Ramachari Serial: ರಾಮಾಚಾರಿಗೆ ರಾಕಿ ಕಟ್ಟಿದ ರೀಲ್ ಲೈಫ್ ತಂಗಿ, ಗಿಫ್ಟ್ ಕೊಟ್ಟಿದ್ದಕ್ಕೆ ಫುಲ್ ಖುಷ್!

By Roopa Hegde  |  First Published Aug 22, 2024, 12:04 PM IST

ಕಲರ್ಸ್ ಕನ್ನಡದ ರಾಮಾಚಾರಿ ಅಣ್ಣ ತಂಗಿ ರಾಮಾಚಾರಿ ಹಾಗೂ ಶ್ರುತಿ ಎಲ್ಲರಿಗೂ ಗೊತ್ತು. ಅವರು ರಕ್ಷಾ ಬಂಧನವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ರೀಲ್ ಲೈಫ್ ನಲ್ಲಿ ಮಾತ್ರ ಅಣ್ಣತಂಗಿ ಎಂದುಕೊಂಡಿದ್ದ ಅಭಿಮಾನಿಗಳು ವೈರಲ್ ವಿಡಿಯೋ ನೋಡಿ ಅನುಮಾನಗೊಂಡಿದ್ದಾರೆ. 
 


ಕಲರ್ಸ್ ಕನ್ನಡ (Colors Kannada ) ದ ಪ್ರಸಿದ್ಧ ಧಾರಾವಾಹಿ ರಾಮಾಚಾರಿ (Ramachari)ಯ ಅಣ್ಣ ತಂಗಿ ರಾಮಾಚಾರಿ ಮತ್ತು ಶ್ರುತಿ (Shruti), ರಕ್ಷಾ ಬಂಧನ (Raksha Bandhan) ಹಬ್ಬವನ್ನು ಸಡಗರದಿಂದ ಆಚರಿಸಿಕೊಂಡಿದ್ದಾರೆ. ಶ್ರುತಿ ತಮ್ಮ ಅಣ್ಣ ರಾಮಾಚಾರಿಗೆ ರಕ್ಷೆ ನೀಡುವಂತೆ ರಾಖಿಯನ್ನು ಕಟ್ಟಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಶ್ರುತಿ ಹಾಗೂ ರಾಮಾಚಾರಿ ಇಬ್ಬರೂ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ರಾಮಾಚಾರಿ ಧಾರಾವಾಹಿಯಲ್ಲಿ ರಾಮಚಾರಿಯಾಗಿ ರಿತ್ವಿಕ್ ಕೃಪಾಕರ್ ನಟಿಸಿದ್ದಾರೆ. ಇನ್ನು ತಂಗಿ ಶ್ರುತಿ ಪಾತ್ರದಲ್ಲಿ ಶೀಲಾ ಕಾಣಿಸಿಕೊಂಡಿದ್ದಾರೆ. ಧಾರಾವಾಹಿ ವೀಕ್ಷಕರು ಈ ಅಣ್ಣತಂಗಿ ಜೋಡಿಯನ್ನು ಇಷ್ಟಪಟ್ಟಿದ್ದಾರೆ. ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ ಶ್ರುತಿ ಪಾತ್ರಧಾರಿ ಶೀಲಾ, ರಾಮಾಚಾರಿಯಾದ ರಿತ್ವಿಕ್ ಕೃಪಾಕರ್ ಅವರಿಗೆ ರಾಖಿ ಕಟ್ಟಿದ್ದಾರೆ. 

Tap to resize

Latest Videos

viral video : ಫ್ಯಾನ್ಸ್ ಮುಟ್ಟಿದ್ದಕ್ಕೆ ಹೇಮಾ ಮಾಲಿನಿ ಅಸಮಾಧಾನ...ಅಭಿಮಾನಿಗಳು ನೋಡಿದ್ದೆ ಬೇರೆ..

