ಬಿಗ್ ಬಾಸ್ ಸಂಗೀತಾ ಅಕೌಂಟ್‌ ನೋಡಿಕೊಳ್ಳಲು HR ಕೆಲಸ ಬಿಟ್ಟ ಅತ್ತಿಗೆ; ದುಡ್ಡು ಯಾರು ಕೊಡ್ತಾರೆ?

By Vaishnavi Chandrashekar  |  First Published Feb 7, 2024, 2:11 PM IST

 ಸಂಗೀತಾ ಶೃಂಗೇರಿ ಸಪೋರ್ಟ್‌ಗೆ ನಿಂತ ಅತ್ತಿಗೆ. ಸಂಬಂಧ ನೋಡಿ ಖುಷಿ ಪಟ್ಟ ಕನ್ನಡಿಗರು. ಕೆಲಸ ಬಿಟ್ಟಿದ್ದು ಬೇಜಾರು....


ಬಿಗ್ ಬಾಸ್ ಸೀಸನ್ 10ರ ಎರಡನೇ ರನ್ನರ್‌ ಅಪ್‌ ಸಂಗೀತಾ ಶೃಂಗೇರಿ ಹೆಸರು ಎಷ್ಟು ಕೇಳಿ ಬರುತ್ತಿತ್ತು ಅತ್ತಿಗೆ ಸುಚಿ ಹೆಸರು ಕೂಡ ಅಷ್ಟೇ ಸುದ್ದಿಯಲ್ಲಿತ್ತು. ಏನಿದು ಸಾಮಾನ್ಯವಾಗಿ ಅತ್ತಿಗೆ-ನಾದಿನಿ ಜಗಳ ಮಾಡುತ್ತಾರೆ ಆದರೆ ಇವರಿಬ್ಬರು ಇಷ್ಟು ಚೆನ್ನಾಗಿದ್ದಾರೆ ಅನ್ಸುತ್ತೆ. ಅತ್ತಿಗೆ ಬಗ್ಗೆ ಸಂಗೀತಾ ಖುಷಿಯಿಂದ ಹಂಚಿಕೊಂಡಿರುವ ಮಾತುಗಳಿದು....

'ನನ್ನ ಅಣ್ಣ- ಅತ್ತಿಗೆ ಮನೆ 13 ವರ್ಷಗಳ ಕಾಲ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯಾದ್ದರು. ಅವರ ಮದುವೆ ದಿನವೇ ಪುನೀತ್ ರಾಜ್‌ಕುಮಾರ್ ಅಗಲಿದರು ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೂ ಅಣ್ಣನ ಮದುವೆ ಬಗ್ಗೆ ಹಾಕಿರಲಿಲ್ಲ. ಸಿನಿಮಾಗಳಲ್ಲಿ ತೋರಿಸುವ ರೀತಿ ಅತ್ತಿಗೆ ಬಂದರೆ ಸಮಸ್ಯೆ ಆಗುತ್ತೆ ಅಂದುಕೊಂಡಿದ್ದೆ, ಹಾಗೆ ಆಗಿಲ್ಲ. ಸುಚಿತಾ ತುಂಬಾ ಒಳ್ಳೆಯವರು. ಏನೇ ಸಮಸ್ಯೆ ಆದರೂ ಸುಚಿ ನೋಡಿಕೊಳ್ಳುತ್ತಾರೆ ಅವರು ನನಗೆ ದೇವರ ತರ. ಅಣ್ಣ ಸಾಫ್‌ವೇರ್‌ ಇಂಜಿನಿಯರ್ ಆಗಿರುವ ಕಾರಣ ಎಐ ಇಮೇಜ್ ಕ್ರಿಯೇಟ್ ಮಾಡಿ ಪ್ರಚಾರ ಮಾಡುತ್ತಿದ್ದ' ಎಂದು ಸಂಗೀತಾ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Tap to resize

Latest Videos

'ನನ್ನ ಕುಟುಂಬಕ್ಕೆ ಪ್ರಚಾರ ಮಾಡುವುದು ಗೊತ್ತಿಲ್ಲ, ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ಬಗ್ಗೆ ಐಡಿಯಾನೂ ಇಲ್ಲ. ಬಿಗ್ ಬಾಸ್‌ ಮನೆಗೆ ಹೋದಾಗ ಅಲ್ಲಿಂದ ಫೋಟೋ, ವಿಡಿಯೋ ಮತ್ತು ಪ್ರೋಮೋ ಸಿಗುತ್ತದೆ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಪ್ರಚಾರ ಮಾಡಬೇಕು ಅಂತ ಮನೆಯವರಿಗೆ ಹೇಳಿದ್ದೆ. ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ನಾನು ಫ್ಯಾಮಿಲಿ ಫೋಟೋ ಕೂಡ ಹಾಕುತ್ತಿರಲಿಲ್ಲ. ನನ್ನ ಸಿನಿಮಾ ಕ್ಷೇತ್ರದಿಂದ ಸಂಪೂರ್ಣವಾಗಿ ದೂರ ಇಟ್ಟಿದ್ದಾರೆ. ನನ್ನ ನೋವು ಮತ್ತು ನಲಿವು ನನಗೆ ಮಾತ್ರ ಇರಲಿ ದೂರ ಇಟ್ಟಿದ್ದೆ, ಸಂಬಳ ಕೂಡ ಹೇಳುತ್ತಿರಲಿಲ್ಲ' ಎಂದು ಸಂಗೀತಾ ಹೇಳಿದ್ದಾರೆ.

'ಅತ್ತಿಗೆ ಸುಚಿ ಎಚ್‌ಆರ್‌ ಆಗಿ ಕೆಲಸ ಮಾಡುತ್ತಿದ್ದರು. ನಾನು ಸಡನ್ ಆಗಿ ಬಿಗ್ ಬಾಸ್‌ಗೆ ಹೋಗಿದ್ದೆ, ಹಾಗಾಗಿ ಅತ್ತಿಗೆ ಕೆಲಸ ಬಿಟ್ಟು ನನ್ನ ಅಕೌಂಟ್‌ ನೋಡಿಕೊಳ್ಳುತ್ತಿದ್ದರು. ನಾನು ಏನೂ ಅತ್ತಿಗೆಗೆ ಹೇಳಿರಲಿಲ್ಲ ಏನು ಮಾಡಬೇಕು ಅಂತಾನೂ ಹೇಳಿಲ್ಲ ನನ್ನ ಬಳಿ ಅಷ್ಟು ಟೈಮ್‌ ಇರಲಿಲ್ಲ' ಎಂದಿದ್ದಾರೆ ಸಂಗೀತಾ. ಹೆಚ್‌ ಆರ್‌ ಕೆಲಸ ಅಂದ್ಮೇಲೆ ಸಂಭಾವನೆ ಜಾಸ್ತಿ ಇರುತ್ತೆ ಅದನ್ನು ಬಿಟ್ಟಿದ್ದೀರಾ..ಈಗ ನಿಮಗೆ ಸಂಬಳ ಯಾರು ಕೊಡ್ತಾರೆ...ಚರ್ಚಿಗೆ ದುಡ್ಡು ಯಾರು ಕೊಡ್ತಾರೆ ಎಂದು ನೆಟ್ಟಿಗರು ಅತ್ತಿಗೆ ಸುಚಿಗೆ ಪ್ರಶ್ನೆ ಮಾಡಿದ್ದಾರೆ. 

click me!