ಬಿಗ್ ಬಾಸ್ ಮನೆಯಲ್ಲಿ ಬಯಲಾಯ್ತು ಚೈತ್ರಾ ವಾಸುದೇವನ್ ಮದುವೆ ಗುಟ್ಟು!

By Web Desk  |  First Published Oct 14, 2019, 11:38 AM IST

ಬಿಗ್‌ ಬಾಸ್‌ ಮನೆಗೆ ಕಾಲಿಟ್ಟ ಕ್ಯೂಟ್‌ ನಿರೂಪಕಿ ಚೈತ್ರಾ ವಾಸುದೇವನ್‌ ಸ್ಟೇಟ್‌ ಕ್ರಶ್‌ ಆಗುವುದರಲ್ಲಿ ಅನುಮಾನವೇ ಇಲ್ಲ. ಟ್ರೋಲ್‌ ಪೇಜ್‌ಗಳ ಆಹಾರವಾದ ಚೈತ್ರಾ ರಿಯಲ್ ಲೈಫ್‌ ಬ್ಯಾಕ್‌ ಗ್ರೌಂಡ್‌ ಗೊತ್ತಾ?


ಕ್ರೀಡಾ ನಿರೂಪಕಿ, ಸೆಲೆಬ್ರಿಟಿ ಇಂಟರ್ವೂ ಹಾಗೂ 25 ಸಾವಿರಕ್ಕೂ ಹೆಚ್ಚು ಲೈವ್‌ ಕಾನ್ಸರ್ಟ್ ನೀಡಿರುವ ಚೈತ್ರಾ ವಾಸುದೇವನ್‌ ತಮ್ಮ ಕ್ಯೂಟ್‌ ಲುಕ್‌ನಿಂದ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

15 ನೇ ಸ್ಪರ್ಧಿಯಾಗಿ BB ಮನೆಗೆ ಪ್ರವೇಶಿಸಿದ ಚೈತ್ರಾ ರಿಯಲ್‌ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಬಿಂದಾಸ್‌. 5 ವರ್ಷಗಳ ಹಿಂದೆ ಉದಯ ಮ್ಯೂಸಿಕ್‌ ಕಾರ್ಯಕ್ರಮದ ಮೂಲಕ VJ ಆಗಿ ವೃತ್ತಿ ಆರಂಭಿಸಿದ ಚೈತ್ರಾ ಸಂಗೀತ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದಾರೆ. ಕೆಲ ದಿನಗಳ ಕಾಲ ಕಲರ್ಸ್‌ ಸೂಪರ್‌ನಲ್ಲಿ ಪ್ರಸಾರವಾಗುವ 'ಒಂದು ಸಿನಿಮಾ ಕಥೆ'ಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ.

Tap to resize

Latest Videos

undefined

ಮೂಲತಃ ಬೆಂಗಳೂರಿನವರಾದ ಚೈತ್ರಾ ಪದವಿ ಪಡೆದಿದ್ದು ದಯಾನಂದ್‌ ಸಾಗರ್‌ ಕಾಲೇಜಿನಲ್ಲಿ. ಓದಿನ ಜೊತೆ ಇನ್ನೇನಾದ್ರೂ ಡಿಫರೆಂಟ್‌ ಆಗಿ ಟ್ರೈ ಮಾಡಬೇಕೆಂದು ವಿಜೆ ಆಗಿ ಕೆಲ ಕಾರ್ಯಕ್ರಮಗಳನ್ನು ನಡೆಸಿಕೊಡಲು ಆರಂಭಿಸಿದ್ದರು. ಸಿಂಪಲ್‌ ಹುಡುಗಿಗೆ ಬಿಗ್‌ ಡ್ರೀಮ್. ಇನ್ನು ಏನಾದ್ರೂ ಲೈಫ್‌ನಲ್ಲಿ ಸಾಧನೆ ಮಾಡಬೇಕೆಂದು Event Facotry ಎಂಬ ಒಂದು ಕಂಪನಿ ಆರಂಭಿಸಿದ್ದರು. ಈ ಸಾಧನೆಯ ಹಾದಿಯಲ್ಲಿ ಚೈತ್ರಾಗೆ ಸಾಥ್‌ ಕೊಟ್ಟವರು ಪತಿ ಸತ್ಯ.

ಈ ಬಿಗ್‌ ಬಾಸ್ ಸ್ಪರ್ಧಿಗೆ ಸುದೀಪ್‌ ತಾಯಿ ಫ್ಯಾನ್‌; ಹಾಗಾದ್ರೆ ಎಷ್ಟು ದಿನ ಇರ್ತಾರೆ?

ಚೈತ್ರಾ ತಂದೆ ಹೋಟೆಲ್ ಉದ್ಯಮಿ. ತಾಯಿ ಗೃಹಿಣಿ. ಪತಿ ಬ್ಯುಸಿನೆಸ್‌ ಮ್ಯಾನ್‌. ತಂಗಿ ಇನ್ನೂ ಓದುತ್ತಿದ್ದಾರೆ ಜೊತೆಗೆ ಶಾಲೆ ನಡೆಸುತ್ತಿರುವ ಅತ್ತೆ, ಮಾವ ಹಾಗೂ ನಾದಿನಿ. ದೊಡ್ಡ ಕುಟುಂಬದ ಹುಡುಗಿ ಚೈತ್ರಾ ವೃತ್ತಿ ಜೀವನ ಹಾಗೂ ಮನೆ ಕೆಲಸವನ್ನು ಸಮಾನವಾಗಿ ಸಂಭಾಳಿಸುವ ಗುಣ ಹೊಂದಿದ್ದು ಬಿಗ್‌ ಬಾಸ್‌ ಮನೆಯಲ್ಲಿ ಎಷ್ಟು ದಿನ ಉಳಿಯುತ್ತಾರೆ ಎಂದು ಕಾದು ನೋಡಬೇಕಿದೆ.

 

click me!