ಕಾಂತಾರ ಬೆಡಗಿ ಸಪ್ತಮಿ ಗೌಡ ತಾವು ಮದ್ವೆಯಾಗೋ ಹುಡುಗ ಹೇಗೆ ಇರಬೇಕು ಎನ್ನುವ ಬಗ್ಗೆ ಹೇಳಿದ್ದಾರೆ. ನಟಿ ಹೇಳಿದ್ದೇನು?
ಕಾಂತಾರ ಬೆಡಗಿ ಸಪ್ತಮಿ ಗೌಡ ಅವರ ಬಗ್ಗೆ ಸಿನಿ ಪ್ರಿಯರಿಗೆ ಬೇರೆ ಹೇಳಬೇಕಾಗಿಲ್ಲ. ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಅವರ ಮಗಳಾಗಿರುವ ಸಪ್ತಮಿ, 2020ರಲ್ಲಿ ತೆರೆಕಂಡ ಧನಂಜಯ್ ಅಭಿನಯದ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. ನಂತರ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಇವರ ಜೀವನದ ದಿಕ್ಕನ್ನೇ ಬದಲಿಸಿಬಿಟ್ಟಿತು. ಈ ಸಿನಿಮಾ ಬ್ಲಾಕ್‌ಬಸ್ಟರ್ ಆಗುವುದರ ಜೊತೆಗೆ ಸಪ್ತಮಿ ಗೌಡಗೆ ಡಿಮ್ಯಾಂಡ್ ಹೆಚ್ಚಾಯಿತು. ಪ್ಯಾನ್ ಇಂಡಿಯಾ ಮಾತ್ರವಲ್ಲದೇ ಹೊರ ದೇಶಗಳಲ್ಲಿಯೂ ಸಪ್ತಮಿ ಅವರು ಸಕತ್ ಫೇಮಸ್ ಆದರು. ಇದಾದ ಬಳಿಕ ಯುವರಾಜ್‌ಕುಮಾರ್ ಅಭಿನಯದ 'ಯುವ' ಹಾಗೂ ಅಭಿಷೇಕ್ ಅಂಬರೀಶ್ ಅಭಿನಯದ 'ಕಾಳಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ನನ್ನಮ್ಮ ಸೂಪರ್ಸ್ಟಾರ್ ಗ್ರ್ಯಾಂಡ್ ಫಿನಾಲೆಯಲ್ಲಿ ಸಪ್ತಮಿ ಅವರು ವಿಶೇಷ ಅತಿಥಿಯಾಗಿ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಆ್ಯಂಕರ್ ಸುಷ್ಮಾ ರಾವ್ ಅವರು ನಟಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಸಪ್ತಮಿ ಅವರು ಮನಸ್ಸು ಬಿಚ್ಚಿ ಉತ್ತರ ಕೊಟ್ಟಿದ್ದಾರೆ. ಮೊದಲನೆಯದ್ದಾಗಿ ಒಂದೊಂದು ಚಿತ್ರದಲ್ಲಿ ಒಂದೊಂದು ರೀತಿಯಲ್ಲಿ ಡಿಫರೆಂಟ್ ಕ್ಯಾರೆಕ್ಟರ್ ಇರುತ್ತಲ್ಲ, ನೀವು ಯೋಚ್ನೆ ಮಾಡಿ ಪಾತ್ರ ಸೆಲೆಕ್ಟ್ ಮಾಡ್ತೀರಾ ಎಂಬ ಪ್ರಶ್ನೆಯನ್ನು ಸುಷ್ಮಾ ಅವರು ಕೇಳಿದಾಗ, ಸಪ್ತಮಿ, ಈ ರೀತಿ ಥಾಟ್ ಇತ್ತು ಅಷ್ಟೇ... ಆದ್ರೆ ತಂತಾನೇ ಪಾತ್ರನೂ ಅದೇ ರೀತಿ ಸಿಗ್ತಾ ಇದೆ, ತುಂಬಾ ಖುಷಿ ಕೊಡ್ತಾ ಇದೆ ಎಂದರು.
ಬಳಿಕ ನಿಮ್ಮ ಅಮ್ಮನ ಪಾತ್ರ ನಿಮ್ಮ ಜೀವನದಲ್ಲಿ ಎಷ್ಟು ಮಹತ್ವದ್ದು ಎಂದಾಗ, ಸಪ್ತಮಿ ಅವರು, ನನ್ನಮ್ಮ ಎಂದಿಗೂ ಸೂಪರ್ಸ್ಟಾರ್. ಅವರು ಇರಲಿಲ್ಲ ಎಂದರೆ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗ್ತಿರಲಿಲ್ಲ. ಏಕೆಂದರೆ ತಂದೆ ಪೊಲೀಸ್ ಅಧಿಕಾರಿ. ಸದಾ ಬಿಜಿ ಇರ್ತಾ ಇದ್ರು. ಅದಕ್ಕಾಗಿ ಅಮ್ಮನೇ ಎಲ್ಲ ಎಂದಿದ್ದಾರೆ. ಇದೇ ವೇಳೆ ತಮ್ಮ ಪೆಟ್ ನೇಮ್ ಕುರಿತೂ ತಿಳಿಸಿರುವ ನಟಿ, ಚಿನ್ನಿ ಎಂದೇ ಅಪ್ಪ-ಅಮ್ಮ ಕರೆಯುವುದು ಎಂದಿದ್ದಾರೆ. ಈಗಲೂ ಅಪ್ಪ ಎಲ್ಲಿಯೇ ಹೋದರೂ ಚಿನ್ನಿ ಎಂದೇ ಕರೆಯುತ್ತಾರೆ ಎಂದರು.
