ಮಯೂರಿಗೆ ಧಾರೆ ಎರೆದಿದ್ದು JK ಪೋಷಕರು: ಕಾರಣ ರಿವೀಲ್ ಮಾಡಿದ ನಟಿ

Published : Feb 06, 2021, 11:08 AM ISTUpdated : Feb 06, 2021, 11:16 AM IST
ಮಯೂರಿಗೆ ಧಾರೆ ಎರೆದಿದ್ದು JK ಪೋಷಕರು: ಕಾರಣ ರಿವೀಲ್ ಮಾಡಿದ ನಟಿ

ಸಾರಾಂಶ

ಸ್ಯಾಂಡಲ್‌ವುಡ್ ನಟಿ ಮಯೂರಿ ಮದುವೆಯಲ್ಲಿ ಆಕೆಯನ್ನು ಧಾರೆ ಎರೆದುಕೊಟ್ಟಿದ್ದು, ಆಕೆಯ ಕುಟುಂಬಸ್ಥರಲ್ಲ, ಬದಲಾಗಿ ಸಹನಟ ಜೆಕೆಯ ಪೋಷಕರು. ಕಾರಣ ಏನು..?

ಸ್ಯಾಂಡಲ್‌ವುಡ್ ನಟಿ ಮಯೂರಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂದರ್ಭ ಚಾಟ್ ಕಾರ್ನರ್‌ನಲ್ಲಿ ಭಾಗವಹಿಸಿದ ನಟಿ ತಮ್ಮ ಮದುವೆಯ ಬಗ್ಗೆ ವಿಶೇಷ ಸುದ್ದಿಯೊಂದನ್ನು ರಿವೀಲ್ ಮಾಡಿದ್ದಾರೆ.

ಮಯೂರಿ ಮದುವೆಯಲ್ಲಿ ಅವರನ್ನು ಧಾರೆ ಎರೆದುಕೊಟ್ಟಿದ್ದು ಅವರ ಅಕ್ಕನೋ, ಸಂಬಂಧಿಯೋ ಅಲ್ಲ. ಬದಲಾಗಿ ಅಶ್ವಿನಿ ನಕ್ಷತ್ರ ಧಾರವಾಹಿಯಲ್ಲಿ ಮಯೂರಿ ಅವರ ಸಹನಟ ಜೆಕೆ ಅವರ ಪೋಷಕರು.

ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಪತ್ನಿ ಗೀತಾ ಹುಟ್ಟುಹಬ್ಬ; ನಟಿ ಮಯೂರಿ ಬಯಕೆಯೆ ಸ್ವೀಟ್ ರೆಡಿ!

ಇದಕ್ಕೇನು ಕಾರಣ ಗೊತ್ತಾ..? ಮಯೂರಿ ಅವರ ಸಂಬಂಧಿಕರೆಲ್ಲ ಹುಬ್ಬಳ್ಳಿಯಲ್ಲಿದ್ದರು. ಕೊರೋನಾವಾದ್ದರಿಂದ ಯಾರೊಬ್ಬರೂ ಮದುವೆಗೂ ಬರುವ ಧೈರ್ಯ ತೋರಿಸಲಿಲ್ಲ. ಇನ್ನು ಕಾರಣಾಂತರಗಳಿಂದ ಅವರ ಅಕ್ಕನೂ ತಂಗಿಯನ್ನು ಧಾರೆ ಎರೆಯುವ ಸ್ಥಿತಿಯಲ್ಲಿರಲಿಲ್ಲ.

ಅಂತಹ ಸಂದರ್ಭದಲ್ಲಿ ಮಯೂರಿ ಅವರಿಗೆ ನೆನಪಾಗಿದ್ದು, ಬೆಂಗಳೂರಿನಲ್ಲಿ ತಮಗೆ ಆತ್ಮೀಯರಾದ ಜೆಕೆ ಪೋಷಕರು. ಫೋನ್ ಮಾಡಿ ಕೇಳಿದ ಕೂಡಲೇ ಒಪ್ಪಿಕೊಂಡಿದ್ದರಂತೆ. ಮಯೂರಿಯನ್ನು ತಮ್ಮ ಸ್ವಂತ ಮಗಳಂತೆ ಧಾರೆ ಎರೆದು ಕೊಟ್ಟಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?