ಮದುವೆ ಸ್ವರ್ಗದಲ್ಲಿಯೇ ನಡೆದಿರುತ್ತದೆ ಎನ್ನೋದಾದ್ರೆ ಇಷ್ಟೆಲ್ಲಾ ಖರ್ಚು ಮಾಡಿ ಭೂಮಿ ಮೇಲೆ ಯಾಕೆ ಮಾಡ್ಬೇಕು? ಇದಕ್ಕೆ ತಾರಾ ಜೋಡಿ ಶಶಿ-ಲಾವಣ್ಯ ಏನ್ ಹೇಳಿದ್ದಾರೆ ಕೇಳಿ.
ಮದುವೆ ಸ್ವರ್ಗದಲ್ಲಿಯೇ ಆಗಿರೋದು ಅಂತಾರೆ. ಭೂಮಿಯ ಮೇಲೆ ಮದುವೆ ನಿಮಿತ್ತ ಮಾತ್ರ. ಅದು ಮೊದಲೇ ನಿಶ್ಚಯವಾಗಿರುತ್ತದೆ ಎನ್ನುವ ಮಾತು ತಲೆ ತಲಾಂತರಗಳಿಂದ ಬಂದಿದೆ. ಹಾಗಿದ್ದ ಮೇಲೆ ಭೂಮಿಯ ಮೇಲೆ ಮದ್ವೆ ಆಗೋದು ಯಾಕೆ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿರುತ್ತದೆ. ಇದಕ್ಕೆ ತಮ್ಮದೇ ಆದ ರೀತಿಯಲ್ಲಿ ಉತ್ತರ ಕೊಡುವವರು ಹಲವರು. ಈ ಪೈಕಿ ಹೆಚ್ಚಿನವರು ತಮಾಷೆಯ ಉತ್ತರಗಳೇ ಆಗಿರುತ್ತವೆ. ಅಷ್ಟಕ್ಕೂ ದಂಪತಿಯ ಬಗೆಗಿನ ಜೋಕ್ಸ್ಗಳಿಗಂತೂ ಲೆಕ್ಕವೇ ಇಲ್ಲ. ಇವುಗಳನ್ನೇ ಆಧಾರವಾಗಿಟ್ಟುಕೊಂಡು ರೀಲ್ಸ್ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಈ ಪೈಕಿ ಮದುವೆಯ ವಿಷಯಗಳ ಮೇಲೆ ರೀಲ್ಸ್, ಮೀಮ್ಸ್ ಹೆಚ್ಚೇ ಎಂದು ಹೇಳಬಹುದು. ಇದೀಗ ಖ್ಯಾತ ಕಿರುತೆರೆ ಜೋಡಿಯಾಗಿರುವ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರು ಮದುವೆಯ ವಿಷಯ ಇಟ್ಟುಕೊಂಡೇ ಚಿಕ್ಕದೊಂದು ರೀಲ್ಸ್ ಮಾಡಿದ್ದು, ಸಕತ್ ವೈರಲ್ ಆಗಿದೆ.
ಅಂದಹಾಗೆ ಈ ಜೋಡಿ ಸದ್ಯ ಜೀ ಟಿವಿಯಲ್ಲಿ ಪ್ರಸಾರ ಆಗ್ತಿರೋ ಜೋಡಿ ನಂ.1 ಕಾರ್ಯಕ್ರಮದಲ್ಲಿ ಭಾಗಿಯಾಗಿದೆ. ಇದರಲ್ಲಿ ಈ ಜೋಡಿ ಕೂಡ ವೀಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. ಸದ್ಯಕ್ಕೆ ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ಮಾಧವರ ಪ್ರೀತಿಯ ಸೊಸೆಯಾಗಿ ನಟಿಸುತ್ತಿದ್ದಾರೆ ಲಾವಣ್ಯ. ಶಶಿ ಅವರೂ ಧಾರಾವಾಹಿಗಳಲ್ಲಿ ಬಿಜಿಯಾಗಿದ್ದಾರೆ. ಈ ಜೋಡಿ ಕೆಲ ತಿಂಗಳ ಹಿಂದೆ ಮದುವೆಯಾಗಿದ್ದು, ಕ್ಯೂಟ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಲಾವಣ್ಯ ಅವರು ಪತಿಗೆ, ಮದುವೆ ಸ್ವರ್ಗದಲ್ಲಿಯೇ ಆಗಿರುವುದು ಎನ್ನುವುದಾದರೆ ಇಷ್ಟೆಲ್ಲಾ ಖರ್ಚು ಮಾಡಿ ಭೂಮಿಯ ಮೇಲೆ ಯಾಕೆ ಆಗ್ತಾರೆ ಎಂದು ಕೇಳಿದ್ದಾರೆ. ಅದಕ್ಕೆ ತಮಾಷೆಗೆ ಉತ್ತರ ಕೊಟ್ಟಿರುವ ಶಶಿ ಅವರು, ಸ್ವರ್ಗದಲ್ಲಿ ಸಂಬಂಧಿಕರು ಇರೋದಿಲ್ವಲ್ಲಾ, ಅವರನ್ನು ನೋಡುವುದಕ್ಕೆ ಇಲ್ಲಿ ಮತ್ತೊಂದು ಸಲ ಆಗುವುದು ಎಂದಿದ್ದಾರೆ. ಈ ಉತ್ತರಕ್ಕೆ ಫ್ಯಾನ್ಸ್ ಭೇಷ್ ಭೇಷ್ ಎನ್ನುತ್ತಿದ್ದಾರೆ.
