ನನ್ನಮ್ಮ ಸೂಪರ್ಸ್ಟಾರ್ ಗ್ರ್ಯಾಂಡ್ ಫಿನಾಲೆ ಸಮೀಪಿಸಿದೆ. ಈ ಸಮಯದಲ್ಲಿ ಒಂದೇ ವೇದಿಕೆ ಮೇಲೆ ನಟಿ ಸಪ್ತಮಿ ಗೌಡ ಮತ್ತು ಸಪ್ತಮ್ಮಿ ಗೌಡ ಬಂದಿದ್ದಾರೆ. ಏನಿದು?
‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಕೆಲ ವಾರಗಳಿಂದ ಪ್ರಸಾರ ಆಗ್ತಿರೋ ‘ನನ್ನಮ್ಮ ಸೂಪರ್ ಸ್ಟಾರ್’ (Nannamma Super Star) ಷೋ ಇನ್ನೇನು ಅಂತಿಮ ಹಂತದಲ್ಲಿದೆ. ಇದಾಗಲೇ ಅಮ್ಮ- ಮಕ್ಕಳ ಜೋಡಿ ಕೆಲ ವಾರಗಳಿಂದ ಸಕತ್ ರಂಜಿಸಿವೆ. ಎರಡು ಸೀಸನ್ ಯಶಸ್ವಿಯಾಗಿ ಪೂರೈಸಿದ ಬಳಿಕ ಇದೀಗ ಮೂರನೇ ಸೀಸನ್ ಆಗಿತ್ತು. ಅದು ಕೂಡ ಮುಗಿಯುವ ಹಂತದಲ್ಲಿದೆ. ಸೃಜನ್ ಲೋಕೇಶ್, ಅನು ಪ್ರಭಾಕರ್, ತಾರಾ ಅನುರಾಧಾ ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ. ನಟಿ ಸುಷ್ಮಾ ಕೆ. ರಾವ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಲವಾರು ಮಕ್ಕಳು ಮತ್ತು ಅವರ ಅಮ್ಮಂದಿರು ಕೆಲ ವಾರಗಳ ಕಾಲ ಜನರನ್ನು ರಂಜಿಸಿದ್ದಾರೆ.
ಇದೀಗ ಗ್ರ್ಯಾಂಡ್ ಫಿನಾಲೆಯಲ್ಲಿ ಕಾಂತಾರ ಚೆಲುವೆ ಸಪ್ತಮಿ ಗೌಡ ಎಂಟ್ರಿ ಆಗಿದೆ. ಇವರೊಬ್ಬರೇ ಆಗಿದ್ದರೆ ಪರವಾಗಿರಲಿಲ್ಲ. ಇವರ ಜೊತೆ ಸಪ್ತಮ್ಮಿ ಗೌಡ ಅವರ ಎಂಟ್ರಿಯೂ ಆಗಿದೆ. ಅಸಲಿ ಸಪ್ತಮಿ ಅವರು ತಮ್ಮ ಪ್ರತಿರೂಪವನ್ನ ವೇದಿಕೆ ಮೇಲೆ ನೋಡಿ ಶಾಕ್ ಆಗಿದ್ದಾರೆ. ಇದರ ಪ್ರೊಮೋ ರಿಲೀಸ್ ಆಗಿದೆ. ಇದನ್ನು ನೋಡಿದವರು ಬಿದ್ದೂ ಬಿದ್ದೂ ನಗುತ್ತಿದ್ದಾರೆ. ಸಪ್ತಮಿ ಗೌಡ ಅವರು ವೇದಿಕೆಯ ಮೇಲೆ ಬರುತ್ತಿದ್ದಂತೆಯೇ ಅವರಿಗೆ ಪ್ರತಿರೂಪ ಇರುವ ಇನ್ನೊಬ್ಬರನ್ನು ತೋರಿಸಿ ಶಾಕ್ ನೀಡಲಾಗಿದೆ. ಒಂದು ಕ್ಷಣ ಸಪ್ತಮಿ ಗೌಡ ಅವರೂ ಶಾಕ್ ಆಗಿದ್ದಾರೆ. ಅಸಲಿಗೆ ಸೇಮ್ ಟು ಸೇಮ್ ಸಪ್ತಮಿ ಗೌಡ ಅವರಂತೆಯೇ ಸ್ಟೈಲ್ ಮಾಡಿಕೊಂಡು, ಅವರ ರೀತಿಯಲ್ಲಿಯೇ ಆ್ಯಕ್ಷನ್ ಮಾಡಿದವರು ಅದು ಹಾಸ್ಯ ಕಲಾವಿದ ರಾಘವೇಂದ್ರ ಅವರು.
ಮನೆ ಎರಡು ಭಾಗವಾಗಿದ್ಯಲ್ಲಾ... ಟಾಯ್ಲೆಟ್ ಹೇಗೆ ಯೂಸ್ ಮಾಡ್ತೀರಾ? ಸೃಜನ್ ಪ್ರಶ್ನೆಗೆ ಭಾಗ್ಯ ಹೇಳಿದ್ದೇನು?