ಸಪ್ತಮಿ ಗೌಡ ಅವರ ಗಾಸಿಪ್ ಕುರಿತು ಹೇಳಿ ಎಂದಾಗ, ಕಾಂತಾರದಲ್ಲಿ ನಾನು ಒಂದೂವರೆ ಕೋಟಿ ರೂಪಾಯಿ ಸಂಭಾವನೆ ಪಡೆದೆ ಎಂದು ದೊಡ್ಡ ಮ್ಯಾಗಜೀನ್ ಒಂದರಲ್ಲಿ ಪ್ರಕಟವಾಯ್ತು. ಅದನ್ನು ನೋಡಿ ನನಗೆ ತುಂಬಾ ಖುಷಿಯಾಯ್ತು. ಮುಂದೆ ಇಷ್ಟು ದುಡ್ಡು ಪಡೆಯುವ ಹಾಗೆ ಆಗಲಿ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ ಎಂದರು. ಕೊನೆಯಲ್ಲಿ ಎದುರಾದ ಪ್ರಶ್ನೆ, ಸಪ್ತಮಿ ಗೌಡ ಅವರಿಗೆ ಬಾಯ್ಫ್ರೆಂಡ್ ಇದ್ದಾರಾ? ಇಲ್ಲದಿದ್ದರೆ ಹೊಸ ಅಪ್ಲಿಕೇಷನ್ಗೆ ಅವಕಾಶ ಇದ್ಯಾ ಎಂಬುದು. ಅದಕ್ಕೂ ನಟಿ, ನೇರವಾಗಿಯೇ ಉತ್ತರ ಕೊಟ್ಟರು. ಮೊದ್ಲು ಬಾಯ್ಫ್ರೆಂಡ್ ಇದ್ರು. ಈಗ ಇಲ್ಲ. ಆದರೆ ಹೊಸ ಅಪ್ಲಿಕೇಷನ್ಗೆ ಅವಕಾಶವಿಲ್ಲ. ಸದ್ಯ ಸಿಕ್ಕಾಪಟ್ಟೆ ಬಿಜಿ ಇದ್ದೇನೆ, ಅದಕ್ಕೆಲ್ಲಾ ಟೈಂ ಇಲ್ಲ ಎಂದರು. ಹೊಸದಾಗಿ ಅಪ್ಲಿಕೇಷನ್ ಹಾಕೋದಿದ್ರೆ ಬಾಯ್ಫ್ರೆಂಡ್ಗೆ ಏನು ಕ್ವಾಲಿಟಿ ಇರಬೇಕು ಎನ್ನುವ ಪ್ರಶ್ನೆಗೆ ಸಪ್ತಮಿ ಗೌಡ, ಆತ ಬರೀ ಬಾಯ್ಫ್ರೆಂಡ್ ಆಗಿದ್ರೆ ಸಾಕಾಗಲ್ಲ, ಗಂಡ ಆಗೋಕೆ ರೆಡಿ ಇರಬೇಕು. ಅವನನ್ನು ನನ್ನ ಅಪ್ಪ-ಅಮ್ಮ ಒಪ್ಪಿಕೊಳ್ಳಬೇಕು ಎಂದರು. ಹಾಗೆನೇ ನನ್ನಪ್ಪ ಯಾವಾಗ್ಲೂ ಒಂದು ಮಾತು ಹೇಳೋರು ಅದೇನೆಂದರೆ, ಹುಡುಗ ಎಷ್ಟೇ ಶ್ರೀಮಂತ ಆಗಿರಲಿ, ಆತನ ಬಳಿ ಎಷ್ಟೇ ಹಣ, ಆಸ್ತಿ ಇರಲಿ ಆತ ಸ್ವಂತ ದುಡಿಯುವ ಛಲ ಹೊಂದಿರಬೇಕು ಎಂದು. ಅದೇ ನನ್ನ ಆಸೆ ಎಂದಿದ್ದಾರೆ.
ಈ ಏಳು ಗುಣವಿದ್ದರೆ ಸುಹಾನಾ ಖಾನ್ ಜೊತೆ ಡೇಟಿಂಗ್ ಮಾಡಲು ಅಪ್ಪ ಶಾರುಖ್ ಗ್ರೀನ್ ಸಿಗ್ನಲ್!