
ಕಿರುತೆರೆ ನಟಿ ರಾಧಾ ಭಗವತಿ ಮತ್ತು ರಾಣವ್ ಗೌಡ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ರಾತ್ರಿ ಆರತಕ್ಷತೆ ನಡೆದಿದ್ದು, ಇಂದು ಬೆಳಿಗ್ಗೆ ಮದುವೆ ನೆರವೇರಿದೆ. ರಾಧಾ ಭಗವತಿ ಅವರ ಅರಿಶಿನ ಶಾಸ್ತ್ರ ಹಾಗೂ ಆರತಕ್ಷತೆಯ ಕೆಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿವೆ.
ಅರಿಶಿನ ಶಾಸ್ತ್ರದ ಕೆಲ ಫೋಟೋಗಳು ವೈರಲ್ ಆಗಿವೆ. ಇದ್ರಲ್ಲಿ ರಾಧಾ ಭಗವತಿ ಗೊಂಬೆಯಂತೆ ಮಿಂಚಿದ್ದಾರೆ. ಸಂಪೂರ್ಣ ಹಳದಿ ಬಣ್ಣದಲ್ಲಿ ಮಿಂದೆದ್ದ ರಾಧಾ ಭಗವತಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ. ನಿನ್ನೆ ಅಂದ್ರೆ ನವೆಂಬರ್ 25 ರಂದು ಅವರ ಆರತಕ್ಷತೆ ನಡೆದಿದೆ. ಆರತಕ್ಷತೆ ಹಾಗೂ ಅರಿಶಿನದ ಫೋಟೋಗಳನ್ನು ರಾಧಾ ಭಗವತಿ ಆಗ್ಲಿ ರಾಣವ್ ಗೌಡ ಆಗ್ಲಿ ಇನ್ನೂ ಹಂಚಿಕೊಂಡಿಲ್ಲ.
ಅಮೃತಧಾರೆ ಸೀರಿಯಲ್ನಲ್ಲಿ (Amruthadhaare Serial) ನೆಗೆಟ್ ರೋಲ್ ಮೂಲಕವೇ ವೀಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟವರು ಜೈದೇವ್ ಪಾತ್ರಧಾರಿ ರಾಣವ್ ಗೌಡ. ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ರಾಣವ್, ಈ ಸೀರಿಯಲ್ ನಲ್ಲಿ ಹೆಚ್ಚು ಸುದ್ದಿ ಮಾಡಿದ್ದರು. ಇನ್ನು ಅದೇ ಸೀರಿಯಲ್ ನಲ್ಲಿ ಮಲ್ಲಿಯಾಗಿ ನಟಿಸಿದ್ದ ಹಾಗೂ ಭಾರ್ಗವಿ ಎಲ್ಎಲ್ಬಿ ಸೀರಿಯಲ್ ಭಾರ್ಗವಿಯಾಗಿ ವೀಕ್ಷಕರ ಮನಸ್ಸು ಗೆದ್ದವರು ರಾಧಾ ಭಗವತಿ. ಇಬ್ಬರು ಕೆಲ ದಿನಗಳ ಹಿಂದೆಯೇ ತಾವು ದಾಂಪತ್ಯ ಜೀವನಕ್ಕೆ ಕಾಲಿಡೋದಾಗಿ ಹೇಳಿಕೊಂಡಿದ್ದರು.
ಅಷ್ಟಕ್ಕೂ ಇವರ ಲವ್ಸ್ಟೋರಿ ತುಂಬಾ ಇಂಟರೆಸ್ಟಿಂಗ್ ಆಗಿದೆ. ರಾಧಾ ಭಗವತಿ ಸಂದರ್ಶನವೊಂದರಲ್ಲಿ, ನನಗೆ ಗೊತ್ತಿಲ್ಲದೇ ಅವರ ಮೇಲೆ ಲವ್ ಆಯ್ತು, ಅವರ ಕ್ಯೂಟ್ನೆಸ್ ನನ್ನನ್ನ ಅಟ್ರ್ಯಾಕ್ಟ್ ಮಾಡಿತು. ನಾನೇ ಅವರಿಗೆ ಪ್ರಪೋಸ್ ಮಾಡಿದ್ದೆ. ಆದ್ರೆ ರಾಣವ್ ಒಪ್ಪಿರಲಿಲ್ಲ ಎಂದಿದ್ದರು. ನನಗೆ ರಾಧಾ ಗೊತ್ತಿದ್ದೇ ವಿನಃ ಅವರ ವ್ಯಕ್ತಿತ್ವ ಗೊತ್ತಿರಲಿಲ್ಲ. ಹಾಗಾಘಿ ಮದುವೆಗೆ ಒಪ್ಪಿರಲಿಲ್ಲ. ನಂತ್ರ ರಾಧಾ ಸ್ವಭಾಗ, ವ್ಯಕ್ತಿತ್ವ ಗೊತ್ತಾಗಿ ಓಕೆ ಎಂದಿದ್ದೆ ಎಂದು ರಾಣವ್ ಹೇಳಿದ್ದರು. ಸೀರಿಯಲ್ ನಲ್ಲಿ ಇವರನ್ನು ನೋಡಿದ್ದ ಪ್ರೇಕ್ಷಕರು ತೆರೆ ಹಿಂದೆಯೂ ಈ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.