
ಇಂದಿನಿಂದ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 8ರ ರಿಯಾಲಿಟಿ ಶೋ ಬಗ್ಗೆ ವೀಕ್ಷಕರು ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ. ಅದರಲ್ಲೂ ಬಿಬಿ ಪ್ರೆಸ್ ಮೀಟ್ ಆದ ನಂತರ ಸುದೀಪ್ ಮಾತುಗಳನ್ನು ಕೇಳಿ ಸ್ಪರ್ಧಿಗಳು ಯಾರೆಂದು ಗೆಸ್ ಮಾಡುತ್ತಲೇ ಓಪನಿಂಗ್ ದಿನ ಕಳೆದರು. ಬಿಗ್ ಬಾಸ್ ಮನೆಯಲ್ಲಿ ಪ್ರಭಾವಿ ರಾಜಕಾರಣಿ ಇರುತ್ತಾರೆ ಎನ್ನಲಾಗುತ್ತಿತ್ತು. ಯಾರೂ ಇಲ್ಲವಲ್ಲ ಎಂದು ಕನ್ಫ್ಯೂಸ್ ಆದವರಿಗೆ ಈಗ ಸಿಕ್ಕಿದೆ ಉತ್ತರ...
"
ಬೆಂಗಳೂರಿನಲ್ಲಿ ಮಾಜಿ ಸಚಿವ ಎಚ್ ವಿಶ್ವನಾಥ್ ತಮಗೆ ಬಿಗ್ ಬಾಸ್ ಮನೆ ಪ್ರವೇಶಿಸಲು ಅವಕಾಶ ಬಂದಿರುವುದರ ಬಗ್ಗೆ ಖಚಿತ ಪಡಿಸಿದ್ದಾರೆ. 'ಈ ಹಿಂದಿಯೇ ನನಗೆ ಕರೆ ಬಂದಿತ್ತು. 6ನೇ ಸೀಸನ್‌ಗೆ ಆಹ್ವಾನಿಸಿದ್ದರು. ಆದರೆ ಆರೋಗ್ಯ ಸಮಸ್ಯೆ ಇದ್ದ ಕಾರಣ ಹೋಗಿರಲಿಲ್ಲ. ಈಗ ವಿಶೇಷ ಆಹ್ವಾನಿತನಾಗಿ ಹೋಗಲು ಅವಕಾಶ ಸಿಕ್ಕರೆ ಹೋಗುತ್ತೇನೆ. ಸಮಯ ಹಾಗೂ ಅವಕಾಶ ಸಿಕ್ಕರೆ ನಾಲ್ಕೈದು ದಿನ ಹೋಗಲು ರೆಡಿಯಾಗಿರುವೆ. ನಾವು ರಾಜಕಾರಣದ ಬಗ್ಗೆ ಜನ ಶಿಕ್ಷಣ ಕೊಡಬೇಕಿದೆ. ಅದಕ್ಕೊಂದು ಅವಕಾಶ ಸಿಗಲಿದೆಯಾ ಅಂತ ಕಾಯ್ತಾ ಇದ್ದೇನೆ,' ಎಂದು ವಿಶ್ವನಾಥ್ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ 17 ಜನರ ಪಟ್ಟಿ.. ಆ 3 ಟ್ವಿಸ್ಟ್ !
ಗ್ರ್ಯಾಂಡ್ ಓಪನಿಂಗ್‌ನಲ್ಲಿ ಈಗಾಗಲೇ ಬಿಗ್ ಬಾಸ್ ಮನೆಯೊಳಗೆ 17 ಮಂದಿ ಪ್ರವೇಶಿಸಿದ್ದಾರೆ. ಹಿರಿಯ ನಟ ಶಂಕರ್ ಅಶ್ವಥ್, ಚಂದ್ರಕಲಾ ರಿಂದ ಕಿರಿಯ ಗಾಯಕ ವಿಶ್ವನಾಥ್ ವರೆಗೂ ಮನೆಯಲ್ಲಿ ವಿಭಿನ್ನ ವ್ಯಕ್ತಿತ್ವದವರು ಇದ್ದಾರೆ. ಈಗಷ್ಟೇ ಎಲ್ಲರೂ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ ಹೊಂದಿಕೊಂಡು ಹೋಗುತ್ತಿದ್ದಾರೆ. ಅಸಲಿ ಆಟ ಕೆಲವೇ ದಿನಗಳಲ್ಲಿ ಆರಂಭವಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.