ತನ್ನ ಮೇಲೆ ಬಂದಿರುವ ಅನೈತಿಕ ಸಂಬಂಧದ ಸಿಟ್ಟಿನಿಂದ ಅತ್ತೆ ಹೇಳಿದಂತೆ ತಾಳಿ ಕಿತ್ತು ಕೊಟ್ಟಿದ್ದಾಳೆ ಸಹನಾ. ಪುಟ್ಟಕ್ಕನಿಗೆ ನಿಂತ ನೆಲವೇ ಕುಸಿದ ಅನುಭವ. ಮುಂದೇನು?
ವಿವಾಹಿತೆಗೆ ತಾಳಿಯೇ ಸರ್ವಸ್ವ ಎನ್ನುವ ಮಾತಿದೆ. ಈಗಿನ ಕಾಲದ ಎಷ್ಟೋ ಹೆಣ್ಣುಮಕ್ಕಳು ತಾಳಿ ಎನ್ನುವುದು ಫ್ಯಾಷನ್ ಆಗಿದೆ. ಬಟ್ಟೆಗೆ ತಕ್ಕಂತೆ ಅದನ್ನು ಬಳಸುವುದು ಇದೆ. ಸೀರೆ ಉಟ್ಟಾಗ ಮಾತ್ರ ಕರಿಮಣಿಯನ್ನು ಸೀರೆಗೆ ಸೂಟ್ ಆಗುವ ರೀತಿ ಹಾಕುವುದು ಇದೆ. ಅದೇನೇ ಇದ್ದರೂ ತಲೆತಲಾಂತರಗಳಿಂದ ವಿವಾಹಿತೆಯ ಪವಿತ್ರ ಗುರುಗಳಲ್ಲಿ ಒಂದು ತಾಳಿ ಎಂದು ಎನಿಸಿಕೊಂಡಿದೆ. ತಾಳಿಯೇ ಸರ್ವಸ್ವ ಎಂದು ಹಲವು ಮಹಿಳೆಯರು ಅಂದುಕೊಳ್ಳುವುದು ಇದೆ. ಅದೊಂದು ರೀತಿಯಲ್ಲಿ ಸೆಂಟಿಮೆಂಟ್ ಕೂಡ. ಇದೇ ಕಾರಣಕ್ಕೆ ಎಂಥದ್ದೇ ಕಷ್ಟ ಬಂದರೂ ತಮ್ಮೆಲ್ಲಾ ಒಡವೆಗಳನ್ನು ಮಾರಿದರೂ ತಾಳಿಯನ್ನು ಬಿಚ್ಚಲೊಲ್ಲರು ಅದೆಷ್ಟೋ ಮಹಿಳೆಯರು. ಒಂದು ವೇಳೆ ಚಿನ್ನದ ತಾಳಿ ಅಡವಿಡುವ ಪರಿಸ್ಥಿತಿ ಬಂದರೂ ನಕಲಿ ಕರಿಮಣಿಯನ್ನಾದರೂ ಹಾಕಿಕೊಳ್ಳುತ್ತಾರೆ. ಮಾಂಗಲ್ಯಸರದ ಮೇಲೆ ಆ ಪರಿಯ ನಂಟು ಇರುತ್ತದೆ.
ತಾಳಿಯ ಬಗ್ಗೆ ಅದೇ ರೀತಿಯ ಸೆಂಟಿಮೆಂಟ್ ಹೊಂದಿರುವವರಲ್ಲಿ ಒಬ್ಬಳು ಪುಟ್ಟಕ್ಕ. ಗಂಡ ಬಿಟ್ಟು ಹೋದರೂ, ತನ್ನ ಮೂವರು ಹೆಣ್ಣುಮಕ್ಕಳನ್ನು ಕಷ್ಟಪಟ್ಟು ಸಾಕಿರುವ ಪುಟ್ಟಕ್ಕನ ತಾಳಿಯ ಸುದ್ದಿಗೆ ಮಾತ್ರ ಯಾರೂ ಬರಬಾರದು. ಗಂಡ ನಡುನೀರಿನಲ್ಲಿ ಕೈಕೊಟ್ಟರೂ, ಆತ ಮತ್ತೊಂದು ಮದುವೆಯಾಗಿ ತನ್ನ ಕಣ್ಣೆದುರೇ ಸವತಿಯ ಜೊತೆ ಇದ್ದರೂ, ಗಂಡನ ಮೇಲೆ ಇರುವ ದ್ವೇಷ ಪುಟ್ಟಕ್ಕನಿಗೆ ತಾಳಿಯ ಮೇಲೆ ಎಂದಿಗೂ ಬಂದಿರಲಿಲ್ಲ. ಒಂದು ಬಾರಿ ತಾಳಿ ಸರಕ್ಕೆ ಕೈಹಾಕಿದ್ದ ಸಂದರ್ಭದಲ್ಲಿ ಸಿಡಿದೆದ್ದವಳು ಪುಟ್ಟಕ್ಕ.
