
ರಕ್ಷಿತಾ ಶೆಟ್ಟಿ ಗೆಲ್ತಾರಾ?
ಬಿಗ್ ಬಾಸ್ ಓಟದಲ್ಲಿ ನಂ.1 ಗಿಲ್ಲಿ.. ರಕ್ಷಿತಾ ಕೂಡ ಇದ್ದಾಳೆ ಸನಿಹದಲ್ಲಿ..! ಕನ್ನಡಿಗರ ಕೆಣಕಿದ್ದ ಕರಾವಳಿ ಹುಡುಗಿ..! ಈಗ ಬಿಗ್ ಬಾಸ್ ನೆಚ್ಚಿನ ಸ್ಪರ್ಧಿ..!,, ಭಾಷೆ ಬರದಿದ್ರೂ ಆಟ ಗೊತ್ತುಂಟು.. ಚಿನಕುರಳಿ ರಕ್ಷಿತಾ ಮುಟ್ಟಿದ್ರೆ ಕರೆಂಟು..!,,
ಈ ಸಾರಿಯ ಬಿಗ್ಬಾಸ್ ಕನ್ನಡ ಸೀಸನ್ನಲ್ಲಿ ಗಿಲ್ಲಿ ಗೆಲ್ಲೋ ಫೆವರಿಟ್ ಸ್ಪರ್ಧಿ ಅನ್ನಿಸಿಕೊಂಡಿದ್ರೆ, ಗಿಲ್ಲಿಗೆ ಬಲು ಹತ್ತಿರದಲ್ಲಿರೋದು ಕರಾವಳಿ ಚಿನಕುರಳಿ ರಕ್ಷಿತಾ. ಆರಂಭದಲ್ಲಿ ಅರೆಬರೆ ಕನ್ನಡ ಮಾತನಾಡ್ತಾ, ಪೆದ್ದು ಪೆದ್ದಾಗಿ ಆಡ್ತಿದ್ದ ರಕ್ಷಿತಾನ ಯಾರೂ ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಆದ್ರೆ ಈಗ ಅದೇ ರಕ್ಷಿತಾ ಸುಂಟರಗಾಳಿ ರೀತಿ ಆಡಿ ಗೆಲುವಿನ ಸನಿಹ ಬಂದುನಿಂತಿದ್ದಾಳೆ. ಕಿಲಾಡಿ ರಕ್ಷಿತಾಂಬೆಯ ಆಟ-ಓಟದ ಕಥೆ ಇಲ್ಲಿದೆ ನೋಡಿ.
ರಕ್ಷಿತಾ ಭಾಷೆಯಲ್ಲಿ ಕೊಂಚ ವೀಕು. ಆದ್ರೆ ಆಟದ ಭಾಷೆ ಮಾತ್ರ ರಕ್ಷಿತಾಗೆ ಪಕ್ಕಾ ಗೊತ್ತಿದೆ. ಕಿಚ್ಚನಿಂದ ಬೈಸಿಕೊಂಡಿದ್ದ ರಕ್ಷಿತಾ ಮರುವಾರವೇ ಚಪ್ಪಾಳೆ ಪಡೆದುಕೊಂಡು ಅಚ್ಚರಿ ಮೂಡಿಸಿದ್ಳು.
ರಕ್ಷಿತಾ ಬಿಗ್ಬಾಸ್ ಗೆಲ್ಲುವ ರೇಸ್ನಲ್ಲಿದ್ರೂ ಒಂದಿಷ್ಟು ಎಡವಟ್ಟು ಮಾಡಿಕೊಂಡಿರೋದು ಸುಳ್ಳಲ್ಲ. ಅಂತೆಯೇ ಈವಾರ ರಕ್ಷಿತಾ ಮೇಲೆ ಮನೆಮಂದಿಯೆಲ್ಲಾ ಮುಗಿ ಬಿದ್ದಿದ್ದಾರೆ. ಈ ಎಡವಟ್ಟುಗಳನ್ನ ಮೀರಿ, ರಕ್ಷಿತಾ ಗೆಲ್ಲಬಹುದಾ.? ಹೆಚ್ಚಿನ ಮಾಹಿತಿಗೆ ಈ ವಿಡಿಯೋ ಸ್ಟೋರಿ ನೋಡಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.