ಸಪ್ತಪದಿಯ ಜೊತೆಗೇ ಎಂಟನೇ ಹೆಜ್ಜೆ ಇಟ್ಟ ಸೀತಾ-ರಾಮ: ವನವಾಸಕ್ಕೆ ಕಳುಹಿಸಲು ಮಾಸ್ಟರ್​ ಪ್ಲ್ಯಾನ್​!

By Suchethana D  |  First Published Jul 1, 2024, 12:44 PM IST

ಸೀತಾ-ರಾಮ ಸಪ್ತಪದಿ ತುಳಿದಿದ್ದಾರೆ. ಆತಂಕದಲ್ಲಿರುವ ಸಿಹಿಯ ಜೊತೆ ಒಂದು ಹೆಜ್ಜೆ ಹೆಚ್ಚಿಗೆ ಇಡಲಾಗಿದೆ. ಇದರ ಜೊತೆಗೇ ಈ ಮೂವರನ್ನೂ ವನವಾಸಕ್ಕೆ ಕಳುಹಿಸಲು ಮಾಸ್ಟರ್​ ಪ್ಲ್ಯಾನ್​ ರೆಡಿಯಾಗಿದೆ. ಏನದು?
 


ಸೀತಾರಾಮರ ಮದುವೆ ನಡೆಯುತ್ತಿದೆ.  ಸೀತಾ ಮತ್ತು ರಾಮದ ಮದುವೆ ಅದ್ಧೂರಿಯಾಗಿ ನಡೆಯುತ್ತಿದೆ. ಹಲವು ಅಡೆತಡೆಗಳನ್ನು ಮೀರಿ ಮದುವೆ ನಡೆಯುತ್ತಿದೆ.  ಅದ್ಧೂರಿ ನಿಶ್ಚಿತಾರ್ಥದ ಬಳಿಕ,  ಮದುವೆಯ ಶಾಸ್ತ್ರಗಳೂ ಮುಗಿದು ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ ಸೀತಾ-ರಾಮ ಜೋಡಿ. ಇವರಿಬ್ಬರ ಮದುವೆಗೆ ಯಾವ ಆತಂಕಗಳೂ ಬರದಿರಲಪ್ಪ ಎಂದುಕೊಂಡವರು ಒಂದು ಹಂತದಲ್ಲಿ ನಿರುಮ್ಮಳಾಗಿದ್ದಾಳೆ. ಆದರೂ ಮದುವೆ ಮುಗಿಯುವವರೆಗೆ ಏನೋ ಆತಂಕ. ಇದೀಗ ಸೀತಾರಾಮ ಸೀರಿಯಲ್​ ಹೊಸ ಪ್ರೊಮೋ ಬಿಡುಗಡೆಯಾಗಿದ್ದು ಅದರಲ್ಲಿ ಸಪ್ತಪದಿಯನ್ನು ತುಳಿದಿದ್ದಾರೆ ಸೀತಾರಾಮ. ಇಲ್ಲಿಯವರೆಗೂ ಈ ಮದುವೆ ಆಗದಂತೆ ಚಿಕ್ಕಿ ಭಾರ್ಗವಿ ಶತ ಪ್ರಯತ್ನ ಮಾಡುತ್ತಲೇ ಬಂದಿದ್ದಾಳೆ. ಆದರೆ ಎಲ್ಲವೂ ಠುಸ್​ ಆಗುತ್ತಲೇ ಇದೆ. ಆದರೆ ವಿಲನ್​ ಎಂದರೆ ಸುಮ್ಮನೇನಾ? ಮದುವೆ ಮುಗಿಯುವವರೆಗೂ ಕುತಂತ್ರ ಬುದ್ಧಿ ತೋರುತ್ತಲೇ ಇದ್ದಾಳೆ.

