ʼರಾಮಾಚಾರಿʼ ಧಾರಾವಾಹಿಯಲ್ಲಿ ನೀರಿಗೆ ಬೀಳುವ ದೃಶ್ಯವನ್ನು ಹೇಗೆ ಸೆರೆ ಹಿಡಿಯಲಾಗಿದೆ? ಇದರ ಹಿಂದಿನ ಗಿಮಿಕ್ ಏನು ಎಂಬುದು ಕ್ಯಾಮರಾ ಹಿಂದೆ ಸೆರೆಯಾಗಿದೆ.
ಧಾರಾವಾಹಿ, ಸಿನಿಮಾಗಳಲ್ಲಿ ಬಾವಿಗೆ ಬೀಳುವ ದೃಶ್ಯ ಸರ್ವೇಸಾಮಾನ್ಯ. ಎಲ್ಲರಿಗೂ ಈಜು ಬರೋದಿಲ್ಲ, ಇನ್ನೂ ಕೆಲ ಬಾವಿಗಳು ಆಳವಾಗಿದ್ದಾಗ ಬಚಾವ್ ಆಗೋದು ತುಂಬ ಕಷ್ಟ. ಇದಕ್ಕಾಗಿ ತೆರೆ ಹಿಂದೆ ಯಾವ ರೀತಿಯ ಕಸರತ್ತು ನಡೆದಿರುತ್ತದೆ ಎನ್ನೋದನ್ನು ʼರಾಮಾಚಾರಿʼ ಧಾರಾವಾಹಿಯಲ್ಲಿ ನೋಡಬಹುದು.
ವೈಶಾಖ ಕುತಂತ್ರದ ಹಿಂದೆ ದೊಡ್ಡ ಶ್ರಮ!
ʼರಾಮಾಚಾರಿʼ ಧಾರಾವಾಹಿಯಲ್ಲಿ ವೈಶಾಖ ಬರೀ ಕುತಂತ್ರ ಮಾಡ್ತಾಳೆ, ಚಾರು-ರಾಮಾಚಾರಿ ಕುಟುಂಬಕ್ಕೆ ಒಂದಲ್ಲ ಒಂದು ರೀತಿ ತೊಂದರೆ ಕೊಡ್ತಾ ಇರ್ತಾಳೆ. ವೀಕ್ಷಕರಂತೂ ಇವಳ ಕುತಂತ್ರ ನೋಡಿ ನಿತ್ಯವೂ ಶಾಪ ಹಾಕ್ತಾರೆ. ವೈಶಾಖ ಬಾವಿಗೆ ಬೀಳೋದು, ಸಗಣಿ ಹಚ್ಚಿಕೊಳ್ಳೋದು, ಮಣ್ಣಿನಲ್ಲಿ ಹುದುಗಿ ಕೂತಿರುವ ದೃಶ್ಯಗಳು ಪ್ರಸಾರ ಆಗಿವೆ. ಇವುಗಳ ಹಿಂದೆ ದೊಡ್ಡ ಶ್ರಮ ಕೂಡ ಇದೆ.
ರಾಮಾಚಾರಿ ವೈಶಾಖಳನ್ನು ಮಣ್ಣಲ್ಲಿ ಮುಚ್ಚಿದ್ದು ಹೇಗೆ, ರಿವೀಲ್ ಆಯ್ತು ಧಾರಾವಾಹಿ ಮೇಕಿಂಗ್ ರಹಸ್ಯ!
ನೀರಿನಲ್ಲಿ ಬೀಳುವ ದೃಶ್ಯ ಹೇಗೆ ಶೂಟ್ ಮಾಡ್ತಾರೆ?
ಇತ್ತೀಚೆಗೆ ವೈಶಾಖ ಬಾವಿಗೆ ಬೀಳುವ ದೃಶ್ಯವನ್ನು ಪ್ರಸಾರ ಮಾಡಲಾಗಿತ್ತು. ಇದನ್ನು ಯಾವ ರೀತಿಯಲ್ಲಿ ಶೂಟ್ ಮಾಡಲಾಗಿದೆ ಎಂದು ರಾಜ್‌ಜೀ ಟಾಕೀಸ್ ಸೋಶಿಯಲ್ ಮೀಡಿಯಾದಲ್ಲಿ ಸೆರೆ ಹಿಡಿದಿದೆ. ಈಜು ಬರದ ಸಾಮಾನ್ಯ ಜನರು ನೀರಿಗೆ ಬಿದ್ದಾಗ ಎಷ್ಟು ಹೊತ್ತು ಉಸಿರಾಡಬಹುದು? ನೀವೇ ಹೇಳಿ. ಹೀಗಾಗಿ ಶೂಟಿಂಗ್‌ನಲ್ಲಿ ಕ್ರೇನ್ ತರಿಸಿ, ಅಲ್ಲಿ ವೈಶಾಖರನ್ನು ಹ್ಯಾಂಗ್ ಮಾಡಲಾಗುತ್ತದೆ. ಕ್ರೇನ್ ಸಹಾಯದಿಂದ ವೈಶಾಖ ನೀರಿನ ಆಳಕ್ಕೆ ಹೋಗೋದೇ ಇಲ್ಲ. ಇನ್ನು ಉಳಿದ ಕ್ಯಾಮರಾ ತಂತ್ರಜ್ಞರು ಕೂಡ ಕ್ರೇನ್ ಸಹಾಯದಿಂದ ನೀರಿನಲ್ಲಿ ಮುಳುಗೋದಿಲ್ಲ.
