
ಸಲ್ಮಾನ್ ಖಾನ್ ನಿರೂಪಣೆಯ 'ಬಿಗ್ ಬಾಸ್ 19' ಶೋಗೆ ವಿನ್ನರ್ ಸಿಕ್ಕಿದ್ದಾರೆ. ಡಿಸೆಂಬರ್ 7 ಭಾನುವಾರ ರಾತ್ರಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ನಟ ಗೌರವ್ ಖನ್ನಾ ( gaurav khanna ) ಟ್ರೋಫಿ ಗೆದ್ದಿದ್ದಾರೆ. ಇದರೊಂದಿಗೆ 50 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ.
ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿರುವ ಗೌರವ್ ಖನ್ನಾ ಅವರು, "ವಿನ್ನರ್ ಇಲ್ಲಿದ್ದಾರೆ. ಖನ್ನಾ ಕುಟುಂಬದ ಸಂಪೂರ್ಣ ಬೆಂಬಲಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಟ್ರೋಫಿ ಮನೆಗೆ ಬಂದಿದೆ" ಎಂದು ಬರೆದುಕೊಂಡಿದ್ದಾರೆ.
"ಮೂರು ತಿಂಗಳ ಬಿಗ್ ಬಾಸ್ ಪ್ರಯಾಣ ಕೊನೆಗೂ ಪೂರ್ಣಗೊಂಡಿದೆ, ಎಂತಹ ಅದ್ಭುತ ಅಂತ್ಯ. ಟ್ರೋಫಿ ಮನೆಗೆ ಬಂದಿದೆ. 'ಜಿಕೆ ಏನು ಮಾಡುತ್ತಾರೆ ಎಂದು ಅವರು ಕೇಳುತ್ತಿದ್ದರು. ನಾವು ಯಾವಾಗಲೂ ಹೇಳಿದಂತೆ, ಜಿಕೆ ನಮ್ಮೆಲ್ಲರಿಗಾಗಿ ಟ್ರೋಫಿಯನ್ನು ಮನೆಗೆ ತರುತ್ತಾರೆ, ಅವನು ಹಾಗೆಯೇ ಮಾಡಿದ್ದಾರೆ. ಈ ಪ್ರಯಾಣವು ತುಂಬಾ ಸುಂದರವಾಗಿತ್ತು. ನಾವು ಗೌರವ್ ಜೊತೆ ಪ್ರತಿದಿನ, ಪ್ರತಿ ಏರಿಳಿತ, ಧೈರ್ಯ ಮತ್ತು ಘನತೆಯ ಪ್ರತಿ ಕ್ಷಣವನ್ನು ಬದುಕಿದ್ದೇವೆ. ಇಂದು ಈ ಗೆಲುವು ವೈಯಕ್ತಿಕವೆನಿಸುತ್ತಿದೆ" ಎಂದು ಗೌರವ್ ಖನ್ನಾ ಟೀಂ ಬರೆದುಕೊಂಡಿದೆ.
"ಇದು ನಂಬಿಕೆ ಇಟ್ಟ, ವೋಟ್ ಮಾಡಿದ, ಜೊತೆಯಲ್ಲಿ ನಿಂತ, ಅವನ ಕನಸನ್ನು ತನ್ನದೆಂದುಕೊಂಡ ಪ್ರತಿಯೊಬ್ಬ ವ್ಯಕ್ತಿಯ ಗೆಲುವು. ಇಂದು ನಾವು ಕೇವಲ ಟ್ರೋಫಿಯನ್ನು ಆಚರಿಸುತ್ತಿಲ್ಲ. ನಾವು ನಂಬಿಕೆ, ಪ್ರೀತಿ ಮತ್ತು ಒಗ್ಗಟ್ಟನ್ನು ಆಚರಿಸುತ್ತಿದ್ದೇವೆ. ನಾವು ಒಟ್ಟಿಗೆ ಗೆದ್ದಿದ್ದೇವೆ. ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ಪ್ರೀತಿಯೊಂದಿಗೆ" ಎಂದು ಬರೆದುಕೊಂಡಿದ್ದಾರೆ.
