
'ಹೀಗೆ ಅಂತ ಗೊತ್ತಿದ್ದರೆ ನಾನು ಬಿಗ್ ಬಾಸ್ ಶೋಗೆ ಹೋಗುತ್ತಲೇ ಇರಲಿಲ್ಲ' ಅಂದಿದ್ದಾರೆ ಕಳೆದ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿರುವ ರಕ್ಷಕ್ ಬುಲೆಟ್. ಹಾಗಿದ್ದರೆ , ರಕ್ಷಕ್ ಯಾಕೆ ಹಾಗೆ ಅಂದಿದ್ದು? ಖಾಸಗಿ ಯೂ ಟ್ಯೂಬ್ ಚಾನೆಲ್ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ರಕ್ಷಕ್, 'ಅಲ್ಲಿ 24 ಗಂಟೆಯಲ್ಲಿ ಆಗಿರುವುದರಲ್ಲಿ ಕೆಲವೇ ಕೆಲವು ಸೆಲೆಕ್ಟೆಡ್ ವಿಸ್ಯುವಲ್ಸ್‌ಗಳನ್ನು ಮಾತ್ರ ವೀಕ್ಷಕರಿಗೆ ತೋರಿಸುತ್ತಾರೆ. ನಾವು ಅಲ್ಲಿ 24 ಗಂಟೆಯಲ್ಲಿ ಎಷ್ಟೊಂದು ಮಾತನಾಡಿರುತ್ತೇವೆ, ಎಷ್ಟೋ ಡಾನ್ಸ್ ಮಾಡಿರುತ್ತೇವೆ. ಆದರೆ, ಜನರಿಗೆ ತೋರಿಸುವುದು ಸ್ವಲ್ಪ ಮಾತ್ರ.
ಬಿಗ್ ಬಾಸ್ ಮನೆಯಲ್ಲಿ ಜೀವನ ಹೊರಗಡೆ ಅಂಸುಕೊಂಡಷ್ಟು ಸುಲಭ ಅಲ್ಲ. ನಮ್ಮ ನಮ್ಮ ಮನೆಗಳಲ್ಲಿ ಇಷ್ಟಪಟ್ಟಿದ್ದು ಸಿಗುವಂತೆ ಅಲ್ಲಿ ಬೇಕಾಗಿದ್ದು ತಕ್ಷಣಕ್ಕೆ ಸಿಗುವುದಿಲ್ಲ. ಪ್ರತಿಯೊಂದಕ್ಕೂ ಕಷ್ಟಪಡಬೇಕು. ಅಲ್ಲಿ ಹೋದಮೇಲೆಯೇ ನನಗೆ ಅನ್ನದ ಬೆಲೆ ತಿಳಿದಿದ್ದು. ನನ್ನ ಮನೆಯಲ್ಲಿ ನಾನು ಮಾತನಾಡುವುದು ಕಡಿಮೆಯೇ. ಆದರೆ, ಬಿಗ್ ಬಾಸ್ ಮನೆಯಲ್ಲಿ ಬಹಳಷ್ಟು ಮಾತನಾಡಿದ್ದೇನೆ. ಮನೆಯಲ್ಲಿ ಇದ್ದಂತೆ ನಾನು ಇರಲಿಲ್ಲ, ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಚೆನ್ನಾಗಿಯೇ ಆಟ ಆಡಿದ್ದೇನೆ. ಆದರೆ, ಯಾಕೆ ಹೊರಕ್ಕೆ ಕಳುಹಿಸಿದರೋ ಗೊತ್ತಾಗುತ್ತಿಲ್ಲ' ಎಂದಿದ್ದಾರೆ ರಕ್ಷಕ್ ಬುಲೆಟ್.
ಈ ರಾಮಚಾರಿಗೆ ದೇವಸ್ಥಾನದಲ್ಲಿ 'ಹಗ್' ಮಾಡಬಾರದು ಅಂತ ಗೊತ್ತಿಲ್ವಾ, ನೆಟ್ಟಿಗರ ಕಾಮೆಂಟ್ ವೈರಲ್!
