ಸ್ವತಃ ಆ ಮಂತ್ರ ಹೇಳಿ ತಾಳಿ ಕಟ್ಟಿಸಿಕೊಂಡ ಚೈತ್ರಾ ಕುಂದಾಪುರ; ಅಣ್ಣನ ಶಾಸ್ತ್ರ ಮಾಡಿದ ರಜತ್!‌ ವಾವ್...ಎಂಥ ಗಳಿಗೆ..!

Published : May 09, 2025, 12:30 PM ISTUpdated : May 09, 2025, 12:35 PM IST
ಸ್ವತಃ ಆ ಮಂತ್ರ ಹೇಳಿ ತಾಳಿ ಕಟ್ಟಿಸಿಕೊಂಡ ಚೈತ್ರಾ ಕುಂದಾಪುರ; ಅಣ್ಣನ ಶಾಸ್ತ್ರ ಮಾಡಿದ ರಜತ್!‌ ವಾವ್...ಎಂಥ ಗಳಿಗೆ..!

ಸಾರಾಂಶ

೧೨ ವರ್ಷಗಳ ಪ್ರೀತಿಯ ಬಳಿಕ ಬಿಗ್‌ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಶ್ರೀಕಾಂತ್ ಕಶ್ಯಪ್‌ರನ್ನು ವರಿಸಿದ್ದಾರೆ. ಕುಂದಾಪುರದಲ್ಲಿ ನಡೆದ ಸಾಂಪ್ರದಾಯಿಕ ವಿವಾಹದಲ್ಲಿ ಮಂತ್ರ ಪಠಿಸುತ್ತಾ ತಾಳಿ ಕಟ್ಟಿಸಿಕೊಂಡ ಚೈತ್ರಾ ಭಾವುಕರಾದರು. ಬಿಗ್‌ಬಾಸ್‌ನಲ್ಲಿ ರಜತ್‌ ಅಣ್ಣನ ಶಾಸ್ತ್ರ ಮಾಡಿ ಉಡುಗೊರೆ ನೀಡಿದರು. ದೈವಭಕ್ತರಾದ ಶ್ರೀಕಾಂತ್ ಹವ್ಯಾಸಿ ಖಗೋಳಶಾಸ್ತ್ರಜ್ಞರು.

ಬಿಗ್‌ ಬಾಸ್‌ ಚೈತ್ರಾ ಕುಂದಾಪುರ ಅವರು 12 ವರ್ಷಗಳ ಕಾಲ ಪ್ರೀತಿಸಿದ ಹುಡುಗನನ್ನು, ಕುಟುಂಬದ ಸಾಕ್ಷಿಯಾಗಿ ಮದುವೆಯಾಗಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿದ್ದಾಗ ಪ್ರೀತಿ ಗುಟ್ಟು ಬಿಟ್ಟುಕೊಟ್ಟರೂ ಕೂಡ ಅವರು ಮದುವೆ ದಿನದವರೆಗೂ ಮೌನವಾಗಿಯೇ ಇದ್ದರು. ಈಗ ಅವರು ಎಲ್ಲರ ಸಮ್ಮುಖದಲ್ಲಿ ತಾಳಿ ಕಟ್ಟಿಸಿಕೊಂಡಿದ್ದಾರೆ.

