ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಸೀರಿಯಲ್ ಲೋಕದಲ್ಲೇ ಹೊಸ ಟ್ರೆಂಡ್ ಹುಟ್ಟು ಹಾಕಿದೆ. ಆರ್ಯವರ್ಧನ್- ಅನು ಕಥೆ ಪ್ರೇಕ್ಷಕನ ಮನ ಮುಟ್ಟಿದೆ. ಆದರೆ, ಈ ಕಥೆಯನ್ನು ಮರಾಠಿಯಿಂದ ಕದಿಯಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಇದಕ್ಕೆ ಜೀ ಕನ್ನಡ ನೀಡಿರುವ ಸ್ಪಷ್ಟನೆ ಇದು.
ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಟಿಆರ್‌ಪಿಯಲ್ಲಿ ನಂ 1 ಸ್ಥಾನದಲ್ಲಿದೆ. ಇದೇ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ನಿಂದ ಕಿರುತೆರೆಗೆ ಬಂದಿರುವ ಅನಿರುದ್ಧ್ ಗೆ ಈ ಧಾರಾವಾಹಿ ಹೊಸ ಇನ್ನಿಂಗ್ಸ್ ನೀಡಿದೆ. ಅವರಿಗೆ ಹೆಸರನ್ನು ತಂದು ಕೊಟ್ಟಿದೆ.
‘ಜೊತೆ ಜೊತೆಯಲಿ’ ಆರ್ಯವರ್ಧನ್ ಗೆ ಜೋಡಿಯಾದ ಅನು; ಯಾರಿವರು?
ನವಿರಾದ ಪ್ರೇಮ ಕಥೆ, ಮಧ್ಯಮ ವರ್ಗ ಕುಟುಂಬದಲ್ಲಿ ನಡೆಯುವ ಸಾಂಸಾರಿಕ ತಾಪತ್ರಯಗಳು, ಹೊಸ ರೀತಿಯ ನಿರೂಪಣೆ, ಕತೆ ಇವೆಲ್ಲವೂ ಜೊತೆ ಜೊತೆಯಲಿ ಪ್ಲಸ್ ಪಾಯಿಂಟ್. ಪ್ರೇಕ್ಷಕರಿಗೂ ಕೂಡಾ ಆರ್ಯವರ್ಧನ್- ಅನು ನಡುವಿನ ಪ್ರೀತಿ ಇಷ್ಟವಾಗಿದೆ. ಎಲ್ಲ ಧಾರಾವಾಹಿಯಂತೆ ಒಂದೇ ರೀತಿ ಕಥೆ ಇದಲ್ಲ. ಎಲ್ಲಿಯೂ ಬೋರ್ ಹೊಡೆಸುವುದಿಲ್ಲ ಎನಿಸಿದ್ದಂತೂ ಸುಳ್ಳಲ್ಲ. ಆದರೆ ಈ ಧಾರಾವಾಹಿ ಸ್ವಮೇಕ್ ಅಲ್ಲ. ಮರಾಠಿ ಧಾರಾವಾಹಿ ‘ತುಲ ಪಹತೆ ರೆ’ ರಿಮೇಕ್ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಇದಕ್ಕೆ ಜೀ ಕನ್ನಡ ಸಂಸ್ಥೆಯು ಸ್ಪಷ್ಟನೆ ನೀಡಿದ್ದು, ಈ ಕಥೆಯೂ ಜೀ ಪ್ರಾಪರ್ಟಿಯದ್ದೇ ಎಂಬುದನ್ನು ಸ್ಪಷ್ಟಪಡಿಸಿದೆ.
‘ಜೊತೆ ಜೊತೆಯಲಿ’ ಅನಿರುದ್ಧ್ ಒಂದು ದಿನದ ಸಂಭಾವನೆ ಇಷ್ಟೊಂದಾ!?
ಮರಾಠಿಯಲ್ಲಿ ಮೂಡಿ ಬರುತ್ತಿರುವ ‘ತು ಪಹತೆ ರೆ’ ಎಂಬ ಧಾರಾವಾಹಿಯ ರಿಮೇಕ್ ಜೊತೆ ಜೊತೆಯಲಿ ಎನ್ನಲಾಗುತ್ತಿದೆ. ಮರಾಠಿಯಲ್ಲಿ ಈಗಾಗಲೆ 300 ಎಪಿಸೋಡ್‌ಗಳನ್ನು ಪೂರೈಸಿದೆ. ಕನ್ನಡದಲ್ಲಿ ಶುರುವಾಗಿ 4 ವಾರಗಳಾಗಿವೆ. ಶುರುವಾಗಿ ಒಂದು ವಾರದಲ್ಲಿಯೇ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಗಳಿಸಿದೆ.
ಜೀ ಪ್ರಾಪರ್ಟಿಗೆ ಸೇರಿರುವ ಮೂಲ ಕಥೆ ಇದಾಗಿದ್ದು, ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಾಗಿದೆ. ಅನಿರುದ್ಧ್- ಅನು ತುಂಬಾ ಚೆನ್ನಾಗಿ ನಟಿಸಿದ್ದಾರೆ. ಕನ್ನಡದ್ದೇ ಕಥೆಯೇನೋ ಎನ್ನುವಷ್ಟರ ಮಟ್ಟಿಗೆ ಹೊಂದಿಕೆಯಾಗಿದೆ. ಮಧ್ಯ ವಯಸ್ಕರು ಹಾಗೂ ಯುವತಿಯರ ಮನ ಕದಿಯುವಲ್ಲಿ ಈ ಕಥೆ ಸಂಪೂರ್ಣ ಯಶಸ್ವಿಯಾಗಿದೆ.
ಅಕ್ಟೋಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: