ಸೀರಿಯಲ್‌ಗಾಗಿ ತಲೆ ಬೋಳಿಸಿದ ಚಾರು; ಜನರು ಬಾಯಿಗೆ ಬಂದಂತೆ ಬೈದ ಘಟನೆ ಬಿಚ್ಚಿಟ್ಟ ಮೌನ ಗುಡ್ಡೆಮನೆ

Published : Jan 08, 2025, 11:58 AM IST
ಸೀರಿಯಲ್‌ಗಾಗಿ ತಲೆ ಬೋಳಿಸಿದ ಚಾರು; ಜನರು ಬಾಯಿಗೆ ಬಂದಂತೆ ಬೈದ ಘಟನೆ ಬಿಚ್ಚಿಟ್ಟ ಮೌನ ಗುಡ್ಡೆಮನೆ

ಸಾರಾಂಶ

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಪಾತ್ರಧಾರಿ ಮೌನ ಗುಡ್ಡೆಮನೆ ತಲೆ ಬೋಳಿಸಿಕೊಂಡ ದೃಶ್ಯ ವೈರಲ್ ಆಗಿದೆ. ಪ್ರೀತಿಗಾಗಿ ಬದಲಾದ ಚಾರು, ವೈಶಾಖಾಳ ಒಳಸಂಚಿಗೆ ಬಲಿಯಾಗಿದ್ದಾಳೆ. ಈ ದೃಶ್ಯಕ್ಕಾಗಿ ಮೌನ ನಿಜವಾಗಿಯೂ ತಲೆ ಬೋಳಿಸಿಕೊಂಡಿಲ್ಲ, ಆದರೆ ವೀಕ್ಷಕರು ನಿಜವೆಂದು ಭಾವಿಸಿ ಕಣ್ಣೀರಿಟ್ಟಿದ್ದಾರೆ. ಮೌನ ಈ ಪಾತ್ರವನ್ನು ಸವಾಲಾಗಿ ಸ್ವೀಕರಿಸಿ, ನಿರ್ವಹಿಸಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರಧಾರಿಯಾಗಿ ಚಾರು ಉರ್ಫ್ ಮೌನ ಗುಡ್ಡೆಮನೆ ಮಿಂಚುತ್ತಿದ್ದಾರೆ. ಸಿರಿವಂತ ಕುಟುಂಬದಿಂದ ಬಂದಿರುವ ಚಾರು ಪ್ರೀತಿಗಾಗಿ ಬದಲಾಗುವುದನ್ನು ಕಂಡು ವೀಕ್ಷಕರು ಫಿದಾ ಆಗಿದ್ದರು. ಆದರೆ ಈಗ ವೈಶಾಖಾ ಮಾಡುತ್ತಿರುವ ಮಾಸ್ಟರ್ ಪ್ಲಾನ್‌ಗಳಿಗೆ ಬಿದ್ದು ತಮ್ಮ ತಲೆ ಬೋಳಿಸಿಕೊಂಡ ಪ್ರಸಂಗ ಸಖತ್ ವೈರಲ್ ಆಗಿದೆ. ಅಲ್ಲದೆ ಈ ನಿರ್ಧಾರ ನಿಜ ಜೀವನದಲ್ಲಿ ತೆಗೆದುಕೊಂಡಿರುವುದು ಎಂದು ವೀಕ್ಷಕರು ಕೂಡ ಕಣ್ಣೀರಿಟ್ಟಿದ್ದಾರಂತೆ. 

'ಆರಂಭದಲ್ಲಿ ಚಾರು ಪಾತ್ರವನ್ನು ಜನರು ಇಷ್ಟ ಪಡುತ್ತಿರಲಿಲ್ಲ, ಏನಿದು ತುಂಡು ತುಂಡು ಬಟ್ಟೆ ಹಾಕುತ್ತಾಳೆ ಎಂದು ಕಾಮೆಂಟ್ ಮಾಡುತ್ತಿದ್ದರು. ಮೊದಲ ಸಲ ನಾಯಕಿಯನ್ನು ವಿಲನ್ ರೀತಿ ತೋರಿಸಿದ್ದು, ಆಕೆ ತಾಯಿ ಜೊತೆ ಸೇರಿಕೊಂಡು ಆ ರೀತಿ ವರ್ತಿಸುತ್ತಿರುತ್ತಾಳೆ ಆನಂತರ ಪ್ರೀತಿಗಾಗಿ ಬದಲಾಗುತ್ತಾಳೆ. ಇತ್ತೀಚಿಗೆ ಗುಂಡು ಹೊಡೆಸಿಕೊಂಡಿದ್ದ ಬಗ್ಗೆ ತುಂಬಾ ಮಾತುಗಳು ಬಂತು, ಸ್ಕ್ರೀನ್ ಪ್ಲೇ ಹೇಳಿದಾಗ ನನಗೆ ಭಯ ಆಯ್ತು ಏಕೆಂದರೆ ನನ್ನ ಕೈಯಲ್ಲಿ ಒಂದು ಸಿನಿಮಾ ಇತ್ತು. ಮೇಕಪ್ ಮೂಲಕವೇ ತಲೆ ಬೋಳಿಸುವುದು ಎಂದು. ಈ ರೀತಿ ಪಾತ್ರ ಮಾಡಿರುವುದಕ್ಕೆ ನನಗೆ ಖುಷಿ ಇದೆ ಏಕೆಂದರೆ ಸಿನಿಮಾದಲ್ಲೂ ಈ ಅವಕಾಶ ಅನೇಕರಿಗೆ ಸಿಗುವುದಿಲ್ಲ. ಕಿರುತೆರೆಯಲ್ಲಿ ಮೊದಲ ಸಲ ನಟಿಗೆ ಗ್ಲಾಮರ್‌ ಬಿಟ್ಟು ಈ ರೀತಿ ತೋರಿಸಿರುವುದು. ಗಟ್ಟಿ ಮನಸ್ಸು ಮಾಡಿಕೊಂಡು ಇಷ್ಟ ಪಟ್ಟು ಪಾತ್ರವನ್ನು ಒಪ್ಪಿಕೊಂಡೆ ಏಕೆಂದರೆ ಬೇರೆ ಬೇರೆ ಪಾತ್ರಗಳನ್ನು ಪ್ರಯೋಗ ಮಾಡಲು ನನಗೆ ಇಷ್ಟ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಮೌನ ಗುಡ್ಡೆಮನೆ ಮಾತನಾಡಿದ್ದಾರೆ.