ರಿತ್ವಿಕ್ ಕೃಪಾಕರ್ ಗೆ ತಿಲಕವಿಟ್ಟು, ಶೀಲಾ ರಾಖಿ ಕಟ್ಟಿದ್ದಾರೆ. ನಂತ್ರ ರಿತ್ವಿಕ್ ಕೃಪಾಕರ್ ತಂಗಿ ಶೀಲಾಗೆ ಉಡುಗೊರೆ ನೀಡ್ತಾರೆ. ಶೀಲಾ ಅಣ್ಣನ ಕೆನ್ನೆಗೆ ಮುತ್ತಿಡುತ್ತಾರೆ. ಈ ವಿಡಿಯೋ ಹಂಚಿಕೊಂಡ ಶೀಲಾ, ಜಗದ ಸುಖವೆಲ್ಲ ಇರಲಿ ಈ ಕೈಯಲಿ..ಅಣ್ಣ ಎಂದು ಶೀರ್ಷಿಕೆ ಹಾಕಿದ್ದಾರೆ. ರಿತ್ವಕ್ ಕೃಪಾಕರ್ ಕೂಡ ಈ ಸುಂದರ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಈ ವಿಡಿಯೋ ನೋಡಿದ ಅಭಿಮಾನಿಗಳು, ನೀವು ನಿಜವಾಗ್ಲೂ ಅಣ್ಣ – ತಂಗಿನಾ ಎಂದು ಪ್ರಶ್ನೆ ಮಾಡಿದ್ದಾರೆ. ನಿಮ್ಮನ್ನು ತೆರೆ ಮೇಲೆ ಹಾಗೂ ತೆರೆ ಹಿಂದಿ ನೋಡಲು ನಮಗೆ ಬಹಳ ಖುಷಿ ಎಂದಿದ್ದಾರೆ. ರಿತ್ವಿಕ್ ಕೃಪಾಕರ್ ಹಾಗೂ ಶೀಲಾ, ಸಿರೀಯಲ್ ಅಣ್ಣಾ ತಂಗಿ ತರ ಇಲ್ಲ. ನಿಜವಾದ ಅಣ್ಣ ತಂಗಿಯ ಹಾಗೆ ಇದ್ದಾರೆ. ಹೀಗೆ ಇರಲಿ ನಿಮ್ಮ ಸಂಬಂಧ ಎಂದು ಅಭಿಮಾನಿಗಳು ಹರೆಸಿದ್ದಾರೆ. ಕೆಲ ಅಭಿಮಾನಿಗಳು, ರಾಮಾಚಾರಿಯಂತ ಅಣ್ಣ, ತಮ್ಮ ಬೇಕು ಎಂದು ಕೇಳಿದ್ದಾರೆ. 

ಇದಕ್ಕೂ ಮುನ್ನ ಶೀಲಾ ಮತ್ತು ರಿತ್ವಿಕ್ ಕೃಪಾಕರ್ ಫೋಟೋ ಶೂಟ್ ಮಾಡಿಸಿದ್ದರು. ಇಬ್ಬರು ನೀಲಿ ಬಣ್ಣದ ಬಟ್ಟೆಯಲ್ಲಿ ಮುದ್ದು ಮುದ್ದಾಗಿ ಕಾಣ್ತಿದ್ದರು. ಅಭಿಮಾನಿಗಳು ಆಗ್ಲೂ ಈ ಅಣ್ಣ ತಂಗಿಯನ್ನು ಹರಸಿ ಹಾರೈಸಿದ್ದರು. ಆಫ್ಸ್ಕ್ರೀನ್ ಹಾಗೂ ಆನ್ ಸ್ಕ್ರೀನ್ ಎರಡರಲ್ಲೂ ಈ ಅಣ್ಣ ತಂಗಿ ಹೇಗೆ ಇರ್ತಾರೆ ಅನ್ನೋದನ್ನು ನೋಡುವ ಕುತೂಹಲ ಅಭಿಮಾನಿಗಳಿಗಿದೆ.  ಧಾರಾವಾಹಿಯಲ್ಲಿ ಈ ಜೋಡಿಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

