ಪ್ರೀತಿಸಿದ ಹುಡುಗಿ ಜೊತೆ ಉಂಗುರ ಬದಲಾಯಿಸಿಕೊಂಡ ʼBigg Boss Kannada 11ʼ‌ ಸ್ಪರ್ಧಿ ರಂಜಿತ್!

Published : Mar 06, 2025, 03:57 PM ISTUpdated : Mar 06, 2025, 04:45 PM IST
ಪ್ರೀತಿಸಿದ ಹುಡುಗಿ ಜೊತೆ ಉಂಗುರ ಬದಲಾಯಿಸಿಕೊಂಡ ʼBigg Boss Kannada 11ʼ‌ ಸ್ಪರ್ಧಿ ರಂಜಿತ್!

ಸಾರಾಂಶ

ನಟ, ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಸ್ಪರ್ಧಿ ರಂಜಿತ್‌ ಹಾಗೂ ಮಾನಸಾ ಗೌಡ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬಹಳ ಖಾಸಗಿಯಾಗಿ ಈ ನಿಶ್ಚಿತಾರ್ಥ ನಡೆದಿದೆ. ರಂಜಿತ್‌ ಎಂಗೇಜ್‌ ಆಗಿರುವ ಹುಡುಗಿ ಯಾರು? 

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಖ್ಯಾತಿಯ ರಂಜಿತ್‌ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಾನಸಾ ಗೌಡ ಎನ್ನುವವರ ಜೊತೆ ಇಂದು ಎಂಗೇಜ್‌ ಆಗಿದ್ದಾರೆ. ಖಾಸಗಿಯಾಗಿ ಈ ನಿಶ್ಚಿತಾರ್ಥ ನಡೆದಿದೆ. ಎಲ್ಲಿಯೂ ಪ್ರೀತಿ ವಿಷಯ ಬಿಟ್ಟುಕೊಡದೆ ಕಮಿಟ್‌ ಆಗಿದ್ದಾರೆ.

ಮಾನಸಾ ಗೌಡ ಯಾರು? 
ರಂಜಿತ್‌ ಹಾಗೂ ಮಾನಸಾ ಗೌಡ ಅವರು ಕೆಲ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಈಗ ಕುಟುಂಬದವರ ಒಪ್ಪಿಗೆ ಪಡೆದು ಕಮಿಟ್‌ ಆಗಿದ್ದಾರೆ. ಮಾನಸಾ ಗೌಡ ಅವರು ಫ್ಯಾಷನ್‌ ಡಿಸೈನರ್‌, ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದಾರೆ. ಇವರದ್ದೇ ಬ್ಯೂಟಿಕ್‌ ಕೂಡ ಇದೆ. ಒಟ್ಟಿನಲ್ಲಿ ಮಾನಸಾ ಅವರು ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇನ್ನು ಮಾನಸಾ ಬಗ್ಗೆ ರಂಜಿತ್‌ ಎಲ್ಲಿಯೂ ಮಾತನಾಡಿರಲಿಲ್ಲ. ಮುಂದಿನ ದಿನಗಳಲ್ಲಿ ಅವರು ನಿಶ್ಚಿತಾರ್ಥದ ಬಗ್ಗೆ ಮಾತನಾಡಬಹುದು. 

Drone Prathap, ನೀವು ಸಾಮಾನ್ಯದವರಲ್ಲ.. ಗಗನಾಗೆ 1000 ಅಡಿ ಎತ್ತರದಿಂದ ಗಿಫ್ಟ್‌ ಕೊಟ್ಟ ‌ʼಭರ್ಜರಿ ಬ್ಯಾಚುಲರ್ಸ್ʼ

