ತುಂಬಾ ಕ್ಷಮಿಸಿ, ಏನೇ ಅನ್ನಿ ಈ ಜರ್ಮನ್ ಸುಂದರಿ ಕನ್ನಡ ಕಿವಿಗೆ ಮುದ ನೀಡೋದು ಸುಳ್ಳಲ್ಲ!

By Roopa Hegde  |  First Published Sep 12, 2024, 1:09 PM IST

ಕನ್ನಡಿಗರ ಬಾಯಲ್ಲೇ ಕನ್ನಡ ಕೇಳೋದು ಅಪರೂಪವಾಗಿದೆ. ಇಂಥ ಸಮಯದಲ್ಲಿ ವಿದೇಶಿ ಹುಡುಗಿ ಬಾಯಿಂದ ಕನ್ನಡ ಬಂದ್ರೆ ಕೇಳೋಕೆ ಅದೇನೋ ಖುಷಿ. ಜೆನ್ನಿಫರ್ ಕನ್ನಡ ಕೇಳಿದ್ರೆ ನೀವೂ ಕಳೆದುಹೋಗ್ತೀರಾ.


ಕರ್ನಾಟಕದಲ್ಲಿ ಕನ್ನಡ ಭಾಷೆ (Karnataka Kannada language) ಕೇಳೋದೇ ಕಷ್ಟವಾಗಿದೆ. ಕನ್ನಡಿಗರು ಕೂಡ, ಇಂಗ್ಲೀಷ್, ಹಿಂದಿಯಲ್ಲಿ ಮಾತನಾಡ್ತಿದ್ದಾರೆ. ಈ ಸಮಯದಲ್ಲಿ ಜರ್ಮನ್ (German) ಮಹಿಳೆಯೊಬ್ಬಳ ಕನ್ನಡ ಪ್ರೇಮ (Kannada love) ಎಲ್ಲರ ಗಮನ ಸೆಳೆದಿದೆ. ಸಿಲಿಕಾನ್ ಸಿಟಿಯಲ್ಲಿ ಜರ್ಮನಿ ಹುಡುಗಿ ಒಂದು ಇಡೀ ದಿನ ಕನ್ನಡ ಮಾತನಾಡುವ ಚಾಲೆಂಜ್ ಸ್ವೀಕರಿಸುತ್ತಾರೆ. ನಂತ್ರ ಕನ್ನಡದಲ್ಲಿ ಮಾತನಾಡಲು ಶುರು ಮಾಡ್ತಾರೆ. ಅವರ ಬಾಯಿಂದ ಬರುವ ಕನ್ನಡ ಕೇಳಿದ್ರೆ ಕಿವಿ ತಂಪಾಗುತ್ತೆ. 

ಜರ್ಮನ್ ಯುವತಿ ಜೆನ್ನಿಫರ್ ವಿಡಿಯೋ (Jenifer Video) ಇದಾಗಿದೆ. ಕರ್ನಾಟಕಕ್ಕೆ ಬಂದ ಸಂದರ್ಭದಲ್ಲಿ ಜೆನ್ನಿಫರ್ ಈ ವಿಡಿಯೋ ಮಾಡಿದ್ದಾರೆ. ಕನ್ನಡದಲ್ಲಿ ಮಾತನಾಡಲು ಅವರು ಪ್ರಯತ್ನಿಸುತ್ತಾರೆ. ನಿರಂತರ ಪ್ರಯಾಣ ನನ್ನ ಭಾಷಾ ಕೌಶಲ್ಯ (Language Skills)ದ ಮೇಲೆ ಪ್ರಭಾವ ಬೀರುತ್ತಿದೆ ಎಂಬುದು ಗೊತ್ತಾದಾಗ ನಾನು ಕನ್ನಡ ಕಲಿಯಲು, ಮಾತನಾಡಲು ನಿರ್ಧರಿಸಿದೆ. ಇಂದು ಇಡೀ ದಿನ ಕನ್ನಡದಲ್ಲಿ ಮಾತನಾಡುತ್ತೇನೆ ಎಂದು ಜೆನ್ನಿಫರ್ ವಿಡಿಯೋದಲ್ಲಿ ಹೇಳಿದ್ದಾರೆ. 

Tap to resize

Latest Videos

undefined

ಮಕ್ಕಳನ್ನು ಮಾಡ್ಕೊಳ್ಳೋಕೆ ಭಯವಂತೆ ನಟಿ ತಮನ್ನಾಗೆ..ಕಾರಣ ಏನ್ ಗೊತ್ತಾ?

ಕನ್ನಡದಲ್ಲಿ ಮಾತನಾಡ್ತಾ ಹೋಗುವ ಜೆನ್ನಿಫರ್, ಚೆನ್ನಾಗಿದ್ದೇನೆ, ಕ್ಷಮಿಸಿ, ಒಂದು ನಿಮಿಷ, ನನಗೆ ಅನ್ನಿಸುತ್ತೆ, ಅಂದರೆ, ಹೀಗೆ ಕನ್ನಡಿಗರೇ ಅತಿ ಕಡಿಮೆ ಬಳಸುವ ಪದಗಳನ್ನು ಜೆನ್ನಿಫರ್ ಮಾತಿನಲ್ಲಿ ಬಳಸಿಕೊಂಡಿದ್ದಾರೆ. ನನಗೆ ಅನ್ನಿಸುತ್ತೆ, ನನ್ನ ಕನ್ನಡ ತುಂಬಾ ಚೆನ್ನಾಗಿಲ್ಲ ಎನ್ನುವ ಜೆನ್ನಿಫರ್, ಸ್ಥಳೀಯರ ಜೊತೆ ಮಾತನಾಡ್ತಾ, ಅವರನ್ನು ಕನ್ನಡ ಮಾತನಾಡುವಂತೆ ಪ್ರೇರೇಪಿಸಿದ್ದಾರೆ. ಥ್ಯಾಂಕ್ಯೂ ಎಂಬ ಪದಕ್ಕೆ ಧನ್ಯವಾದ ಎಂದ ಜೆನ್ನಿಫರ್, ಕನ್ನಡ ಭಾಷೆ ಮೇಲೆ ಅಪಾರ ಪ್ರೇಮ ಹೊಂದಿದ್ದಾರೆ. 

ಕಳೆದ ಒಂದು ತಿಂಗಳಿಂದ ಕರ್ನಾಟಕದಲ್ಲಿ ಕನ್ನಡ ಭಾಷಾ ವಿಷ್ಯದ ಚರ್ಚೆ ಮತ್ತೆ ಜೀವಪಡೆದಿದೆ. ಸಿಲಿಕಾನ್ ಸಿಟಿ ಬೆಂಗಳೂರಿ (Silicon City Bangalore) ನಲ್ಲಿ ವ್ಯವಹಾರ ನಡೆಸೋದು ಕಷ್ಟ ಎಂದು ಹೊಸ ನಿವಾಸಿಗಳು ಸೋಶಿಯಲ್ ಮೀಡಿಯಾ (Social Media) ದಲ್ಲಿ ದೂರುತ್ತಿದ್ದಾರೆ. ಇಲ್ಲಿಗೆ ಬರುವ ಕನ್ನಡೇತರ ಜನರು ಕನ್ನಡ ಕಲಿಯುತ್ತಿಲ್ಲ, ಅವರಿಗೆ ಸ್ಥಳೀಯರ ಜೊತೆ ಸಂವಾದ ನಡೆಸಲು ಕಷ್ಟವಾಗ್ತಿದೆ. ಕನ್ನಡಿಗರಿಗೆ ಬೇರೆ ಭಾಷೆ ಬರದ ಕಾರಣ, ವ್ಯವಹಾರ ಕಷ್ಟ ಎಂಬುದು ಅವರ ವಾದ. ಆದ್ರೆ ಇದನ್ನು ಬಹುತೇಕ ಕನ್ನಡಿಗರು ಒಪ್ಪುತ್ತಿಲ್ಲ.  

ಒಂದ್ಕಡೆ ಕರ್ನಾಟಕದಲ್ಲಿ ಉದಾರ ಮನಸ್ಸಿನ ಕನ್ನಡಿಗರ ಸಂಖ್ಯೆ ಹೆಚ್ಚಿಗೆ ಆಗ್ತಿದೆ. ಕನ್ನಡ ಬಿಟ್ಟು, ಬೇರೆ ಎಲ್ಲ ಭಾಷೆಗಳನ್ನು ಕಲಿತು, ಅವರ ಜೊತೆ ವ್ಯವಹಾರ ನಡೆಸುತ್ತಿದ್ದಾರೆ. ಹಾಗಾಗಿ ಕನ್ನಡವನ್ನು ಹುಡುಕುವಂತಾಗಿದೆ. ಇನ್ನೊಂದ್ಕಡೆ, ಕರ್ನಾಟಕಕ್ಕೆ ಬರುವ ಬೇರೆ ಭಾಷಿಕರು ಯಾಕೆ ಕನ್ನಡ ಕಲಿಯಬಾರದು ಎಂಬ ಪ್ರಶ್ನೆ ಕೂಡ ಎದ್ದಿದೆ. ಕನ್ನಡೇತರರು, ಸ್ಥಳೀಯ ಭಾಷೆಗೆ ಹೊಂದಿಕೊಳ್ಳುವ ಅಗತ್ಯವೇನಿದೆ, ಅದ್ರ ಮಹತ್ವ ಎಷ್ಟು ಎಂಬುದನ್ನು ಜೆನ್ನಿಫರ್ ಈ ವಿಡಿಯೋ ಒತ್ತಿ ತೋರಿಸಿದೆ.

ಎರಡು ವರ್ಷಗಳ ಹಿಂದೆ ಜೆನ್ನಿಫರ್ ವಿಡಿಯೋ ಒಂದು ವೈರಲ್ ಆಗಿತ್ತು. ಮೈಸೂರಿನಲ್ಲಿ ಮಾತನಾಡಿದ್ದ ಜೆನ್ನಿಫರ್ ಆಗ ಸ್ಪಷ್ಟವಾಗಿ ಕನ್ನಡ ಕಲಿತಿರಲಿಲ್ಲ. ಒಂದೋ ಎರಡೋ ಶಬ್ಧವನ್ನು ಮಾತನಾಡುತ್ತಿದ್ದರು. ಆದ್ರೀಗ ಅವರು ಸ್ಥಳಿಯರ ಜೊತೆ ವ್ಯವಹರಿಸುವಷ್ಟು ಪರ್ಫೆಕ್ಟ್ ಆಗಿದ್ದಾರೆ. ಕನ್ನಡ ಕಲಿಯಲು ಸಾಕಷ್ಟು ಪ್ರಯತ್ನವಿದೆ ಎಂಬುದು ಅವರ ಮಾತಿನಿಂದ ಸ್ಪಷ್ಟವಾಗ್ತಿದೆ. 

ಯಾರಾದ್ರಾೂ ಒಂದೇ ದಿನ 23 ಹಲ್ಲು ಕೀಳ್ತಾರಾ? ಈ ಡೆಂಟಿಸ್ಟ್ ಕೆಲಸಕ್ಕೆ ಜೀವವೇ ಹೋಯ್ತು!

ಜೆನ್ನಿಫರ್ ಈ ವಿಡಿಯೋ ನೋಡಿದ ಕನ್ನಡಿಗರು ಖುಷಿಯಾಗಿದ್ದಾರೆ. ಉತ್ತರ ಭಾರತೀಯರು, ಜೆನ್ನಿಫರ್ ರಂತೆ ಕನ್ನಡ ಕಲಿಯಬೇಕೆಂದು ಸಲಹೆ ನೀಡಿದ್ದಾರೆ. ಉತ್ತರ ಭಾರತೀಯರು ಕನ್ನಡ ಕಲಿಯೋದಿಲ್ಲ, ಕನ್ನಡಿಗರ ಮೇಲೆ ಆರೋಪ ಹೊರಿಸ್ತಾರೆ. ಅವರಿಗಿಂತ ವಿದೇಶಿಗರು ಬೆಸ್ಟ್ ಎಂಬ ಕಮೆಂಟ್ ಕೂಡ ಬಂದಿದೆ. ಜೆನ್ನಿಫರ್ ಕನ್ನಡಕ್ಕೆ ಕನ್ನಡಿಗರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಸೀರೆಯುಟ್ಟು, ಉದ್ದದ ಜಡೆ ಹೆಣೆದು, ಸುಂದರವಾಗಿ ಕಾಣ್ತಿರುವ ಜೆನ್ನಿಫರ್ ವಿಡಿಯೋ ಹಳೆದಾದ್ರೂ ಈಗ ಮತ್ತೆ ಸುದ್ದಿ ಮಾಡಿದೆ. 

click me!