ಸೀತಾರಾಮ ಸೀರಿಯಲ್ನಲ್ಲಿ ಅರಿವಿಗೆ ಬಾರದೇ ರಾಮ್ ಸೀತೆಯ ಕುತ್ತಿಗೆಗೆ ಕರಿಮಣಿ ಕಟ್ಟಿದ್ದಾನೆ. ಸೀತಾರಾಮ ಕಲ್ಯಾಣ ನಡೆದಿದೆ. ಮುಂದೇನಾಗುತ್ತೆ?
ಮದುವೆ ಎನ್ನುವುದು ಸ್ವರ್ಗದಲ್ಲಿಯೇ ನಡೆಯುತ್ತದೆ ಎನ್ನುವ ಮಾತಿದೆ. ಯಾರಿಗೆ ಯಾರು ಎಂಬುದನ್ನು ಮೊದಲೇ ಹಣೆಯಲ್ಲಿ ಬರೆದು ಕಳುಹಿಸಲಾಗಿರುತ್ತದೆ ಎನ್ನಲಾಗುತ್ತದೆ. ಇದೀಗ ಇದೇ ಮಾತಿಗೆ ಉದಾಹರಣೆಯಾಗಿ ನಿಂತಿದೆ ಸೀತಾರಾಮ ಸೀರಿಯಲ್. ಸಿಂಗಲ್ ಪೇರೆಂಟ್ ಆಗಿರುವ ಸೀತಾಗೆ ಮಗಳೇ ಸ್ವರ್ಗ. ಇನ್ನೊಂದು ಮದುವೆಯ ಬಗ್ಗೆ ಅರೆ ಕ್ಷಣ ಚಿಂತೆ ಮಾಡದ ಸೀತಾಳ ಬಾಳಲ್ಲಿ ಈಗ ಮದುವೆಯೆಂಬ ಬಿರುಗಾಳಿಯೇ ಬಂದು ಬಿಟ್ಟಿದೆ. ಅದೇ ಇನ್ನೊಂದೆಡೆ ಭಗ್ನಪ್ರೇಮಿಯಾಗಿರುವ ರಾಮ, ಸೀತಾಳ ಪ್ರೀತಿಯ ಬಲೆಗೆ ಸಿಲುಕಿದ್ದಾನೆ. ಇದರ ಕಿಂಚಿತ್ ಅರಿವು ಸೀತಾಗೆ ಇಲ್ಲ. ಇನ್ನು ಸೀತಾಳ ಮಗಳು ಸಿಹಿಗೋ ರಾಮ್ ಎಂದರೆ ಪಂಚಪ್ರಾಣ. ಆದರೆ ತನ್ನ ಪ್ರೀತಿಯನ್ನು ಸೀತಾಳಿಗೆ ಹೇಳದಷ್ಟು ಅಸಹಾಯಕನಾಗಿದ್ದಾನೆ ರಾಮ್. ಒಲ್ಲದ ಮನಸ್ಸಿನಿಂದ ವಕೀಲ ರುದ್ರಪ್ರತಾಪ್ ಜತೆಗೆ ಮದುವೆಯಾಗುವಂತೆ ರಾಮ್ ಒತ್ತಾಯಿಸಿದ್ದಾನೆ. ಮದುವೆ ಆಗುವುದೇ ಇಲ್ಲ ಎಂದು ಹಠ ಹಿಡಿದಿದ್ದ ಸೀತಾ ಇದೀಗ ರಾಮ್ನ ಒತ್ತಾಸೆಗೆ ಮಣಿದು ರುದ್ರಪ್ರತಾಪ್ ಜೊತೆ ಮದುವೆಗೆ ಒಪ್ಪಿದ್ದಾಳೆ. ರಾಮ ಮತ್ತು ಶಾಂತಮ್ಮಜ್ಜಿ ತಾತನ ಒತ್ತಾಯಕ್ಕೆ ಮಣಿದು ಮನಸ್ಸಿಲ್ಲದ ಮನಸ್ಸಿನಿಂದ ಮದುವೆಗೆ ಒಪ್ಪಿಕೊಂಡಿದ್ದಾಳೆ.