ಧಾರಾವಾಹಿಗಳಲ್ಲಿ ನಟನೆ! 
ʼಅಮೃತವರ್ಷಿಣಿʼ, ʼಮೀರಾ ಮಾಧವʼ, ʼಅವನು ಮತ್ತೆ ಶ್ರಾವಣಿʼ ಧಾರಾವಾಹಿಯಲ್ಲಿ ವಿಲನ್‌ ಆಗಿ ಅಬ್ಬರಿಸಿದ್ದರು. ಇದಾದ ಬಳಿಕ ಪೌರಾಣಿಕ ʼಶನಿʼ ಧಾರಾವಾಹಿ, ʼಚಿಟ್ಟೆಹೆಜ್ಜೆʼ ಧಾರಾವಾಹಿಯಲ್ಲಿಯೂ ಅವರು ನಟಿಸಿದ್ದರು. ʼಶನಿʼ ಧಾರಾವಾಹಿಯಲ್ಲಿ ರಂಜಿತ್‌ ನಿರ್ವಹಿಸಿದ್ದ ಸೂರ್ಯದೇವ ಪಾತ್ರ ಸಾಕಷ್ಟು ಜನಪ್ರಿಯತೆ ಪಡೆದಿತ್ತು. ಪಾಸಿಟಿವ್‌, ನೆಗೆಟಿವ್‌ ಪಾತ್ರಗಳಲ್ಲಿ ಮಿಂಚಿದ್ದ ರಂಜಿತ್‌ ಅವರು ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋನಲ್ಲಿ ಭಾಗವಹಿಸಿದ್ದರು.

ಒಂದೇ ದಿನದ ಅಂತರದಲ್ಲಿ 2ನೇ ವಿವಾಹವಾದ ಚೈತ್ರಾ ವಾಸುದೇವನ್‌, ಮಾಜಿ ಪತಿ! ಎಂಥ ಕಾಕತಾಳೀಯ

ದೊಡ್ಮನೆಯಿಂದ ಬೇಗ ಔಟ್‌ ಆದರು! 
ಬಿಗ್‌ ಬಾಸ್‌ ಮನೆಯಲ್ಲಿ ಲಾಯರ್‌ ಜಗದೀಶ್‌ ಜೊತೆ ನಡೆದ ಜಗಳದಲ್ಲಿ ರಂಜಿತ್‌ ಅವರು ಕೈ ಮಾಡಿದ್ದಾರೆ. ಇದಕ್ಕಾಗಿ ಅವರನ್ನು ಮನೆಯಿಂದ ಹೊರಗಡೆ ಕಳಿಸಲಾಗಿತ್ತು. ದೊಡ್ಮನೆಯಲ್ಲಿ ಆಟ ಆಡಿ, ಜನಪ್ರಿಯತೆ ಪಡೆಯಬೇಕು ಎಂದು ಆಸೆ ಇಟ್ಟುಕೊಂಡಿದ್ದ ರಂಜಿತ್‌ ಹೊರಗಡೆ ಬಂದಿದ್ದರು. ಅವರಿಗಂತೂ ತೀವ್ರ ನಿರಾಸೆ ಆಗಿತ್ತು. ದೊಡ್ಮನೆಯಲ್ಲಿ ತ್ರಿವಿಕ್ರಮ್‌ ಹಾಗೂ ರಂಜಿತ್‌ ಸ್ನೇಹಿತರಾಗಿದ್ದರು. ರಂಜಿತ್‌ ಹೊರಗಡೆ ಹೋಗಿದ್ದು ತ್ರಿವಿಕ್ರಮ್‌ ಅವರಿಗೆ ಬಹಳ ನೋವು ಉಂಟು ಮಾಡಿತ್ತು. ನಿಜಕ್ಕೂ ಉಳಿದ ಸ್ಪರ್ಧಿಗಳಿಗೆ ಠಕ್ಕರ್‌ ಕೊಡುತ್ತಿದ್ದ ರಂಜಿತ್‌ ಫಿನಾಲೆವರೆಗೂ ಇರುವ ಚಾನ್ಸ್‌ ಬಹಳ ಇತ್ತು. ಆದರೆ ದುರಾದೃಷ್ಟ ಹೊರಗಡೆ ಬಂದರು. 

ಏರ್‌ಲೈನ್ಸ್‌ನಲ್ಲಿ ಕೆಲಸ! 
ನಟನೆಗೂ ಬರೋದಕ್ಕೂ ಮುನ್ನ ಅವರು ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡಿದ್ದರು. ನಟನೆ ಮೇಲಿನ ಒಲವಿನಿಂದ ಒಳ್ಳೆಯ ಉದ್ಯೋಗ ಬಿಟ್ಟು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಇನ್ನು ಕೆಸಿಸಿ, ಸಿಸಿಎಲ್‌ನಲ್ಲಿಯೂ ಅವರು ಭಾಗವಹಿಸಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