ಬಿಗ್ ಬಾಸ್‌ಗೆ ಹೋದ ಮೇಲೆ ನಾನು ಯಾವ ವಾರವೂ ಎಲಿಮಿನೇಟ್ ಆಗಿರಲಿಲ್ಲ. ಆದರೆ ನಾಲ್ಕನೇ ವಾರ ಅದ್ಯಾಕೆ ನಾಮಿನೇಟ್ ಆಗಿ ತಕ್ಷಣಕ್ಕೆ ಎಲಿಮಿನೇಟ್ ಮಾಡಿದರೋ ಗೊತ್ತಿಲ್ಲ. ವೋಟಿಂಗ್ ಪೋಲ್ ಬಗ್ಗೆ ನನಗೆ ಗೊತ್ತಿಲ್ಲ, ನಾನು ಅದನ್ನು ನೋಡಿಲ್ಲ. ಆದರೆ, ನಾನು ಕೇವಲ ನಾಲ್ಕೇ ವಾರಕ್ಕೆ ಹೊರಕ್ಕೆ ಬರುತ್ತೇನೆ ಎಂದು ಅಂದುಕೊಂಡೇ ಇರಲಿಲ್ಲ. ಹೊರಕ್ಕೆ ಬಂದ ಮೇಲೆ, ಅಲ್ಲಿಯ ಪ್ರಪಂಚ ತುಂಬಾ ಚಿಕ್ಕದು, ಹೊರಗಡೆ ಪ್ರಪಂಚ ತುಂಬಾ ದೊಡ್ಡದು ಎನಿಸುತ್ತಿದೆ. ನಾನು ಹೊರಕ್ಕೆ ಬಂದಿರುವುದು ಬೇಸರದ ಜತೆಜತೆಗೆ ಖುಷಿ ಕೂಡ ತರಿಸಿದೆ' ಎಂದಿದ್ದಾರೆ ರಕ್ಷಕ್ ಬುಲೆಟ್.
ಚೇತರಿಕೆ ಸಹ ತುಂಬಾ ಮುಖ್ಯ; ರಶ್ಮಿಕಾಗೆ ಹುಷಾರಿಲ್ವಾ, Defake ಎಫೆಕ್ಟ್ ಆ..?
ಒಟ್ಟಿನಲ್ಲಿ, ನನಗೆ ಬಿಗ್ ಬಾಸ್ ಜರ್ನಿ ಒಂದು ಒಳ್ಳೇ ಅನುಭವ. ನನ್ನ ಅಪ್ಪ ಕೂಡ ಬಿಗ್ ಬಾಸ್ ಸ್ಪರ್ಧಿ ಆಗಿ ಬಂದವರು. ನಾನೂ ಕೂಡ ಅದೇ ಸೋಫಾದಲ್ಲಿ ಕುಳಿತು ಬಂದಿದ್ದೀನಿ ಎಂಬ ಖುಷಿ ಇದೆ. ನಾನು ಜಾಸ್ತಿ ಸೋಷಿಯಲ್ ಮೀಡಿಯಾಗಳಲ್ಲಿ ಇರುತ್ತೇನೆ. ಹೊರಕ್ಕೆ ಬಂದ ಮೇಲೆ ಹಲವು ವಿಷಯಗಳು ಗೊತ್ತಾಗಿವೆ. ಮೈಂಡ್ ಗೇಮ್ ಆಡುವುದರಲ್ಲಿ ಡ್ರೋನ್ ಪ್ರತಾಪ್ ನಿಸ್ಸೀಮ, ಉಳಿದಂತೆ ವಿನಯ್ ಸ್ಟ್ರಾಂಗ್ ಸ್ಪರ್ಧಿ. ಆದರೆ, ಈ ಬಾರಿ ಹುಡುಗಿಯರಲ್ಲಿ ಯಾರಾದರೂ ಗೆದ್ದರೆ ಒಳ್ಳೆಯದು ಎನಿಸುತ್ತದೆ ನನಗೆ' ಎಂದಿದ್ದಾರೆ ರಕ್ಷಕ್ ಬುಲೆಟ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.