ಅಷ್ಟಕ್ಕೂ ಈ ಜೋಡಿಯ ಮದುವೆ ಕೂಡ ತುಂಬಾ ಇಂಟರೆಸ್ಟಿಂಗ್ ಆಗಿದೆ. ಇವರಿಬ್ಬರ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದೇ ಸೀರಿಯಲ್ ಸೆಟ್ ನಲ್ಲಿ (serial set). ಶಶಿ ಮತ್ತು ಲಾವಣ್ಯ ಇಬ್ಬರು ರಾಜಾ ರಾಣಿ ಸೀರಿಯಲ್ನಲ್ಲಿ ನಟಿಸುತ್ತಿದ್ದರು. ಈ ಸೀರಿಯಲ್ ನಲ್ಲಿ ಇಬ್ಬರು ಅಣ್ಣ - ತಂಗಿಯಾಗಿ ನಟಿಸಿದ್ದರು. ಲಾವಣ್ಯ ಅವರು ಶಶಿ ಅವರನ್ನು ಬ್ರೋ ಎಂದೇ ಕರೆಯುತ್ತಿದ್ದರು. ‘ರಾಜಾ ರಾಣಿ’ ಮೂಲಕವೇ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರಿಗೆ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಆತ್ಮೀಯ ಸ್ನೇಹಿತರಾಗಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಮಧ್ಯೆ ಪ್ರೀತಿ ಚಿಗುರಿತು. ವರ್ಷಗಳಿಂದ ಪ್ರೀತಿಸುತ್ತಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಕುಟುಂಬಸ್ಥರನ್ನು ಒಪ್ಪಿಸಿ ಮದ್ವೆನೂ ಆದ್ರೂ.
ಜೋಡಿ ನಂ.1: ಫಸ್ಟ್ ನೈಟ್ ಅನುಭವ ಹಂಚಿಕೊಂಡ ನಟ ಶಶಿ, ಲಾವಣ್ಯ ಭಾವುಕ!
ಮದುವೆಯ ಬಳಿಕದ ಫಸ್ಟ್ ನೈಟ್ ಲವ್ ಸ್ಟೋರಿಯನ್ನು ಜೋಡಿ ನಂ.1ನಲ್ಲಿ ಈ ಜೋಡಿ ಶೇರ್ ಮಾಡಿಕೊಂಡಿತ್ತು. ಫಸ್ಟ್ ನೈಟ್‌ನಲ್ಲಿ ಈಕೆಯ ಕಸಿನ್ಸ್ ನನ್ನನ್ನು ಅಡ್ಡಗಟ್ಟಿ ಒಳಗೆ ಹೆಂಡತಿಯನ್ನ ಬಿಡಬೇಕೆಂದರೆ ಒಬ್ಬೊಬ್ಬರಿಗೆ 4 ಸಾವಿರ ಕೊಡಬೇಕು ಅಂತ ಕೇಳಿದ್ದರು, ಆಮೇಲೆ ಸೆಟಲ್‌ಮೆಂಟ್ ಮಾಡಿಕೊಂಡಿದ್ದರು. ನಾನು ಒಳಗೆ ಹೋದ್ಮೇಲೆ ಅಲ್ಲಿ ಬೆಡ್ ಬದಲು ಥರ್ಮೊಕಾಲ್ ಬಬಲ್ಸ್ ಹಾಕಿದ್ದರು. ಕೂತಾಗ ಬಬಲ್ಸ್ ಹಾರಿಬಿಡ್ತು. ಮಧ್ಯರಾತ್ರಿ 3 ಗಂಟೆವರೆಗೂ ಅದನ್ನೆಲ್ಲಾ ಕ್ಲೀನ್ ಮಾಡ್ತಿದ್ವಿ ಎಂದು ನೆನಪಿಸಿಕೊಂಡಿದ್ದರು. ಅದೇ ರೀತಿ ಹನಿಮೂನ್‌ಗೆ ಮಾಲ್ದೀವ್ಸ್ ಹೋಗುವ ಕನಸನ್ನು ಇನ್ನೂ ಪತಿ ನೆರವೇರಿಸಿಲ್ಲ ಎಂದು ಲಾವಣ್ಯ ವೇದಿಕೆಯ ಮೇಲೆ ಬೇಸರ ವ್ಯಕ್ತಪಡಿಸಿದ್ದರು.
ಸಿಟ್ಟು ಬಂದ್ರೆ ಗಂಡ ದಡಬಡ ಅಂತ ಮನೆಯಿಂದ ಹೊರ ಹೋಗ್ಬೇಕು, ಸುಖ ಸಂಸಾರಕ್ಕೆ ಹರೀಶ್ ಈ ಸೂತ್ರ ವರ್ಕ್ ಔಟ್ ಆಗುತ್ತಾ?