ಮಣ್ಣಿನಲ್ಲಿ ಹೂತಿದ್ದು ಹೇಗೆ?
ವೈಶಾಖ ನಿಂತುಕೊಳ್ಳಬಹುದಾದ ಒಂದು ಗುಂಡಿಯನ್ನು ಅಗೆಯುತ್ತಾರೆ. ಅದರಲ್ಲಿ ಸ್ಟೂಲ್ ಹಾಕಿ ವೈಶಾಖಳನ್ನು ಕೂರಿಸಲಾಗುತ್ತದೆ. ಆಮೇಲೆ ವಿಶಾಖ ಸುತ್ತ ದಪ್ಪನೆಯ ಹಲಗೆಗಳನ್ನು ಇಡಲಾಗುತ್ತದೆ. ವೈಶಾಖ ದೇಹದ ಆಕೃತಿಗೆ ತಕ್ಕಂತೆ ಆ ಹಲಗೆಗಳನ್ನು ಕತ್ತರಿಸಿ ಮುಚ್ಚಲಾಗುತ್ತದೆ. ಆ ಹಲಗೆಗಳ ಮೇಲೆ ಮಣ್ಣು ಹಾಕುತ್ತಾರೆ, ಆದರೆ ವೈಶಾಖ ಮೇಲೆ ಮಣ್ಣು ಬೀಳೋದಿಲ್ಲ. ಈ ಮಣ್ಣನ್ನು ಬಹಳ ತೆಳುವಾಗಿ ಹಾಕಲಾಗುತ್ತದೆ. ನೋಡುವವರಿಗೆ ಮಾತ್ರ ವೈಶಾಖಳನ್ನು ಮಣ್ಣಿನಲ್ಲಿ ಹೂತಿಟ್ಟರು ಎನ್ನುವಂತೆ ತೋರಿಸಲಾಗುತ್ತದೆ.
ಅಮೃತಧಾರೆಯಿಂದ ಮಲ್ಲಿ ಔಟ್- ಕಾರಣ ಕೊಟ್ಟ ನಟಿ: ಇನ್ಮುಂದೆ ಅಕ್ಕವ್ರೇ ಅಕ್ಕವ್ರೇ ಅನ್ನೋರು ಯಾರು?
ಶೂಟಿಂಗ್‌ನಲ್ಲಿ ಗಿಮಿಕ್!
ಎಷ್ಟೋ ದೃಶ್ಯಗಳನ್ನು ಈ ರೀತಿ ಗಿಮಿಕ್ ಮಾಡಿ ಸೆರೆ ಹಿಡಿಯಲಾಗುವುದು. ಆದರೆ ಈ ರಿಯಾಲಿಟಿ ಎಲ್ಲವೂ ವೀಕ್ಷಕರಿಗೆ ಗೊತ್ತೇ ಇರೋದಿಲ್ಲ. ಓರ್ವ ಹೀರೋ, ಹೀರೋಯಿನ್ ತೆರೆ ಮೇಲೆ ಒಳ್ಳೆಯ ಜೋಡಿ ಅಂತ ಅನಿಸಿದರೆ ಅವರು ತೆರೆ ಹಿಂದೆಯೂ ಹಾಗೆ ಇರಲಿ ಎಂದು ಬಯಸುವ ಮುಗ್ಧ ವೀಕ್ಷಕರು ನಮ್ಮಲ್ಲಿದ್ದಾರೆ.
ವೀಕ್ಷಕರಿಗೆ ಮನರಂಜಿಸಲು ಧಾರಾವಾಹಿ, ಸಿನಿಮಾ ಟೀಂ ಸಿಕ್ಕಾಪಟ್ಟೆ ಕಷ್ಟಪಡಬಹುದು. ಒಮ್ಮೊಮ್ಮೆ ಐದು ನಿಮಿಷಗಳ ದೃಶ್ಯವನ್ನು ದಿನಗಟ್ಟಲೇ ಶೂಟ್ ಮಾಡುವ ಪ್ರಸಂಗ ಕೂಡ ಬರಬಹುದು. ಒಟ್ಟಿನಲ್ಲಿ ಹಗಲು-ರಾತ್ರಿ ಶೂಟಿಂಗ್ ಮಾಡಲಾಗುತ್ತದೆ. ಅಂದಹಾಗೆ ʼರಾಮಾಚಾರಿʼ ಧಾರಾವಾಹಿಗೆ ಒಳ್ಳೆಯ ಮೆಚ್ಚುಗೆ ಸಿಗ್ತಿದೆ. ವೈಶಾಖ ಪಾತ್ರದಲ್ಲಿ ನಟಿ ಐಶ್ವರ್ಯಾ ಸಾಲೀಮಠ ಅವರು ನಟಿಸುತ್ತಿದ್ದಾರೆ. ಕೆ ಎಸ್ ರಾಮ್‌ಜೀ ನಿರ್ದೇಶನ, ನಿರ್ಮಾಣದಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದೆ.