲೆಂಟೇನ್ ಸೆಲೆಬ್ರೇಶನ್ ಅನ್ನು ಸಹ ಬಹಳಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ. ದಿಲೀಪ್ ರಾಜ್ ನಿರ್ಮಿಸುತ್ತಿರುವ ಈ ಸೀರಿಯಲ್‌ಅನ್ನು ಗುರುಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಮೋಕ್ಷಿತಾ ಪೈ, ವಿನಯಾ ಪ್ರಸಾದ್, ಸಿದ್ದು ಮೂಲಿಮನಿ, ಶರತ್ ಭಾರದ್ವಾಜ್ ಮತ್ತಿತರರು ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆಯುತ್ತಿದ್ದಾರೆ.
ನನ್ನರಸಿ ರಾಧೆಯ ವೈದೇಹಿ- ಹೇಮಾ ಬೆಳ್ಳೂರು ಅಪ್ಪನ ಬಗ್ಗೆ ಭಾವುಕ ಮಾತು ...
4. ನಾಗಿನಿ 2
ನಾಗಿನಿ ಅನ್ನೋ ಶೀರ್ಷಿಕೆಯಲ್ಲೇ ಜನರನ್ನು ಕುತೂಹಲಕ್ಕೆ ತಳ್ಳೋ ಫೋರ್ಸ್ ಇದೆ. ಈ ಸೀರಿಯಲ್‌ನಲ್ಲಿ ನಮ್ಮ ಕಲ್ಪನೆ ಕೆರಳಿಸುವಂಥಾ ಕಥೆಯನ್ನೂ ಹೆಣೆದಿದ್ದಾರೆ ನಾಗಿನಿ 2 ಟೀಮ್‌ನವರು. ರಾಮ್‌ಜೀ ಅವರಂತೂ ತಮ್ಮ ನಿರ್ದೇಶನದಲ್ಲಿ ಪಾತ್ರಧಾರಿಗಳಿಂದ ಚೆನ್ನಾಗಿ ಅಭಿನಯ ಹೊರತೆಗಿಸೋದ್ರಲ್ಲಿ ಯಶಸ್ವಿಯಾಗಿದ್ದಾರೆ. ದೀಪಿಕಾ ದಾಸ್ ಅಭಿನಯದ ನಾಗಿನಿ ಸಖತ್ ಹಿಟ್ ಆಗಿದ್ದೇ, ನಾಗಿನಿ 2 ಶುರುವಾಗಿತ್ತು. ಈಗ ಈ ಸೀರಿಯಲ್ ಬಂದು ಒಂದು ವರ್ಷ ಆಗಿದೆ. ಕೆಲವೊಂದು ಸೀಸನ್ ಬಿಟ್ರೆ ಹೆಚ್ಚು ಕಡಿಮೆ ಟಾಪ್ 5 ಲೀಸ್ಟ್ ನೊಳಗೇ ಸ್ಥಾನ ಕಾಯ್ದುಕೊಂಡಿದೆ ನಾಗಿನಿ 2. ನಮ್ರತಾ ಗೌಡ, ನಿನಾದ್ ಮುಖ್ಯ ಪಾತ್ರಗಳಲ್ಲಿ, ಗ್ರಾಫಿಕ್ಸ್ ಹಿನ್ನೆಲೆಯಲ್ಲಿ ವೀಕ್ಷಕರ ಗಮನ ಸೆಳೆಯುವಂತೆ ನಟಿಸುತ್ತಿದ್ದಾರೆ. ಈ ಸೀರಿಯಲ್ ಈಗ ನಾಲ್ಕನೇ ಸ್ಥಾನದಲ್ಲಿದೆ.
ಅನು-ಸೂರ್ಯ ಮದುವೆ ಮುರಿದುಹೋಗಿದೆ, ಸುಬ್ಬು ಒಪ್ಪಿಗೆ ಪಡೆದು ಆರ್ಯ ಮದುವೆ ಆಗ್ತಾರಾ? ...