ರಾಧಾ ಭಗವತಿ ನಂತ್ರ ತಂಗಿ ಪಾತ್ರಕ್ಕೆ ಬಂದ ಶೀಲಾ ತಮ್ಮ ನಟನೆ ಹಾಗೂ ಸ್ವಭಾವದಿಂದ ಸೆಟ್ ನಲ್ಲಿ ಎಲ್ಲರ ಪ್ರೀತಿಯನ್ನು ಗಳಿಸಿದ್ದಾರೆ. ಈಗಾಗಲೇ ಅನೇಕ ಧಾರಾವಾಹಿಯಲ್ಲಿ ನಟಿಸಿದ ಅನುಭವ ಶೀಲಾಗಿದೆ. ಅವರು ನಿಮ್ಮ ಆಶಾ, ಗಿಣಿರಾಮ ರಾಧಿಕಾ ಧಾರಾವಾಹಿಯಲ್ಲಿ ನಟಿಸಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಶೀಲಾ ಸಖತ್ ಆಕ್ಟಿವ್ ಆಗಿದ್ದಾರೆ. ಸೀರಿಯಲ್ ಆಕ್ಟರ್ ಜೊತೆ ರೀಲ್ಸ್ ಮಾಡ್ತಾ ಅದನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ತಿರುತ್ತಾರೆ.

ಎಲ್ಲ ಹೆಂಗಸರಂತೆ ಗರ್ಭಿಣಿ ಆಗಿಲ್ವಾ ದೀಪಿಕಾ ಪಡುಕೋಣೆ? ಸೋಷಿಯಲ್​ ಮೀಡಿಯಾದಲ್ಲಿ ಇದೆಂಥ ಚರ್ಚೆ?

ಇನ್ನು ನಮ್ಮ ರಾಮಾಚಾರಿ ಯಾರಿಗೂ ಕಡಿಮೆ ಇಲ್ಲ. ರಾಮಾಚಾರಿ ಸೀರಿಯಲ್ ನಲ್ಲಿ ವೀಕ್ಷಕರು ರಿತ್ವಿಕ್ ಅಭಿನಯಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಮೈಸೂರು ಮೂಲದ ರಿತ್ವಿಕ್ ಬಿಎಸ್ಸಿ ಮುಗಿಸಿ, ಇಂಗ್ಲೀಷ್ ನಲ್ಲಿ ಎಂಎ ಪಡೆದು, ಮಂಡ್ಯ ರಮೇಶ್ ನಾಟಕ ಶಾಲೆಯಲ್ಲಿ ತರಬೇತಿ ಪಡೆದು ನಟನೆಗೆ ಧುಮುಕಿದವರು. ರಾಮಾಚಾರಿ ಮೂಲಕ ಮನೆ ಮಾತಾಗಿರುವ ರಿತ್ವಿಕ್, 128 ಕೆಜಿಯಿದ್ದ ತೂಕವನ್ನು ಇಳಿಸಿ, ಈಗ ಹುಡುಗಿಯರ ಕನಸಿನ ರಾಜಕುಮಾರನಾಗಿದ್ದಾರೆ. ರಿತ್ವಿಕ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದು, ತಮ್ಮ ತಂಡದ ಜೊತೆ, ಚಾರು ಜೊತೆ ವಿಡಿಯೋ, ಫೋಟೋ ಪೋಸ್ಟ್ ಮಾಡ್ತಿರುತ್ತಾರೆ. ಅನುಬಂಧ ಅವಾರ್ಡ್ ನಲ್ಲಿ ಈ ಸೀರಿಯಲ್ ಎಷ್ಟು ಪ್ರಶಸ್ತಿ ಗೆಲ್ಲುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದ್ದು, ಬೆಸ್ಟ್ ಜೋಡಿ, ಬೆಸ್ಟ್ ಅಣ್ಣ – ತಂಗಿ ಗ್ಯಾರಂಟಿ ಎನ್ನುತ್ತಿದ್ದಾರೆ.

click me!