ಸ್ಟಾರ್ ಸುವರ್ಣ ವಾಹಿನಿಯಲ್ಲಿ ಫೆ. 03ರಿಂದ ಹೊಸ ಧಾರಾವಾಹಿ ಜೀವ ಹೂವಾಗಿದೆ ಪ್ರಾರಂಭವಾಗುತ್ತಿದೆ. ಪೂರ್ಣಿಮಾ ಎಂಟರ್‌ಪ್ರೈಸಸ್ ಹಾಗೂ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯಡಿಯಲ್ಲಿ ರಾಘವೇಂದ್ರ ರಾಜ್‌ಕುಮಾರ್ ನಿರ್ಮಿಸುತ್ತಿರುವ ಧಾರಾವಾಹಿ ಇದು.
ಮದನ್ ಹಾಗೂ ಮಧು ಪರಸ್ಪರ ಪ್ರೀತಿಸುತ್ತಿರುತ್ತಾರೆ. ಆದರೆ, ಇವರ ಕುಟುಂಬದಲ್ಲಿ ದಶಕಗಳಿಂದ ಒಬ್ಬರನ್ನೊಬ್ಬರು ಕಡಿ- ಬಡಿ ಎಂಬಷ್ಟರ ಮಟ್ಟಿಗಿನ ದ್ವೇಷ ಮನೆ ಮಾಡಿರುತ್ತದೆ. ಒಮ್ಮೆ ಮದನ್ ತಮ್ಮ ವಿಶಾಲ್‌ಗೆ ಅಣ್ಣನ ಪ್ರೀತಿಯ ವಿಷಯ ತಿಳಿಯುತ್ತದೆ. ವಿಶಾಲ್ ದೊಡ್ಡ ಮಟ್ಟದಲ್ಲಿ ಅಣ್ಣನ ಪ್ರೀತಿಯನ್ನು ವಿರೋಧಿಸುತ್ತಾನೆ. ಅಣ್ಣ ಪ್ರೀತಿಸುತ್ತಿರುವ ಹುಡುಗಿ ಮಧುಗೆ ನೇರವಾಗಿ- ನನ್ನ ಅಣ್ಣನ ತಂಟೆಗೆ ಬರಬೇಡ ಎಂದು ಎಚ್ಚರಿಕೆ ಕೊಡುತ್ತಾನೆ.
ಕಪ್ಪು ಸುಂದರಿ ‘ಮುದ್ದುಲಕ್ಷ್ಮಿ’ ರಿಯಲ್ ಬ್ಯಾಕ್ ಗ್ರೌಂಡ್ ಇದು!
undefined
ಪ್ರೇಮದ ಜ್ಯೋತಿ ಎಂತಹ ಕೆಡುಕನ್ನೂ ನಾಶಮಾಡುತ್ತೆ ಎಂಬ ಮದನ್ ನಂಬಿಕೆ ನಿಜವಾಗುತ್ತೆ. ಇವ್ರ ಪ್ರೀತಿಯ ಸೆಳೆತಕ್ಕೆ ಎರಡೂ ಕುಟುಂಬಗಳ ದ್ವೇಷದ ಕಿಡಿಯೂ ಆರಿ ಹೋಗುತ್ತೆ. ಆದರೆ ವಿಧಿಯ ನಿರ್ಧಾರ ಬೇರೆಯೇ ಆಗಿರುತ್ತೆ. ಮದನ್ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗಿ ಮಧು ಮತ್ತು ವಿಶಾಲ್ ಮದುವೆಯಾಗುವ ಸಂದರ್ಭ ಎದುರಾಗುತ್ತೆ. ಕುಟುಂಬಗಳ ನಡುವಿನ ದ್ವೇಷ ಮತ್ತೊಂದು ರೂಪ ಪಡೆದುಕೊಳ್ಳುತ್ತೆ.
