ದುಷ್ಯಂತನ ಬಾಯಲ್ಲಿ ಬೆಳ್ಳುಳ್ಳಿ ಕಬಾಬ್; ನನ್ನಮ್ಮ ಸೂಪರ್‌ಸ್ಟಾರ್‌ನಲ್ಲಿ ವಿರಾಟ್ ಕೊಹ್ಲಿ!

By Shriram Bhat  |  First Published Feb 19, 2024, 3:08 PM IST

ಮೊದಲಿಗೆ ದುಷ್ಯಂತ ತಾನು ತುಂಬಾ ಹಸಿವಿನಲ್ಲಿರುವುದಾಗಿ ಹೇಳುತ್ತಾನೆ. ಡ್ಯಾನ್ಸ್‌ ತಂಡ ಬಾಳೆಹಣ್ಣು ಕೊಟ್ಟಾಗ ಬಿಸಾಕ್ತಾನೆ. ಲಾಲಿಪಪ್‌ ಕೊಟ್ಟಾಗ ಚಿಕನ್‌ ಲಾಲಿಪಪ್‌ ಬೇಕು ಅನ್ತಾನೆ. ಲಾಲಿಪಪ್‌ ಮಾಡಲು ಕೋಳಿಬೇಕು ಎನ್ನುತ್ತಾನೆ.


ವಾರಾಂತ್ಯದಲ್ಲಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ, ಸೃಜನ್‌ ಲೋಕೇಶ್‌ ನಡೆಸಿಕೊಡುವ 'ನನ್ನಮ್ಮ ಸೂಪರ್‌ಸ್ಟಾರ್‌' ರಿಯಾಲಿಟಿ ಶೋ ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ. ಭಾನುವಾರದ ಸಂಚಿಕೆಯಲ್ಲಿ ತಾಯಿ ಚೈತ್ರಾ ಮತ್ತು ಮಗ ದುಷ್ಯಂತನ ಪರ್ಫಾಮೆನ್ಸ್‌ ನೋಡಿ ಜನರು ಬಿದ್ದು ಬಿದ್ದು ನಕ್ಕಿದ್ದಾರೆ. ನನ್ನಮ್ಮ ಸೂಪರ್‌ ಸ್ಟಾರ್‌ ಸೀಸನ್‌ 3ರಲ್ಲಿ ದುಷ್ಯಂತನನ್ನು ಸಂಚಿಕೆ ಶುರುವಿನಿಂದಲೇ ಕೋಳಿಪ್ರಿಯ ಎಂಬಂತೆ ಬಿಂಬಿಸಲಾಗುತ್ತಿದೆ. 

ಅಷ್ಟು ಸಾಲದು ಎಂಬಂತೆ ನೃತ್ಯ ಮತ್ತು ಟಾಸ್ಕ್‌ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಲಾಗುತ್ತಿದೆ.  ನನ್ನಮ್ಮ ಸೂಪರ್‌ಸ್ಟಾರ್‌ ಸೀಸನ್‌ 3ಯಲ್ಲಿ ಸುಷ್ಮಾ ರಾವ್‌ ನಿರೂಪಕಿಯಾಗಿದ್ದಾರೆ. ತಾರಾ ಮತ್ತು ಅನುಪ್ರಭಾಕರ್‌ ಜಡ್ಜ್‌ ಆಗಿದ್ದಾರೆ. ಭಾನುವಾರದ ನನ್ನಮ್ಮ ಸೂಪರ್‌ಸ್ಟಾರ್‌ ಸಂಚಿಕೆಯಲ್ಲಿ ಬೆಳ್ಳುಳ್ಳಿ ಕಬಾಬ್‌,  ವಿರಾಟ್‌ ಕೊಹ್ಲಿ ಮುಂತಾದ ಪದಗಳೂ ಬಂದಿದ್ದು, ತೀವ್ರ ಕುತೂಹಲ ಕೆರಳಿಸಿದೆ. 

