
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್-7 ಕೊನೆಯ ಹಂತ ತಲುಪಿದೆ. ಟಾಪ್ 5 ಫೈನಲಿಸ್ಟ್‌ಗಳಾಗಿ ಶೈನ್ ಶೆಟ್ಟಿ, ಕುರಿ ಪ್ರತಾಪ್, ವಾಸುಕಿ ವೈಭವ್, ದೀಪಿಕಾ ದಾಸ್ ಹಾಗೂ ಭೂಮಿ ಶೆಟ್ಟಿ ತಲುಪಿದ್ದರು.
ಬಿಗ್ ಬಾಸ್ ಮನೆ ಬ್ರೇಕಿಂಗ್: ಸುಂದರಿ ಹೊರಕ್ಕೆ, ಶೈನ್ ಜತೆ ಕೊನೆಘಟ್ಟಕ್ಕೆ ಮತ್ಯಾರು?
ಈ ಐವರಲ್ಲಿ ಮೊದಲು ಎಲಿಮಿನೇಟ್ ಆದವರು ಕಿನ್ನರಿ ಅಲಿಯಾಸ್ ಭೂಮಿ ಶೆಟ್ಟಿ. ಆ ನಂತರ ಮನೆಯಿಂದ ಮತ್ತೊಂದು ಸ್ಪರ್ಧಿ ನಾಗಿಣಿ ಅಲಿಯಾಸ್ ದೀಪಿಕಾ ದಾಸ್ ಎಲಿಮಿನೇಟ್ ಆಗಿದ್ದಾರೆ. ಕೊನೆಯ ಹಂತ ತಲುಪಿರುವುದು ಶೈನ್ ಶೆಟ್ಟಿ, ಕುರಿ ಪ್ರತಾಪ್ ಹಾಗೂ ವಾಸುಕಿ ವೈಭವ್.
ಪರ್ಫೆಕ್ಟ್ ಗರ್ಲ್ ಎಂದೆನಿಸಿಕೊಂಡಿರುವ ದೀಪಿಕಾ ದಾಸ್ ಬ್ಯಾಗ್‌ನಲ್ಲಿ ಏನಿಟ್ಟವ್ರೇ ಗುರು!
ಸ್ಪರ್ಧಿಗಳು ಕೊನೆ ಹಂತ ತಲುಪುವುದಕ್ಕೆ ವೋಟಿಂಗ್ ಪ್ರಕ್ರಿಯೆ ವಿಭಿನ್ನವಾಗಿದೆ. ಒಂದು ಮೇಲ್ ಐಡಿಯಲ್ಲಿ ಒಬ್ಬ ಸ್ಪರ್ಧಿಗೆ ಮಾತ್ರ ವೋಟ್ ಹಾಕಬಹುದು. ಅವರು ಎಷ್ಟೇ ವೋಟ್ ಹಾಕಿದರೂ ಅದು ಪರಿಗಣಿಸ್ಪಡುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ ಪೇಜ್ ಹಾಗೂ ಟ್ರೋಲ್ ಪೇಜ್‌ಗಳ ಪ್ರಕಾರ ಗಾಯಕ ವಾಸುಕಿ ಮನೆಯಿಂದ ಹೊರ ಬಂದಿದ್ದಾರೆ. ಫೈನಲಿಸ್ಟ್‌ಗಳಾಗಿ ಶೈನ್ ಮತ್ತು ಕುರಿ ಪ್ರತಾಪ್ ವೇದಿಕೆ ಮೇಲೆ ಬರಲಿದ್ದಾರೆ ಎನ್ನಲಾಗಿದೆ. ನಿಖರವಾಗಿ ಬಿಗ್ ಬಾಸ್ ಟ್ರೋಫಿ ಯಾರ ಕೈ ಸೇರಲಿದೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.