ಕಾಮಿಡಿ ಕಿಲಾಡಿಗಳು ಶೋ ವೇದಿಕೆ ಮೇಲೆ ದಿಢೀರನೇ ಕಾಣಿಸಿಕೊಂಡ ನಟ ಜಗ್ಗೇಶ್ ಅವರ ಎರಡನೇ ಸಹೋದರ ರಾಮಚಂದ್ರ, ನಾನು ಆಂಕರ್ ಅನುಶ್ರೀ ಇಷ್ಟಪಡುತ್ತಿರುವುದಾಗಿ ಹೇಳಿದ್ದಾರೆ.
ಬೆಂಗಳೂರು (ಜು.18): ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋ ವೇದಿಕೆ ಮೇಲೆ ದಿಢೀರನೇ ಕಾಣಿಸಿಕೊಂಡ ನಟ ಜಗ್ಗೇಶ್ ಅವರ ಎರಡನೇ ಸಹೋದರ ರಾಮಚಂದ್ರ, ನಾನು ಅನುಶ್ರೀ ಇಷ್ಟಪಡುತ್ತಿರುವುದಾಗಿ ಹೇಳಿದ್ದಾರೆ.
ನಟಿ ಹಾಗೂ ನಿರೂಪಕಿ ಅನುಶ್ರೀ ಅವರನ್ನು ನೋಡಿದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಹರಳು ಹುರಿದಂತೆ ಮಾತನಾಡುವ ಅನುಶ್ರೀ ಹಾವ, ಭಾವ ಹಾಗೂ ಮಾತನಾಡುವ ವೇಳೆ ಧ್ವನಿಯ ಏರಿಳಿತಕ್ಕೆ ತಕ್ಕಂತೆ ಅವರ ದೇಹದಲ್ಲಿ ಉಂಟಾಗುತ್ತಿದ್ದ ಭಂಗಿಯನ್ನು ನೋಡಿದರೆ ಮುಗ್ದ ಮನಸ್ಸುಗಳೂ ಕೂಡ ಸಂತಸದಿಂದ ಅವರೊಂದಿಗೆ ಕುಣಿದು ಕುಪ್ಪಳಿಸಬೇಕು ಎನಿಸುವುದು ಸಹಜ. ಆದರೆ, ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋ ವೇದಿಕೆ ಮೇಲೆ ದಿಢೀರನೇ ಕಾಣಿಸಿಕೊಂಡ ನಟ ಜಗ್ಗೇಶ್ ಅವರ ಎರಡನೇ ಸಹೋದರ ರಾಮಚಂದ್ರ, ನಾನು ಅನುಶ್ರೀ ಇಷ್ಟಪಡುತ್ತಿರುವುದಾಗಿ ಹೇಳಿದ್ದಾರೆ. ಇದನ್ನು ಕೇಳಿ ಜಗ್ಗೇಶ್ ಹಾಗೂ ಅನುಶ್ರೀ ಇಬ್ಬರೂ ಗಾಬರಿಯಾಗಿದ್ದಾರೆ.
ಗ್ರಾಮೀಣ ಭಾಗದಿಂದ ಕಷ್ಟಪಟ್ಟು ಬೆಳೆದು ಬಂದ ನಟ ಜಗ್ಗೇಶ್ ಅವರು ನವರಸಗಳನ್ನೂ ಅರೆದು ಕುಡಿದಿದ್ದಾರೆ. ನಟನಾ ಕ್ಷೇತ್ರವಾದ ಸಿನಿಮಾರಂಗ ಮಾತ್ರವಲ್ಲದೇ ರಾಜಕೀಯದಲ್ಲಿಯೂ ಯಶಸ್ಸು ಗಳಿಸಿರುವ ಅವರು ರಾಜ್ಯಸಭಾ ಸದಸ್ಯರೂ ಆಗಿದ್ದಾರೆ. ಈಗ ಬಿಡುವಿನ ಸಮಯದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋನ ಜಡ್ಜ್ ಆಗಿಯೂ ಕಾರ್ಯ ನಿರ್ಹಿಸುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಶೋನಲ್ಲಿ ಒಂದು ತಂಡ ಮಾಲೀಕರಾಗಿರುವ ಆಂಕರ್ ಅನುಶ್ರೀ ಮೇಲೆ ನನಗೆ ಲವ್ವಾಗಿದೆ ಎಂದು ನಟ ಜಗ್ಗೇಶ್ ಅವರ ಸಹೋದರ ರಾಮಚಂದ್ರ ಹೇಳಿಕೊಂಡಿದ್ದಾರೆ.