Tap to resize

Latest Videos

ಈ ವೇಳೆ ರುಚಿಕರ ಚಿಕನ್‌ ಫುಡ್‌ಗಳೂ ಪಕ್ಕದ ಟೇಬಲ್ ಮೇಲಿದ್ದು, ನಾನ್‌ವೆಜ್‌ ಪ್ರಿಯರ ಬಾಯಲ್ಲಿ ನೀರೂರಿಸಿದೆ. ಮೊದಲಿಗೆ ಮಗ ದುಷ್ಯಂತ ಹಾಗು ಅಮ್ಮ ಚೈತ್ರಾರನ್ನು ಒಳಗೊಂಡ ಡ್ಯಾನ್ಸ್‌ ತಂಡದಿಂದ ಡ್ಯಾನ್ಸ್‌ ಇತ್ತು. ಅಮ್ಮ ಕೋಳಿಯ ವೇಷ ಧರಿಸಿ ಡ್ಯಾನ್ಸ್‌ ಮಾಡಿದ್ದಾರೆ. ಚಿಕನ್‌ ಪ್ರಿಯ ದುಷ್ಯಂತ ಈ ಕೋಳಿಯ ವಿವಿಧ ರೆಸಿಪಿ ನೆನಪಿಸಿದ್ದಾನೆ. ಬೆಳ್ಳುಳ್ಳಿ ಕಬಾಬ್‌ ಹೆಸರನ್ನು ಹೇಳುತ್ತಾನೆ.

ಮೊದಲಿಗೆ ದುಷ್ಯಂತ ತಾನು ತುಂಬಾ ಹಸಿವಿನಲ್ಲಿರುವುದಾಗಿ ಹೇಳುತ್ತಾನೆ. ಡ್ಯಾನ್ಸ್‌ ತಂಡ ಬಾಳೆಹಣ್ಣು ಕೊಟ್ಟಾಗ ಬಿಸಾಕ್ತಾನೆ. ಲಾಲಿಪಪ್‌ ಕೊಟ್ಟಾಗ ಚಿಕನ್‌ ಲಾಲಿಪಪ್‌ ಬೇಕು ಅನ್ತಾನೆ. ಲಾಲಿಪಪ್‌ ಮಾಡಲು ಕೋಳಿಬೇಕು ಎನ್ನುತ್ತಾನೆ. ಅಮ್ಮ ಚೈತ್ರಾ ಕೋಳಿ ವೇಷದಲ್ಲಿ ಬರುತ್ತಾರೆ. ಕೊಕ್ಕೊ ಕೋಳಿಯೇ ಹಾಡಿಗೆ ಡ್ಯಾನ್ಸ್‌ ಮಾಡುತ್ತಾರೆ. 

ಸಂಚಿಕೆಯಲ್ಲಿ ಬಳಿಕ 'ನಾಟಿಕೋಳಿ..' ಹಾಡು ಬರುತ್ತದೆ. ಬಾರೇ ನಾಟಿಕೋಳಿಯೇ ಹಾಡಿಗೆ ತಂಡದವರು ಡ್ಯಾನ್ಸ್‌ ಮಾಡುತ್ತಾರೆ. ನಂತರ, 'ನಾನಿದನ್ನು ಕಚ್ಚಿಕಚ್ಚಿ ತಿನ್ಲಾ..' ಎಂದು ದುಷ್ಯಂತ ಕೇಳುತ್ತಾನೆ. 'ಕಚ್ಚಿಕಚ್ಚಿ ತಿನ್ಲಾ..' ಹಾಡು ಬರುತ್ತದೆ. ಕೋಳಿ ಓಡುವಾಗ 'ಬಿಡಬಿಡಬೇಡ..' ಎಂಬ ಉಪೇಂದ್ರರ ಹಾಡು ಬರುತ್ತದೆ.  ಈ ಕೋಳಿ ಹಿಡಿಯಲು ಈಗ ಮತ್ತೊಂದು ಕೋಳಿ ಬೇಕು ಎಂದು ವಿರಾಟ್‌ ಕೊಹ್ಲಿಯ ಫೋಟೋ ಹಿಡಿದುಕೊಂಡಾಗ ಕೋಳಿ ಹಿಂದಕ್ಕೆ ಬರುತ್ತದೆ.  

ರಾಮಾಚಾರಿಗೆ ಜೈಲೂಟ ಫಿಕ್ಸ್ ಆಗೋಯ್ತಾ; ಚಾರು ತಲೆಗೆ ಬ್ರಿಲಿಯಂಟ್ ಐಡಿಯಾ ಬರ್ತಿಲ್ಲ ಯಾಕೆ?

