ನನ್ನನ್ನು ಯಾರು ಸಂಪರ್ಕ ಮಾಡೇ ಇಲ್ಲ; ರಾಜಾ ರಾಣಿ-2 ಬಗ್ಗೆ ನಿರೂಪಕಿ ಅನುಪಮಾ ಸ್ಪಷ್ಟನೆ

By Vaishnavi Chandrashekar  |  First Published Jun 13, 2022, 4:04 PM IST

ಶೋನಿಂದ ಹೊರ ನಡೆದ ನಿರೂಪಕಿ ಎಂದು ಹರಿದಾಡುತ್ತಿರುವ ಮಾತುಗಳಿಗೆ ಬ್ರೇಕ್ ಹಾಕಿದ ಅನುಪಮಾ.


ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಜಾ ರಾಣಿ ಸೀಸನ್ 2 ರಿಯಾಲಿಟಿ ಶೋ ಆರಂಭವಾಗಿದೆ. ಆನ್‌ಸ್ಕ್ರೀನ್‌ ಸ್ಟಾರ್‌ಗಳು ತಮ್ಮ ರಿಯಲ್ ಲೈಫ್‌ ಪಾರ್ಟನರ್‌ಗಳು ಜೊತೆ ಮೊದಲ ಬಾರಿ ವೇದಿಕೆ ಮೇಲೆ ಕಾಣಿಸಿಕೊಂಡು ಕಷ್ಟ ಸುಖಃಗಳನ್ನು ವೀಕ್ಷಕರ ಜೊತೆ ಹಂಚಿಕೊಳ್ಳಲಿದ್ದಾರೆ. ಸೀಸನ್‌ 1 ಅತಿ ಹೆಚ್ಚು ಟಿಆರ್‌ಪಿ ಪಡೆದುಕೊಂಡು ವೀಕ್ಷಕರ ಗಮನ ಸೆಳೆಯಿತ್ತು. ತೀರ್ಪುಗಾರರ ಸ್ಥಾನದಲ್ಲಿ ಸೃಜನ್ ಲೋಕೇಶ್, ತಾರಾ ಅನುರಾಧ ಇರಲಿದ್ದಾರೆ ಆದರೆ ನಿರೂಪಕಿ ಸ್ಥಾನಕ್ಕೆ ಜಾಹ್ನವಿ ರಾಯಲ ಎಂಟ್ರಿ ಕೊಟ್ಟಿದ್ದಾರೆ. 

ರಾಜಾ ರಾಣಿ ಸೀಸನ್ 1 ಮತ್ತು ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮವನ್ನು ನಟಿ ಅನುಪಮಾ ಗೌಡ ನಿರೂಪಣೆ ಮಾಡಿದ್ದರು. ಈಗ ರಾಜಾ ರಾಣಿ ಸೀಸನ್‌ 2ರಲ್ಲಿ ಅನುಪಮಾ ಇಲ್ಲದ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಮತ್ತು ಪರ್ಸನಲ್ ಆಗಿ ಅನೇಕರು ನಟಿಗೆ ಮೆಸೇಜ್ ಮಾಡಿ ಕ್ಲಾರಿಟಿ ಕೇಳುತ್ತಿದ್ದಾರೆ ಹೀಗಾಗಿ ಅನುಪಮಾ ಕ್ಲಾರಿಟಿ ಕೊಟ್ಟಿದ್ದಾರೆ.

Tap to resize

Latest Videos

ಅನುಪಮಾ ಗೌಡ ಈಗ ಓಪನ್ ವಾಟರ್ ಡೈವರ್! ಸಾಹಸಕ್ಕೆ ಸಿಗ್ತು ಸರ್ಟಿಫಿಕೇಟ್‌

ಅನುಪಮಾ ಹೇಳಿಕೆ: 

'ಒಂದು ವಿಚಾರ ನಾನು ಕ್ಲಾರಿಟಿ ಕೊಡಬೇಕು ಎಲ್ಲರೂ ರಾಜಾ ರಾಣಿ ಬಗ್ಗೆ ಕೇಳುತ್ತಿದ್ದಾರೆ. ಇಷ್ಟು ದಿನ ನಾನು ಮೌನವಾಗಿದ್ದೆ. ನನ್ನ ಯೂಟ್ಯೂಬ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆ ಅದರ ಬಗ್ಗೆ ಕಾಮೆಂಟ್ ಮತ್ತು ಮೆಸೇಜ್ ಮಾಡುತ್ತಿದ್ದಾರೆ ಹೀಗಾಗಿ ಕ್ಲಾರಿಟಿ ಕೊಡಬೇಕು ಎಂದು ಲೈವ್‌ ಮಾಡಿ ವಿಚಾರ ತಿಳಿಸುತ್ತಿರುವೆ' ಎಂದು ಅನುಪಮಾ ಮಾತು ಶುರು ಮಾಡಿದ್ದಾರೆ.

