ವೈರಲ್ ಆಯ್ತು ನಟಿ ಐಶ್ವರ್ಯ ವಿನಯ್ ಯುಟ್ಯೂಬ್ ವಿಡಿಯೋ. ಪತಿ ಫೋನ್‌ನಲ್ಲಿ ಏನೆಲ್ಲಾ ಇದೆ ಎಂದು ರಿವೀಲ್ ಮಾಡಿದ ನಟಿ....
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖ ಪಾತ್ರದಲ್ಲಿ ಮಿಂಚುತ್ತಿರುವ ಐಶ್ವರ್ಯ ವಿನಯ್ ಯುಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಶೂಟಿಂಗ್ ಸೆಟ್, ಟ್ರಿಪ್, ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಬಗ್ಗೆ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇಂಟ್ರೆಸ್ಟಿಂಗ್ ಆಗಿರಲು ಪತಿ ಫೋನ್‌ನಲ್ಲಿ ಏನೆಲ್ಲಾ ಇದೆ ಎಂದು ಚೆಕ್ ಮಾಡಿದ್ದಾರೆ.
'ಹೊಸತನ ಬೇಕು ಎಂದು ಈ ಸಲ Whats in my husband ಫೋನ್ ಮಾಡುತ್ತಿರುವೆ. ಈ ವಿಡಿಯೋ ಮೂಲಕ ತಿಳಿಯುತ್ತದೆ ಯಾರು ಪಾಪ ಯಾರು ಪಾಪಿ ಎಂದು. ಮದ್ವೆ ಆದ್ಮೇಲೆ ಪಾಪಿನೇ ಆಗಿರುವುದು' ಎಂದು ಹೇಳುವ ಮೂಲಕ ಐಶ್ವರ್ಯ ವಿನಯ್ ವಿಡಿಯೋ ಆರಂಭಿಸಿದ್ದಾರೆ. ಮೊದಲು ಪತಿ ಫೋನ್‌ನಲ್ಲಿರುವ ಲಾಕ್‌ವಾಲ್ ಪೇಪರ್ ತೋರಿಸಿದ್ದಾರೆ. ರಾಘವೇಂದ್ರ ಸ್ವಾಮಿ ಫೋಟೋವನ್ನು ಹಾಕಿಕೊಂಡಿದ್ದಾರೆ. ಅಲ್ಲದೆ ನನ್ನ ಗಂಡನ ಫೋನ್ ಲಾಕ್ ಓಪನ್ ಮಾಡಲು ನನ್ನ ಬೆರಳು ಪ್ರಿಂಟ್ ಹಾಕಿಕೊಂಡಿರುವೆ. ವಾಲ್‌ಪೇಪರ್ ಆಗಿ ನನ್ನ ಅವರ ಫೋಟೋ ಹಾಕಿಕೊಂಡಿದ್ದಾರೆ. ಆನಂತರ ಇಷ್ಟು ದಿನಗಳಲ್ಲಿ ಯಾರಿಗೆಲ್ಲಾ ಕರೆ ಮಾಡಿದ್ದಾರೆಂದು ಚೆಕ್ ಮಾಡಿದ ತಕ್ಷಣ ಐಶ್ವರ್ಯ ಶಾಕ್ ಆಗಿದ್ದಾರೆ.ಇವಳು ಯಾಕೆ ಕಾಲ್ ಮಾಡಿದ್ದಾಳೆ ಎಂದು ಕೇಳಿದ್ದಾರೆ ಆದರೆ ವಿನಯ್ ಆಕೆ ಕಾಲ್ ಮಾಡಿರುವುದು ಅಲ್ಲ ನಾನೇ ಕಾಲ್ ಮಾಡಿರುವುದು ಎಂದಿದ್ದಾರೆ' ಎಂದು ಐಶ್ವರ್ಯ ಮಾತನಾಡಿದ್ದಾರೆ.
ಮೂರು ತಿಂಗಳಿನಲ್ಲಿ 45 ಕೆಜಿ ಲಾಸ್; ಅವಕಾಶ ಗಿಟ್ಟಿಸಿಕೊಂಡಿದ್ದು ಹೇಗೆಂದು ಸತ್ಯ ಬಿಚ್ಚಿಟ್ಟ ರಾಮಾಚಾರಿ ರಿತ್ವಿಕ್!
