ಶ್ರೇಷ್ಠಾ-ತಾಂಡವ್​ ಮದುವೆಗೆ ಅಡ್ಡಿಯಾದ ಮಳೆ! ಭಾಗ್ಯಳಿಗೆ ಕೊಡೆಯಿಂದ ರಕ್ಷಿಸಿದ ಮದುಮಗಳು- ಇದೆಂಥ ಟ್ವಿಸ್ಟ್​?

Published : Sep 03, 2024, 12:35 PM IST
ಶ್ರೇಷ್ಠಾ-ತಾಂಡವ್​  ಮದುವೆಗೆ ಅಡ್ಡಿಯಾದ ಮಳೆ! ಭಾಗ್ಯಳಿಗೆ ಕೊಡೆಯಿಂದ ರಕ್ಷಿಸಿದ ಮದುಮಗಳು- ಇದೆಂಥ ಟ್ವಿಸ್ಟ್​?

ಸಾರಾಂಶ

ಶ್ರೇಷ್ಠಾ-ತಾಂಡವ್​  ಗುಟ್ಟಾಗಿ ಮದುವೆಯಾಗುತ್ತಿದ್ದರೆ,  ಅವರ ಮದುವೆಗೆ  ಮಳೆ ಅಡ್ಡಿಯಾಗಿಬಿಟ್ಟಿದೆ. ಅಲ್ಲಿಗೆ ಬಂದ  ಭಾಗ್ಯ ಮಳೆಯಲ್ಲಿ ನೆನೆಯಬಾರದು ಎಂದು  ಕೊಡೆ ಹಿಡಿದು ರಕ್ಷಿಸಿದ್ದಾಳೆ ಶ್ರೇಷ್ಠಾ- ಇದೆಂಥ ಟ್ವಿಸ್ಟ್​?   

ಶ್ರೇಷ್ಠಾ ಮತ್ತು ತಾಂಡವ್​ ಮದುವೆಗೆ ಭರ್ಜರಿ ತಯಾರಿ ನಡೆದಿದೆ. ಮದುವೆಯ ದಿನ ರೂಮ್​ನಲ್ಲಿ ಲಾಕ್​ ಆಗಿದ್ದ ತಾಂಡವ್​, ಶ್ರೇಷ್ಠಾ ಎಲ್ಲಿ ವಿಷ ಕುಡಿದು ಸತ್ತೇ ಹೋಗ್ತಾಳೆ ಎಂದುಕೊಂಡು ಹೆದರಿ ಕೊನೆಗೂ ಕೊಠಡಿಯಿಂದ ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾನೆ. ಕುಸುಮಾ ಮತ್ತು ಭಾಗ್ಯ ಅಲ್ಲಿಯೇ ಇದ್ದು, ಇನ್ನೇನು ಅವರ ಕೈಯಿಂದ ತಾಂಡವ್​ ಸಿಕ್ಕಿಬೀಳುವುದು ಒಂದೇ ಬಾಕಿ. ಆದರೆ ಇದರ ನಡುವೆಯೇ ಭಾಗ್ಯ ಎಂದರೆ ಕಿಡಿ ಕಾರುತ್ತಿರುವ ಶ್ರೇಷ್ಠಾ, ಭಾಗ್ಯಳಿಗೆ ಕೊಡೆ ಹಿಡಿದಿದ್ದಾಳೆ. ಹಾಗಿದ್ರೆ ಈ ಮದುವೆಗೆ ಭಾಗ್ಯ ಒಪ್ಪಿಕೊಂಡು ಬಿಟ್ಟಳಾ ಎನ್ನುವ ಅನುಮಾನ ಶುರುವಾಗುತ್ತದೆ.   ಶ್ರೇಷ್ಠಾ ಇಬ್ಬರು ಮಕ್ಕಳ ಅಪ್ಪನನ್ನು ಮದುವೆಯಾಗುತ್ತಿರುವುದು ತಿಳಿದ ಕಾರಣ, ಆ ಮದುವೆಯನ್ನು ನಿಲ್ಲಿಸಲು ಹೋಗಿದ್ದಾಳೆ ಭಾಗ್ಯ. ಶ್ರೇಷ್ಠಾ ಅತ್ತ ಎಲ್ಲರನ್ನೂ ವಿರೋಧ ಹಾಕಿಕೊಂಡು ಮದ್ವೆಗೆ ರೆಡಿಯಾಗಿ ಕೂತಿದ್ದಾಳೆ.   ಭಾಗ್ಯಳ ಮೇಲೆ ಸೇಡು ತೀರಿಸಿಕೊಳ್ಳಲು ಕುದಿಯುತ್ತಿರೋ ಶ್ರೇಷ್ಠಾ ಶ್ರೇಷ್ಠಾ ಅಕ್ಷರಶಃ ನಾಗವಲ್ಲಿಯಾಗಿದ್ದಾಳೆ. ಏನಾದರೂ ಮಾಡಿ ಭಾಗ್ಯಳಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾಳೆ. ಇಂಥ ಸಂದರ್ಭದಲ್ಲಿ ಕೊಡೆ ಹಿಡಿಯೋದಾ?

ಅಷ್ಟಕ್ಕೂ ಇದು ಶೂಟಿಂಗ್​ ಮೇಕಿಂಗ್​ ವಿಡಿಯೋ. ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್​ ಅವರು  ಇದನ್ನು ಶೇರ್​ ಮಾಡಿಕೊಂಡಿದ್ದಾರೆ. ಶ್ರೇಷ್ಠಾ ಮತ್ತು ತಾಂಡವ್​ ಮದುವೆಯ ಶೂಟಿಂಗ್​ ಮಾಡುತ್ತಿರುವ ಸಂದರ್ಭದಲ್ಲಿ,  ಮಳೆ ಬಂದಿದೆ. ಇದರಿಂದ ಶೂಟಿಂಗ್​ ಕ್ಯಾನ್ಸಲ್​ ಮಾಡಬೇಕಾಗಿ ಬಂದಿದೆ. ಇಂಥ ಕಷ್ಟಕರ ಘಟನೆಗಳನ್ನು ಶೂಟಿಂಗ್​ ಸೆಟ್​ನಲ್ಲಿ ಕಲಾವಿದರ ಮತ್ತು ತಂತ್ರಜ್ಞರು ಅನುಭವಿಸಬೇಕಾಗುತ್ತದೆ. ದಿಢೀರ್​ ಮಳೆ ಬಂದು ಬಿಟ್ಟರೆ ಹೆಚ್ಚಿನ ಸಂದರ್ಭಗಳಲ್ಲಿ ನಷ್ಟವೂ ಆಗುವುದು ಇದೆ. ಅದನ್ನೇ ಸುಷ್ಮಾ ಅವರು ಹೇಳಿಕೊಂಡಿದ್ದಾರೆ. ಸುಷ್ಮಾ ಇದರ ಬಗ್ಗೆ ಶೂಟಿಂಗ್​ ಮಾಡುತ್ತಿದ್ದರೆ, ಮಳೆಯಲ್ಲಿ ಅವರು ನೆನೆಯಬಾರದು ಎನ್ನುವ ಕಾರಣಕ್ಕೆ ಶ್ರೇಷ್ಠಾ ಪಾತ್ರಧಾರಿ ಕಾವ್ಯ ಗೌಡ ಕೊಡೆ ಹಿಡಿದಿದ್ದಾರೆ. ಇದಕ್ಕೆ ತಮಾಷೆಯ ಹಲವಾರು ರೀತಿಯ ಕಮೆಂಟ್ಸ್​ ಬಂದಿವೆ. 

ಕಪ್ಪು-ಬಿಳುಪು ಪ್ರೆಗ್ನೆನ್ಸಿ ಫೋಟೋಶೂಟ್​ ಹಿಂದಿರೋ ಸತ್ಯನೇ ಬೇರೆನಾ? ದೀಪಿಕಾಗೆ ಇದೆಂಥ ಅಗ್ನಿ ಪರೀಕ್ಷೆ?

ಶೂಟಿಂಗ್​ ಸಮಯದಲ್ಲಿ ನಟ-ನಟಿಯರು ಎಷ್ಟು ರಿಸ್ಕ್​ ತೆಗೆದುಕೊಳ್ಳುತ್ತಾರೆ ಎಂದು ತೋರಿಸಲು ಸುಷ್ಮಾ ಅವರು ಈ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಅಂದಹಾಗೆ  ಸುಷ್ಮಾ ಅವರ ನಿರೂಪಣಾ ಶೈಲಿ ಟಿ.ವಿ. ವೀಕ್ಷಕರಿಗೆ ಚಿರಪರಿಚಿತ.  ಇವರ ಕುರಿತು ಹೇಳುವುದಾದರೆ, ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ  1997ರಲ್ಲಿ  ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.  


 ಕಾವ್ಯಾ ಗೌಡ ಕುರಿತು ಹೇಳುವುದಾದರೆ, ಇವರು ಐದು ವರ್ಷ ತೆಲುಗು ಧಾರಾವಾಹಿಯಲ್ಲಿ ನಾಯಕಿ  ಪಾತ್ರದಲ್ಲಿ ನಟಿಸಿದ್ದಾರೆ.ಬೆಂಗಳೂರು ಮೂಲದ ಕಾವ್ಯಾ,  ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ವಿಲನ್​ ರೋಲ್​ ಮೂಲಕ ಮನೆ ಮಾತಾಗಿದ್ದಾರೆ.   3 ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ ದೇವಯಾನಿ ಧಾರಾವಾಹಿಯಲ್ಲಿ ನಟಿಸಿದ್ದರು. ವಿಜಯ್ ರಾಘವೇಂದ್ರ ನಟನೆಯ ರಿಂಗ ರಿಂಗ ರೋಸ್ ಎಂಬ ಸಿನಿಮಾಗೂ ಇವರು ನಟಿಸಿದ್ದಾರೆ.  ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯ 'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ಲೀಡ್ ಆಗಿ 100 ಎಪಿಸೋಡ್‌ಲ್ಲಿ ನಟಿಸಿದ್ದರು. ಆಮೇಲೆ ಸೀರಿಯಲ್​ ಬಿಟ್ಟಿದ್ದರು. ಆದರೆ ಈಗ ಭಾಗ್ಯಲಕ್ಷ್ಮಿ ಸೀರಿಯಲ್ ಯಾವ ರೀತಿ ಟರ್ನ್​ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. 

ರೀಲ್​ ಬಿಟ್ಟು ರಿಯಲ್​ನಲ್ಲೂ ಒಟ್ಟಿಗೇ ಕಾಲ ಕಳೆದ ಸೀತಾ-ರಾಮ: ನಿಜ ಜೀವನದಲ್ಲೂ ಒಂದಾಗಿ ಅಂತಿರೋ ಫ್ಯಾನ್ಸ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?