3. ಜೊತೆ ಜೊತೆಯಲಿ
ಈ ಸೀರಿಯಲ್ ಹೆಸರು ಹೇಳಿದ ಕೂಡಲೇ ಟೈಟಲ್ ಟ್ರ್ಯಾಕ್ ಕಣ್ಮುಂದೆ ಬರುತ್ತೆ. ನೆಕ್ಸ್ಟ್ ಮೊಮೆಂಟ್‌ಗೇ ಅನಿರುದ್ಧ ಮತ್ತು ಮೇಘನಾರ ರೊಮ್ಯಾಂಟಿಕ್ ಸೀನ್ ನೆನಪಾಗುತ್ತೆ. ಆರಂಭದ ಕೆಲವು ದಿನ ಟಾಪ್ 1 ಪ್ಲೇಸ್‌ನಲ್ಲೇ ನಿಂತು ಉಳಿದ ಸೀರಿಯಲ್‌ಗಳಿಗೆ ಸಖತ್ ಫೈಟ್ ನೀಡುತ್ತಿತ್ತು ಜೊತೆಜೊತೆಯಲಿ ಸೀರಿಯಲ್. ನಲವತ್ತೈದರ ಅನಿರುದ್ಧ ಮತ್ತು 20ರ ಮೇಘಾ ಶೆಟ್ಟಿ ಜೋಡಿ ಜನರನ್ನುಆ ಪಾಟಿ ಮೋಡಿ ಮಾಡಿತ್ತು. ಪ್ರೇಮ ಕಹಾನಿಗೇ ಒಂದು ಹೊಸ ಸ್ಪರ್ಶ ನೀಡಿದ ಸೀರಿಯಲ್ ಇದು. ಸದ್ಯ ಇದರಲ್ಲಿ ಆರ್ಯವರ್ಧನ್ ಅನು ಸಿರಿಮನೆ ಮುಂದಿದ್ದ ದೊಡ್ಡ ಕಂಟಕವೊಂದು ದೂರವಾಗಿದೆ. ಸೂರ್ಯನೊಂದಿಗೆ ಅನುಗೆ ನಿಶ್ಚಯವಾಗಿದ್ದ ಮದುವೆ ಮುರಿದುಬಿದ್ದಿದೆ. ಆರ್ಯವರ್ಧನ್ ಹಾಗೂ ಅನು ಪ್ರೀತಿ ಅಂಥಾ ಕಠಿಣ ಸಂಘರ್ಷದಲ್ಲೂ ಹೋರಾಟ ಮಾಡಿ ಉಳಿದುಕೊಂಡಿದೆ. ಸುಧಾರಾಣಿ, ಸೂರ್ಯ ಮತ್ತೆ ಬರೋದಿಲ್ಲ ಅನ್ನೋದು ಖಾತ್ರಿಯಾಗಿದೆ. ಈ ಸೀರಿಯಲ್‌ನ ಮುಂದಿನ ನಡೆಯೂ ಸಖತ್ ಇಂಟೆರೆಸ್ಟಿಂಗ್ ಅನಿಸೋ ಹಾಗಿದೆ. ಹಾಗೆ ನೋಡಿದ್ರೆ ಈ ಸೀರಿಯಲ್ ಕಥೆ ಮರಾಠಿಯ ಸೀರಿಯಲ್ ಒಂದರ ರಿಮೇಕ್. ಆದರೆ ಇದು ಕನ್ನಡದ್ದೇ ಒರಿಜಿನಲ್ ಸೀರಿಯಲ್ ಅನ್ನುವಷ್ಟರ ಮಟ್ಟಿಗೆ ಕನ್ನಡಿಗರು ಈ ಸೀರಿಯಲ್‌ಅನ್ನು ಒಪ್ಪಿಕೊಂಡಿದ್ದಾರೆ. ಕಥೆಯನ್ನೂ ನಮ್ಮ ಪರಿಸರಕ್ಕೆ ಒಗ್ಗಿಕೊಳ್ಳುವಂತೆ ಬದಲಾಯಿಸಲಾಗಿದೆ.
ಹೂ ಮಳೆ: ಯದುವೀರ್ ಅಕ್ಕ ರಿಯಲ್ ಲೈಫ್‌ನಲ್ಲಿ ಡಾಕ್ಟರ್ ಆರತಿ! ...