'ನನ್ನ ಪತಿ ಫೋನ್‌ನಲ್ಲಿರುವ ಫೇವರೆಟ್ ನಂಬರ್‌ಗಳಲ್ಲಿ ಯಾರಿದ್ದಾರೆ ಅಂತ ಚೆಕ್ ಮಾಡುವೆ. ನನ್ನ ನಂಬರ್ ಇರಲಿಲ್ಲ ಅಂದ್ರೆ ಪೋನ್ ಪೀಸ್ ಪೀಸ್ ಮಾಡುವೆ. ಪರ್ವಾಗಿಲ್ಲ ಮೊದಲು ಅಪ್ಪ, ಅಮ್ಮ, ಹೆಂಡ್ತಿ ಆಮೇಲೆ ತಂಗಿ ಹೇಗೆ ಹಾಕೊಂಡಿದ್ದಾರೆ. ವಾಟ್ಸಪ್ ಚೆಕ್ ಓಪನ್ ಮಾಡಿದಾಗ ಮೊದಲು ಚಾಟ್‌ನಲ್ಲಿ ಪಿನ್ ಮಾಡಿರುವ ವ್ಯಕ್ತಿ ಹೆಸರು ನೋಡಿ ನನಗೆ ಬೇಸರ ಆಗುತ್ತದೆ ಬೆಲೆನೇ ಇಲ್ಲ ಎಂದಿದ್ದಾರೆ. ಹುಡುಗರು ಗ್ರೂಪ್‌ಗೆ 5 ಐಡಿಟ್ ಅಂತ ಹೆಸರು ಇಟ್ಟಿದ್ದಾರೆ. ಯಾವುದೋ ಫಾರಿನ್ ಹುಡುಗಿ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ' ಎಂದು ಐಶ್ವರ್ಯ ಹೇಳಿದ್ದಾರೆ.
ಲಾಭ ಬರುತ್ತಿರುವುದಕ್ಕೆ ಟಿವಿಯಲ್ಲಿ ಸತ್ಯ ಹರಿಶ್ಚಂದ್ರ, ಶ್ರೀ ಮಂಜುನಾಥ ಸಿನಿಮಾ ಹಾಕುತ್ತಿರುವುದು: ಶಂಕರ್ ಅಶ್ವತ್ಥ್
'ಇತ್ತೀಚಿಗೆ ಡಿಲೀಟ್ ಮಾಡಿರುವ 400 ಫೋಟೋಗಳಿದೆ. ಆದರೆ ಅವೆಲ್ಲಾ ಯುಟ್ಯೂಬ್‌ಗೆ ಕ್ರಿಯೇಟ್ ಮಾಡಿರುವ ವಿಡಿಯೋ ಮತ್ತು ಫೋಟೋಗಳು. ನೆಚ್ಚಿನ ಫೋಟೋ ಎಂದು ಕೇಳಿದಾ ನನ್ನ ಗಂಡ ವಾಲ್‌ಪೇಪರ್ ತೋರಿಸಿದ್ದಾರೆ. ಗೂಗಲ್‌ನಲ್ಲಿ ಏನೆಲ್ಲಾ ಸರ್ಚ್ ಮಾಡಿದ್ದಾರೆ ನೋಡಿದರೆ beauty is in the eye of beholder ಇದೆ, ಇದಾದ ಮೇಲೆ ಟೆಲಿಟಾಬೀಸ್ ಹುಡುಕಿದ್ದಾರೆ. ನನ್ನ ಪತಿಗೆ ಯಾರೆಲ್ಲ ಪರಿಚಯ ಆಗುತ್ತಾರೆ ಅವರ ನಂಬರ್‌ನ ಹಾಗೆ ಸೇವ್ ಮಾಡಿಕೊಳ್ಳುತ್ತಾರೆ ಹೀಗಾಗಿ 2,233 ನಂಬರ್‌ಗಳಿದೆ. ನನ್ನ ನಂಬರ್‌ನ ಮಾತ್ರ ಹೆಂಡ್ತಿ ಎಂದು ಸೇವ್ ಮಾಡಿಕೊಂಡಿದ್ದಾರೆ' ಎಂದಿದ್ದಾರೆ ಐಶ್ವರ್ಯ.