
ದೊಡ್ಮನೆಯಲ್ಲಿ ಟಾರ್ಗೆಟ್.. ಡಲ್ ಆದ್ನಾ ಗಿಲ್ಲಿ..?
ಈ ಬಾರಿ ಬಿಗ್ಬಾಸ್ ಸೀಸನ್ನಲ್ಲಿ ಎಲ್ಲರಿಗಿಂತ ಮುಂದೆ ಇದ್ದ ಸ್ಪರ್ಧಿ ಅಂದ್ರೆ ಅದು ಗಿಲ್ಲಿ ನಟ. ತನ್ನ ತರ್ಲೆ, ತಮಾಷೆ, ಕೀಟಲೆಗಳ ಜೊತೆಗೆ ಕಾವ್ಯ ಜೊತೆಗಿನ ಲವ್ ಟ್ರ್ಯಾಕ್ನಿಂದಲೂ ಗಿಲ್ಲಿ ಎಲ್ಲರ ಮನೆಗೆದ್ದಿದ್ದ. ಆದ್ರೆ ಬರ್ತಾ ಬರ್ತಾ ಗಿಲ್ಲಿನ (Gilli Actor Nataraj) ಮನೆಮಂದಿಯೆಲ್ಲಾ ಟಾರ್ಗೆಟ್ ಮಾಡಿದ್ದಾರೆ. ಒಂದು ಹಂತದಲ್ಲಿ ಗಿಲ್ಲಿ ಕೂಡ ಡಲ್ ಆಗಿದ್ದಾನೆ. ಹಾಗಾದ್ರೆ ದೊಡ್ಮನೆ ಹುಲಿ-ಕುರಿ ಆಟದಲ್ಲಿ ಈ ಹಳ್ಳಿ ಹೈದ ಉಳೀತಾನಾ,.? ಕಳೆದ ಬಾರಿ ಹನುಮಂತ ಕೊನೆವರೆಗೂ ಆಡಿ ಗೆದ್ದಂತೆ ಗಿಲ್ಲಿ ಕೂಡ ಗೆಲ್ತಾನಾ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.
ಆರೇ ವಾರಕ್ಕೆ ಖಾಲಿಯಾಯ್ತಾ ಗಿಲ್ಲಿ ನಟನ ಸರಕು..?
ಹೌದು, ಬಿಗ್ಬಾಸ್ ಕನ್ನಡ ಸೀಸನ್ 12 ಶುರುವಾಗಿ 6 ವಾರ ಕಳೀತಾ ಬಂತು. ಕಳೆದ ಐದು ವಾರಗಳಿಂದಲೂ ದೊಡ್ಮನೆಯಲ್ಲಿ ದೊಡ್ಡ ಹವಾ ಕ್ರಿಯೇಟ್ ಮಾಡಿದ್ದು ಒನ್ ಅಂಡ್ ಓನ್ಲಿ ಗಿಲ್ಲಿ.
ಈತನ ಕಾಮಿಡಿ ಟೈಮಿಂಗ್, ತರ್ಲೆ, ತಮಾಷೆ, ಹರಟೆ, ಥಟ್ ಅಂತ ಜೋಕ್ ಕಟ್ ಮಾಡೋ ಕಲೆಗೆ ವೀಕ್ಷಕರೆಲ್ಲರೂ ಫಿದಾ ಆಗಿದ್ರು. ಖುದ್ದು ಕಿಚ್ಚ ಸುದೀಪ್ ಕೂಡ ಮೊದಲ ವಾರವೇ ಈತನಿಗೆ ಕಿಚ್ಚನ ಚಪ್ಪಾಳೆ ಕೊಟ್ಟಿದ್ರು.
ಹಳ್ಳಿ ಹೈದ ಗಿಲ್ಲಿಯ ಮಾತಿನ ವರಸೆ ಬಲುಚೆಂದ. ಎಲ್ಲದರಲ್ಲೂ ಒಂದು ಕಾಮಿಡಿ ಹುಡುಕೋ ಈತ ಎಂಥಾ ಟೈಂನಲ್ಲೂ ನಗೆ ಉಕ್ಕಿಸೋ ಕಲಾವಿದ. ಇನ್ನೂ ಗಿಲ್ಲಿ ಕಾವ್ಯಾ ಲವ್ ಟ್ರ್ಯಾಕ್ ಕೂಡ ನೋಡುಗರಿಗೆ ಮೋಡಿ ಮಾಡಿತ್ತು.