ಮಂತ್ರ ಹೇಳಿದ ಚೈತ್ರಾ ಕುಂದಾಪುರ!
ಹಿಂದು ಧರ್ಮ, ಶಾಸ್ತ್ರ ಸಂಪ್ರದಾಯಗಳನ್ನು ನಂಬುವ ಚೈತ್ರಾ ಕುಂದಾಪುರ ಅವರು ಶ್ರೀಕಾಂಕತ್‌ ಕಶ್ಯಪ್‌ ಮಡದಿಯಾಗಿದ್ದಾರೆ. ಕಾಲೇಜು ದಿನಗಳಿಂದಲೂ ಈ ಜೋಡಿ ಪ್ರೀತಿ ಮಾಡುತ್ತಲಿತ್ತು. ಇನ್ನು ತಾಳಿ ಕಟ್ಟುವ ಸಮಯದಲ್ಲಿ ಚೈತ್ರಾ ಕುಂದಾಪುರ ಅವರು ʼಯಾ ದೇವಿ ಸರ್ವ ಭೂತೇಷು ಮಂತ್ರ ಶ್ಲೋಕಗಳು
ಯಾ ದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ । ನಮಸ್ತಸ್ಯ ನಮಸ್ತಸ್ಯ ನಮಸ್ತಸ್ಯೋ ನಮಃ” ಎಂದು ದೇವಿಯನ್ನು ಪ್ರಾರ್ಥನೆ ಮಾಡಿ ತಾಳಿ ಕಟ್ಟಿಸಿಕೊಂಡ ಹಾಗಿದೆ. ಇನ್ನೊಂದು ಕಡೆ “ಸರ್ವಮಂಗಳ ಮಾಂಗಲ್ಯೇ ಶಿವೇ! ಸರ್ವಾರ್ಥ ಸಾಧಿಕೇ ಶರಣ್ಯೇ ತ್ರ್ಯಂಬಕೇ ದೇವಿ! ನಾರಾಯಣಿ! ನಮೋಸ್ತು ತೇ” ಎಂಬ ಮಂತ್ರವನ್ನು ಹೇಳಿದರಾ ಎಂಬ ಸಂದೇಹವೂ ಇದೆ.

ಭಾವುಕರಾದ ಫೈಯರ್‌ ಬ್ರ್ಯಾಂಡ್‌
ಮದುವೆ ಟೈಮ್‌ನಲ್ಲಿ ಬಹುತೇಕ ಹೆಣ್ಣು ಮಕ್ಕಳು ಭಾವುಕರಾಗುತ್ತಾರೆ. ಇನ್ನು ತಾಳಿ ಕಟ್ಟುವ ಸಮಯದಲ್ಲಿ ಮದುವೆ ಆಗ್ತಿದ್ದೀನಿ ಎನ್ನುವ ಖುಷಿ, ಬೇರೆಯವ್ರ ಮನೆಗೆ ಹೋಗ್ತಿದ್ದೀನಿ ಅಂತ ದುಃಖ ಎರಡೂ ಒಮ್ಮೆಲೆ ಬರುವುದು ಸಹಜ. ಚೈತ್ರಾ ಕೂಡ ಸಿಕ್ಕಾಪಟ್ಟೆ ಭಾವುಕರಾಗಿದ್ದು, ಪ್ರೀತಿಸಿದ ಹುಡುಗನತ್ತ ನಾವು ಗೆದ್ದಿದ್ದೇವೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.

ದೇವಿ ಆರಾಧಕಿ
ಚೈತ್ರಾ ಕುಂದಾಪುರ ಅವರು ದೇವಿಯ ಆರಾಧಕಿ. ಬಿಗ್‌ ಬಾಸ್‌ ಮನೆಯಲ್ಲಿದ್ದಾಗಲೂ ಅವರು ನೆಗೆಟಿವ್‌ ಎನರ್ಜಿ, ಓರಾ ಎಂದು ಒಂದಷ್ಟು ಮಾತು ಹೇಳಿದ್ದರು. ಚೈತ್ರಾ ಅವರು ನಮಗೆ ನಾವೇ ಪೂಜೆ ಮಾಡಿಕೊಳ್ತಿದ್ದಾರೆ ಎಂದು ಈ ವಿಚಾರಕ್ಕೆ ಅವರು ಟ್ರೋಲ್‌ ಆಗಿದ್ದುಂಟು. ಇನ್ನು ಮದುವೆ ವಿಷಯದ ಬಗ್ಗೆ ಕೇಳಿದಾಗ, “ಹುಡುಗನನ್ನು ನೋಡಲಾಗಿದೆ. ಜಾತಕ ಮ್ಯಾಚ್‌ ಆಗಬೇಕು. ದೊಡ್ಡವರು ಕೂಡ ಕೂತು ಮಾತನಾಡಬೇಕು” ಎಂದು ಹೇಳಿದ್ದರು.