ಅತ್ತ ಸೀತಾ-ರಾಮರ ಮದುವೆ ನಡೆಯುತ್ತಿದ್ದರೆ, ಸಿಹಿಯ ತಲೆಗೆ ಇನ್ನಿಲ್ಲದ ಹುಳಿ ಹಿಂಡುವ ಕೆಲಸ ಮಾಡಿದ್ದಾಳೆ ಭಾರ್ಗವಿ. ಅವರಿಬ್ಬರ ಮದುವೆಯಾದರೆ ನೀನು ದೂರವಾಗುತ್ತಿ, ನಿನ್ನ ಅಮ್ಮ ನಿನಗೆ ಸಿಗುವುದಿಲ್ಲ ಎಂದೆಲ್ಲಾ ಹೇಳಿದ್ದಾಳೆ. ಇದನ್ನು ಕೇಳಿ ಸಿಹಿಗೆ ಶಾಕ್​ ಆಗಿದೆ. ಅಲ್ಲಿ ಸಪ್ತಪದಿ ತುಳಿಯುವಷ್ಟರಲ್ಲಿಯೇ ಶಾಕ್​ನಿಂದ ಓಡಿ ಹೋಗಿದ್ದಾಳೆ ಸಿಹಿ. ಆಗ ಸಿಹಿಯನ್ನು ಮುದ್ದಾಡಿದ ರಾಮ್​ ನೀನು ಎಂದೆಂದಿಗೂ ನನ್ನ ಮಗಳೇ ಎಂದು ಅವಳನ್ನು ಎತ್ತಿಕೊಂಡಿದ್ದಾನೆ. ಸಪ್ತಪದಿಯ ಬಳಿಕ ಸಿಹಿಯ ಜೊತೆ ಅಪ್ಪನಾಗಿ ಮತ್ತೊಂದು ಹೆಜ್ಜೆಯನ್ನು ತುಳಿದಿದ್ದಾನೆ ರಾಮ್​. ಇಲ್ಲಿಯವರೆಗೆ ಫ್ರೆಂಡ್​ ಫ್ರೆಂಡ್​ ಎನ್ನುತ್ತಿದ್ದ ಸಿಹಿ ಇದೇ  ಮೊದಲ ಬಾರಿಗೆ ರಾಮ್​ನನ್ನು ಬಾಯ್ತುಂಬಾ ಅಪ್ಪಾ ಎಂದು ಕರೆದಿದ್ದಾಳೆ. 

Tap to resize

Latest Videos

ಮದ್ವೆ ಎಂದ್ರೆ ದೆವ್ವನೂ ಹೆದರಿಕೊಳ್ತಾವಂತೆ! ಆ್ಯಂಕರ್​ ಅನುಶ್ರೀ ತೋರಿಸುತ್ತಲೇ ಏನಿದು ಕಾಮಿಡಿ?

ಮದುವೆ ಕಾರ್ಯ ಭರ್ಜರಿಯಾಗಿ ನಡೆಯುತ್ತಿರುವ ನಡುವೆಯೇ, ಸಿಹಿ ಕೂಡ ರಾಮ್​ನನ್ನು ಅಪ್ಪಾ ಎಂದು ಕರೆದಿದ್ದನ್ನು ನೋಡಿ ಭಾರ್ಗವಿಗೆ ಉರಿ ಹತ್ತಿಕೊಂಡಿದೆ. ಮದುವೆಯೊಂದು ಆಗಲಿ, ಮೂವರನ್ನೂ ವನವಾಸಕ್ಕೆ ಕಳುಹಿಸುವ ಪ್ಲ್ಯಾನ್​ ರೆಡಿ ಇದೆ ಎಂದು ಭಾರ್ಗವಿ ಶಪಥ ಮಾಡಿ, ಅವರನ್ನು ಕಳುಹಿಸಲು ಸಜ್ಜಾಗಿದ್ದಾಳೆ. ಮುಂದೇನು ಎನ್ನುವುದು ಈಗಿರುವ ಪ್ರಶ್ನೆ. ಅಷ್ಟಕ್ಕೂ ರಾಮ್​ನ ತಾಯಿ ಭಾರ್ಗವಿಯ ಕನಸಲ್ಲಿ ಬಂದು ಆಗಾಗ್ಗೆ ಆಕೆಗೆ ಹೆದರಿಸುತ್ತಲೇ ಇದ್ದಾಳೆ. ಸೀತಾ ಬಂದ ಮೇಲೆ ನಿನ್ನ ಗತಿ ಅಷ್ಟೇ ಎಂದು ಹೆದರಿಸುತ್ತಿದ್ದಾಳೆ. ಇದಕ್ಕೆ ಕಾರಣ, ಆಸ್ತಿಗಾಗಿ ಸ್ವಂತ ಅಕ್ಕನನ್ನೇ ಕೊಲ್ಲಿಸಿದವಳು ಭಾರ್ಗವಿ. ಆದರೆ ಇವೆಲ್ಲ ಸತ್ಯ ಬಹಿರಂಗವಾಗಲು ಇನ್ನೆಷ್ಟು ವರ್ಷಗಳು ಬೇಕೋ ಗೊತ್ತಿಲ್ಲ. ಸದ್ಯ ಸೀತಾರಾಮರ ಮದುವೆಯೊಂದು ನಿರ್ವಿಘ್ನವಾಗಿ ನಡೆದರೆ ಸಾಕು ಎನ್ನುತ್ತಿದ್ದಾರೆ ಅಭಿಮಾನಿಗಳು. 