ನಂತರ, ಕರುನಾಡ ಕೋಟ್ಯಾಧಿಪತಿಯನ್ನು ನೆನಪಿಸುವಂತೆ ಕನ್ನಡದ ಖಾನಾಧಿಪತಿ ಕ್ವಿಜ್‌ ಶೋ ನಡೆಯುತ್ತದೆ. ಈತನ ಮುಂದೆ ಐದು ಪ್ಲೇಟ್‌ ಇಟ್ಟು ಇವು ಏನಿರಬಹುದು ಎಂದು ಕೇಳುತ್ತ ಒಂದೊಂದು ಕಬಾಬ್‌, ಚಿಕನ್‌ ಫ್ರೈ, ಚಿಕನ್‌ ಗ್ರಿಲ್‌ ಇತ್ಯಾದಿಗಳನ್ನು ತೋರಿಸಲಾಗುತ್ತದೆ. ಇಂಗ್ಲಿಷ್‌ನಲ್ಲಿ ತುಂಬಾ ಚಿಲ್ಡ್‌ ಆಗಿರುವ ಅಕ್ಷರ ಯಾವುದು? ಎಂಬ ಪ್ರಶ್ನೆಗೆ ಉತ್ತರಿಸಲು ದುಷ್ಯಂತನಿಗೆ ಸಾಧ್ಯವಾಗುವುದಿಲ್ಲ. ಬಳಿಕ ಬಿ ಎನ್ನುವುದು ಸರಿಯುತ್ತರ, ಏಕೆಂದರೆ ಬಿ ಎನ್ನುವುದು ಎಸಿ ನಡುವೆ ಇದೆ ಎಂಬ ತಮಾಷೆಯ ಉತ್ತರ ನೀಡಲಾಗುತ್ತದೆ.

ಅಂಬರೀಷ್‌ಗಾಗಿ ಮನೆಯಲ್ಲಿ ಬಾರ್ ಓಪನ್ ಮಾಡಿದ್ರು ವಿಷ್ಣುವರ್ಧನ್; ದಿಗ್ಗಜರ ದರ್ಬಾರ್ ಹೇಗಿತ್ತು ನೋಡ್ರಿ!

ಸೋಮವಾರದಿಂದ ಭಾನುವಾರದವರೆಗೆ ಏಳು ದಿನ? ಭಾನುವಾರದಿಂದ ಸೋಮವಾರವಾಗಲು ಎಷ್ಟು ದಿನ ಇದೆ? ಎಂದು ಚಿಕನ್‌ ಲಾಲಿಪಪ್‌ ಪ್ರಶ್ನೆ ಕೇಳಲಾಗುತ್ತದೆ. ಇದಕ್ಕೆ ಸರಿಯುತ್ತರ ನೀಡುತ್ತಾನೆ ದುಷ್ಯಂತ್‌. ಇದಾದ ನಂತರ, ನಿನ್ನಮ್ಮನಿಗೆ ಅಪ್ಪ ಯಾವುದರಿಂದ ಹೊಡೆಯುತ್ತಾರೆ, ಹಾಗೆ ಹೀಗೆ ಎಂದು ಪ್ರಶ್ನೆ ಕೇಳಲಾಗುತ್ತಿದೆ. ಕೊನೆಯಲ್ಲಿ ದುಷ್ಯಂತನಿಗೆ ಭರ್ಜರಿ ಬಾಡೂಟ  ದೊರಕುತ್ತದೆ. ದುಷ್ಯಂತ ಮಾತ್ರವಲ್ಲದೆ ಇತರೆ ಹಲವು ಸ್ಪರ್ಧಿಗಳೂ  ಸಹ ವೀಕ್ಷಕರ ಗಮನ ಸೆಳೆದಿದ್ದಾರೆ. 

ನಾನು ಯಾವ್ದೇ ವಿಷ್ಯದಲ್ಲಿ ಚೀಟ್ ಮಾಡಲ್ಲ; ರಾಕಿಂಗ್ ಸ್ಟಾರ್ ಯಶ್ ಹೀಗೆ ಹೇಳಿದ್ಯಾಕೆ?

click me!