'ಬಿಗ್ ಬಾಸ್ 19'ರ ಗ್ರ್ಯಾಂಡ್ ಫಿನಾಲೆಯಲ್ಲಿ 5 ಸ್ಪರ್ಧಿಗಳು ಇದ್ದರು. ಇವರಲ್ಲಿ ಗೌರವ್ ಹೊರತುಪಡಿಸಿ ಅಮಾಲ್ ಮಲಿಕ್, ಪ್ರಣೀತ್ ಮೋರೆ, ತಾನ್ಯಾ ಮಿತ್ತಲ್, ಫರ್ಹಾನಾ ಭಟ್ ಇದ್ದರು. ಮೊದಲು ಅಮಾಲ್, ಆಮೇಲೆ ತಾನ್ಯಾ ಮಿತ್ತಲ್, ಪ್ರಣೀತ್ ಮೋರೆ ಶೋನಿಂದ ಎಲಿಮಿನೇಟ್ ಆದರು. ಕೊನೆಯಲ್ಲಿ ಫರ್ಹಾನಾ ಭಟ್ ರನ್ನರ್ ಅಪ್ ಆಗಿದ್ದು, ಗೌರವ್ ಶೋನ ವಿಜೇತರಾದರು.
ಅಂದಹಾಗೆ ಗೌರವ್ ಖನ್ನಾ ಏನೂ ಮಾಡಿಲ್ಲ, ಆದರೂ ಟ್ರೋಫಿ ಸಿಕ್ಕಿದೆ. ಅವರ ಸೀರಿಯಲ್ ವೀಕ್ಷಕರು ಮತ ಹಾಕಿರಬಹುದು ಎಂದು ಫರ್ಹಾನಾ ಭಟ್ ಹೇಳಿದ್ದಾರೆ. ಅಂದಹಾಗೆ ತಾನ್ಯಾ ಮಿತ್ತಲ್ ಕೂಡ ಆನಂತರದಲ್ಲಿ, “ಗೌರವ್ ಖನ್ನಾ ಏನೂ ಮಾಡಿಲ್ಲ. ನಾನು ಇಡೀ ಶೋನಲ್ಲಿ ನನ್ನ ಬಗ್ಗೆ ಯೋಚನೆ ಮಾಡುತ್ತಿದ್ದೆ” ಎಂದಿದ್ದಾರೆ.
ಅಂದಹಾಗೆ ಸಲ್ಮಾನ್ ಖಾನ್ ಅವರು ಫಿನಾಲೆಯಲ್ಲಿ ಎರಡು ಕೈಗಳನ್ನು ಹಿಡಿದು ನಿಲ್ಲುತ್ತಾರೆ. ಕಳೆದ ಕೆಲ ಸೀಸನ್‌ಗಳಲ್ಲಿ ಎಡಗೈಯಲ್ಲಿ ಹಿಡಿದುಕೊಂಡವರು ವಿಜೇತರು ಎಂದು ಘೋಷಣೆಯಾಗುತ್ತಾರೆ. ಇನ್ನು ಕೆಂಪು ಬಣ್ಣದ ಡ್ರೆಸ್ ಹಾಕಿಕೊಂಡಿದ್ದರೆ, ಅವರು ವಿಜೇತರಾಗೋದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಗಾಸಿಪ್ ಸೃಷ್ಟಿ ಆಗಿದೆ.
ಕಳೆದ 20 ದಿನಗಳ ಹಿಂದೆಯೇ ಅನೇಕರು ಗೌರವ್ ಖನ್ನಾ ವಿನ್ನರ್, ಮೊದಲೇ ಪ್ಲ್ಯಾನ್ ಆಗಿದೆ. ಗೌರವ್ ಕೂಡ ಯಾರೂ ಕೂಡ ನನ್ನ ಬೀಟ್ ಮಾಡೋಕೆ ಆಗೋದಿಲ್ಲ, ನಾನೇ ವಿಜೇತ, ನನ್ನ ಫ್ಯಾನ್ಸ್ ಬಿಟ್ಟುಕೊಡಲ್ಲ ಎಂದು ಅವರು ಆತ್ಮವಿಶ್ವಾಸದಿಂದ ಹೇಳಿದ್ದರು. ಇದು ಅನೇಕರಿಗೆ ಅನುಮಾನ ತರಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.