ನವರಸನಾಯಕ ಜಗ್ಗೇಶ್ ಮುಂದೆ ಕಾಮಿಡಿ ಕಿಲಾಡಿ ವೇದಿಕೆಯಲ್ಲಿ ಕಣ್ಣೀರಿಟ್ಟ ಆಂಕರ್ ಶ್ವೇತಾ ಚೆಂಗಪ್ಪ
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಶೋನಲ್ಲಿ ಫ್ಯಾಮಿಲಿ ರೌಂಡ್ ವೇಳೆ ಕೆಂಟೆಸ್ಟೆಂಟ್‌ಗಳು ತಮ್ಮ ಶೋ ಪ್ರದರ್ಶನದ ನಂತರ ಮಾತನಾಡುವಾಗ ನಟ ಜಗ್ಗೇಶ್ ಸಹೋದರ ರಾಮಚಂದ್ರನ ಬಗ್ಗೆ ಮಾತನಾಡಿದ್ದಾರೆ. ಈ ವೇಳೆಯೇ ರಾಮಚಂದ್ರ ಅವರು ವೇದಿಕೆ ಮೇಲೆ ಬಂದಿದ್ದಾರೆ. ಇದನ್ನು ನೋಡಿ ಗಾಬರಿಯಾದ ನಟ ಜಗ್ಗೇಶ್ ಲೇ.., ನೀನೆಲ್ಲಿಂದ ಬಂದ್ಲಾ..? ಎಂದು ಕೇಳುತ್ತಾರೆ. ಆಗ ನಾನು ವೇದಿಕೆ ಹಿಂದೆಯೇ ಇದ್ದೆ, ನೀನು ಮಾತನಾಡುವುದನ್ನು ಕೇಳಿ ಬಂದೆ ಎಂದು ಹೇಳುತ್ತಾರೆ. ಜೀ ಕನ್ನಡ ವೇದಿಕೆ ಅವರೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾರೆ ಎಂದು ಕೈ ಸನ್ನೆಯ ಮೂಲಕವೇ ತಿಳಿಸಿದ್ದಾರೆ. ಯಾವನೋ ನೋಡು ಕರೆಕ್ಟಾಗಿ ನನ್ನ ತಮ್ಮನನ್ನು ಇಲ್ಲಿಗೆ ಕಳಿಸಿಬಿಟ್ಟಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಮುಂದುವರೆದು, ತಮ್ಮನ ಬಗ್ಗೆ ಮಾತನಾಡುತ್ತಾ ಒಂದು ಕುಟುಂಬದಲ್ಲಿ ಯಾರಾದರೂ ಪ್ರಪಂಚ ಜ್ಞಾನ ಇಲ್ಲದವರು ಇದ್ದರೆ ಅವರ ಪ್ರತಿ 3ನೇ ತಲೆಮಾರಿಗೆ ಒಬ್ಬರಂತೆ ಹೀಗೆ ಪ್ರಪಂಚ ಜ್ಞಾನ ಇಲ್ಲದವರ ಜನಿಸುತ್ತಾರೆ. ನಮ್ಮ ತಾತ ಅವರ ತಂದೆ ಪ್ರಪಂಚದ ಜ್ಞಾನ ಇಲ್ಲದವರು ಜನಿಸುತ್ತಾರಂತೆ. ಅದೇ ರೀತಿ ನಮ್ಮ 2ನೇ ತಮ್ಮ ರಾಮಚಂದ್ರ ಅವರಿಗೂ ಪ್ರಪಂಚ ಜ್ಞಾನದ ಪರಿಕಲ್ಪನೆ ಕಡಿಮೆಯಿದೆ. ಅವರಿಗೆ ಮಾತನಾಡಲು ಬರುವುದಿಲ್ಲ. ನನ್ನ ತಮ್ಮ ರಾಮಚಂದ್ರ ಜನಿಸಿದ ನಂತರವೇ ನಮ್ಮಪ್ಪನಿಗೆ ಅದೃಷ್ಟ ಖುಲಾಯಿಸಿತು. ಅವನು ಹುಟ್ಟಿದ ನಂತರ ನಮ್ಮ ತಂದೆ ಮಾತ್ರವಲ್ಲದೇ ನಮ್ಮ ಇಡೀ ಕುಟುಂಬವೇ ಆರ್ಥಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಉಂಟಾಯಿತು. ಅವನೊಬ್ಬ ದೇವರಿದ್ದಂತೆ ಎಂದು ಹೇಳಿ ಪರಿಚಯ ಮಾಡಿಸಿಕೊಟ್ಟರು.
