
ಕಿರುತೆರೆ ಅಥವಾ ಧಾರವಾಹಿ ಲೋಕದಲ್ಲಿ ನೀವು ನಿರೀಕ್ಷೆಯೇ ಮಾಡದಂಥ ಲವ್ ಸ್ಟೋರಿಗಳು ಸಿಗುತ್ತವೆ. ಸೀರಿಯಲ್‌ನಲ್ಲಿ ಅಮ್ಮ-ಮಗ, ಅತ್ತೆ-ಅಳಿಯ, ಅಣ್ಣ-ತಂಗಿ ಪಾತ್ರದಲ್ಲಿ ನಟಿಸಿದ್ದವರು ರಿಯಲ್ ಲೈಫ್‌ನಲ್ಲಿ ಲವ್ ಬರ್ಡ್ಸ್ ಆಗಿ ಮದುವೆಯಾಗಿರುವ ಹಲವಾರು ಕೇಸ್‌ಗಳಿವೆ. ಇದೇ ರೀತಿಯ ಪ್ರಕರಣದಲ್ಲಿ ಸೀರಿಯಲ್‌ನಲ್ಲಿ ಅಕ್ಕ-ತಮ್ಮನಾಗಿ ನಟಿಸಿ ಫೇಮಸ್ ಆಗಿದ್ದ ಜೋಡಿ ನಿಜ ನೀವನದಲ್ಲಿ ಪ್ರೇಮಿಗಳಾಗಿದ್ದೇವೆ ಅನ್ನೋದನ್ನ ಖಚಿತಪಡಿಸಿದ್ದಾರೆ. ಕ್ಯೂಂಕೀ ಸಾಸ್ ಭೀ ಕಭೀ ಬಹು ಥೀ-2ನಲ್ಲಿ ಸಹ ಕಲಾವಿದರಾಗಿರುವ ಶಗುನ್ ಶರ್ಮ ಹಾಗೂ ಅಮನ್ ಗಾಂಧಿ ರಿಯಲ್ ಲೈಫ್‌ನಲ್ಲಿ ಜೋಡಿಗಳಾಗಿದ್ದಾರೆ.
ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮುಖ್ಯ ಪಾತ್ರದಲ್ಲಿರುವ ಸೀರಿಯಲ್‌ನಲ್ಲಿ ಮದುವೆಗೆ ಆಸೆ ಇರುವ ಹುಡುಗಿಯ ಪಾತ್ರದಲ್ಲಿ ಶಗುನ್ ಶರ್ಮ ನಟಿಸಿದ್ದಾರೆ. ಇದೇ ಸೀರಿಯಲ್‌ನಲ್ಲಿ ನಟಿಸುತ್ತಿರುವ ಅಮನ್ ಗಾಂಧಿ ಅವರೊಂದಿಗೆ ಪ್ರೀತಿಯಲ್ಲಿರುವುದಾಗಿ ಆಕೆ ತಿಳಿಸಿದ್ದಾರೆ. ವಿಶೇಷವೆಂದರೆ, ಸೀರಿಯಲ್‌ನಲ್ಲಿ ಅಮನ್ ಗಾಂಧಿ, ಶಗುನ್ ಶರ್ಮ ಅವರ ಕಿರಿಯ ಸಹೋದರನಾಗಿ ನಟಿಸಿದ್ದಾರೆ.
ಹೌಟರ್‌ಫ್ಲೈ ಜೊತೆಗಿನ ಮಾತುಕತೆಯ ವೇಳೆ ಶಗುನ್ ಶರ್ಮ ಈ ವಿಚಾರವನ್ನು ತಿಳಿಸಿದ್ದಾರೆ. ತಮ್ಮ ರಿಲೇಷನ್‌ಷಿಪ್ ಸ್ಟೇಟಸ್ ಕುರಿತಾಗಿ ಪ್ರಶ್ನೆ ಬಂದಾಗ ಸೀರಿಯಲ್‌ನಲ್ಲಿ ಅಕ್ಕ-ತಮ್ಮನಾಗಿ ನಟಿಸುವ ಮುನ್ನವೇ ನಾವಿಬ್ಬರೂ ಪ್ರೇಮಿಗಳಾಗಿದ್ದೆವು ಎಂದು ತಿಳಿಸಿದ್ದಾರೆ.
ತಮ್ಮ ರಿಲೇಷನ್‌ಷಿಪ್ ಕುರಿತಾಗಿ ಸೀರಿಯಲ್ ವಲಯದಲ್ಲಿ ಚರ್ಚೆಗಳಿರುವ ಬೆನ್ನಲ್ಲಿಯೇ ಮಾತನಾಡಿರುವ ಶಗುನ್ ಶರ್ಮ, 'ಅಮನ್ ಗಾಂಧಿ ಹಾಗೂ ನಾನು ರಿಲೇಷನ್‌ಷಿಪ್‌ನಲ್ಲಿರೋದು ರೂಮರ್‌ಗಳಲ್ಲ. ಇದು ನಿಜ. ಹಾಗಂತ ನಾವು ಸೀರಿಯಲ್ ಸೆಟ್‌ನಲ್ಲಿ ಡೇಟಿಂಗ್ ಆರಂಭ ಮಾಡಿರಲಿಲ್ಲ. ಸೀರಿಯಲ್ ಆರಂಭಕ್ಕೂ ಬಹಳ ಮುನ್ನವೇ ನಾವಿಬ್ಬರು ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದೆವು' ಎಂದು ತಿಳಿಸಿದ್ದಾರೆ.
ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ 2 ಗಾಗಿ ತಮ್ಮನ್ನು ಸಂಪರ್ಕಿಸಿದಾಗ, ಅಮನ್ ಅವರನ್ನು ರಿತಿಕ್ ವಿರಾನಿ ಪಾತ್ರಕ್ಕೆ ಈಗಾಗಲೇ ಅಂತಿಮಗೊಳಿಸಲಾಗಿತ್ತು ಎಂದು ನಟಿ ತಿಳಿಸಿದ್ದಾರೆ. ಆದರೆ, ಸೀರಿಯಲ್‌ಗೆ ಸಹಿ ಹಾಕುವ ಮುನ್ನ ಶಗುನ್, ಅಮನ್ ಗಾಂಧಿ ಜೊತೆ ಈ ವಿಚಾರ ಚರ್ಚೆಸಿದ್ದಾಗಿ ಹೇಳಿದ್ದಾರೆ. ಸೀರಿಯಲ್‌ನಲ್ಲಿ ಅಕ್ಕ-ತಮ್ಮನಾಗಿ ಆರಾಮವಾಗಿ ನಟಿಸಲು ಸಾಧ್ಯವಾಗಬಹುದೇ ಎಂದು ಕೇಳಿದ್ದೆ. ಅದಕ್ಕೆ ಆತ ಕೂಡ ಯಾವುದೇ ಸಮಸ್ಯೆ ಆಗೋದಿಲ್ಲ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.
ರಿಲೇಷನ್‌ಷಿಪ್ ಖಚಿತಪಡಿಸಿದ ಬೆನ್ನಲ್ಲಿಯೇ ಮದುವೆಯ ಬಗ್ಗೆಯೂ ಆಕೆ ಮಾತನಾಡಿದ್ದು, ಶೀಘ್ರದಲ್ಲಿಯೇ ಮದುವೆಯಾಗುವ ಗುರಿ ಇದೆ. ಅದಕ್ಕಾಗಿ ಕುಟುಂಬದ ಜೊತೆ ಚರ್ಚೆ ಮಾಡಲಿದ್ದೇವೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.