ಸೃಜನ್‌ ಲೋಕೇಶ್‌ ಸಾರಥ್ಯದ ʼಮಜಾ ಟಾಕೀಸ್‌ʼ ಶೋನಲ್ಲಿ ಅವರು ಲವ್‌ ಮ್ಯಾರೇಜ್‌ ಎಂದು ವಿಷಯ ಬಿಚ್ಚಿಟ್ಟಿದ್ದರು.

ರಜತ್‌ ಎಂಟ್ರಿ! 
ಅಂದಹಾಗೆ ಬಿಗ್‌ ಬಾಸ್‌ ಮನೆಯಲ್ಲಿ ಅಣ್ಣ-ತಂಗಿ ಎಂದು ಬಾಸ್‌ ಎಂದು ಸಿಕ್ಕಾಪಟ್ಟೆ ಜಗಳ ಆಡಿದ್ದ ರಜತ್‌, ಚೈತ್ರಾ ಕುಂದಾಪುರ ಜುಗಲ್‌ಬಂಧಿ ನೋಡೋದೆ ಚೆಂದ ಆಗಿತ್ತು. ಈಗ ಅವರು ಚೈತ್ರಾ ಮದುವೆಗೆ ಬಂದು ಅಣ್ಣನ ಶಾಸ್ತ್ರವನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ತಂಗಿಗೆ ಉಡುಗೊರೆ ಕೂಡ ನೀಡಿದ್ದಾರೆ. ನಿಜಕ್ಕೂ ಇದು ಬಹಳ ಅಪರೂಪದ ಗಳಿಗೆ ಎನ್ನಬಹುದು.

ಅಂದಹಾಗೆ ಕುಂದಾಪುರದಲ್ಲಿ ಮದುವೆ ಆಗಿದೆ. ಸಾಂಪ್ರದಾಯಿಕವಾಗಿ ಇವರಿಬ್ಬರು ಪ್ರಿ ವೆಡ್ಡಿಂಗ್‌ ವಿಡಿಯೋ ಮಾಡಿಸಿಕೊಂಡಿದ್ದಾರೆ. ಶ್ರೀಕಾಂತ್‌ ಕಶ್ಯಪ್‌ ಅವರು ದೈವಭಕ್ತರು. ಇನ್ನು ಸಾಕಷ್ಟು ಹೋಮ-ಹವನಗಳಲ್ಲಿ ಭಾಗಿಯಾಗಿರುವ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ವಿಡಿಯೋ ಎಡಿಟರ್‌ ಆಗಿದ್ದ ಅವರು ಹವ್ಯಾಸಿ ಖಗೋಳಶಾಸ್ತ್ರಜ್ಞ ಎಂದು ಕೂಡ ಹೇಳಲಾಗಿದೆ. ಶ್ರೀಕಾಂತ್‌ ಬಗ್ಗೆ ಚೈತ್ರಾ ಅವರೇ ಇನ್ನಷ್ಟು ಮಾಹಿತಿ ನೀಡಬೇಕಿದೆ. ಕಿಚ್ಚ ಸುದೀಪ್‌ ಅವರು ಚೈತ್ರಾರ ಗುಣ ನೋಡಿ ದೊಡ್ಮನೆಯ ಫಿನಾಲೆಯಲ್ಲಿ “ಯಾವಾಗಲೂ ದೇವರು ಅಂತ ಹೇಳ್ತೀರಾ. ದೈವಭಕ್ತರನ್ನು ಮದುವೆ ಆಗಿ” ಎಂದು ಹೇಳಿದ್ದರು. ಚೈತ್ರಾ ಲವ್‌ ಬಗ್ಗೆ ಗೊತ್ತಿದ್ದು ಈ ಮಾತು ಹೇಳಿದ್ರೋ ಅಥವಾ ಗೊತ್ತಿಲ್ಲದೆ ಹೇಳಿದ್ರೋ ಗೊತ್ತಿಲ್ಲ. ಆದರೀಗ ಇದು ನಿಜವಾಗಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