ಅದೇ ಇನ್ನೊಂದೆಡೆ ಸೀತಾಳನ್ನು ಗಾಢವಾಗಿ ಪ್ರೀತಿಸುತ್ತಿರುವ ರಾಮ್, ಪ್ರೀತಿಯನ್ನು ತ್ಯಾಗ ಮಾಡಿ ಮದುವೆಗೆ ಮುಂದೆ ನಿಂತು ಎಲ್ಲಾ ಸಿದ್ಧತೆ ಮಾಡುತ್ತಿದ್ದಾನೆ. ಅರೆ ಇದೇನಾಗೋಯ್ತು, ಸೀತಾ-ರಾಮ ಬೇರೆ ಬೇರೆಯಾಗಿ ಬಿಡ್ತಾರಾ? ರುದ್ರಪ್ರತಾಪ್ ಜೊತೆ ಸೀತಾಳ ಮದ್ವೆ ಆಗಿಬಿಟ್ಟರೆ ಮುಂದೇನಪ್ಪಾ ಎಂದು ಫ್ಯಾನ್ಸ್ ನೊಂದುಕೊಂಡು ಹೀಗೆ ಮಾಡಬೇಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ಸ್ಗಳ ಸುರಿಮಳೆಯನ್ನೇ ಹಾಕಿದ್ದರು. ಮದುವೆಗೆ ಇನ್ನೂ ಕೆಲ ದಿನಗಳು ಬಾಕಿ ಇರುವಾಗಲೇ ಸೀರಿಯಲ್ಗೆ ಭಾರಿ ಟ್ವಿಸ್ಟ್ ಬಂದಿದೆ. ತನಗೆ ಅರಿವಿಲ್ಲದೆಯೇ ಸೀತಾಳ ಕೊರಳಿಗೆ ರಾಮ್ ಮಂಗಳಸೂತ್ರ ಕಟ್ಟಿದ್ದಾನೆ! ಇದನ್ನು ನೋಡಿ ಸಿಹಿ ಖುಷಿಯಿಂದ ಕೇಕೇ ಹಾಕಿದ್ದಾಳೆ...
undefined
ರಾಮ್ಗೆ ಹುಟ್ಟುಹಬ್ಬದ ಸಂಭ್ರಮ: ವಿಶೇಷ ವಿಡಿಯೋ ರಿಲೀಸ್- ಸೀತಾರಾಮ ನಾಯಕನ ರಿಯಲ್ ಸ್ಟೋರಿ ಇಲ್ಲಿದೆ
ಜೀ ವಾಹಿನಿ ಇದರ ಪ್ರೊಮೊ ರಿಲೀಸ್ ಮಾಡಿದೆ. ಮದುವೆಯ ಸಿದ್ಧತೆಯಲ್ಲಿರುವ ಸೀತಾ ರಾಮ್ನನ್ನು ಕರೆದುಕೊಂಡು ಮಂಗಳಸೂತ್ರ ಖರೀದಿಗೆ ಹೋಗಿದ್ದಾಳೆ. ಅಲ್ಲಿ ಮಂಗಳಸೂತ್ರ ಧರಿಸಿ ನೋಡುವಾಗ ಅವಳ ಕೂದಲಿಗೆ ಅದು ಸಿಕ್ಕಿಬಿದ್ದಿದೆ. ಅರಿವಿಲ್ಲದೆಯೇ ರಾಮ್ ಆಕೆಯ ಕೂದಲು ಸರಿಸಿ ಮಂಗಳಸೂತ್ರವನ್ನು ಸರಿ ಮಾಡಿದ್ದಾನೆ. ಅಲ್ಲಿಗೆ ಮಂಗಳಸೂತ್ರ ಕಟ್ಟಿದಂತೆ ಆಗಿದೆ. ಇದನ್ನು ಖುಷಿಯಿಂದ ನೋಡುತ್ತಿದ್ದ ಸಿಹಿ ಸೀತಮ್ಮಾ ಮತ್ತು ರಾಮ್ಗೆ ಮದ್ವೆ ಆಗೋಯ್ತು ಎಂದು ಜೋರಾಗಿ ಕೂಗಿದ್ದಾಳೆ. ಸೀತಾಳ ಜೊತೆ ಅಂಗಡಿಗೆ ಬಂದಿದ್ದ ಅಪ್ಪ-ಅಮ್ಮನೂ ಕಂಗಾಲಾಗಿದ್ದಾರೆ. ಜೊತೆಗೆ ಸೀತಾ ಮತ್ತು ರಾಮ ಬೆಚ್ಚಿಬಿದ್ದಿದ್ದಾರೆ. ಮದ್ವೆ ಆಗೋಯ್ತು ಎಂದು ಸಿಹಿ ಹೇಳಿದಾಗಲೇ ತಾನು ಏನು ಮಾಡಿದ್ದು ಎಂದು ರಾಮ್ಗೆ ಅರಿವಾಗಿದೆ. ಮುಂದೇನಾಗುತ್ತೆ ಎನ್ನುವುದು ಸದ್ಯಕ್ಕಿರುವ ಕುತೂಹಲ.
ಈ ಪ್ರೊಮೋಗೆ ಥಹರೇವಾರಿ ಕಮೆಂಟ್ಗಳು ಬಂದಿವೆ. ಸೀತಾರಾಮರ ಕಲ್ಯಾಣ ಆಗಿರುವುದಕ್ಕೆ ಫ್ಯಾನ್ಸ್ ತುಂಬಾ ಖುಷಿ ಪಟ್ಟುಕೊಂಡಿದ್ದರೆ, ಇನ್ನು ಕೆಲವರು ಅದು ಮಂಗಳಸೂತ್ರ ಎನ್ನುವುದು ಪುಟಾಣಿ ಸಿಹಿಗೆ ಗೊತ್ತಾಯ್ತು, ಸೀತಾ ಮತ್ತು ರಾಮರಿಗೆ ಗೊತ್ತಾಗದೇ ಇರುವುದು ವಿಚಿತ್ರ ಎನಿಸುತ್ತಿದೆ ಎಂದಿದ್ದಾರೆ. ಎಷ್ಟೆಂದರೂ ಇದು ಸೀರಿಯಲ್. ಅದನ್ನು ಸೀರಿಯಲ್ ಆಗಿ ಮಾತ್ರ ನೋಡಿ ಎಂದು ಇದಕ್ಕೆ ಇನ್ನು ಕೆಲವರು ರಿಪ್ಲೈ ಮಾಡಿದ್ದಾರೆ. ಇನ್ನು ಹಲವರು ರಾಮ ಸೀತಾಳ ಕುತ್ತಿಗೆಗೆ ಕರಿಮಣಿ ಕಟ್ಟಿದ್ದನ್ನು ನೋಡಿ ತುಂಬಾ ಖುಷಿಯಾಯಿತು, ಸಮಾಧಾನವಾಯ್ತು ಎನ್ನುತ್ತಿದ್ದಾರೆ. ಈಗ ಮುಂದೇನು ಎನ್ನುವ ಕುತೂಹಲ ಎಲ್ಲರದ್ದೂ.
ಸೀತಾರಾಮ ಸೀರಿಯಲ್ ಸೆಟ್ ಹೇಗಿದೆ? ಶೂಟಿಂಗ್ ಹೇಗೆ ಮಾಡ್ತಾರೆ? ವಿಡಿಯೋ ಮೂಲಕ ವೈಷ್ಣವಿ ಮಾಹಿತಿ