
ಪ್ರೇಕ್ಷಕರಿಗೆ ಎಂಟರ್ಟೈನ್ಮೆಂಟ್ ನೀಡುತ್ತಾ ದೊಡ್ಡ ಮನೆಯಲ್ಲಿ ಸದಾ ಉತ್ಸಾಹದಿಂದ ಇರುತ್ತಿದ್ದ ಶೈನ್ ಶೆಟ್ಟಿ ಬಿಗ್ ಬಾಸ್ ಸೀಸನ್ 7ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಸುಮಾರು 113 ದಿನಗಳ ವರೆಗೆ ನಡೆದ ಬಿಗ್ ಬಾಸ್ ಸೀಸನ್ 7 ಇಂದು [ಭಾನುವಾರ] ಅಂತ್ಯವಾಗಿದ್ದು, ಅಂತಿಮವಾಗಿ ಗ್ರ್ಯಾಂಡ್ ಫಿನಾಲೆಯಲ್ಲಿ ಕುಂದಾಪುರದ ಕಂದ ಶೈನ್ ಶೆಟ್ಟಿ ಗೆಲುವಿನ ನಗೆ ಬೀರಿದರು.
BB7: 'ಫೋನ್ ಮಾಡ್ಲಿಲ್ಲ, ಆ್ಯಕ್ಸಿಡೆಂಟ್ ಆಯ್ತು' ಪ್ರೇಯಸಿಗೆ ಕ್ಷಮೆ ಕೇಳಿದ ಶೈನ್ ಶೆಟ್ಟಿ!
ಒಂದು ಕಡೆ ಸೈಲೆಂಟ್ ಆಗಿ ಸದಾ ಉಲ್ಲಾಸದಿಂದ ಇರುತ್ತಿದ್ದ ಶೈನ್ ಶೆಟ್ಟಿ, ಮತ್ತೊಂದೆಡೆ ಕಾಮಿಡಿ ಮೂಲಕ ಪ್ರೇಕ್ಷನರನ್ನ ಮನರಂಜಿಸುತ್ತಿದ್ದ ಕುರಿ ಪ್ರತಾಪ್. ಕೊನೆಗಳಿಗೆಯಲ್ಲಿ ಇಬ್ಬರ ನಡುವೆ ಬಾರೀ ಪೈಪೋಟಿ ನಡೆದಿತ್ತು.
ಅಂತಿಮವಾಗಿ ಆಲ್ ರೌಂಡರ್ ಪ್ರದರ್ಶನ ನೀಡುವ ಮೂಲಕ ಶೈನ್ ಶೆಟ್ಟಿ ಬಿಗ್ ಬಾಸ್-7ರ ಕಪ್ ತಮ್ಮದಾಗಿಸಿಕೊಂಡ್ರೆ, ಕುರಿ ಪ್ರತಾಪ್ ರನರ್ ಅಪ್ ಗೆ ತೃಪ್ತಿಪಡಬೇಕಾಯ್ತು. ಶೈನ್ ಬಿಗ್ ಬಾಸ್ ಟ್ರೋಫಿ ಮಾತ್ರವಲ್ಲದೇ ಬಿಗ್ ಬಾಸ್ ಘೋಷಣೆ ಮಾಡಿರುವ 50 ಲಕ್ಷ ಹಾಗೂ ಹೆಚ್ಚುವರಿಯಾಗಿ 11 ಲಕ್ಷ ಒಟ್ಟು 61 ಲಕ್ಷ ರೂಪಾಯಿಯನ್ನು ತಮ್ಮದಾಗಿಸಿಕೊಂಡರು.
BB7: ಮನೆಯಿಂದ ಹೊರ ಬಂದ ವಾಸುಕಿ, ಶುರುವಾಯ್ತು ಶೈನ್-ಕುರಿ ನಡುವೆ ಫೈಟ್ ?
ಕಿರುತೆರೆಯಲ್ಲಿದ್ದು ಜನಪ್ರಿಯರಾಗುತ್ತಿದ್ದಂತೆ ಶೈನ್ ಬೆಳ್ಳಿ ಪರದೆ ಮೇಲೆ ಬಂದರು. ಆದರೆ, ಅದೇನೂ ಅವರ ಕೈ ಹಿಡಿಯಲಿಲ್ಲ. ಬದುಕಿಗೆ ಒಂದು ದಾರಿ ಬೇಕಿತ್ತು. ಅದಕ್ಕೆ ದೋಸೆ ಕ್ಯಾಂಪ್ ಹಾಕಿ ಕೊಂಡಿದ್ದೇನೆ ಎಂದು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಆರಂಭದಲ್ಲಿಯೇ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.