ರಾಮಚಾರಿ ಧಾರಾವಾಹಿ ಕುತೂಹಲದ ತಿರುವು ಪಡೆದಿದ್ದು, ಗಂಡನಿಗಾಗಿ ಚಾರುಲತಾ ಅಮ್ಮನನ್ನೇ ಎದುರು ಹಾಕಿಕೊಂಡಿದ್ದಾರೆ. ತವರು ಮನೆಗೇ ಎಳ್ಳುನೀರು ಬಿಟ್ಟಿದ್ದಾಳೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ರಾಮಾಚಾರಿ’ (Ramachari) ಧಾರಾವಾಹಿ ಇದೀಗ ರೋಚಕ ಹಂತ ತಲುಪಿದೆ. ಗಂಡ ಚಾರಿಗಾಗಿ ಅಮ್ಮನಿಗೇ ಎಳ್ಳುನೀರು ಬಿಟ್ಟಿದ್ದಾಳೆ ಚಾರುಲತಾ. ಶ್ರೀಮಂತಿಕೆಯ ಅಹಂನಲ್ಲಿ ತನ್ನ ಗಂಡನನ್ನು ಇನ್ಸಲ್ಟ್ ಮಾಡಿದ ಅಮ್ಮನಿಗೇ ತಿರುಗೇಟು ನೀಡಿದ್ದಾಳೆ ಚಾರುಲತಾ. ಹೌದು. ರಾಮಚಾರಿಗೆ ಚಾರುಲತಾ ಅಮ್ಮ ಇನ್ಸಲ್ಟ್ ಮಾಡಿದ್ದಾಳೆ. ಇದನ್ನು ಸಹಿಸದ ಚಾರುಲತಾ, ಅಮ್ಮನಿಗೆ, ನಾಲಿಗೆ ಬಿಗಿಹಿಡಿದು ಮಾತಾಡು, ಅವನು ಬೇರೆ ಯಾರೂ ಅಲ್ಲ, ನನ್ನ ಗಂಡ, ಆತ ನನ್ನ ಸೌಭಾಗ್ಯ, ನನ್ನ ಪಾಲಿನ ದೇವರು ಎನ್ನುವ ಮೂಲಕ ಗಂಡನ ಪರವಾಗಿ ಮಾತನಾಡಿ ಅಮ್ಮನ ವಿರುದ್ಧ ತಿರುಗಿಬಿದ್ದಿದ್ದಾಳೆ. ಮಗಳಲ್ಲಿ ಆಗಿರುವ ಈ ಬದಲಾವಣೆ ನೋಡಿ ತಾಯಿ ಶಾಕ್ ಆಗಿದ್ದಾಳೆ. ಮಧ್ಯ ಮಾತನಾಡಲು ಬಂದ ತಾಯಿಯನ್ನೇ ಬಾಯಿ ಮುಚ್ಚಿಸುತ್ತಾಳೆ ಚಾರುಲತಾ.
'ನೀನು ಒಂದೂ ಮಾತಾಡಬೇಡ, ಅಳಿಯನನ್ನು ದೇವ್ರು ಅಂತಾರೆ, ಪಾದ ತೊಳೆದು ಕನ್ಯಾದಾನ (Kanyadana) ಮಾಡ್ತಾರೆ. ಆದರೆ, ನೀನು ನಿನ್ನ ಅಳಿಯನ ಘನತೆಗೆ ಕುಂದು ತಂದಿದ್ದಿ. ನೀನು ಅಮ್ಮನೇ ಅಲ್ಲ' ಎನ್ನುತ್ತಾಳೆ ಚಾರು. ಅಲ್ಲಾ... ಬೇಬಿ... ಎಂದು ತಾಯಿ ಮಧ್ಯೆ ಮಾತನಾಡಲು ಬಂದಾಗ, ಆಕೆಯನ್ನು ತಡೆವ ಚಾರು, ನನಗೆ ಅವನು ಏನೂ ಅನ್ಯಾಯ ಮಾಡಲಿಲ್ಲ. ಕಾಡಿನಲ್ಲಿದ್ದ ನಿನ್ನ ಮಗಳನ್ನು ಕಾಪಾಡಲು ನಿನಗೆ ರಾಮಾಚಾರಿ ಬೇಕು, ಕುಡಿದು ಬಿದ್ದ ಮಗಳನ್ನು ಎತ್ತಿ ತರಲು ರಾಮಾಚಾರಿ ಬೇಕಿತ್ತು. ಆದರೆ ಈಗ ನಿನಗೆ ಬೇಡ. ನೀನೆಂಥ ಅಮ್ಮ ಎನ್ನುತ್ತಾಳೆ. ನನ್ನ ಗಂಡನಿಗೆ ಇನ್ಸಲ್ಟ್ ಮಾಡಿ ನೀನು ಏನೋ ಸಾಧನೆ ಮಾಡಿದೆ ಅಂದುಕೊಂಡಿರ್ಬೇಕು. ಆದರೆ ನಿಜವಾಗಿಯೂ ನಿನಗೆ ನೀನೇ ಮಾಡ್ಕೊಂಡ ಅವಮಾನ ಇದು. ನನ್ನ ಗಂಡನಿಗೆ ಅವಮಾನ ಮಾಡುವ ಮೂಲಕ ನಿನ್ನ ಲೆವಲ್, ಯೋಗ್ಯತೆ ತೋರಿಸಿಬಿಟ್ಟೆ. ನಿನಗೆ ಐಶ್ವರ್ಯ ಇದೆ ಎನ್ನುವ ದುರಹಂಕಾರ. ನಿನ್ನ ಈ ಐಶ್ವರ್ಯ, ಸಿರಿವಂತಿಕೆ, ಆಸ್ತಿಯಿಂದ ಘನತೆ ಬರೋದಿಲ್ಲ. ಘನತೆ ಬರೇಕು ಎಂದರೆ ಅದು ಸಂಸ್ಕಾರದಿಂದ ಮಾತ್ರ. ಅದರೆ ಅದು ನಿನಗೆ ಇಲ್ಲ ಎನ್ನುವ ಚಾರುಲತಾ, ಅಮ್ಮನ ಮನೆಯ ಅಷ್ಟೈಶ್ವರ್ಯಕ್ಕೆ ಧಿಕ್ಕಾರ ಹೇಳುತ್ತಾಳೆ. ನನ್ನವರಿಗೆ ಹೀಗೆಲ್ಲಾ ಅವಮಾನ ಮಾಡುವ ನಿನ್ನ ಬಳಿ ಕೋಟಿ ಕೋಟಿ ಇದ್ದರೂ ಅದು ನನ್ನ ಕಾಲ ಕಸಕ್ಕೆ ಸಮ. ಭಾವನೆಗಳೇ ಇಲ್ಲದ ನೀನು ಸತ್ತ ಹೆಣಕ್ಕೆ ಸಮ ಎನ್ನುವ ಮೂಲಕ ಅಮ್ಮನಿಗೆ ಮರ್ಮಾಘಾತ ನೀಡುತ್ತಾಳೆ.
ಪತಿ ಫೋನ್ ಚೆಕ್ ಮಾಡಿದ 'ರಾಮಾಚಾರಿ' ವೈಶಾಖ; ವಾಟ್ಸಪ್ ನೋಡಿ ಫುಲ್ ಶಾಕ್, ವಿಡಿಯೋ ವೈರಲ್!
ಕೊನೆಗೆ ಆವೇಷದಲ್ಲಿ ನೀನು ನನ್ನ ತಾಯಿಯೇ ಅಲ್ಲ. ನನ್ನ ಅಮ್ಮ ಈ ಕ್ಷಣಕ್ಕೆ ಸತ್ತು ಹೋದಳು. ಯಾವ ಕ್ಷಣ ನೀನು ನನ್ನ ಗಂಡನಿಗೆ ಅವಮಾನ ಮಾಡಿದೆಯೋ ಆ ಕ್ಷಣಕ್ಕೆ ನಿಮ್ಮ ಸಂಬಂಧಕ್ಕೆ ಎಳ್ಳು ನೀರು ಬಿಟ್ಟಿದ್ದೇನೆ. ನನ್ನ ತವರು ಸತ್ತೋಯ್ತು. ನಾನು ನನ್ನ ಗಂಡ ಈ ಮನೆ ಕಡೆ ತಲೆ ಹಾಕಿ ಮಲಗಲ್ಲ ಎನ್ನುವ ಮೂಲಕ ಅಮ್ಮನ ಬಾಯಿ ಮುಚ್ಚಿಸುತ್ತಾಳೆ. ಈ ಪ್ರೊಮೋಗೆ ಸಹಸ್ರಾರು ಮಂದಿ ಕಮೆಂಟ್ (Comment) ಮಾಡಿದ್ದು, ವ್ಹಾರೆವ್ಹಾ ಎಂದಿದ್ದಾರೆ. ಹೆಂಡತಿ ಎಂದರೆ ಹೀಗಿರಬೇಕು ಎಂದು ಶಹಬ್ಬಾಸ್ಗಿರಿ ಕೊಡುತ್ತಿದ್ದಾರೆ.
ಅಂದಹಾಗೆ, ಸುಸಂಸ್ಕೃತ ಹುಡುಗ ರಾಮಾಚಾರಿ. ಅಹಂಕಾರಿ ಹೆಣ್ಣು ಚಾರುಲತಾ (Charulatha). ಇಬ್ಬರೂ ಮೊದಮೊದಲು ಹಾವು ಮುಂಗುಸಿಯಂತಿದ್ದರು. ಬಳಿಕ ರಾಮಾಚಾರಿ ಮೇಲೆ ಚಾರುಲತಾಗೆ ಪ್ರೀತಿ ಚಿಗುರಿತು. ಚಾರುಲತಾಳ ಪ್ರೀತಿಯನ್ನ ರಾಮಾಚಾರಿ ಒಪ್ಪಿಕೊಳ್ಳುವುದಿಲ್ಲ. ಹೀಗಿರುವಾಗಲೇ, ಚಾರುಲತಾ ಕಣ್ಣಿನ ದೃಷ್ಟಿ ಕಳೆದುಕೊಳ್ಳುತ್ತಾಳೆ. ಆನಂತರ ರಾಮಾಚಾರಿಗೆ ಎಮೋಷನಲ್ ಬ್ಲಾಕ್ ಮೇಲ್ ಮಾಡಿ ಚಾರುಲತಾ ತಾಳಿ ಕಟ್ಟಿಸಿಕೊಳ್ಳುತ್ತಾಳೆ. ಮುಂದಿನ ಕಥೆ ಕುತೂಹಲವಾದದ್ದು.