ಗೋವಾ ಕಸಿನೋದಲ್ಲಿ ಒಂದುವರೆ ಲಕ್ಷ ಕಳೆದುಕೊಂಡ ಸೋನು ಶ್ರೀನಿವಾಸ್ ಗೌಡ; ಈ ಟ್ರಿಕ್‌ ಮಾಡಿದ್ರೆ ನಿಮ್ದು ಕೂಡ ಬೀದಿ ಪಾಡು

'ಉದ್ದ ಕೂದಲನ್ನು ಕಟ್ ಮಾಡಿಸಲು ಹೇಳಿದ್ದರು ಇಲ್ಲವಾದರೆ ಫಿಕ್ಸ್ ಮಾಡಲು ಕಷ್ಟವಾಗುತ್ತದೆ ಎಂದು. ಸೀರಿಯಲ್‌ ಜರ್ನಿಯನ್ನು ನಾನು ಎಂಜಾಯ್ ಮಾಡುತ್ತೀನಿ. ಸಿನಿಮಾದಲ್ಲಿ ಒಂದೆರಡು ಗಂಟೆಗಳ ಕಾಲ ವಿಗ್ ಫಿಕ್ಸ್ ಮಾಡಿಕೊಳ್ಳುತ್ತಾರೆ ಆದರೆ ಸೀರಿಯಲ್‌ನಲ್ಲಿ ನಾನು ಬೆಳಗ್ಗೆಯಿಂದ ಸಂಜೆವರೆಗೂ ಧರಿಸಿದ್ದೀನಿ. ಮೇಕಪ್ ಆರ್ಟಿಸ್ಟ್‌ ಕೂಡ ಶಾಕ್ ಆಗಿಬಿಟ್ಟರು. ಹೊಸ ಹೊಸ ಪ್ರಯೋಗಳನ್ನು ಮಾಡಲು ಇಷ್ಟ ಪಡುತ್ತೀನಿ. ತಲೆ ಬೋಳಿಸಿಕೊಂಡಿದ್ದು ನಿಜ ಎಂದು ಜನರು ನಂಬಿದ್ದರು ಅಲ್ಲದೆ ಆ ಸೀನ್ ನೋಡಿ ಕಣ್ಣೀರಿಟ್ಟಿದ್ದಾರೆ. ಜನರು ತುಂಬಾ ಖುಷಿಯಿಂದ ನನ್ನ ಜೊತೆ ಮಾತನಾಡುತ್ತಾರೆ' ಎಂದು ಚಾರು ಹೇಳಿದ್ದಾರೆ. 

ಮಲ್ಲೇಶ್ವರಂನ ಪ್ರತಿಷ್ಠಿತ ದೇವಸ್ಥಾನದಲ್ಲಿ ಚಿನ್ನದ ಸರ ಕಳೆದುಕೊಂಡ ವರುಣ್ ಆರಾಧ್ಯ; ವಿಡಿಯೋ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ವೃಷಭ' ಸಿನಿಮಾ ರಿಲೀಸ್;‌ ಕಣ್ಣು ಕಳೆದುಕೊಳ್ಳೋ ಸ್ಥಿತಿ ಬಂದಿದ್ರೂ, ಬೆಲೆ ಇಲ್ಲ ಎಂದ Bigg Boss ರಘು
BBK 12 ಫಿನಾಲೆಗೆ ಕೆಲವೇ ದಿನಗಳು ಬಾಕಿ; ವೀಕ್ಷಕರ ಇಚ್ಛೆಯಂತೆ ಟಾಪ್‌ 3 ರಲ್ಲಿ ಗೆಲ್ಲೋರು ಯಾರು?