ಮೋದಿ ಕರೆಗೆ ಲಿಟಲ್‌ ಐರಾ ಸಾಥ್; ರಾಕಿ ಬಾಯ್‌ ಶೇರ್ ಮಾಡಿದ ವಿಡಿಯೋ ಇದು..

By Suvarna NewsFirst Published Apr 6, 2020, 2:42 PM IST
Highlights

ರಾಕಿಂಗ್‌ ಸ್ಟಾರ್ ಯಶ್‌ ಪುತ್ರಿ ಐರಾ ಮೋದಿ ನೀಡಿದ ಅವತ್ತಿನ ಹಾಗೂ ನಿನ್ನೆಯ ಕರೆಗೆ ಒಟ್ಟಾಗಿ ಓಗೊಟ್ಟಿದ್ದಾರೆ. ಅವತ್ತು ಜನತಾ ಕರ್ಫ್ಯೂಗೆ ಕರೆ ನೀಡಿದ ಮೋದಿ, ಸಂಜೆ 5ಕ್ಕೆ ಚಪ್ಪಾಳೆ ತಟ್ಟಿ ಕೊರೋನಾ  ವೈರಸ್ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಚಪ್ಪಾಳೆ ತಟ್ಟುವ ಮೂಲಕ ಧೈರ್ಯ ತುಂಬಲು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಹುರಿದುಂಬಿಸಲು ಕರೆ ನೀಡಿದ್ದರು.  ನಂತರ 21 ದಿನಗಳ ಭಾರತ ಲಾಕ್‌ಡೌನ್‌ಗೆ ಕರೆ ನೀಡಿದರು. ಮನೆಯಲ್ಲಿಯೇ ಕೂತು ಆತಂಕಗೊಂಡಿದ್ದ ಭಾರತೀಯರ ಮನಸ್ಸನ್ನು ಪ್ರಫುಲ್ಲಗೊಳಿಸಲು, ನಾವೆಲ್ಲರೂ ಒಂದೇ, ಈ ಹೋರಾಟದಲ್ಲಿ ಒಂದಾಗಿದ್ದೇವೆ ಎಂದು ಸಾರಿ ಹೇಳುವ ಸಂಕೇತವಾಗಿ ಏ.5ರ ರಾತ್ರಿ ಒಂಬತ್ತಕ್ಕೆ ವಿದ್ಯುತ್ ದೀಪ ಆರಿಸಿ, ಹಣತೆ ಅಥವಾ ಕ್ಯಾಂಡಲ್ ಹಚ್ಚಲು ಕರೆ ನೀಡಿದ್ದರು. ಇದಕ್ಕೆ ಇಡೀ ದೇಶವೇ ಅತ್ಯದ್ಭುತವಾಗಿ ಸ್ಪಂದಿಸಿತು. ಜಾತಿ, ಧರ್ಮ, ಪಕ್ಷ ಭೇದ ಮರೆದು ಮೋದಿ ಕರೆಗೆ ಜನರು ಸ್ಪಂದಿಸಿದ್ದು ವಿಶೇಷ. 

ಮೋದಿ ನೀಡಿದ ಎರಡೂ ಕರೆಗಳಿಗೆ ಐರಾ ಸ್ಪಂದಿಸಿದ್ದಾಳೆ. ದೀಪ ಹಚ್ಚಿದ್ದು ಮಾತ್ರವಲ್ಲ ಚಪ್ಪಾಳೆಯನ್ನೂ ತಟ್ಟಿ, ಅಪ್ಪನ ಹತ್ತಿರ ಭೇಷ್ ಎನಿಸಿಕೊಂಡಿದ್ದಾಳೆ.  ಕೊರೋನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಹಾಗೂ ದೀಪ ಬೆಳಗುವ ಮೂಲಕ ಗೌರವ ಸಲ್ಲಿಸಿದ್ದಾಳೆ. 