27 ಕೆ.ಜಿ ತೂಕ ಇಳಿಸಿಕೊಂಡ ಬೋನಿ ಕಪೂರ್: ಪತ್ನಿ ಶ್ರೀದೇವಿ ನೀಡಿದ್ದ ಟಿಪ್ಸ್ ನೆನಪಿಸಿಕೊಂಡ ನಿರ್ಮಾಪಕ
ಇಂಥ ಪುಟ್ಟಕ್ಕನ ಎದುರೇ ಅತ್ಯಂತ ಸಹನಾಶೀಲಳು ಎನಿಸಿರುವ ಹಿರಿಯ ಮಗಳು ಸಹನಾ ತಾಳಿ ಕಿತ್ತುಕೊಟ್ಟಿದ್ದಾಳೆ. ಹಾಗೆಂದು ಅವಳೇನೂ ಸುಮ್ಮನೇ ಹೀಗೆ ಮಾಡಲಿಲ್ಲ. ಸಹನಾ ಮೇಲೆ ಇದೀಗ ಅನೈತಿಕ ಸಂಬಂಧದ ಆರೋಪ ಬಂದಿದೆ. ಖುದ್ದು ಆಕೆಯ ಅತ್ತೆಯೇ ಈ ಆರೋಪ ಮಾಡಿದ್ದಾಳೆ. ತನ್ನ ಮಗನಿಂದ ಸಹನಾಳನ್ನು ಹೇಗಾದರೂ ಮಾಡಿ ದೂರ ಮಾಡುವ ಕೆಟ್ಟ ಆಲೋಚನೆ ಆಕೆಯದ್ದು. ಇದೇ ಕಾರಣಕ್ಕೆ ರಾಜಿಯ ಮಗ ಕಾಳಿ ಮತ್ತು ಸಹನಾಳಿಗೆ ಅನೈತಿಕ ಸಂಬಂಧ ಇದೆ ಎಂದು ಬಂಗಾರಮ್ಮನ ಪಂಚಾಯಿತಿಯಲ್ಲಿ ಅತ್ತೆ ಆರೋಪಿಸಿದ್ದಾಳೆ. ಬೇಕಿದ್ದರೆ ಕಾಳಿಯನ್ನು ಕರೆಸಿ ಎಂದು ಸವಾಲು ಹಾಕಿದ್ದಾಳೆ. ಹೇಳಿ-ಕೇಳಿ ಕಾಳಿ ಆತ. ಪುಟ್ಟಕ್ಕನ ಸವತಿ ರಾಜಿಯ ತಮ್ಮ. ಈ ಮೊದಲೇ ಸಹನಾಳ ಮೇಲೆ ಕಣ್ಣು ಹಾಕಿದ್ದವ. ಆಕೆಯನ್ನು ಹೇಗಾದರೂ ಮಾಡಿ ಮದುವೆಯಾಗಬೇಕು ಎಂದು ಹರಸಾಹಸ ಪಟ್ಟವ. ಸಹನಾಳ ಮದುವೆ ಟೀಚರ್ ಜೊತೆ ಆದ ಮೇಲೆ ಉರಿದುಕೊಂಡು ಸಹನಾಳಿಗೆ ಕೆಟ್ಟ ಹೆಸರು ಬರಬೇಕು ಎಂದು ಪ್ರಯತ್ನ ಪಡುತ್ತಿದ್ದವ.