ಸೇಮ್ ತಮ್ಮಂತೆಯೇ ಆ್ಯಕ್ಷನ್ ಮಾಡುವುದನ್ನು ನೋಡಿ ನಟಿ ಕೂಡ ಅರೆ ಕ್ಷಣ ಖುಷಿ ಹಾಗೂ ಶಾಕ್ ಆಗಿದ್ದಾರೆ. ಅಷ್ಟಕ್ಕೂ ರಾಘವೇಂದ್ರ ಅವರು ಹೆಣ್ಣು ಪಾತ್ರಗಳಿಗೆ ಹೊಸ ಖದರ್ ಕ್ರಿಯೆಟ್ ಮಾಡುವಲ್ಲಿ ಫೇಮಸ್ಸು. ಇದೀಗ ಸಪ್ತಮಿ ಗೌಡ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಸಾಗರ ಮೂಲದ ನಟ ರಾಘವೇಂದ್ರ ಹುಡುಗಿ ಪಾತ್ರದ ಮೂಲಕವೇ ವೀಕ್ಷಕರ ಮನಸ್ಸು ಗೆದ್ದಿದ್ದಾರೆ. ಸಾಕಷ್ಟು ಪ್ರಶಸ್ತಿ ಸಮಾರಂಭಗಳಲ್ಲಿ ರಾಘವೇಂದ್ರ ಅವರು ಹೆಣ್ಣಿನ ಪಾತ್ರ ಹಾಕಿಯೇ ಸೆಲೆಬ್ರಿಟಿಗಳ ಜೊತೆ ಒಂದಷ್ಟು ತರಲೆ ತಮಾಷೆ ಕೂಡ ಮಾಡುತ್ತಾರೆ. ಇವರು ಹೆಣ್ಣಿನ ಪಾತ್ರಕ್ಕೆ ಎಷ್ಟು ಫೇಮಸ್ ಎಂದರೆ ಒಮ್ಮೆ ರಾಘವೇಂದ್ರ ಅವರು ಊರಿಗೆ ಹೋದಾಗ ಯಾರೂ ಕೂಡ ಅಲ್ಲಿ ರಾಘವೇಂದ್ರ ಅಂತ ಈಗ ನನ್ನ ನಂಬಲು ರೆಡಿಯಿಲ್ಲ. ಅನುಬಂಧ ಅವಾರ್ಡ್ಸ್ ಶೋನಲ್ಲಿ ಕೂಡ ಕಲಾವಿದರಿಗೆ ಊಟ ಹಾಕುವ ವೇಳೆ ನನ್ನನ್ನು ಕಲಾವಿದ ಅಲ್ಲ ಎಂದು ಊಟ ಹಾಕಲು ರೆಡಿ ಇರಲಿಲ್ಲ. ಆಮೇಲೆ ನಿರ್ಮಾಪಕರನ್ನು ಕರೆಸಿ ನಾನೇ ರಾಘವೇಂದ್ರ ಅಂತ ಹೇಳಿದ ಮೇಲೆಯೇ ಗೊತ್ತಾಯಿತು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದೀಗ ಅವರು ಸಪ್ತಮಿ ಗೌಡ ರೋಲ್ ಮಾಡಿದ್ದಾರೆ.
ಇನ್ನು ನನ್ನಮ್ಮ ಸೂಪರ್ಸ್ಟಾರ್ ಕುರಿತು ಹೇಳುವುದಾದರೆ, ಇನ್ನು ಅಂತಿಮ ಘಟ್ಟ ತಲುಪಿದೆ. ಯಾರು ವಿನ್ ಆಗುತ್ತಾರೋ ಕಾದು ನೋಡಬೇಕಿದೆ. ಈ ಕುರಿತು ಮಾತನಾಡಿರುವ ಸೃಜನ್ ಲೊಕೇಶ್ ಅವರು, ಮೂರು ಸೀಸನ್ಗಳನ್ನು ಮಾಡಿರುವುದು ಸುಲಭವಲ್ಲ. ಒಂದೇ ಮಾದರಿಯ ಕಾರ್ಯಕ್ರಮವನ್ನು ಜನರು ನೋಡಿ ಒಪ್ಪಿಕೊಂಡಿದ್ದಾರೆ ಎಂದಾಗ ಅವರಿಗೆ ಇನ್ನೂ ಜಾಸ್ತಿ ಮನರಂಜನೆ ನೀಡಬೇಕು ಎಂಬ ನಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ಈ ಸೀಸನ್ನಲ್ಲಿ ನಮಗೆ ಸಿಕ್ಕ ಮಕ್ಕಳು ತುಂಬ ಚೂಟಿ ಆಗಿದ್ದಾರೆ. ಫಿನಾಲೆ ಹಂತಕ್ಕೆ ಬಂದಿದ್ದೇವೆ. ಆರು ಜನ ಯಾರು ಫೈನಲಿಸ್ಟ್ ಆಗುತ್ತಾರೆ ಎಂಬ ಕುತೂಹಲ ನಮಗೂ ಇದೆ ಎಂದಿದ್ದಾರೆ.
ಎರಡು ತಿಂಗಳ ಬಾಣಂತಿಯಾಗಿದ್ದಾಗ ಕುದುರೆ ಸವಾರಿ, ಕಳರಿಪಯಟ್ಟು ಕಲಿತ ನೋವಿನ ದಿನ ನೆನೆದ ನಟಿ ಕಾಜಲ್