ಅಷ್ಟಕ್ಕೂ ಈ ಮದುವೆ ಸುಸೂತ್ರವಾಗಿ ನಡೆಯುತ್ತಿದ್ದರೂ ಎಲ್ಲ ವಿಧಿ ವಿಧಾನ ಮುಗಿಯುವವರೆಗೂ  ಆತಂಕ ಇದ್ದೇ ಇದೆ. ಇದಕ್ಕೆ ಕಾರಣ,  ಮದುವೆಗೆಂದು ಆಭರಣದ ಅಂಗಡಿಗೆ ಹೋದಾಗ  ಯುವತಿಯೊಬ್ಬಳನ್ನು ಸೀತಾ ಗಾಬರಿಯಾಗಿದ್ದಳು. ಇವಳು ಯಾರು ಎನ್ನುವುದು ಈಗಿರುವ ಪ್ರಶ್ನೆ.   ಅನಂತ ಲಕ್ಷ್ಮಿಯವರ ಕುರಿತು ರಾಮ್​ ಹತ್ರ ಹೇಳಬೇಕಾ ಎಂದು ಯುವತಿಯೊಬ್ಬಳು ತನ್ನಷ್ಟಕ್ಕೇ ತಾನು ಮಾತನಾಡಿಕೊಂಡಿದ್ದಾಳೆ. ಅವಳನ್ನು ನೋಡಿದ ಸೀತಾಳಿಗೆ ಶಾಕ್​ ಆಗಿತ್ತು. ಇವೆಲ್ಲಾ ಪ್ರಶ್ನೆಗಳು ಸದ್ಯ ಸೀರಿಯಲ್​ನಲ್ಲಿ ಬಾಕಿ ಇವೆ. ಈ ಮಧ್ಯೆ, ಗೋಡೆ ಬರಹ ನೋಡಿ ಫ್ಯಾನ್ಸ್​ ಸೀತಾರಾಮ ಕಲ್ಯಾಣ ಆಗುವುದು ಡೌಟ್​ ಎನ್ನುತ್ತಿದ್ದಾರೆ. ಅಷ್ಟಕ್ಕೂ ಸೀತಾ ತನ್ನ ಇತಿಹಾಸ ಹೇಗಾದರೂ ಮಾಡಿ ಹೇಳಬೇಕಿತ್ತು, ಇಲ್ಲದಿದ್ದರೆ ಮದ್ವೆಯಾದ್ಮೇಲೆ ಸುಮ್ಮನೇ ತೊಂದರೆ ಎನ್ನುವುದು ಬಹುತೇಕ ಮಂದಿಯ ಅಭಿಪ್ರಾಯ ಕೂಡ. 

ಒಂದೂ ಮಾತು ಕೇಳಲಿಲ್ಲ.. ಎನ್ನುತ್ತಲೇ ಬುಲೆಟ್​ ರಾಣಿ ಅನುಶ್ರೀ ಎಂಟ್ರಿ: ಯಜಮಾನ ಎಲ್ಲಿ ಎಂದ ಫ್ಯಾನ್ಸ್​!
 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!