ಮದ್ವೆ ಏನೋ ಓಕೆ... ಪ್ಲೀಸ್​​ ಹನಿಮೂನ್​, ಸೀಮಂತ ಮಾತ್ರ ತೋರಿಸ್ಬೇಡಿ ಎನ್ನೋದಾ ಸೀರಿಯಲ್​ ಪ್ರೇಮಿಗಳು?

By Suchethana D  |  First Published Aug 2, 2024, 12:21 PM IST

ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಮಾಧವ್​ ಮತ್ತು ತುಳಸಿಯ ಮರುಮದುವೆ ಸಮಾರಂಭ ನಡೆಯುತ್ತಿದ್ದರೆ ಸೀರಿಯಲ್​ ಪ್ರೇಮಿಗಳು ಹೀಗೆಲ್ಲಾ ಹೇಳೋದಾ?
 


ತುಳಸಿ ಈಗ ಮೊದಲಿನ ತುಳಸಿಯಾಗಿ ಉಳಿದಿಲ್ಲ. ಆಕೆ ಇಂಗ್ಲಿಷ್​ ಕಲಿತಿದ್ದಾಳೆ, ಕಾರನ್ನು ಡ್ರೈವ್ ಮಾಡೋದನ್ನೂ ಕಲಿತಿದ್ದಾಳೆ ಸಾಲದು ಎನ್ನುವುದಕ್ಕೆ ಡಾನ್ಸ್​ ಕೂಡ ಕಲಿತಿದ್ದಾಳೆ. ಒಂದರ ಮೇಲೊಂದರಂತೆ ಎಲ್ಲರಿಗೂ ಅಚ್ಚರಿ ಕೊಡುತ್ತಿದ್ದಾಳೆ. ಇಲ್ಲಿಯವರೆಗೆ ಅಳುಮುಂಜಿಯಂತಿದ್ದ ತುಳಸಿಯನ್ನು ನೋಡಿ ಬೇಸತ್ತಿದ್ದ ಶ್ರೀರಸ್ತು ಶುಭಮಸ್ತು ಸೀರಿಯಲ್​ ಪ್ರೇಮಿಗಳಿಗೆ ತುಳಸಿ ರಸದೌತಣವನ್ನು ಬಡಿಸುತ್ತಿದ್ದಾಳೆ. ಶಾರ್ವರಿ, ಅಭಿ ಮತ್ತು ದೀಪಿಕಾ ಬಿಟ್ಟರೆ ಎಲ್ಲರಿಗೂ ತುಳಸಿ ಎಂದರೆ ಪಂಚಪ್ರಾಣ. ಅಮ್ಮನನ್ನು ಕಂಡರೆ ಗುರ್​ ಎನ್ನುತ್ತಿದ್ದ ಸಮರ್ಥ್​ ಕೂಡ ಈಗ ಅಮ್ಮನ ಪರವಾಗಿ ನಿಂತಿದ್ದಾನೆ. ಹೆತ್ತ ಮಗನೇ ತನ್ನಿಂದ ದೂರವಾಗುತ್ತಿದ್ದುದನ್ನು ಕಂಡಿದ್ದ ತುಳಸಿಗೆ ಈಗ ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ಸ್ಥಿತಿಯಲ್ಲಿದ್ದಾಳೆ. ಒಟ್ಟಿನಲ್ಲಿ ಇಲ್ಲಿಯವರೆಗೆ ಸೀರಿಯಲ್​ನಲ್ಲಿ ಎಲ್ಲವೂ ತುಳಸಿ ಪರವಾಗಿಯೇ ಬರುತ್ತಿದೆ.

ಅದೇ ಇನ್ನೊಂದೆಡೆ, ದೀಪಿಕಾ ಮತ್ತು ಶಾರ್ವರಿಯ ಕುತಂತ್ರವೂ ಮುಂದುವರೆದಿದೆ. ಹೇಗಾದರೂ ಮಾಡಿ ಮನೆಯ ಶಾಂತಿಯನ್ನು ಭಂಗ ಮಾಡುವುದು ಅವರ ಉದ್ದೇಶ. ಈಗ ಸೀರಿಯಲ್​ನಲ್ಲಿ ತುಳಸಿ ಮತ್ತು ಮಾಧವ್​ ಮದುವೆ ಸಂಭ್ರಮ ನಡೆಯುತ್ತಿದೆ. ಮದುವೆಯಾಗಿ ಒಂದು ವರ್ಷ ಆಗಿರುವ ಹಿನ್ನೆಲೆಯಲ್ಲಿ ಅವರ ಮದುವೆಯನ್ನು ಮತ್ತೊಮ್ಮೆ ಮಾಡುತ್ತಿದ್ದಾರೆ ಕುಟುಂಬಸ್ಥರು. ಇದಕ್ಕೆ ಕಾರಣವೂ ಇದೆ. ಅದೇನೆಂದರೆ ಇವರು ಮದುವೆಯಾದ ಸ್ಥಿತಿಯೇ ಬೇರೆಯಾದದ್ದು. ತುಳಸಿಯ ಮಾವ ದತ್ತ ಖುದ್ದು ನಿಂತು ತನ್ನ ಸೊಸೆ ಮತ್ತು ಮಾಧವ್​ ಮದುವೆ ಮಾಡಿಸಿದ್ದ. ಆದರೆ ಮದುವೆಯ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಇದೇ ಕಾರಣಕ್ಕೆ ತುಳಸಿಯನ್ನು ಕಂಡರೆ ಎಲ್ಲರೂ ಉರಿದು ಬೀಳುತ್ತಿದ್ದರು. 

Tap to resize

Latest Videos

ಇದೀಗ ತುಳಸಿ ಎಲ್ಲರಿಗೂ ಹತ್ತಿರವಾಗಿರುವ ಕಾರಣ, ಮದುವೆಯನ್ನು ತಾವು ನೋಡಿಲ್ಲ ಎನ್ನುವ ಕಾರಣ ನೀಡಿ ಮತ್ತೊಮ್ಮೆ ಮದುವೆ ಮಾಡಿಸುತ್ತಿದ್ದಾರೆ. ಅತ್ತ ಸಮರ್ಥ್​ ತಮ್ಮ ಅಮ್ಮನಿಗೆ ಧಾರೆ ಸೀರೆ ತಂದಿದ್ದರೆ, ಇತ್ತ ಅವಿ ಕೂಡ ಅಮ್ಮನಿಗೆ ಧಾರೆ ಸೀರೆ ತಂದಿದ್ದ. ಇಬ್ಬರ ಸೀರೆಯನ್ನು ಹೇಗೆ ಉಡುವುದು ಎಂದು ತಿಳಿಯದೇ ಪೇಚಿಗೆ ಸಿಲುಕಿದ್ದಳು ತುಳಸಿ. ಇದೀಗ ಇಬ್ಬರಿಗೂ ನ್ಯಾಯ ಒದಗಿಸಿದ್ದಾಳೆ ತುಳಸಿ, ಇಬ್ಬರೂ ಕೊಟ್ಟ ಸೀರೆಯಲ್ಲಿ ವಿಭಿನ್ನ ರೀತಿಯಲ್ಲಿ ಉಟ್ಟು ಬಂದಿದ್ದಾಳೆ. ಅತ್ತ ಮಾಧವ್​ನನ್ನು ಮದುಮಗನನ್ನಾಗಿ ಮಾಡಲಾಗಿದೆ. ಒಟ್ಟಿನಲ್ಲಿ ಸೀರಿಯಲ್​ನಲ್ಲಿ ಈಗ ಮಾಧವ್​ ಮತ್ತು ತುಳಸಿಯ ಮರುಮದುವೆ ನಡೆಯುತ್ತಿದೆ.

ಸದಾ ಕಿತ್ತಾಡುತ್ತಿರೋ ಶ್ರೀರಸ್ತು ಶುಭಮಸ್ತು ವಾರೆಗಿತ್ತಿಯರಿಂದ ಜೇನ ದನಿಯೋಳೆ...ಗೆ ಭರ್ಜರಿ ಸ್ಟೆಪ್​

ಆದರೆ ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಕೆಲವರು ಕಾಲೆಳೆಯುತ್ತಿದ್ದಾರೆ. ಮದುವೆಯನ್ನೇನೋ ಮಾಡಿಸಿದ್ದೀರಿ, ಪ್ಲೀಸ್​​ ಈಗ ತುಳಸಿಯ ಸೀಮಂತವನ್ನು ತೋರಿಸಬೇಡಿ ಎನ್ನುತ್ತಿದ್ದಾರೆ. ಹಲವರು ಇಂಥ ಒಂದು ಪರಿವರ್ತನೆಯನ್ನು ಕೊಂಡಾಡಿದ್ದಾರೆ. ಧಾರೆ ಸೀರೆಯ ವಿಷಯದಲ್ಲಿ ತುಳಸಿ ಇಬ್ಬರೂ ಮಕ್ಕಳಿಗೂ ನ್ಯಾಯ ಒದಗಿಸಿರುವುದನ್ನು ಪ್ರಶಂಸಿಸುತ್ತಿದ್ದಾರೆ. ಆದರೆ ಕೆಲವರು ಮಾತ್ರ ಇವೆಲ್ಲಾ ಬೇಕಿತ್ತಾ ಈ ವಯಸ್ಸಿನಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ. ಇವನ್ನೆಲ್ಲಾ ನೋಡಲು ಆಗುತ್ತಿಲ್ಲ ಎಂದಿದ್ದರೆ, ಹನಿಮೂನ್​, ಸೀಮಂತ ಎಂದೆಲ್ಲಾ ತೋರಿಸಲು ಹೋಗ್ಬೇಡಿ ಎಂದು ಕೆಲವರು ಹೇಳುತ್ತಿದ್ದಾರೆ. ಕಮೆಂಟ್​ಗಳು ಏನೇ ಇದ್ದರೂ ಮಧ್ಯ ವಯಸ್ಸಿನ ಈ ಜೋಡಿಯ ನವಿರಾದ ಪ್ರೀತಿಯ ಕಥೆಯುಳ್ಳ ಸೀರಿಯಲ್​ ಹಲವರಿಗೆ ಇಷ್ಟವಾಗುತ್ತಿರುವುದಂತೂ ಸುಳ್ಳಲ್ಲ. 

ಅಯ್ಯೋ ಪೆದ್ದು ಭಾಗ್ಯ... ನಿನಗೂ ಇಬ್ಬರು ಮಕ್ಕಳು ಕಣೆ...ಇಷ್ಟು ಹಿಂಟ್​ ಕೊಟ್ರೂ ಅರ್ಥ ಆಗಲ್ವೇನೆ?

click me!