ಪ್ರೀತಿಸಿ ಮದುವೆಯಾದ ಹೆಂಡತಿ, ಮಗಳನ್ನು ಕೊಟ್ಟ ಅತ್ತೆ, ಮಾವನನ್ನೂ ಕೊಲೆಗೈದ ಮನೆ ಮುರುಕ ಅಳಿಯ!
ರಾಮಚಂದ್ರನದ್ದು ಲವ್ ಮ್ಯಾರೇಜ್ ಆಗಿದೆ. ಒಟ್ಟು 3 ಜನರು ಹೆಂಡತಿಯರಿದ್ದಾರೆ. ಅವರು ಹೆಂಡತಿಯನ್ನು ಬಿಟ್ಟು ಇಬ್ಬರನ್ನು ಮೇಂಟೇನ್ ಮಾಡುತ್ತಿದ್ದಾನೆ ಎಂದು ಹೇಳಿದರು. ಇನ್ನು ಬೆಂಗಳೂರಿನಲ್ಲಿಯೂ ಇಬ್ಬರನ್ನು ಇಷ್ಟ ಪಟ್ಟಿರುವುದಾಗಿ ಹೇಳಿದ್ದಾನೆ. ಅಲ್ಲಿ ಇಲ್ಲಿ ಹೋದ ಕಡೆಗಳಲ್ಲಿ ತನಗೆ ಇಷ್ಟವಾದವರನ್ನು ಪರಿಚಯ ಮಾಡಿಕೊಳ್ತಾನೆ, ಅದರಲ್ಲಿ ಸಲುಗೆ ಬೆಳೆದರೆ ಲವ್ ಮಾಡುತ್ತಾನೆ. ಈಗ ಕಾಮಿಡಿ ಕಿಲಾಡಿಗಳು ವೇದಿಕೆಗೆ ಬಂದಿದ್ದಾನೆ ಎಂದರೆ ಅವನಿಗೆ ಇಲ್ಲಿ ಯಾರಾದರೂ ಇಷ್ಟವಾಗಿರುತ್ತಾರೆ. ಲೇ ರಾಮಚಂದ್ರ ನಿಂಗೆ ಇಲ್ಲಿ ಯಾರು ಇಷ್ಟವಾದ್ರು? ಯಾರನ್ನು ಲವ್ ಮಾಡ್ತೀಯಾ? ಎಂದು ಕೇಳಿದ್ದಕ್ಕೆ ತೊದಲು ನುಡಿಯಲ್ಲಿಯೇ ಆಂಕರ್ ಅನುಶ್ರೀ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಆಂಕರ್ ಅನುಶ್ರೀ ಗಾಬರಿಯಾಗಿದ್ದಾರೆ.
ನಂತರ ನಾನು ಅನುಶ್ರೀಯೊಂದಿಗೆ ಡ್ಯಾನ್ಸ್ ಮಾಡಬೇಕು ಎಂದು ಅನುಶ್ರೀಯನ್ನು ವೇದಿಕೆಗೆ ಕರೆಸಿಕೊಂಡು 'ಹೊಂಬಾಳೆ ಹೊಂಬಾಳೆ ಪ್ರೀತಿಯ ಹೊಂಬಾಳೆ.... ಹಾಡಿಗೆ ರಾಮಚಂದ್ರ ಅವರು ಹೆಜ್ಜೆ ಹಾಕಿದರು. ಇದನ್ನೆಲ್ಲಾ ನೋಡಿ ಆಶ್ಚರ್ಯಗೊಂಡ ನಟ ಜಗ್ಗೇಶ್ ಅವರು ಏನ್ಲಾ ರಾಮ ನೀನು ಹೀಗೆ ಮಾಡಿಬಿಟ್ಟೆ.. ನಿನ್ನ ಹಿಂದೇ ಬಿಟ್ಟರೆ ನನ್ನನ್ನು ವೇದಿಕೆಯಿಂದ ಮನೆಗೆ ಕಳಿಸಿಬಿಡ್ತೀಯಾ ಎಂದು ಹೇಳಿದರು..