ತಂದೆ ಕಳೆದುಕೊಂಡ 2 ವರ್ಷಕ್ಕೆ ತಾಯಿ ಅಗಲಿದ್ದರು: ಕಣ್ಣೀರಿಟ್ಟ ಕಿರುತೆರೆ ನಟಿ ಐಶ್ವರ್ಯಾ ಶಿಂದೋಗಿ

By Vaishnavi Chandrashekar  |  First Published Nov 24, 2022, 4:18 PM IST

ಸೂಪರ್ ಕ್ವೀನ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಐಶ್ವರ್ಯ ಶಿಂದೋಗಿ. ತಂದೆ-ತಾಯಿ ಇಲ್ಲದ ಜೀವನ, ಮುದ್ದಿನ ಶ್ವಾನವೇ ಪ್ರಪಂಚ....


ಜೀ ಕನ್ನಡ ವಾಹಿನಿಯಲ್ಲಿ ನಾಗಿಣಿ- 2 ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಐಶ್ವರ್ಯ ಶಿಂದೋಗಿ ಇದೀಗ ಸೂಪರ್ ಕ್ವೀನ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಶ್ವೇತಾ ಚಂಗಪ್ಪ ಮತ್ತು ಕುರಿ ಪ್ರತಾಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮಕ್ಕೆ ವಿಜಯ್ ರಾಘವೇಂದ್ರ ಮತ್ತು ರಚಿತಾ ರಾಮ್‌ ತೀರ್ಪುಗಾರರು. ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಮಿಂಚಿರುವ 10 ಸೂಪರ್ ಕ್ವೀನ್‌ಗಳು ಈ ಶೋನಲ್ಲಿ ಸ್ಪರ್ಧಿಸಿ ಕಿರೀಟ ಪಡೆಯಲು ಸಜ್ಜಾಗಿದ್ದಾರೆ. ಇವರಲ್ಲಿ ಒಬ್ಬರಾಗಿರುವ ಐಶ್ವರ್ಯ ವೇದಿಕೆ ಮೇಲೆ ತಮ್ಮ ಫ್ಯಾಮಿಲಿಯನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.
 
'ನನ್ನ ಜೀವನದ ಸೂಪರ್ ಕ್ವೀನ್ ನನ್ನ ತಾಯಿ ಯಾಕಂದ್ರೆ ಆಕೆ ವರ್ಕಿಂಗ್ ವುಮೆನ್ ಹಾಗೂ ಅದ್ಭುತ ಡ್ಯಾನ್ಸರ್. ನಾನು ಒಬ್ಬಳೇ ಮಗಳು ತುಂಬಾ ಮುದ್ದು ಮಾಡಿ ಬೆಳೆಸಿದ್ದಾರೆ. ಅಡುಗೆ ಮಾಡೋದು ಅಂದ್ರೆ ತುಂಬಾನೇ ಇಷ್ಟ. ಹೋಟೆಲ್ ಮ್ಯಾನೇಜ್‌ಮೆಂಟ್ ಮಾಡಿರುವೆ.ನನ್ನ ಜೊತೆಗಿರುವುದು ನನ್ನ ನಾಯಿ ಸಿಂಬಾ ಮಾತ್ರ. ನನ್ನ ಜೀವನದಲ್ಲಿ ಕೆಟ್ಟ ಸಮಯ ಎದುರಾಗುತ್ತದೆ... ತಂದೆ ತಾಯಿಯನ್ನು ಕಳೆದುಕೊಂಡೆ, ಮೊದಲು ತಂದೆ ಆನಂತರ ತಾಯಿ. ಫೆಬ್ರವರಿ 14 ನಾನೊಂದು ಬ್ಯುಸಿನೆಸ್ ಆರಂಭಿಸಿದೆ ಅವತ್ತು ತಂದೆ ಬಂದು ರೇಗಿಸುವುದು ಎಲ್ಲಾ ತಮಾಷೆ ಮಾಡುತ್ತಿದ್ದರು ಅದೇ ಕೊನೆ ಅವರ ಜೊತೆ ಮಾತನಾಡಿದ್ದು. ಸುರೇಶ್ ಅವರು ಇಲ್ಲ ಅಂತ ಹೇಳಿದಾಗ ಅಮ್ಮ ನನಗೂ ನೋವು ತಡೆದುಕೊಳ್ಳಲು ಆಗಲಿಲ್ಲ. ತಂದೆ ಹೋಗಿ ಎರಡು ವರ್ಷಕ್ಕೆ ತಾಯಿ ಹೋದ್ರು ನನ್ನ ಇಡೀ ಪ್ರಪಂಚ ಪುಡಿ ಪುಡಿ ಆಯ್ತು. ಆ ಸಮಯ ಹೇಗಿತ್ತು ಅಂತ ಹೇಳಿಕೊಳ್ಳಲು ಆಗುವುದಿಲ್ಲ ಅಷ್ಟು ಕಷ್ಟ ಇತ್ತು. ಯಾವುದೇ ಪ್ರಾಜೆಕ್ಟ್‌ಗೆ ಆಯ್ಕೆ ಆದರೂ ನಾನು ಮೊದಲು ಹೇಳುವುದು ನನ್ನ ತಂದೆಗೆ ಈಗ ಆ ರೀತಿ ಮಾಡಲು ಆಗುವುದಿಲ್ಲ.ಯಾರಿಗೆ ಈಗ ನನ್ನ ಮನಸ್ಸಿನ ಮಾತು ಹೇಳಲಿ?' ಎಂದಿ ಐಶ್ವರ್ಯ ಭಾವುಕರಾಗಿದ್ದಾರೆ.