2. ಗಟ್ಟಿಮೇಳ
ವೇದಾಂತ್ ಅಮೂಲ್ಯ ತಾಜ್‌ಮಹಲ್ ಸೀನ್‌ಗಳು ವೀಕ್ಷಕರ ಕುತೂಹಲ ಇಮ್ಮಡಿಗೊಳಿಸಿದ್ದಂತೂ ಸತ್ಯ. ವೇದಾಂತ್ ಪ್ರೇಮಸೌಧ ತಾಜ್‌ಮಹಲ್‌ಗೇ ತನ್ನ ಹುಡುಗಿ ಅಮೂಲ್ಯಳನ್ನು ಕರೆದೊಯ್ದು ಅಲ್ಲಿ ಮದುವೆಯ ಆಫರ್ ನೀಡಿರುವುದು ಸಖತ್ ಬ್ಯೂಟಿಫುಲ್ ಆಗಿದೆ ಅಂತ ಮತ್ತೆ ಹೇಳ್ಬೇಕಿಲ್ಲವೇನೋ. ಈ ಸೀನ್ ಶೂಟಿಂಗ್‌ಗಾಗಿ ಇಡೀ ಗಟ್ಟಿಮೇಳ ಟೀಮ್ ಆಗ್ರಾಕ್ಕೆ ಪಯಣಿಸಿತ್ತು. ಈ ಹಿಂದಿನ ಸೀನ್‌ಗಳ ಶೂಟಿಂಗ್ ಎಲ್ಲ ಬೆಂಗಳೂರಿನಲ್ಲೇ ನಡೆದಿತ್ತು. ಆದರೆ ಈ ಬಾರಿ ಅಮೂಲ್ಯ ವೇದಾಂತ್ ತಾಜ್ ಮಹಲ್ ಫೋಟೋ, ವೀಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲೂ ಜನರ ಗಮನ ಸೆಳೆದಿದ್ದವು. ಕಳೆದ ಹಲವು ವಾರಗಳಿಂದ ಎರಡನೇ ಸ್ಥಾನದಲ್ಲಿರುವ ಗಟ್ಟಿಮೇಳ ಈ ಬಾರಿಯೂ ಹಿಂದಿನ ಸ್ಥಾನ ಉಳಿಸಿಕೊಂಡಿದೆ. ಅನಿಲ್ ಈ ಸೀರಿಯಲ್ ನಿರ್ದೇಶಕರು. ಈ ಧಾರಾವಾಹಿಯ ನಾಯಕ ನಟ ರಕ್ಷಿತ್ ಗೌಡ ಅವರೇ ಈ ಸೀರಿಯಲ್ ಗೆ ಬಂಡವಾಳ ಹೂಡಿದ್ದಾರೆ. ಸುಧಾ ನರಸಿಂಹರಾಜು, ನಿಶಾ ರವಿಕೃಷ್ಣ, ಅಭಿಷೇಕ್ ದಾಸ್, ಅಶ್ವಿನಿ ಮತ್ತಿತರರು ನಟಿಸಿದ್ದಾರೆ.
1. ಸತ್ಯ
ಮುಂಗಾರು ಮಳೆ ಸಿನಿಮಾದ ಅದ್ಭುತ ದೃಶ್ಯಗಳನ್ನು ನೀವು ಮತ್ತೆ ಮತ್ತೆ ನೋಡಿರಬಹುದು. ಅಂಥಾ ಅದ್ಭುತ ವಿಷ್ಯುವಲ್ಸ್ ನೀಡಿದ ಕೃಷ್ಣ ಅವರೇ ಈ ಸೀರಿಯಲ್‌ನ ನಿರ್ದೇಶಕರು. ವೀಕ್ಷಕರ ಎಕ್ಸ್‌ಪೆಕ್ಟೇಶನ್‌ಗಳು, ಅವರಿಗೆ ಇಷ್ಟವಾಗೋದೇನು ಅನ್ನೋದನ್ನೆಲ್ಲ ಕೃಷ್ಣ ಅವರು ಅರೆದುಕುಡಿದಂತಿದೆ ಅನ್ನೋದಕ್ಕೆ ಈ ಸೀರಿಯಲ್ ಸಾಕ್ಷಿ. ಅವರ ಪತ್ನಿ ಒಂದು ಕಾಲದ ಸೀರಿಯಲ್‌ನ ಫೇಮಸ್ ನಟಿ ಸಪ್ನಾ ಸೀರಿಯಲ್‌ನ ನಿರ್ಮಾಪಕಿ. ಈಕೆ ಕೃಷ್ಣ ಅವರ ಪತ್ನಿ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಸತ್ಯಾ ಸೀರಿಯಲ್ ಶುರುವಾದಾಗಿಂದ ಈವರೆಗೆ ನಂಬರ್ 1 ಪ್ಲೇಸ್ ನಲ್ಲೇ ಇದೆ. ಟಾಮ್ ಬಾಯ್ ಹುಡುಗಿಯೊಬ್ಬಳ ಸಾಹಸ, ಪ್ರಾಮಾಣಿಕತೆ, ನೇರ ನುಡಿ, ಡಿಫರೆಂಟ್ ಮ್ಯಾನರಿಸಂಗಳು ಸಖತ್ ಕ್ಲಿಕ್ ಆಗ್ತಿವೆ. ಜೊತೆಗೆ ಈಗೀಗ ಅಮೂಲ್ ಬೇಬಿ ಹುಡುಗನ ಜೊತೆಗೆ ಈ ರೌಡಿ ಬೇಬಿಯ ಅನುರಾಗವ ಕ್ಷಣಗಳೂ ವೀಕ್ಷಕರಿಗೆ ಇಂಟೆರೆಸ್ಟಿಂಗ್ ಅನಿಸಲಾರಂಭಿಸಿದೆ. ಸಿನಿಮೀಯ ಟಚ್ ಇರೋ ಸೀರಿಯಲ್ ಇದು ಅನ್ನಬಹುದೇನೋ. ಗೌತಮಿ ಜಾಧವ್ ಅವರ ಅಭಿನಯವೂ ಈ ಸೀರಿಯಲ್‌ನ ಪ್ಲಸ್ ಪಾಯಿಂಟ್.