ಆದ್ರೆ ಐದು ವಾರ ಫುಲ್ ಜೋಶ್ಮೂಡಿನಲ್ಲಿದ್ದ ಗಿಲ್ಲಿ ಅದ್ಯಾಕೋ ಬರ್ತಾ ಬರ್ತಾ ಡಲ್ ಆದಂತೆ ಕಾಣ್ತಾ ಇದ್ದಾನೆ. ಕಳೆದ ವಾರವಂತೂ ಗಿಲ್ಲಿನ ಕಳಪೆ ಅಂತ ಹಣೆಪಟ್ಟಿ ಕಟ್ಟಿ ಮನೆಂದಿ ಜೈಲಿಗೆ ಅಟ್ಟಿದ್ರು.
ಹೌದು ಒಂದು ಹಂತದಲ್ಲಿ ಗಿಲ್ಲಿ ಜೊತೆ ತನ್ನ ಹೆಸರು ಅತಿಯಾಗಿ ಪ್ರಸ್ತಾಪ ಆಗ್ತಿದೆ ಎಂದರಿತ ಕಾವ್ಯಾ , ಗಿಲ್ಲಿಯಿಂದ ಡಿಸ್ಟನ್ಸ್ ಮೆಂಟೈನ್ ಮಾಡ್ತಾ ಇದ್ದಾರೆ. ಈ ನಡುವೆ ಟಾಸ್ಕ್ಗಳಲ್ಲಿ ಗಿಲ್ಲಿ ಸೋತಿರೋದು ಬೇರೆ ಆತನಿಗೆ ನೆಗೆಟಿವ್ ಆಗಿದೆ.
ಗಿಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾನೆ ಅನ್ನೋದನ್ನರಿತ ಬಿಗ್ಬಾಸ್ ಮನೆಮಂದಿ , ಇವನನ್ನ ಹಣಿಯೋದಕ್ಕೆ ಏನೇನು ಮಾಡಬೇಕು ಅದೆಲ್ಲವನ್ನೂ ಮಾಡ್ತಾ ಇದ್ದಾರೆ. ಇದೆಲ್ಲದರ ನಡುವೆ ಗಿಲ್ಲಿ ಡಲ್ ಹೊಡೆದಿರೋದು ಸುಳ್ಳಲ್ಲ.
ಹೌದು, ಕಳೆದ ಸಾರಿಯ ಬಿಗ್ ಬಾಸ್ ವಿನ್ನರ್ ಹನುಮಂತನ ಜೊತೆಗೆ ಎಲ್ಲರೂ ಗಿಲ್ಲಿಯನ್ನ ಹೋಲಿಕೆ ಮಾಡ್ತಾ ಇದ್ದಾರೆ. ಗಿಲ್ಲಿ ಕೂಡ ಹನುಮಂತನಂತೆ ಹಳ್ಳಿಹೈದ. ಅಷ್ಟೇ ಅಲ್ಲ ಥೇಟ್ ಹನುಮನಂತೆಯೇ ಊರಲ್ಲಿ ಕುರಿ ಕಾಯ್ದುಕೊಂಡಿದ್ದ ಹುಡುಗ.
ಹನುಮಂತನಂತೆಯೇ ಒಂದೊಂದೇ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗ್ತಾ, ಜನರ ಮನಸು ಗೆಲ್ತಾ ಬಿಗ್ಬಾಸ್ ಮನೆಗೆ ಬಂದಿದ್ದಾನೆ ಗಿಲ್ಲಿ ನಟ. ಆದ್ರೆ ಹನುಮಂತ ಆರಂಭದಲ್ಲಿ ಸೈಲೆಂಟ್ ಆಗಿದ್ದು, ಕೊನೆ ಹಂತದಲ್ಲಿ ಸಖತ್ ಬ್ರಿಲಿಯಂಟ್ ಆಗಿ ಆಡಿದ್ದ. ಆದ್ರೆ ಗಿಲ್ಲಿ ಆರಂಭದಲ್ಲಿ ಜೋಶ್ ನಲ್ಲಿದ್ದವನು ಈಗ ಡಲ್ ಆಗಿದ್ದಾರೆ. ಆದ್ರೆ ಗಿಲ್ಲಿ ಒಳಗೊಬ್ಬ ಹನುಮ ಇದ್ದಾನೆ. ಆತನನ್ನ ಎಚ್ಚರಿಸಿದ್ರೆ ಈತ ಕೂಡ ಬಿಗ್ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ ಅಂತಿದ್ದಾರೆ ಹಳ್ಳಿಹೈದನ ಫ್ಯಾನ್ಸ್..!
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.