37ನೇ ವಯಸ್ಸಿಗೆ ಸಾವು ಕಂಡ ರಿಯಾಲಿಟಿ ಶೋ ಖ್ಯಾತಿಯ ಮಿಸ್ಟರ್ ಇಂಡಿಯಾ ವಿನ್ನರ್

Published : Feb 24, 2026, 08:26 PM IST
Mayank Pawar

ಸಾರಾಂಶ

37ನೇ ವಯಸ್ಸಿಗೆ ಸಾವು ಕಂಡ ರಿಯಾಲಿಟಿ ಶೋ ಖ್ಯಾತಿಯ ಮಿಸ್ಟರ್ ಇಂಡಿಯಾ ವಿನ್ನರ್, ಫಿಟ್ನೆಸ್ ವಿಚಾರದಲ್ಲಿ ಯಾವತ್ತೂ ರಾಜಿಯಾಗಿಲ್ಲ. 7 ಬಾರಿ ಮಿಸ್ಟರ್ ಇಂಡಿಯಾ ಪ್ರಶಸ್ತಿ ಗೆದ್ದ ಮಯಾಂಕ್ ಪವಾರ್ ದುರಂತ ಸಾವು ಕಂಡಿದ್ದಾರೆ 

ಮುಂಬೈ (ಫೆ.24) ರಿಯಾಲಿಟಿ ಶೋ ಮೂಲಕ ಭಾರಿ ಜನಪ್ರಿಯತೆ ಪಡೆದ ಬಾಡಿ ಬಿಲ್ಡರ್ ಮಯಾಂಕ್ ಪವಾರ್ ಮೃತಪಟ್ಟಿದ್ದಾರೆ. 37ರ ಹರೆಯದ ಮಯಾಂಕ್ ಪವಾರ್ ಸ್ಪ್ಲಿಟ್ಸ್‌ವಿಲ್ಲಾ 7ನೇ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ಮೂಲಕ ಭಾರಿ ಜನಪ್ರಿಯತೆ ಪಡೆದಿದ್ದರು. ವಿಶೇಷ ಅಂದರೆ 7 ಬಾರಿ ಮಿಸ್ಟರ್ ಇಂಡಿಯಾ ಪ್ರಶಸ್ತಿ ಗೆದ್ದ ಮಯಾಂಕ್ ಪವಾರ್ ನಿಧನ ಹಲವರಿಗೆ ಆಘಾತ ತಂದಿದೆ. ಕುಟುಂಬಸ್ಥರು ಮಯಾಂಕ್ ಪವಾರ್ ನಿಧನ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಇತ್ತೀಚೆಗೆ ಹುಟ್ಟು ಹಬ್ಬ ಆಚರಿಸಿದ್ದ ಮಯಾಂಕ್ ಪವಾರ್

ಜನವರಿ 1ಕ್ಕೆ 37ನೇ ಹುಟ್ಟು ಹಬ್ಬ ಆಚರಿಸಿದ್ದ ಮಯಾಂಕ್ ಪವಾರ್ ಫೆಬ್ರವರಿ ಅಂತ್ಯಕ್ಕೆ ಸಾವು ಕಂಡಿದ್ದಾರೆ. ಸಾವಿಗೆ ಕಾರಣ ಬಹಿರಂಗವಾಗಿಲ್ಲ. ಇತ್ತ ಕುಟುಂಬಸ್ಥರು ಸಾವಿನ ಕಾರಣ ಬಹಿರಂಗಪಡಿಸಿಲ್ಲ. ನಾಳೆ (ಫೆ.25) ಕುಟುಂಬಸ್ಥರು ಮಯಾಂಕ್ ಪವಾರ್ ಪ್ರಾರ್ಥನೆ ಇಟ್ಟುಕೊಂಡಿದ್ದಾರೆ. ಬ್ರದರ್, ಚಾಂಪಿಯನ್, ಮೆಂಟರ್, ಸ್ಪೂರ್ತಿಯ ಚಿಲುಮೆಯ ಮಯಾಂಕ್ ನಮ್ಮೆ ಹೃದಯಲ್ಲಿ ಶಾಶ್ವತವಾಗಿ ಇದ್ದಾರೆ ಎಂದಿದೆ.

