ಕೆಲಸ ಇಲ್ಲ, ಹಣವಿಲ್ಲ, ಯಾರಾದ್ರೂ ಸಹಾಯ ಮಾಡಿ; ಸೋಶಿಯಲ್‌ ಮೀಡಿಯಾದಲ್ಲಿ ಅಂಗಲಾಚಿದ ಸ್ಟಾರ್‌ ಹೀರೋಯಿನ್‌!

Published : Oct 27, 2025, 06:07 PM IST
Sandhya Mridul

ಸಾರಾಂಶ

Actress Sandhya Mridul Appeals for Work 'ಪೇಜ್ 3' ಖ್ಯಾತಿಯ ಬಾಲಿವುಡ್ ನಟಿ ಸಂಧ್ಯಾ ಮೃದುಲ್ ತಮಗೆ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದಾಗಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕಡಿಮೆ ಫಾಲೋವರ್ಸ್ ಇರುವುದೇ ತಮಗೆ ಅವಕಾಶಗಳು ತಪ್ಪಿಹೋಗಲು ಕಾರಣ ಎಂದಿದ್ದಾರೆ.

ಬೆಂಗಳೂರು (ಅ.27): ಬಾಲಿವುಡ್ ನ ಪ್ರಸಿದ್ಧ ನಟಿಯೊಬ್ಬರು ತಮಗೆ ಕೆಲಸ ಬೇಕಾಗಿದೆ ಅನ್ನೋ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ತಮಗೆ ಮಾಡಲು ಕೆಲಸವಿಲ್ಲ, ಇದರಿಂದಾಗಿ ಹಣವಿಲ್ಲ ಜೀವನ ನಡೆಸೋದು ಕಷ್ಟವಾಗಿದೆ ಎಂದು ಹೇಳಿದ್ದು, ವಿಡಿಯೋದಲ್ಲಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಮಾಧ್ಯಮದಲ್ಲಿ ಫಾಲೋವರ್ಸ್ ಕಡಿಮೆ ಇರುವ ಕಾರಣಕ್ಕಾಗಿಯೇ ಕೆಲಸ ಸಿಗುತ್ತಿಲ್ಲ ಎಂದು ಅವರು ದೂರಿದ್ದಾರೆ.

ಬಾಲಿವುಡ್ ಮತ್ತು ಟಿವಿ ಉದ್ಯಮದಲ್ಲಿ ಅನೇಕ ಹಿರಿಯ ನಟರು ಕೆಲಸವಿಲ್ಲದೆ ಸುಮ್ಮನೆ ಕುಳಿತುಕೊಳ್ಳುವಂತಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನೀನಾ ಗುಪ್ತಾ ಕೂಡ ಒಂದು ಕಾಲದಲ್ಲಿ ಇದೇ ರೀತಿಯಲ್ಲಿ ಕೆಲಸ ಹುಡುಕುತ್ತಿದ್ದರು. ಕೊನೆಗೆ ನೇರವಾಗಿ ಸೋಶಿಯಲ್‌ಮೀಡಿಯಾದಲ್ಲಿ ಪೋಸ್ಟ್‌ ಮಾಡುವ ಮೂಲಕ ಕೆಲಸ ಕೇಳಿದ್ದರು. ಈಗ ಮತ್ತೊಬ್ಬ ಪ್ರಸಿದ್ಧ ನಟಿ ಯಾವುದೇ ಕೆಲಸವಿಲ್ಲದಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಇದಲ್ಲದೇ, ಸಾಮಾಜಿಕ ಮಾಧ್ಯಮದಲ್ಲಿ ಕಡಿಮೆ ಫಾಲೋವರ್ಸ್‌ಗಳು ಇರುವುದರಿಂದ ತನಗೆ ಕೆಲಸ ಸಿಗುತ್ತಿಲ್ಲ ಎಂದು ಅವರು ದೂರಿದ್ದಾರೆ. ಇದರೊಂದಿಗೆ, ಜೀವನ ನಡೆಸೋದು ಕಷ್ಟವಾಗಿದೆ ಯಾವುದಾದರೂ ಕೆಲಸ ನೀಡುವಂತೆ ಅವರು ವಿನಂತಿ ಮಾಡಿದ್ದಾರೆ. ನಟ ವಿವೇಕ್‌ ಓಬೆರಾಯ್‌ ಸೇರಿದಂತೆ ಅನೇಕರೊಂದಿಗೆ ನಟಿಸಿರುವ ಈ ನಟಿಯ ಹೆಸರು ಸಂಧ್ಯಾ ಮೃದುಲ್‌.