Rachita Ram ದಪ್ಪ ಆಗಿದ್ದಕ್ಕೆ ಗೀತಾ ವರ್ಕೌಟ್ ನೋಡಿ ನಮ್ಮಮ್ಮ ಬೈತಾವ್ರೆ: ರಚಿತಾ ರಾಮ್

Tap to resize

Latest Videos

undefined

'ತಂದೆ-ತಾಯಿ ನಮಗೆ ಸಿಕ್ಕಿರುವ ದೊಡ್ಡ ಆಸ್ತಿ. ತಂದೆ-ತಾಯಿ ಇಲ್ಲ ಅನ್ನೋ ಸಂದರ್ಭ ಬರುತ್ತೆ ಅಂತ ನನಗೆ ಗೊತ್ತಿರಲಿಲ್ಲ ಯಾಕಂದ್ರೆ ನನ್ನ ಪ್ರಪಂಚದಲ್ಲಿ ಇರುವುದು ಅವರು ಅಷ್ಟೆ. ತುಂಬಾ ಕ್ಲೋಸ್‌ ಇದ್ವಿ...ಮನೆಯ ಮುಖ್ಯ ಪಿಲ್ಲರ್ ಬದ್ರೆ ಇಡೀ ಬಿಲ್ಡಿಂಗ್ ಕುಸಿದು ಬೀಳುತ್ತದೆ. ನೋವನ್ನು ಪಕ್ಕಕ್ಕೆ ಇಟ್ಟು ಪ್ರಪಂಚ ಕಟ್ಟಿಕೊಳ್ಳುತ್ತಿರುವೆ. ಅವ್ರುನ ತುಂಬಾ ಪ್ರೀತಿ ಮಾಡ್ತೀನಿ ಅಷ್ಟೇ ಮಿಸ್ ಮಾಡಿಕೊಳ್ಳುತ್ತೀನಿ' ಎಂದು ಐಶ್ವರ್ಯ ಹೇಳಿದ್ದಾರೆ.

'ಸುಮಾರು 7 -8 ವರ್ಷಗಳಿಂದ ಐಶ್ವರ್ಯ ಪರಿಚಯ ನನಗಿದೆ. ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ನೀವು ತುಂಬಾನೇ ಸ್ಟ್ರಾಂಗ್ ವ್ಯಕ್ತಿ. ನಿಮ್ಮ ತಂದೆಗೆ ನೀವು ಇಡೀ ಪ್ರಪಂಚ ಆಗಿದ್ದರಿ ಅದನ್ನು ನಾನು ನೋಡಿದ್ದೀನಿ ಅವರಿಬ್ಬರ ಆಶೀರ್ವಾದ ನಿಮ್ಮ ಜೊತೆಗಿದೆ' ಜೊತೆಗೆ ನಟಿಸಿರುವ ರಾಘವೇಂದ್ರ ಮಾತನಾಡಿದ್ದಾರೆ.

30 ಕೆಜಿ ಆಯ್ತು ಈಗ 50 ಕೆಜಿ ಕಮ್ಮಿ ಆಗ್ಬೇಕು: ಗುಂಡಮ್ಮ ಗೀತಾ ಭಟ್ ರೋಚಕ ವೇಟ್‌ ಲಾಸ್‌ ಜರ್ನಿ

'ನನಗೆ ಮಾತೇ ಬರುತ್ತಿಲ್ಲ ಏನು ಹೇಳಬೇಕು ಗೊತ್ತಾಗುತ್ತಿಲ್ಲ. ನೀವು ಇರುವ ಸ್ಥಿತಿ ನಿಮ್ಮ ಪ್ರಪಂಚನ್ನು ಕಟ್ಟಿಕೊಳ್ಳುತ್ತಿರುವ ಮಾತುಗಳನ್ನು ಕೇಳಿನೇ ಕಲ್ಪನೆ ಮಾಡಿಕೊಳ್ಳುವುದಕ್ಕೆ ಕಷ್ಟ ಆಗುತ್ತಿದೆ. ಇದನ್ನು ನೀವು ಚಾಲೆಂಜ್ ಆಗಿ ಸ್ವೀಕರಿಸಿದ್ದೀರಿ ..ಎಲ್ಲೂ ಏನೂ ಬಿಟ್ಟು ಕೊಡಬೇಡಿ...ಧೈರ್ಯ ಗೆಡಬೇಡಿ ಸದಾ ಪಾಸಿಟಿವ್ ಆಗಿರಿ' ಎಂದಿದ್ದಾರೆ ರಚಿತಾ ರಾಮ್.

 

click me!