ಸ್ಟಾರ್ ಸುವರ್ಣ ವಾಹಿನಿ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯ ಜೊತೆಯಲ್ಲಿ ನಿರ್ಮಿಸ್ತಾ ಇರೋ ಎರಡನೇ ಧಾರಾವಾಹಿ ಜೀವ ಹೂವಾಗಿದೆ. ಮೊದಲ ಧಾರಾವಾಹಿ ಮರಳಿ ಬಂದಳು ಸೀತೆ ಅದಾಗಲೇ ನೋಡುಗರ ಮನಸ್ಸು ಗೆದ್ದು ಯಶಸ್ಸು ಪಡೆದುಕೊಂಡಿದೆ. ಜೀವಾ ಹೂವಾಗಿದೆ ಧಾರಾವಾಹಿ ತಾಂತ್ರಿಕತೆ ಮತ್ತು ಕಾಸ್ಟಿಂಗ್ ವಿಷಯದಲ್ಲಿ ತುಂಬ ಅದ್ಭುತವೆನಿಸುವ ಹಾಗಿದೆ. ಸಿನಿಮಾ ಮಾದರಿಯಲ್ಲಿ ಈ ಧಾರಾವಾಹಿಯನ್ನು ನಿರ್ಮಿಸಲಾಗಿದೆ. ಇತ್ತೀಚೆಗೆ ನಾವು ಈ ಧಾರಾವಾಹಿಯ ಎರಡು ಸಂಚಿಕೆಗೆಳ ಪ್ರೀಮಿಯರ್ ಶೋ ಏರ್ಪಡಿಸಿದ್ವಿ. ಇದಕ್ಕೆ ನೋಡುಗರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಧಾರಾವಾಹಿಯನ್ನು ಹೀಗೆ ಪ್ರಿಮಿಯರ್ ಶೋ ಮೂಲಕ ತೋರಿಸಿ ನೋಡುಗರ ಅಭಿಪ್ರಾಯ ಪಡೆಯುವ ಸಂಪ್ರದಾಯ ಪ್ರಾರಂಭಿಸಿದ ಹೆಗ್ಗಳಿಕೆ ಸ್ಟಾರ್ ಸುವರ್ಣ ವಾಹಿನಿಯದ್ದು - ಸಾಯಿ ಪ್ರಸಾದ್
ಪ್ರೀತಿಸಿದವರು ದೂರವಾಗ್ತಾರೆ. ದ್ವೇಷಿಸಿದವರು ಮದುವೆಯಾಗ್ತಾರೆ. ಈ ಪಲ್ಲಟಕ್ಕೆ ಏನು ಕಾರಣ? ಮದನ್ ಯಾಕೆ ತನ್ನ ಪ್ರೀತಿಯನ್ನು ತ್ಯಾಗ ಮಾಡ್ತಾನೆ? ಮಧು ಯಾಕೆ ಅಷ್ಟೊಂದು ದ್ವೇಷಿಸುವ ವಿಶಾಲ್‌ನ ಮದುವೆಯಾಗ್ತಾಳೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ- ಜೀವ ಹೂವಾಗಿದೆ.
ಏನಿದು ಅಚ್ಚರಿ! 'ಲಕ್ಷ್ಮೀ ಬಾರಮ್ಮ' ಚಂದನ್‌ಗೆ 'ಗೊಂಬೆ' ಜೊತೆ ಫಸ್ಟ್‌ನೈಟ್!
ತಾಂತ್ರಿಕವರ್ಗ
ಪೂರ್ಣಿಮಾ ಎಂಟರ್‌ಪ್ರೈಸಸ್ ಹಾಗೂ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯಡಿಯಲ್ಲಿ ರಾಘವೇಂದ್ರ ರಾಜ್ ಕುಮಾರ್ ನಿರ್ಮಾಣದ ಧಾರಾವಾಹಿ ಜೀವ ಹೂವಾಗಿದೆ. ಧಾರಾವಾಹಿಯ ಕಾರ್ಯಕಾರಿ ನಿರ್ಮಾಪಕರಾಗಿ ಮಂಗಳಾ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪ್ರಧಾನ ನಿರ್ದೇಶನದ ಜವಾಬ್ದಾರಿಯನ್ನು ಜೆ.ಕೆ. ಸುನೀಲ್ ಕುಮಾರ್ ವಹಿಸಿಕೊಂಡಿದ್ದಾರೆ. ನಿರ್ದೇಶಕರಾಗಿ ಮಾಲತೇಶ್, ಸಂಕಲನಕಾರರಾಗಿ ಗಿರೀಶ್ ಬಾಬು, ಛಾಯಾಗ್ರಾಹಕರಾಗಿ ಮಂಜು ಹಾಗೂ ರವಿ ಕೆಲಸ ಮಾಡುತ್ತಿದ್ದಾರೆ. ಧಾರಾವಾಹಿ ಫೆಬ್ರವರಿ 03ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.