ಕನ್ನಡತಿ ಬಿಟ್ಟು ಎಲ್ಲಿಯೂ ಹೋಗಲ್ಲ; ಬಿಗ್ ಬಾಸ್‌ ಎಂಟ್ರಿ ಬಗ್ಗೆ ಕಿರಣ್ ರಾಜ್‌ ಸ್ಪಷ್ಟನೆ!

Suvarna News   | Asianet News
Published : Feb 28, 2021, 03:12 PM IST
ಕನ್ನಡತಿ ಬಿಟ್ಟು ಎಲ್ಲಿಯೂ ಹೋಗಲ್ಲ; ಬಿಗ್ ಬಾಸ್‌ ಎಂಟ್ರಿ ಬಗ್ಗೆ ಕಿರಣ್ ರಾಜ್‌ ಸ್ಪಷ್ಟನೆ!

ಸಾರಾಂಶ

ಕನ್ನಡತಿ ಪ್ರಮುಖ ಪಾತ್ರಧಾರಿ ಕಿರಣ್ ರಾಜ್‌ ಬಿಗ್ ಬಾಸ್‌ ಮನೆ ಪ್ರವೇಶಿಸುವ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯ ನಟ ಹರ್ಷ ಅಲಿಯಾಸ್ ಕಿರಣ್‌ ರಾಜ್‌ ಬಿಗ್‌ಬಾಸ್‌ ಮನೆಯೊಳಗೆ ಹೋಗಬೇಕು ಎಂಬುವುದು ಪ್ರತಿಯೊಬ್ಬ ಕಿರುತೆರೆ ವೀಕ್ಷಕರ ಆಸೆ. ಸೀಸನ್‌ 7ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ ಅಂದು ಭಾಗಿಯಾಗಲಿಲ್ಲ, ಇದೀಗ ಸೀಸನ್‌ 8ರಲ್ಲಿ ಪಕ್ಕಾ ಇರುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಚಾರದ ಬಗ್ಗೆ ಸ್ವತಃ ಕಿರಣ್ ಸ್ಪಷ್ಟನೆ ನೀಡಿದ್ದಾರೆ.

ಕನ್ನಡತಿ ನಟನಿಗೆ ಬಂತು ರಿಯಲ್ ಅಮ್ಮನ ಪತ್ರ: ಕಣ್ಣೀರಾದ ಹರ್ಷ..! 

ಇಂದು ಸಂಜೆ 6 ಗಂಟೆಗೆ  ಬಿಗ್‌ಬಾಸ್‌ ಸೀಸನ್ 8 ಅದ್ಧೂರಿಯಾಗಿ ಆರಂಭವಾಗಲಿದದೆ. ಕಿಚ್ಚ ಸುದೀಪ್ ಪ್ರತಿಯೊಬ್ಬ ಸ್ಪರ್ಧಿಯನ್ನೂ ಪರಿಚಯಿಸಿಕೊಡುತ್ತಾರೆ. ಈ ಸೀಸನ್‌ನಲ್ಲಿ ಕಿರಣ್‌ ರಾಜ್‌ ಇರುವುದಿಲ್ಲವಂತೆ. 

'ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವೆ. ಆದರೆ ಕನ್ನಡತಿ ಧಾರಾವಾಹಿಯನ್ನು ಬಿಟ್ಟಿಲ್ಲ. ಕನ್ನಡತಿ ಬಿಡುವ ಮಾತೇ ಇಲ್ಲ. ಬಿಗ್ ಬಾಸ್‌ಗೆ ನಾನು ಹೋಗುತ್ತಿಲ್ಲ. ಸಿನಿಮಾ ಶೂಟಿಂಗ್ ಇರುವ ಕಾರಣಕ್ಕೆ ನಾನು ಕಾಣಿಸಿಕೊಳ್ಳುತ್ತಿಲ್ಲ. ನನ್ನನ್ನು ಪ್ರೀತಿಸುವ ಪ್ರತಿಯೊಬ್ಬ ಕನ್ನಡತಿ ಅಭಿಮಾನಿಗಳೂ ನನಗೆ ಮುಖ್ಯ.  ಕನ್ನಡತಿ ನನಗೆ ಎಲ್ಲವನ್ನೂ ನೀಡಿದೆ. ದಯವಿಟ್ಟು ಯಾರೂ ಗಾಸಿಪ್‌ಗಳನ್ನು ನಂಬಬೇಡಿ,' ಎಂದು ಕಿರಣ್ ಹೇಳಿದ್ದಾರೆ.

ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ಸರಿಗಮಪ ಹನುಮಂತು; ಗಾಯಕ ಬೇಕಲ್ವಾ? 

'ಜೀವನವೇ ನಾಟಕ ಸ್ವಾಮಿ', 'ಬಡ್ಡೀಸ್', 'ಚತುಷ್ಪಥ, ನುವ್ವೆ ನಾ ಪ್ರಾಣಂ' ಸೇರಿದಂತೆ ಇನ್ನೂ ಎರಡು ಚಿತ್ರಗಳಲ್ಲಿ ಕಿರಣ್ ಅಭಿನಯಿಸುತ್ತಿದ್ದಾರೆ. ಕಿನ್ನರಿ ಧಾರಾವಾಹಿ ನಂತರ ಕಿರಣ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಹಾಗೂ ಅಷ್ಟೇ ಫ್ಯಾನ್ ಫಾಲೋವರ್ಸ್‌ ಹೊಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12 Video: ಸ್ನಾನ ಮಾಡದೇ ತೆಪ್ಪಗೆ ಕುಳಿತ ಸೂರಜ್; ಫ್ಲೈಯಿಂಗ್ ಕಿಸ್ ಕೊಟ್ಟು ಸಂತಸಪಟ್ಟ ರಕ್ಷಿತಾ ಶೆಟ್ಟಿ!
ಶಾರ್ಟ್ಸ್ ಧರಿಸಿ ಪೋಸ್ ಕೊಟ್ಟ ನಿವೇದಿತಾ ಗೌಡ… ವಯಸ್ಸು ಕಮ್ಮಿ ಆಗ್ತಿದೆ ಎಂದ ಜನ