Latest Videos

ಬಿಗ್ ಬಾಸ್ ಮನೆಯಿಂದ ತವರು ಮನೆಗೆ ಸಂಗೀತಾ ಶೃಂಗೇರಿಗೆ ಅದ್ಧೂರಿ ಸ್ವಾಗತ; ಇಲ್ಲಿದೆ ವಿಡಿಯೋ

By Suvarna NewsFirst Published Feb 5, 2024, 5:40 PM IST
Highlights

ಬಿಗ್ ಬಾಸ್ ಮನೆಯಲ್ಲಿ ಕೊನೆವರೆಗೂ ಇದ್ದು, ಅಂತಿಮ ಘಟ್ಟದಲ್ಲಿ 2ನೇ ರನ್ನರ್ ಅಪ್ ಆದ ಸಂಗೀತಾ ಶೃಂಗೇರಿಗೆ ಮನೆಯಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಈ ಸಮಯದಲ್ಲಿ ಸಂಗೀತಾ ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡಿದ್ದಾರೆ.

ಬಿಗ್ ಬಾಸ್ 10ನೇ ಸೀಸನ್‌ನಲ್ಲಿ ಫೈನಲ್‌ಗೆ ತಲುಪಿದ ಏಕೈಕ ಮಹಿಳಾ ಸ್ಪರ್ಧಿ ಸಂಗೀತಾ ಶೃಂಗೇರಿ. ಚಾರ್ಲಿ ಬೆಡಗಿಯು ಫಿನಾಲೆಯಲ್ಲಿ 2ನೇ ರನ್ನರ್ ಅಪ್ ಆದರೂ, ತುಂಬಾ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದರು. 
ಸಾಕಷ್ಟು ಸದ್ದು ಮಾಡುತ್ತಾ 115 ದಿನಗಳನ್ನು ಬಿಗ್ ಬಾಸ್‌ ಮನೆಯಲ್ಲಿ ಪೂರೈಸಿದ ಸಂಗೀತಾಗೆ ಮರಳಿ ಮನೆಗೆ ಹೋದಾಗ ಅದ್ಧೂರಿ ಸ್ವಾಗತ ಸಿಕ್ಕಿದೆ. ಈ ಕುರಿತ ವಿಡಿಯೋ ಹಂಚಿಕೊಂಡಿರುವ ಸಂಗೀತಾ, 'ನಾನು 115 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು ನಮ್ಮ ಮನೆಗೆ ಹೋದಾಗ' ಎಂದು ಕ್ಯಾಪ್ಶನ್ ನೀಡಿದ್ದಾರೆ. ಅಲ್ಲದೆ, ನನಗೆ ಬೆಂಬಲವಾಗಿ ನಿಂತವರಿಗೆ, ಪ್ರೀತಿಸಿದವರಿಗೆ ಥ್ಯಾಂಕ್ಯೂ ಎಂದಿದ್ದಾರೆ.

ವೆಲ್ಕಂ ಸಿಂಹಿಣಿ
ಸಂಗೀತಾ ಮನೆಯ ಎದುರು ಹೋಗುತ್ತಿದ್ದಂತೆ ಅವರ ಕತ್ತಿಗೆ ಕಂಗ್ರಾಚುಲೇಶನ್ಸ್ ಎಂಬ ಪಟ್ಟಿಯನ್ನು ಹಾಕಲಾಗುತ್ತದೆ. ಅಲ್ಲಿಂದ ಸಂತೋಷವಾಗಿ ಮುಂದೆ ಹೋದ ಸಂಗೀತಾಗೆ ಮನೆ ಬಾಗಿಲಲ್ಲಿ ತಾಯಿ ಆರತಿ ಬೆಳಗುತ್ತಾರೆ. ಈ ಸಮಯದಲ್ಲಿ  ನೆಲದ ಮೇಲೆ ದೀಪಗಳು ಮತ್ತು ಹೂವಿನಿಂದ ವೆಲ್ಕಂ ಎಂದು ಅಲಂಕಾರ ಮಾಡಲಾಗಿದ್ದು, ಹೃದಯಾಕಾರವನ್ನೂ ಕೆಂಪು ಗುಲಾಬಿ ದಳಗಳಿಂದ ಹಾಕಲಾಗಿರುವುದನ್ನು ಕಾಣಬಹುದು. 
ಅಮ್ಮನ ಕಾಲಿಗೆ ನಮಸ್ಕರಿಸಿ ಸಂಗೀತ ಮನೆಯೊಳಗೆ ಕುಣಿಯುತ್ತಾ ಹೋಗುತ್ತಿದ್ದಂತೆಯೇ ಅಲ್ಲೂ ಅದ್ದೂರಿ ಅಲಂಕಾರ ಮಾಡಲಾಗಿದೆ. ಗೋಡೆಯ ಮೇಲೆ ಅಲಂಕಾರಗಳ ನಡುವೆ ಶೇರ್ನಿ(ಹೆಣ್ಣು ಸಿಂಹ) ಎಂದು ಹೇಳಲಾಗಿದೆ.ಕೇಕ್ ಎದುರು ಸಂಗಿ ಎಂದು ನಾಮಫಲಕ ಹಾಕಲಾಗಿದೆ. 