ಕಟ್ಟುಮಸ್ತಾದ ದೇಹ, ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದ ಮಯಾಂಕ್ ದಿಢೀರ್ ಸಾವಿಗೆ ಕಾರಣವೇನು ಎಂದು ಅಭಿಮಾನಿಗಳು, ಬೆಂಬಲಿಗರು ಪ್ರಶ್ನಸಿದ್ದಾರೆ. ಆಹಾರ, ವ್ಯಾಯಾಮ ಸೇರಿದಂತೆ ಪ್ರತಿ ವಿಚಾರದಲ್ಲೂ ಶಿಸ್ತು ಪಾಲಿಸಿದ್ದ ಮಯಾಂಕ್ ಪವಾರ್‌ಗೆ ಏನಾಯಿತು ಎಂದು ಹಲವರು ಪ್ರಶ್ನಿಸಿದ್ದಾರೆ. ಮಯಾಂಕ್ ಪವಾರ್ ರಿಯಾಲಿಟಿ ಶೋ ಮೂಲಕ ದೇಶಾದ್ಯಂತ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಬಾಡಿ ಬಿಲ್ಡರ್ ಆಗಿ ಗಮನಸೆಳೆದಿದ್ದ ಮಯಾಂಕ್, 7 ಬಾರಿ ಮಿಸ್ಟರ್ ಇಂಡಿಯಾ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಸ್ಪ್ಲಿಟ್ಸ್‌ವಿಲ್ಲಾ ಸೀಸನ್ 7 ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಮಯಾಂಕ್ ಪವಾರ್ ಅಭಿಮಾನಿಗಳ ನೆಚ್ಚಿನ ಸ್ಪರ್ಧಿಯಾಗಿದ್ದರು. ಆದರೆ ಅಚಾನಕ್ಕಾಗಿ ಮಯಾಂಕ್ ಪವಾರ್ ಎಲಿಮಿನೇಟ್ ಆಗಿದ್ದರು. ಇದು ಈ ರಿಯಾಲಿಟಿ ಶೋ ಕಾರ್ಯಕ್ರಮದ ಇತಿಹಾಸದಲ್ಲೇ ನಡೆದ ಅತ್ಯಂತ ಭಾವುಕ ಕ್ಷಣವಾಗಿತ್ತು. ಕಾರ್ಯಕ್ರಮ ನಿರೂಪಕಿ ಸನ್ನಿ ಲಿಯೋನ್ ಎಲಿಮಿನೇಟ್ ಆದ ಮಯಾಂಕ್ ತಬ್ಬಿಕೊಂಡು ಸಂತೈಸಿದ್ದರು. ಇದೇ ವೇಳೆ ಸಹ ಸ್ಪರ್ಧಿ ನಿಖಿಲ್ ಚಿನ್ನಪ್ಪ ಕೂಡ ತಬ್ಬಿಕೊಂಡು ಮಯಾಂಕ್ ಪವಾರ್‌ಗೆ ಭಾವುಕ ವಿದಾಯ ಹೇಳಿದ್ದರು. ಈ ಕಾರ್ಯಕ್ರಮ ಜನರ ಅಚ್ಚು ಮೆಚ್ಚಿನ ಕಾರ್ಯಕ್ರಮವಾಗಿ ಹೊರಹೊಮ್ಮಿತು. ರಿಯಾಲಿಟಿ ಶೋ ಬಳಿಕ ಹಲವು ವೇದಿಕೆಗಳಲ್ಲಿ ಮಯಾಂಕ್ ಪವಾರ್ ಕಾಣಿಸಿಕೊಂಡಿದ್ದರು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial: ನಿಧಿಗೆ ಸ್ವಲ್ಪನೂ ಬುದ್ಧಿ ಇಲ್ವಾ? ಜೈಲಿಗೆ ಬಂದು ಹೀಗ್ಯಾಕೆ ಮಾಡಿದ್ಲು? ಸೀರಿಯಲ್​ ಪ್ರೇಮಿಗಳು ಗರಂ
ಗಂಡನ ಜೊತೆಗಿನ ಕೋಳಿ ಜಗಳದಿಂದಲೇ ಕನ್ನಡಿಗರ ಮನ ಗೆದ್ದ ‘Nandagokula’ದ ಅಮ್ಮು… ಯಾರೀಕೆ?