2020ರಲ್ಲಿ ಮಾಡಿಕೊಂಡ ಈ ಎಡವಟ್ಟಿನಿಂದ ಬಿಗ್ ಬಾಸ್‌ ಪ್ರವೇಶಿಸುವ ಅವಕಾಶ ಪಡೆದ್ರಾ ಗೀತಾ?

By Suvarna News  |  First Published Feb 5, 2021, 11:17 AM IST

ಬ್ರಹ್ಮಗಂಟು ಧಾರಾವಾಹಿಯ ಪ್ರಮುಖ ಪಾತ್ರಧಾರಿ ಗೀತಾ ಭಾರತಿ ಭಟ್ ಬಿಗ್ ಬಾಸ್‌ ಮನೆ ಪ್ರವೇಶಿಸುತ್ತಿರುವುದು ಕನ್ಫರ್ಮ್‌ಡ್!


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ ಬ್ರಹ್ಮಗಂಟು ನಟಿ ಗೀತಾ ಭಾರತಿ ಭಟ್‌ ಬಿಗ್ ಬಾಸ್‌ ಸೀಸನ್‌ 8ಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. 

ಗೀತಾ ಪಾತ್ರವೇ ಹೀಗೆ.. ಪರ್ಫೆಕ್ಟ್‌ ಸೊಸೆ, ಧೈರ್ಯವಂತೆ, ಗಂಡ ಏನೇ ತಪ್ಪು ಮಾಡಿದರೂ ಕ್ಷಮಿಸಿ, ಅದನ್ನು ಮತ್ತೊಂದು ರೀತಿಯಲ್ಲಿ ಪರಿಶೀಲಿಸಿ ಅರ್ಥ ಮಾಡಿಕೊಂಡು ಸುಖ ಜೀವನ ಸಾಗಿಸುವ ಅಪ್ಪಟ ಮನೆ ಮಗಳ ಪಾತ್ರ. ಗುಂಡಮ್ಮೆ ಎಂದು ಅಡ್ಡ ಹೆಸರು ಪಡೆದರೂ, ಮನಸ್ಸು ಮಾತ್ರ ತುಂಬಾನೇ ಮೃಧು. ಇದೀಗ ಗೀತಾ ಬಿಬಿ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ನೆಟ್ಟಿಗರು ಲೈಟ್‌ ಆಗಿ ಶಾಕ್ ಆಗಿದ್ದಾರೆ.

Tap to resize

Latest Videos

ಹೌದು! ಸಾಮಾನ್ಯವಾಗಿ ಬಿಗ್ ಬಾಸ್‌ ಮನೆ ಎಂಟ್ರಿ ಕೊಡುವವರು ಸಿಕ್ಕಾಪಟ್ಟೆ ಹೆಸರು ಮಾಡಿರಬೇಕು. ಗೀತಾ ತುಂಬಾನೇ ಸೈಲೆಂಟ್ ಹುಡುಗಿ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೂಟ್‌ಗಳ ಬಗ್ಗೆ ಮಾತ್ರ ಮಾಹಿತಿ ಹಂಚಿಕೊಳ್ಳುತ್ತಾರೆ. ಇನ್ನೇನು ಇಲ್ವಲ್ಲ ಎಂದು ಕನ್ಫ್ಯೂಸ್‌ ಆಗಿದ್ದ ಕೆಲವರಿಗೆ ಇಲ್ಲಿದೆ ನೆಟ್ಟಿಗರಿಂದ ಉತ್ತರ...

ಬ್ರಹ್ಮಗಂಟಿನ ಗುಂಡಮ್ಮ ಎಷ್ಟು ಮುದ್ದಾಗಿದ್ದಾರೆ ನೋಡಿ! 

ಕೊರೋನಾ ಕಾಟದಿಂದ 2020ರಲ್ಲಿ ಧಾರಾವಾಹಿ ಶೂಟಿಂಗ್ ಕೂಡ ನಡೆಯಲಿಲ್ಲ, ಅದೇ  ಹಳೆ ಸಂಚಿಕೆಗಳನ್ನು ಮರುಪ್ರಸಾರ ಮಾಡುವ ಮೂಲಕ ವೀಕ್ಷಕರನ್ನು ಮನೋರಂಜಿಸುತ್ತಿದ್ದರು. ಈ ನಡುವೆ ಸೋಂಕಿಗಿಂತ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದು ಡ್ರಗ್ಸ್‌ ಮಾಫಿಯಾ. ಸಿಸಿಬಿ ಕಛೇರಿಯಿಂದ ನೋಟಿಸ್‌ ಪಡೆದು ವಿಚಾರಣೆಯಲ್ಲಿ ಭಾಗಿಯಾಗಿದ್ದ ಗೀತಾ ಕೆಲವು ತಿಂಗಳ ಕಾಲ ಸುದ್ದಿಯಲ್ಲಿದ್ದರು. ಹಾಗಾಗಿ ಬಿಗ್ ಬಾಸ್‌ ಪ್ರವೇಶ ಮಾಡಲು ಇದೂ ಒಂದು ಕಾರಣವಿರಬಹುದು ಎನ್ನುತ್ತಾರೆ ನೆಟ್ಟಿಗರು.

'ನಮ್ಮನ್ನು ವಿಚಾರಣೆಗೆ ಕರೆದಿದ್ದಷ್ಟೇ, ಆರೋಪಿಗಳು ಎಂದು ಹೇಳಿಲ್ಲ, ಹಾಗೆ ತೋರಿಸಬೇಡಿ' 

ಅತ್ತ ಹನುಮಂತು ಬಿಗ್‌ಬಾಸ್ ಮನೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಇದೀಗ ಒಬ್ಬೊಬ್ಬರೇ ಸ್ಪರ್ಧಿಗಳು ಸುಳಿವು ಸಿಗುತ್ತಿದ್ದು, ಈ ವರ್ಷ ಭರಪೂರ ಮನೋರಂಜನೆ ಕೊಡಲು ಇನ್ಯಾರು ಮನೆಯೊಳಗೆ ಹೋಗುತ್ತಾರೆ ಎಂಬ ಕುತೂಹಲ ಹೆಚ್ಚುತ್ತಿದೆ.

click me!