
ಬಿಗ್ ಬಾಸ್ (Bigg Boss) ಮನೆಯಲ್ಲಿರುವ ಸ್ಪರ್ಧಿಗಳ ಒಂದೊಂದೇ ಮುಖ ಹೊರಗೆ ಬರ್ತಿದೆ. ಕ್ಯಾಪ್ಟನ್ ರಘು ನೇರಾನೇರ ಮಾತು ಈಗ ರಾಶಿಕಾ (Rashika) ಪಿತ್ತವನ್ನು ನೆತ್ತಿಗೇರಿಸಿದೆ. ಸದಾ ಸೂರಜ್ ಜೊತೆ ಕಾಣಿಸಿಕೊಳ್ತಿದ್ದ ರಾಶಿಕಾ ಇಂದು ರಘು ಜೊತೆ ಫೈಟ್ ಗೆ ಇಳಿದಿದ್ದಾರೆ. ಇದಕ್ಕೆ ಕಾರಣವಾಗಿದ್ದು ರಾಶಿಕಾ ಮನೆಯಿಂದ ಬಂದ ಫೋನ್ ಕರೆ.
ಬಿಗ್ ಬಾಸ್ ಸ್ಪರ್ಧಿ ರಾಶಿಕಾ, ಸೂರಜ್ ಬಂದ್ಮೇಲೆ ಕಳೆದು ಹೋಗಿದ್ದಾರೆ ಎನ್ನುವ ಮಾತಿದೆ. ಈ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಮಾತ್ರ ಅಲ್ಲ ಹೊರಗೂ ಸಾಕಷ್ಟು ಚರ್ಚೆ ಆಗ್ತಿದೆ. ರಾಶಿಕಾ ಇದೇ ವಿಷ್ಯಕ್ಕೆ ಟ್ರೋಲ್ ಕೂಡ ಆಗ್ತಿದ್ದಾರೆ. ಈ ಎಲ್ಲದರ ಮಧ್ಯೆ ಇಂದಿನ ಎಪಿಸೋಡ್ ನಲ್ಲಿ ಕ್ಯಾಪ್ಟನ್ ರಘುಗೆ ವಿಶೇಷ ಅಧಿಕಾರವೊಂದು ಸಿಗ್ತಿದೆ. ಸ್ಪರ್ಧಿಗಳ ಮನೆ ಮಂದಿ ಜೊತೆ ರಘು ಮಾತನಾಡ್ಬಹುದು. ರಘು, ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಮನೆಯವರ ಜೊತೆ ಫೋನ್ ನಲ್ಲಿ ಹಂಚಿಕೊಳ್ಬಹುದು. ಇದನ್ನು ಸ್ಪರ್ಧಿಗಳು ಕೇಳಿಸ್ಕೊಳ್ಳಬಹುದೇ ವಿನಃ ಮಾತನಾಡಲು ಸಾಧ್ಯವಿಲ್ಲ.
Amruthadhaare Serial: ಒಂದಾದ ಗೌತಮ್- ಭೂಮಿಕಾ! ನಿರ್ದೇಶಕರಿಗೆ ಬಂತು ಬೆದರಿಕೆ ಸಂದೇಶ; ಏನಿದು?
ರಾಶಿಕಾ ಮನೆಯಿಂದ್ಲೂ ಫೋನ್ ಕರೆ ಬಂದಿದೆ. ರಾಶಿಕಾ ತಮ್ಮ ಫೋನ್ ಮಾಡಿದ್ದಾರೆ. ಈ ಟೈಂನಲ್ಲಿ ರಘು, ರಾಶಿಕಾ ಬಿಗ್ ಬಾಸ್ ಮನೆಯಲ್ಲಿ ಲೋಸ್ಟ್ ಆಗಿದ್ದಾರೆ ಅಂತ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಒಂದ್ಕಡೆ ತಮ್ಮನ ಜೊತೆ ಮಾತನಾಡೋಕೆ ಆಗ್ಲಿಲ್ಲ ಎನ್ನುವ ದುಃಖವಾದ್ರೆ ಇನ್ನೊಂದು ಕಡೆ ರಘು ಬಳಸಿದ Lost ಎನ್ನುವ ಪದ, ರಾಶಿಕಾರನ್ನು ಮತ್ತಷ್ಟು ಕೆಳಕಿದೆ. ನಾನು ಎಲ್ಲಿ ಕಳೆದು ಹೋಗಿದ್ದೇನೆ? ಈ ಪ್ರಶ್ನೆಗೆ ಉತ್ತರ ಬೇಕು ಎನ್ನುತ್ತಲೇ ರಘು ಮೇಲೆ ರಾಶಿಕಾ ತಮ್ಮ ಕೋಪ ತೋರಿಸಿದ್ದಾರೆ. ನೀವು ಫೇವರಿಸಂ ಮಾಡ್ತಿದ್ದೀರಿ, ಕ್ಯಾಪ್ಟನ್ ಆಗೋಕೆ ಲಾಯಕ್ ಇಲ್ಲ ಅಂತ ರಾಶಿಕಾ ಕೂಗಾಡಿದ್ದಾರೆ. ಕಲರ್ಸ್ ಕನ್ನಡ ಪ್ರಸಾರ ಮಾಡಿರುವ ಪ್ರೋಮೋದಲ್ಲಿ ರಘು, ರಾಶಿಕಾ ಬಗ್ಗೆ ಇನ್ನೇನಲ್ಲ ಹೇಳಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. Lost ಎನ್ನುವ ಪದವನ್ನು ಅವರು ಬಳಸಿದ್ದಾರೆ.
ಕಲರ್ಸ್ ಕನ್ನಡ ಬಿಗ್ ಬಾಸ್ ಇಂದಿನ ಸಂಚಿಕೆ ಪ್ರೋಮೋ ಪ್ರಸಾರ ಆಗ್ತಿದ್ದಂತೆ, ಜನರು ರಘು ಪರ ಬ್ಯಾಟ್ ಬೀಸಿದ್ದಾರೆ. ರಘು ಸರಿಯಾದ ಹೇಳಿಕೆ ನೀಡಿದ್ದಾರೆ, ರಾಶಿಕಾ – ಸೂರಜ್ ಪ್ರೀತಿಯಲ್ಲಿ ಕಳೆದುಹೋಗಿದ್ದಾರೆ, ರಘು ಸತ್ಯವನ್ನೇ ಹೇಳಿದ್ದಾರೆ ಎನ್ನುವ ಕಮೆಂಟ್ ಗಳೇ ಜಾಸ್ತಿ ಇದೆ. ಸೂರಜ್ ಬಿಗ್ ಬಾಸ್ ಮನೆಯೊಳಗೆ ಹೋಗುವ ಮುನ್ನ ರಾಶಿಕಾ ಬಗ್ಗೆ ವೀಕ್ಷಕರಿಗಿದ್ದ ಅಭಿಪ್ರಾಯ ಸೂರಜ್ ಹೋಗ್ತಿದ್ದಂತೆ ಬದಲಾಗಿದೆ. ಸದಾ ರಾಶಿಕಾ ಸೂರಜ್ ಹಿಂದೆ – ಮುಂದೆ ಸುತ್ತುತ್ತಾರೆ , ಬೇರೆ ಯಾರ ಜೊತೆಯೂ ಬೆರೆಯೋದಿಲ್ಲ ಎನ್ನುವ ಕಮೆಂಟ್ ಗಳೇ ಬರ್ತಿವೆ.
Bigg Boss Kannada: ಈ ಫೋಟೋದಲ್ಲಿರುವ ಬಿಗ್‌ಬಾಸ್ ಕನ್ನಡದ ಸ್ಪರ್ಧಿ ಯಾರು ಅಂತ ಗೊತ್ತಾಯ್ತಾ?
ಕಣ್ಣೀರಿಟ್ಟ ಧನುಷ್ :
ಬಿಗ್ ಬಾಸ್ ಮನೆಯಲ್ಲಿ ಇಂದು ಎಲ್ಲರ ಕಣ್ಣೀರನ್ನು ವೀಕ್ಷಕರು ನೋಡ್ಬಹುದು. ಧನುಷ್ ಕೂಡ ಅಮ್ಮನ ಧ್ವನಿ ಕೇಳ್ತಿದ್ದಂತೆ ಭಾವುಕರಾಗಿದ್ದಾರೆ. ಮಗ ನಾಮಿನೇಟ್ ಆಗಿದ್ದಾರೆ ಎನ್ನುವ ವಿಷ್ಯ ಗೊತ್ತಾಗ್ತಿದ್ದಂತೆ ಅಮ್ಮ, ಎಲ್ಲರ ಜೊತೆ ಆಟಆಡು ಅಂತ ಧನುಷ್ ಗೆ ಸಲಹೆ ನೀಡಿದ್ದಾರೆ. ಆಟದಲ್ಲಿ 100 ಪರ್ಸೆಂಟ್ ನೀಡಿದ್ರೂ ಧನುಷ್ ಮನೆಯೊಳಗೆ ಕಾಣಿಸಿಕೊಳ್ಳೋದು ಕಡಿಮೆ. ಇದೇ ಅವರಿಗೆ ಮುಳುವಾಗುವ ಸಾಧ್ಯತೆಯೂ ಇದೆ. ಈ ಮಧ್ಯೆ ಜಾಹ್ನವಿ ಕೂಡ ಒಂದೇ ಸಮನೆ ಅಳ್ತಿದ್ದು, ರಘು, ಅವ್ರ ಕುಟುಂಬದ ಜೊತೆ ಏನೆಲ್ಲ ಮಾತನಾಡಿದ್ದಾರೆ ಅನ್ನೋದನ್ನು ಕಾದು ನೋಡ್ಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.