'ಪೇಜ್ 3', 'ಹನಿಮೂನ್ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್', 'ಸಾಥಿಯಾ' ಮುಂತಾದ ಚಿತ್ರಗಳಲ್ಲಿ ನಟಿಸಿರುವ ನಟಿ ಸಂಧ್ಯಾ ಮೃದುಲ್ ಸೋಶಿಯಲ್‌ ಮೀಡಿಯಾದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ತಮ್ಮ ಜೀವನದ ಕಷ್ಟದ ಸಮಯವನ್ನು ಬಹಿರಂಗಪಡಿಸಿದ್‌ದು, ತಮ್ಮ ದುಃಖವನ್ನು ಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ. ಅದಲ್ಲದೆ, ಇತ್ತೀಚಿನದ ದಿನಗಳಲ್ಲಿ ಜನರು ಸೋಶಿಯಲ್‌ ಮೀಡಿಯಾ ಫಾಲೋವರ್ಸ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

 

 

ಕೆಲಸವೇ ಸಿಗದೇ ಫಾಲೋವರ್ಸ್‌ ಹೆಚ್ಚಾಗೋದು ಹೇಗೆ?

"ಈಗ ಫಾಲೋವರ್ಸ್‌ ಇಲ್ಲದಿದ್ದರೆ, ಕೆಲಸವೂ ಇರುವುದಿಲ್ಲ ಎಂಬ ಹೊಸ ಪರಿಸ್ಥಿತಿ ಉದ್ಭವಿಸಿದೆ. ಆದರೆ ಕೆಲಸವೇ ಇಲ್ಲದಿದ್ದರೆ, ಒಬ್ಬ ವ್ಯಕ್ತಿ ಹೇಗೆ ಜನಪ್ರಿಯನಾಗುತ್ತಾನೆ ಅಥವಾ ಪ್ರಸಿದ್ಧನಾಗುತ್ತಾನೆ? ಅವನು ಪ್ರಸಿದ್ಧನಲ್ಲದಿದ್ದರೆ, ಅವನ ಫಾಲೋವರ್ಸ್‌ ಹೇಗೆ ಹೆಚ್ಚಾಗುತ್ತಾರೆ? ಅವನಿಗೆ ಫಾಲೋವರ್ಸ್‌ ಸಿಗದಿದ್ದರೆ, ಅವನು ಹೇಗೆ ಪ್ರಸಿದ್ಧನಾಗುತ್ತಾನೆ, ಅವನಿಗೆ ಹೇಗೆ ಕೆಲಸ ಸಿಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಹೇಳುತ್ತಿರುವ ವಿಚಾರ ನಿಮಗೆ ಅರ್ಥವಾಗಿರಬಹುದು. ಆದರೆ, ಇದು ತೀರಾ ಗೊಂದಲದ ವಿಷಯ ಎಂದು ಹೇಳಿದ್ದಾರೆ.

ಸಂಧ್ಯಾ ಅವರ ಮಾತು ಅಲ್ಲಿಗೆ ನಿಂತಿಲ್ಲ.. "ನನಗೆ ಮೊದಲು ಇದ್ದ ಕೆಲಸವೂ ಈಗ ಇಲ್ಲ. ಏಕೆಂದರೆ ನನಗೆ ಹೆಚ್ಚು ಫಾಲೋವರ್ಸ್‌ಗಳಿಲ್ಲ. ನನಗೆ ಕೆಲಸ ಕೊಟ್ಟವರು, ಮೇಡಂ ನಿಮಗೆ ಫಾಲೋವರ್ಸ್‌ ಕಡಿಮೆ ಅಲ್ಲದೆ ನಿಮ್ಮ ನೋಟ ಶ್ರೀಮಂತ ವ್ಯಕ್ತಿಯಂತೆ ಇದೆ. ಆ ಕಾರಣಕ್ಕಾಗಿ ಈ ಪ್ರಾಜೆಕ್ಟ್‌ನಿಂದ ನಿಮ್ಮನ್ನು ಕೈಬಿಡಲಾಗಿದೆ ಎನ್ನುತ್ತಾರೆ. ನನ್ನ ನೋಟ ಶ್ರೀಮಂತ ವ್ಯಕ್ತಿಯಂತೆ ಇದ್ದಿರಬಹುದು. ಆದರೆ, ನಾನು ಶ್ರೀಮಂತಳಲ್ಲ. ನನಗೆ ಕೆಲಸ ಸಿಗದಿದ್ದರೆ, ನನ್ನ ಫಾಲೋವರ್ಸ್‌ ಹೇಗೆ ಹೆಚ್ಚಾಗುತ್ತಾರೆ ಮತ್ತು ನಾನು ಹೇಗೆ ಪ್ರಸಿದ್ಧನಾಗುತ್ತೇನೆ? ನನಗೆ ಕೆಲಸ ಸಿಗದಿದ್ದರೆ, ನನಗೆ ಹಣ ಸಿಗದಿದ್ದರೆ, ನನ್ನ ನೋಟವು ಮಾತ್ರ ಶ್ರೀಮಂತ ವ್ಯಕ್ತಿಯಂತೆ ಇರುತ್ತದೆ, ನಾನಲ್ಲ. ಎಲ್ಲರೂ ನನಗೆ ಸಹಾಯ ಮಾಡುವಂತೆ ನಾನು ವಿನಂತಿಸುತ್ತೇನೆ." ಸಂಧ್ಯಾ ಅವರ ಈ ವೀಡಿಯೊಗೆ ನೆಟಿಜನ್‌ಗಳು ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!
ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