ಕೊರೋನಾ ವೈರಸ್‌ ವಿರುದ್ಧ ಹೋರಾಡಲು ಭಾರತೀಯರೆಲ್ಲರೂ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಒಟ್ಟಾಗಿ ದೀಪ ಹಚ್ಚುವ ಮೂಲಕ ಪ್ರಧಾನಿ ಮೋದಿ ನೀಡಿದ ಕರೆಗೆ ಸಾಥ್‌ ನೀಡಿದ್ದರು. ಸಿನಿಮಾ ತಾರೆಯರು ತಮ್ಮ ಮನೆಯಲ್ಲಿಯೇ ದೀಪ ಬೆಳಗುವ ಮೂಲಕ ಗೌರವ ಸಲ್ಲಿಸಿದ್ದಾರೆ.  ಜ್ಯೋತಿ ಬೆಳಗುತ್ತಾ, ಚಪ್ಪಾಳೆ ತಟ್ಟುತ್ತಿರುವ ಐರಾ ವಿಡಿಯೋವನ್ನು ರಾಕಿ ಬಾಯ್ ಶೇರ್ ಮಾಡಿಕೊಂಡಿದ್ದಾರೆ.

ಕೊರೋನಾ ಯೋಧರಿಗೆ ಚಪ್ಪಾಳೆ ತಟ್ಟಿದ ಐರಾ ಯಶ್! ವಿಡಿಯೋ ನೋಡಿ

ಸ್ಯಾಂಡಲ್‌ವುಡ್‌ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಮುದ್ದಿನ ಪುತ್ರಿ ಐರಾ ಯಶ್‌ ತಾತ-ಅಜ್ಜಿಯ ಮನೆಯ ಬಾಲ್ಕಾನಿಯಲ್ಲಿ, ತುಳಸಿ ಕಟ್ಟೆ ಮುಂದೆ ದೀಪ ಹಚ್ಚುವ ಮೂಲಕ ಕೊರೋನಾ ಪೀಡಿತರ ಜೊತೆಗೆ 'ನಾವಿದ್ದೀವಿ' ಎಂದು ಸಾರಿ ಹೇಳಿದ್ದಾಳೆ. 

 
 
 
 
 
 
 
 
 
 
 
 
 

In this time of darkness... let's light the lamp of Unity. Remember, Nation comes first ! Jai Hind 🇮🇳

A post shared by Yash (@thenameisyash) on Apr 5, 2020 at 9:26am PDT

ವಿಡಿಯೋದಲ್ಲಿ ಮೊದಲು ದೀಪ ಮುಟ್ಟಲು ಐರಾ ಯತ್ನಿಸಿದಾಗ, ತಂದೆ ಯಶ್‌ ಬೇಡವೆನ್ನುತ್ತಾರೆ. ಆ ನಂತರ ಐರಾ ತಾನಾಗಿಯೇ ದೀಪ ನೋಡುತ್ತಾ, ಚಪ್ಪಾಳೆ ತಟ್ಟುತ್ತಾಳೆ. ಇದಕ್ಕೆ ಯಶ್‌ ನೋಡಿ 'ನನ್ನ ಮಗಳು ಇವತ್ತೂ ಚಪ್ಪಾಳೆ ತಟ್ಟುತ್ತಿದ್ದಾಳೆ. ವೇರಿ ಗುಡ್‌ ಮಗಳೆ,' ಎಂದು ಮಾತನಾಡಿರುವುದು ವಿಡಿಯೋದಲ್ಲಿ ನೋಡಬಹುದು.

'In this time of darkness... let's light the lamp of Unity.Remember, Nation comes first !Jai Hind'ಎಂದು ಯಶ್‌ ಬರೆದುಕೊಂಡಿದ್ದಾರೆ. ಪತ್ನಿ ರಾಧಿಕಾ ಸೆಲ್ಫೀ ಫೋಟೋ ಹಂಚಿಕೊಂಡು 'Let the lamp of Unity be lit forever!! Let's stand together, for each other' ಎಂದು ಬರೆದುಕೊಂಡಿದ್ದಾರೆ.

 

 
 
 
 
 
 
 
 
 
 
 
 
 

Let the lamp of Unity be lit forever!! Let's stand together, for each other 🙂 #nimmaRP #radhikapandit

A post shared by Radhika Pandit (@iamradhikapandit) on Apr 5, 2020 at 12:24pm PDT

ಮಾರ್ಚ್‌ 22ರಂದು ಕೊರೋನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟುವ ಮೂಲಕ ಮೋದಿ ನೀಡಿದ ಅಭಿಯಾನಕ್ಕೆ ಈಗಲೂ ಕೈ ಜೋಡಿದಿದ್ದಾಳೆ ಲಿಟಲ್‌  ಐರಾ.

click me!