
- ಡಾ. ನಾ ಡಿಸೋಜ
ಈ ಹಾಡುಗಳಲ್ಲಿ ಆಧುನಿಕ ಬದುಕಿನ ಅಣಕ, ವಿಡಂಬನೆ, ಟೀಕೆ, ತೀಕ್ಷ್ಣವಾದ ವಿಮರ್ಶೆಯನ್ನ ನಮ್ಮ ಹಳ್ಳಿಜನ ಮಾಡಿರುವುದನ್ನ ಕಾಣಬಹುದು. ಈ ಹಾಡುಗಳಲ್ಲಿ ಕೆಲ ಹಾಡುಗಳನ್ನ ದಿ. ರಾಮಚಂದ್ರ ಗಿರಿಮಾಜಿಯವರು ಸಂಗ್ರಹಿಸಿದ್ದು, ಡಾ ನಾ ಡಿಸೋಜ ಅವರು ಸಂಪಾದಿಸಿರುವ ‘ಹೂವ ಚೆಲ್ಲುತ ಬಾ’ ಕೃತಿಯಿಂದ ಆಯ್ಕೆ ಮಾಡಿ ಇಲ್ಲಿ ನೀಡಿದೆ.
ದರ್ಬಾರ್ ಬಹಳ ನಾಜೂಕು
ಕಾಯಿದೆಯು ಬಹಳ ಹೆಚ್ಚಾಯ್ತು
ಕಲಿಯುಗವಾದರೆ ಬಂದೀತು
ಪ್ಲೇಗ್ ರೋಗಾದರೆ ಹೆಚ್ಚಾಯ್ತು
ಗಜಮುಖಗಣಪ ಸರಸ್ವತಿಯ
ಶೃಂಗೇರಿಯಾ ಶಾರದೆಯಾ
ಬೇಡಿಕೊಂಡರುದರ ದೇವರಿಗೆ
ಬಲುಜನ ಬಿದ್ದರು ಕ್ವಾರಂಟಿಗೆ ದರ್ಬಾರ್....
ಊರೊಳಗಿರವುದು ಯತ್ನಿಲ್ಲ
ಊರಾ ಬಿಟ್ಟರೆ ಅನ್ನಿಲ್ಲ
ರೈತರ ಬಿಟ್ಟರೆ ಬುತ್ತಿಲ್ಲ
ಬಡವರು ಉಳಿವುದೇ ದುಸ್ತಾರ ದರ್ಬಾರ್....
ಊರೊಳಗಿರುವರು ಸಾಹುಕಾರರು
ಅರಮನೆಗೊಬ್ಬರು ನೇಮಕಾರರು
ಮೈ ತುಂಬಿರಬೇಕು ಎಚ್ಚರ
ಕ್ವಾರಂಟಿಗೆ ಬಿದ್ದಿರಿ ಎಚ್ಚರ ದರ್ಬಾರ್....
ಇಂದು ಇದು ಕ್ವೀನ್ ಸರಕಾರ
ರಾಣಿಯು ಮಾಡ್ತಾಳೆ ದರ್ಬಾರ
ಸ್ತ್ರೀಯರ ಕಾರ್ಬಾರವಾಯಿತು
ಬಡವರು ಉಳಿವುದು ದುಸ್ತಾರ ದರ್ಬಾರ್....
ಕೊರೋನಾ ತಡೆಗಟ್ಟಲು ಥಟ್ಟಂತ ಹೇಳಬಲ್ಲ ಉಪಾಯಗಳು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.