ಅದೇ ಇನ್ನೊಂದೆಡೆ ಪುಟ್ಟಕ್ಕನ ಮೇಲೆ ಕಿಡಿಕಾರುತ್ತಿದ್ದಾಳೆ ರಾಜಿ. ಆಕೆಯನ್ನು ಯಾವ ರೀತಿಯಿಂದಲೂ ಸೋಲಿಸಲು ಸಾಧ್ಯವಿಲ್ಲದ್ದರಿಂದ ಪುಟ್ಟಕ್ಕನ ಮಗಳಿಗೆ ಕೆಟ್ಟ ಹೆಸರು ಬರುವಂತೆ ನೋಡಿಕೊಂಡಿದ್ದಾಳೆ. ಸಹನಾಳ ಅತ್ತೆಯ ಜೊತೆ ಶಾಮೀಲಾಗಿ, ತನ್ನ ತಮ್ಮನಿಗೂ ಸಹನಾಳಿಗೂ ಸಂಬಂಧ ಇದೆ ಎಂದು ಸಾಬೀತು ಮಾಡುವಲ್ಲಿ ಪ್ರಯತ್ನಿಸುತ್ತಿದ್ದಾಳೆ. ಇನ್ನು ಸಹನಾಳ ಗಂಡನೋ, ತನ್ನ ತಾಯಿಯ ಪರವೇ. ಆಕೆಯನ್ನು ನಂಬಿ ಪತ್ನಿಯನ್ನೇ ಹುಚ್ಚಿ ಎಂದವ. ತನ್ನ ತಾಯಿ ಸಹನಾಳಿಗೆ ವಿಷ ಉಣಿಸಿದರೂ ಅದನ್ನು ನಂಬದವ. ಇದೀಗ ಪತ್ನಿಗೆ ಅನೈತಿಕ ಸಂಬಂಧ ಇದೆ ಎನ್ನುವುದನ್ನು ಒಪ್ಪದಿದ್ದರೂ ಕಾಳಿಯನ್ನು ಕರೆಸುವ ಪಣ ತೊಟ್ಟಿದ್ದಾಳೆ ಅತ್ತೆ. ಆಕೆಗೆ ಚೆನ್ನಾಗಿ ಗೊತ್ತು, ಕಾಳಿ ತನಗೂ ಸಹನಾಗೂ ಸಂಬಂಧ ಇದೆ ಎಂದು ಹೇಳುತ್ತಾನೆ ಎಂದು. ಅತ್ತ ಸಹನಾಳಿಗೆ ಗಂಡನೂ ಸಪೋರ್ಟ್ಗೆ ಬರಲಿಲ್ಲ ಎನ್ನುವ ನೋವು. ಮಾತಿಗೆ ಮಾತು ಬೆಳೆದು ತಾಳಿಯನ್ನು ಕಿತ್ತುಕೊಡುವಂತೆ ಅತ್ತೆ ಹೇಳಿದಾಗ, ಇಂಥ ಸಂಬಂಧ ನನಗೂ ಬೇಡ ಎಂದು ಪಂಚಾಯಿತಿಯಲ್ಲಿಯೇ ಪುಟ್ಟಕ್ಕನ ಎದುರೇ ತಾಳಿ ಕಿತ್ತೆಸೆಯುತ್ತಾಳೆ ಸಹನಾ. ಪುಟ್ಟಕ್ಕನ ಕೋಪ ತಾರಕಕ್ಕೇರಿ ಮಗಳಿಗೆ ಚೆನ್ನಾಗಿ ಹೊಡೆಯುತ್ತಾಳೆ. ಅಳುತ್ತಲೇ ಎಲ್ಲರ ಮೇಲೂ ಕಿಡಿ ಕಾರುತ್ತಾ, ಬಿರುಸಿನಿಂದ ಹೋಗುತ್ತಾಳೆ.
ಇದೀಗ ಸಹನಾ ಮತ್ತು ಪುಟ್ಟಕ್ಕ ಇಬ್ಬರಲ್ಲಿ ಯಾರು ಸರಿ ಎನ್ನುವ ವಾದ-ಪ್ರತಿವಾದ ಶುರುವಾಗಿದೆ. ಬಹಳಷ್ಟು ಮಂದಿ ಸಹನಾ ಪರ ನಿಂತಿದ್ದಾರೆ. ಅನೈತಿಕ ಸಂಬಂಧದಂಥ ಘೋರ ಆರೋಪ ಮಾಡುವ ಅತ್ತೆ, ಆತನಿಗೆ ಸಪೋರ್ಟ್ ಮಾಡುವ ಗಂಡ ಹೀಗಿರುವಾಗ ತಾಳಿಗೇನು ಮಹತ್ವ ಎನ್ನುವುದು ಬಹುತೇಕ ಮಂದಿಯ ಪ್ರಶ್ನೆ. ಇದಕ್ಕಾಗಿಯೇ ಭೇಷ್ ಸಹನಾ ಎನ್ನುತ್ತಿದ್ದಾರೆ. ಆದರೆ ಪುಟ್ಟಕ್ಕನ ಜಾಗದಲ್ಲಿ ನಿಂತು ನೋಡಿದರೆ ಅವಳೂ ಸರಿ ಎನ್ನುತ್ತಿದ್ದಾರೆ ಹಲವರು. ಮುಂದೇನು?
ವೀರ್ ಸಾವರ್ಕರ್ ಚಿತ್ರಕ್ಕೆ ಸಂಭಾವನೆ ಬೇಡವೆಂದ ಬಿಗ್ಬಾಸ್ ಖ್ಯಾತಿಯ ಅಂಕಿತಾ ಲೋಖಂಡೆ: ಮಾಹಿತಿ ರಿವೀಲ್