ನಮ್ಮ ಭಾಗ ಯಾರೋ ಕಿತ್ಕೊಳ್ತಿದ್ದಾರೆ ಅನ್ಸುತ್ತೆ; 13 inch ಕೂದಲ ದಾನ ಮಾಡಿದ ನಟಿ!

'ಇವತ್ತು ಮಧ್ಯಾಹ್ನದಿಂದ ನಾನು ಜೀ ಸೂಪರ್ ಜೋಡಿ ಮಾಡುತ್ತಿರುವೆ ಅಂತ ಹೇಳುತ್ತಿದ್ದಾರೆ ಇನ್ನೂ ಕೆಲವರು ಸುವರ್ಣ ವಾಹಿನಿ ಅಂತ ಹೇಳಿದ್ದಾರೆ. ನೋಡಿ ನಾನು ಜೀ ಅಥವಾ ಸುವರ್ಣದಲ್ಲಿ ಮಾಡುತ್ತಿದ್ದರೆ ಇಷ್ಟೊತ್ತಿಗಾಗಲೆ ನಾನು ಅಪ್ಡೇಟ್ ನೀಡುತ್ತಿದ್ದೆ ಅದರ ಬಗ್ಗೆ ಅಪ್ಡೇಟ್ ಕೊಟ್ಟಿಲ್ಲ ಮಾತನಾಡುತ್ತಿಲ್ಲ ಅಂದ್ರೆ ನಾನು ಆ ಶೋ ಮಾಡುತ್ತಿಲ್ಲ ಅಂತ ಅರ್ಥ. ರಾಜಾ ರಾಣಿ ನೀವು ಯಾಕೆ ಮಾಡುತ್ತಿಲ್ಲ ಅಂತ ಅನೇಕರು ಕೇಳುತ್ತಿದ್ದಾರೆ ನನಗೂ ಗೊತ್ತಿಲ್ಲ ಯಾಕೆ ರಾಜಾ ರಾಣಿ ಮಾಡುತ್ತಿಲ್ಲ ಅಂತ. ಪರ್ಸನಲ್ ವಿಚಾರಗಳಲ್ಲಿ ಬ್ಯುಸಿಯಾಗಿದ್ದೆ ಅದು ಇದು ಅಂತ ಹೇಳುತ್ತಾ ಹೋದರೆ ಸುಮಾರು ವಿಚಾರಗಳು ಹೊರ ಬರುತ್ತದೆ. ನಿಮಗೆ ಒಂದು ವಿಚಾರ ಕ್ಲಾರಿಟಿ ಕೊಡಬೇಕು ಏನೆಂದರೆ ನಾನು ರಾಜಾ ರಾಣಿ ಶೋಯಿಂದ ಹೊರ ನಡೆದಿಲ್ಲ ನನಗೆ ಕರೆ ಬಂದಿದ್ದರೆ ಖಂಡಿತಾ ಮಾಡುತ್ತಿದ್ದೆ. ತುಂಬಾ ಇಷ್ಟ ಪಟ್ಟು  ಖುಷಿಯಿಂದ ಶೋ ಮಾಡುತ್ತಿದ್ದೆ. ನೀವೆಲ್ಲರೂ ನನ್ನ ನಿರೂಪಣೆ ಇಷ್ಟ ಪಟ್ಟಿದ್ದೀರಾ ಹಾಗೆ ಶೋಗೆ ಒಳ್ಳೆಯ ಪ್ರತಿಕ್ರಿಯೆ ಕೊಟ್ಟಿದ್ದೀರಾ. ಇದು ಬಿಟ್ಟರೆ ಬೇರೆ ಏನೂ ಇಲ್ಲ ಇನ್ನೊಂದಷ್ಟು ವಿಚಾರಗಳನ್ನು ಚರ್ಚೆ ಮಾಡುವುದಕ್ಕೆ ಇಷ್ಟವಿಲ್ಲ ಏಕೆಂದರೆ ಎಲ್ಲಿ ಮಾತನಾಡಿದರೂ ಆ ಮಾತುಗಳು ಡಿಸರ್ವ್ ಮಾಡುವುದಿಲ್ಲ. ನಿಮಗೆ ಕ್ಲಾರಿಟಿ ಸಿಕ್ಕಿದೆ ಅಂದುಕೊಳ್ಳುತ್ತೀನಿ. ನಿಮಗೆ ಬೇಸರ ಆಗಿದೆ ಎಂದು ಗೊತ್ತು ನಾನು ಸಾರಿ ಕೇಳುತ್ತೀನಿ. ವೇದಿಕೆ ಮೇಲೆ ಬಂದು ಸೃಜನ ಮತ್ತು ತಾರಮ್ಮ ಅವರನ್ನು ಮಾತನಾಡಿಸುವುದು ಮಿಸ್ ಮಾಡಿಕೊಳ್ಳುತ್ತೀನಿ' ಎಂದಿದ್ದಾರೆ ಅನುಪಮಾ.

click me!