
ರಸ್ತೆ ಹಂಪ್‌ನಿಂದ ಸಂಭವಿಸಿದ ಅಪಘಾತದಲ್ಲಿ (Accident) ಖ್ಯಾತ ಪೋಷಕ ನಟಿ ಸುನೇತ್ರಾ ಪಂಡಿತ್ (Sunetra Pandit) ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದರು. ಮೇ 8ರಂದು ಬಸವನಗುಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿತ್ತು. ನಗರದ ನರಸಿಂಹರಾಜ ಕಾಲೋನಿ (ಎನ್.ಆರ್.ಕಾಲೋನಿ) 9ನೇ ಅಡ್ಡರಸ್ತೆಯಲ್ಲಿ ಈ ದುರ್ಘಟನೆ ನಡೆದಿತ್ತು. ಅಪಘಾತದಲ್ಲಿ ಸುನೇತ್ರಾ ಪಂಡಿತ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಅವರ ತಲೆಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ (Private Hospital)ದಾಖಲಿಸಿ ಚಿಕಿತ್ಸೆ (Treatment) ನೀಡಲಾಗಿತ್ತು.
ಈ ಘಟನೆ ಸಂಭವಿಸಿ ಒಂದು ತಿಂಗಳ ಮೇಲಾಗಿದೆ. ಇದೀಗ ನಟಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದಾರೆ. ತಿಂಗಳ ಬಳಿಕ ಹೇಗಾದ್ದೀನಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ. ಹೌದು, ನಟಿ ಸುನೇತ್ರಾ ಪಂಡಿತ್ ಅಘಾತದ ಬಳಿಕ ಫೋಟೋ ಹಂಚಿಕೊಂಡಿದ್ದು ಸಂಪೂರ್ಣ ಗುಣಮುಖರಾಗಿರುವುದಾಗಿ ಹೇಳಿದ್ದಾರೆ. ಆಸ್ಪತ್ರೆಯಲ್ಲಿದ್ದ ಫೋಟೋ ಮತ್ತು ಇದೀಗ ಸಂಪೂರ್ಣ ಗುಣಮುಖರಾಗಿರುವ ಫೋಟೋವನ್ನು ಕೊಲ್ಯಾಜ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಫೋಟೋ ಜೊತೆಗೆ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ನಾನು ದೇವರಿಗೆ, 'ನನ್ನ ಕುಟುಂಬ, ಸ್ನೇಹಿತರು ಮತ್ತು ನನಗಾಗಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯನಾದ' ಎಂದು ಹೇಳಿದ್ದಾರೆ. ಸುನೇತ್ರಾ ಪೋಸ್ಟಗೆ ಅನೇಕರು ಕಾಮೆಂಟ್ ಮಾಡಿ ಹುಷಾರಾಗಿರಿ ಎಂದು ಹೇಳುತ್ತಿದ್ದಾರೆ. ಸಂಪೂರ್ಣ ಗುಣಮುಖರಾಗಿರುವುದನ್ನು ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
Sunetra Pandit: ಹಂಪಲ್ಲಿ ಎಗರಿ ಬಿದ್ದ ಸ್ಕೂಟರ್: ನಟಿ ಜೀವ ಉಳಿಸಿದ ಹೆಲ್ಮೆಟ್!
ಅಪಘಾತದ ಬಗ್ಗೆ ವಿವರ
ನಟಿ ಸುನೇತ್ರಾ ಪಂಡಿತ್ ಅವರು (ಮೇ 8) ಚಿತ್ರೀಕರಣ ಮುಗಿಸಿಕೊಂಡು ರಾತ್ರಿ 11.45ರ ಸುಮಾರಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಬರುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಎನ್.ಆರ್.ಕಾಲೋನಿಯ 9ನೇ ಅಡ್ಡರಸ್ತೆಯಲ್ಲಿ ರಸ್ತೆ ಹಂಫ್ಸ್ ಕಾಣಿಸದೆ ತಮ್ಮ ದ್ವಿಚಕ್ರ ವಾಹನವನ್ನು ಹಾಗೆಯೇ ಚಲಾಯಿಸಿ ಎಗರಿ ಬಿದ್ದಿದ್ದರು. ಸುನೇತ್ರಾ ಬೈಕ್‌ನಿಂದ ರಸ್ತೆ ಮೇಲೆ ಬಿದ್ದದ್ದರು. ಬಿದ್ದ ರಭಸಕ್ಕೆ ಹೆಲ್ಮೆಟ್ ರಸ್ತೆಗೆ ಉಜ್ಜಿ ಚೂರಾಗಿತ್ತು. ಬಿದ್ದ ರಬಸಕ್ಕೆ ಜೋರಾಗಿ ಶಬ್ಧ ಬಂದಿದ್ದನ್ನು ಕೇಳಿ ಸ್ಥಳೀಯರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದರು.
ಡ್ರೈನ್ ಹೋಲ್‌ಗೆ ಬಿದ್ದು ಕಾಲು ಮುರಿದುಕೊಂಡ ಗಾಯಕ ಅಜಯ್; ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಅಸಮಾಧಾನ
ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಸುನೇತ್ರಾ ಪಂಡಿತ್ ಅವರನ್ನು ತಕ್ಷಣ ಕಾರಿನಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಹೆಲ್ಮೆಟ್ ಧರಿಸಿದ್ದರಿಂದ ಸುನೇತ್ರ ತಲೆಗೆ ಹೆಚ್ಚು ಏಟಾಗಿರಲಿಲ್ಲ. ಒಂದು ವೇಳೆ ಹೆಲ್ಮೆಟ್ ಇಲ್ಲದಿದ್ದರೇ ತಲೆಗೆ ಗಂಭೀರ ಪೆಟ್ಟು ಬೀಳುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಹೇಳಿದರು. ಬಳಿಕ ಪುತ್ರ ಪ್ರತಿಕ್ರಿಯೆ ನೀಡಿ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಇದೀಗ ಒಂದು ತಿಂಗಳ ಬಳಿಕ ಸಂಪೂರ್ಣವಾಗಿ ಗುಣಮುಖರಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಶೇರ್ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.