
ಸುಧಾರಾಣಿ ಹಾಗೂ ವಿಜಯ್ ಸೂರ್ಯ ಜೊತೆ ಜೊತೆಯಲಿ ಧಾರಾವಾಹಿಗೆ ಎಂಟ್ರಿ ಕೊಟ್ಟಾಗಿನಿಂದಲೂ ವೀಕ್ಷಕರಿಗೆ ಒಂದು ರೀತಿಯ ಸಂಕಟ, ಒಂದು ರೀತಿ ಸಂತೋಷ. ಅನು ಮದುವೆ ಸಂಭ್ರಮದಲ್ಲಿ ಭಾಗಿಯಾಗಿರುವ ಆರ್ಯನ ದುಃಖ ಅರ್ಥ ಮಾಡಿಕೊಳ್ಳಬೇಕಾ ಅಥವಾ ಸುಬ್ಬು ಸಿರಿಮನೆ ಮುಖದಲ್ಲಿರುವ ಸಂತೋಷ ನೋಡಿ ನಾವು ಖುಷಿ ಪಡಬೇಕೋ ಗೊತ್ತಿಲ್ಲ. ಆದರೆ ಪುಷ್ಪ ಸಿರಿಮನೆ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗೆ ನೆಟ್ಟಿಗರು ನಾನ್ ಸ್ಟಾಪ್ ಕಾಮೆಂಟ್ ಮಾಡುತ್ತಿದ್ದಾರೆ.
ಹೌದು! ಸುಧಾರಾಣಿ ಹಾಗೂ ಅಪೂರ್ವಾ ಅತಿ ಚಿಕ್ಕ ವಯಸ್ಸಿನಲ್ಲಿಯೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು. ಇಬ್ಬರು ಆರಂಭದ ದಿನಗಳಲ್ಲಿ ಸಿನಿಮಾವೊಂದಕ್ಕೆ ಚಿತ್ರೀಕರಣ ಮಾಡುವಾಗ ಸೆರೆ ಹಿಡಿದ ಫೋಟೋ ಹಾಗೂ ಈಗಿನ ಫೋಟೋ ಹಂಚಿಕೊಂಡಿದ್ದಾರೆ. ಸೂರ್ಯ ತಾಯಿ ಪಾತ್ರದಲ್ಲಿ ಸುಧಾರಾಣಿ ಮಿಂಚುತ್ತಿದ್ದು, ಸುಬ್ಬು ಹಾಗೂ ಪುಷ್ಪಾ ತಮ್ಮ ಮುದ್ದಿನ ಮಗಳನ್ನು ಸೂರ್ಯನಿಗೆ ಕೊಟ್ಟು ಮದುವೆ ಮಾಡಲು ನಿಶ್ಚಯಿಸಿದ್ದಾರೆ. ವಿಚಿತ್ರ ಅಂದ್ರೆ ಧಾರಾವಾಹಿಯಲ್ಲಿ ಸುಧಾರಾಣಿ ಹೆಸರು ಕೂಡ ಅನು ಎಂದು. ಸೂರ್ಯನ ಬಾಳಲ್ಲಿ ಇಬ್ಬರು ಅನುಗಳ ಎಂಟ್ರಿ ಆಗಲಿದೆ.
'ಜೊತೆ ಜೊತೆಯಲಿ' ಟ್ರ್ಯಾಕ್ ಸಾಂಗ್‌ಗೆ 11 ತಿಂಗಳಲ್ಲಿ 2 ಕೋಟಿ ವೀಕ್ಷಣೆ
'ನೀವಿಬ್ಬರು ಅಮ್ಮನ ಪಾತ್ರದಲ್ಲಿ ಅದ್ಭುತವಾಗಿ ಕಾಣಿಸುತ್ತಿದ್ದೀರಾ', 'ಒಟ್ಟಿಗೆ ಜರ್ನಿ ಶುರು ಮಾಡಿದ್ದೀರಿ. ಒಬ್ಬರು ಸಿನಿಮಾ ನಟಿ, ಮತ್ತೊಬ್ಬರು ಧಾರಾವಾಹಿ ನಟಿ,' ಎಂದು ನೆಟ್ಟಿಗರು ಫೋಟೋಗೆ ಕಾಮೆಂಟ್ ಮಾಡುತ್ತಿದ್ದಾರೆ. ಮಿಡಲ್ ಕ್ಲಾನ್ ಮನೆತನದ ಅಮ್ಮನ ಪಾತ್ರದಲ್ಲಿ ಪುಷ್ಪಾ, ಭಾರೀ ಶ್ರೀಮಂತ ಅಮ್ಮನ ಪಾತ್ರದಲ್ಲಿ ಸುಧಾರಾಣಿ ಒಟ್ಟಾಗಿ ತಮ್ಮ ಮಕ್ಕಳ ಭಾವನೆ ಅರ್ಥ ಮಾಡಿಕೊಳ್ಳುವುದುರಲ್ಲಿ ಎತ್ತಿದ ಕೈ. ಈ ವಿಚಾರಕ್ಕೆ ಧಾರಾವಾಹಿ ವೀಕ್ಷಿಸುವ ಅದೆಷ್ಟೋ ಜನರಿಗೆ ಸುಲಭವಾಗಿ ಕನೆಕ್ಟ್ ಆಗುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.