'ಹ್ಯಾಪಿ ಹ್ಯಾಪಿ ಬರ್ತ್‌ಡೇ ಸಂಜ್'; ರಮ್ಯಾಳಿಂದ ಬರ್ತ್‌ಡೇ ಬಿಗ್ ಸರ್ಪ್ರೈಸ್ ಪಾರ್ಟಿ ಪಡೆದ ಈ ಸಂಜು ಯಾರು?

ಬಿಗ್ ಬಾಸ್ ಫಿನಾಲೆಯಲ್ಲ ಹಾಕಿದ್ದ ಕೆಂಪು ಬಣ್ಣದ ಗ್ರ್ಯಾಂಡ್ ಬ್ಲೌಸ್, ಲಂಗ ಧರಿಸಿರುವ ಸಂಗೀತಾ, ಕೇಕ್ ಮುಂದೆ ನಿಂತು ಟಿವಿಯಲ್ಲಿ ಬಂದ ಮ್ಯೂಸಿಕ್‌ಗೆ ಹೆಜ್ಜೆ ಹಾಕುತ್ತಲೇ, ಅಯ್ಯೋ ಬೆಳಗ್ಗೆ ಎಬ್ಬಿಸೋಕೆ ಮ್ಯೂಸಿಕ್ ಇರಲ್ವಲಾ ಎಂದು ಬೇಜಾರು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯನ್ನು ತಾವು ಮಿಸ್ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ನಂತರ ಕ್ಯಾಂಡಲ್ ಹಚ್ಚಿ ಮಾತನಾಡಿದ ನಟಿ, 'ಥ್ಯಾಂಕ್ಯೂ ಸೋ ಮಚ್ ಕರ್ನಾಟಕದ ಜನತೆ, ಕುಟುಂಬಕ್ಕೆ ಮತ್ತು ಗೆಳೆಯರಿಗೆ ಇಲ್ಲಿ ತನ್ಕ ಸಪೋರ್ಟ್ ಮಾಡ್ಕೊಂಡ್ ಬಂದಿದ್ಕೆ' ಎಂದಿದ್ದಾರೆ.

ಯಾರೂ ಬೇಜಾರ್ ಮಾಡ್ಕೋಬೇಡಿ
'ವಿನ್ನರ್ ಆಗಿಲ್ಲ ಅಂತ ಬೇಜಾರ್ ಮಾಡ್ಕೋಬೇಡಿ, ನಾನಂಥೂ ತುಂಬಾ ಖುಷಿಯಾಗಿದೀನಿ. ಯಾಕಂದ್ರೆ ನಿಮ್ಮೆಲ್ಲರ ಪ್ರೀತಿ ಗಳ್ಸಿದೀನಿ. ಮೊನ್ನೆ ತನ್ಕ ನಾನ್ಯಾರು ಅಂತನೇ ನಿಮಗೆ ಗೊತ್ತಿರ್ಲಿಲ್ಲ. ಆದ್ರೆ ಈ ಜರ್ನಿಯಿಂದ ನಿಮಗೆಲ್ಲ ಹತ್ತಿರ ಆಗಿದೀನಿ. ಇದಕ್ಕಿಂತ ದೊಡ್ಡ ಸಾಧನೆ ಇನ್ನೇನಿಲ್ಲ. ಇದಕ್ಕಾಗಿನೇ ನಾನು ವಿನ್ನರ್ ಅನ್ಕೊಂಡು ಗೆಲುವನ್ನ ಖುಷಿಯಾಗಿ ಸೆಲೆಬ್ರೇಟ್ ಮಾಡಿಕೊಂಡು ಬಂದಿದೀನಿ. ನಿಮ್ಮ ಸಿಂಹಿಣಿ ನಿಮಗಾಗಿ ಕೇಕ್ ಕಟ್ ಮಾಡ್ತಿದೀನಿ' ಎಂದಿದಾರೆ. ನಂತರ ಕೇಕನ್ನು ಅಪ್ಪ ಅಮ್ಮನಿಗೆ ಹಾಗೂ ಮನೆಗೆ ಬಂದಿದ್ದ ಬಂಧುಗಳಿಗೆ ತಿನಿಸಿದ್ದಾರೆ. 

ಇನ್‌ಕಮ್‌ ಟ್ಯಾಕ್ಸ್‌ ಸಮಸ್ಯೆಗೆ ಪರಿಹಾರ ಹುಡುಕಲು ಹೋಗಿ ಮೋಸದ ಬಲೆಗೆ ಬಿದ್ರಾ ನಟಿ ಜಯಪ್ರದಾ..!?

ಸಂಗೀತಾ ಶೇರ್ ಮಾಡಿದ ಈ ವಿಡಿಯೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿ ಈಕೆ ನಿಜವಾಗಿಯೂ ಬಿಗ್ ಬಾಸ್‌ನ ಶೇರ್ನಿ ಎಂದಿದ್ದಾರೆ. 

ಇಲ್ಲಿದೆ ವಿಡಿಯೋ..

 

click me!