
ಮುಂಬೈ (ನ.25) ಬಿಗ್ ಬಾಸ್ ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಬಿಗ್ ಬಾಸ್ ವೇದಿಕೆಯಲ್ಲಿ ಕೆಲ ಸ್ಪರ್ಧಿಗಳು ಪ್ರೋಪಸ್ ಮಾಡಿಯೂ ಗಮನಸೆಳೆದಿದ್ದಾರೆ. ಮತ್ತೆ ಕೆಲ ಜೋಡಿಗಳ ಪ್ರಣಕ್ಕೂ ಬಿಗ್ ಬಾಸ್ ವೇದಿಕೆ ಸಾಕ್ಷಿಯಾಗಿದೆ. ಇದೀಗ ಬಿಗ್ ಬಾಸ್ ಸ್ಪರ್ಧಿ ನೇರವಾಗಿ ಹೋಸ್ಟ್ ಸಲ್ಮಾನ್ ಖಾನ್‌ಗೆ ಆಡಿದ ಮಾತುಗಳು ಅಚ್ಚರಿಗೆ ಕಾರಣವಾಗಿದೆ. ನಾನು ಮದುವೆಯಾಗಲೇಂದೆ ಇಲ್ಲಿಗೆ ಬಂದಿದ್ದೇನೆ. ಬಾಲ್ಯದಲ್ಲಿ ನೀವು ನನ್ನ ಕ್ರಶ್ ಎಂದು ಸಲ್ಮಾನ್ ಖಾನ್‌ಗೆ ಹೇಳಿದ್ದಾಳೆ. ಟಾಸ್ಕ್ ವೇಳೆ ಸಲ್ಮಾನ್ ಖಾನ್ ಸ್ಪರ್ಧಿ ಅರಿಷ್ಫಾ ಖಾನ್ (Arishfa Khan) ಶ್ಲಾಘಿಸಿ 'ಅಡೋರಬಲ್ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅರಿಷ್ಫಾ ಮದುವೆ ಮಾತುಕತೆ ನಡೆಸಿದ್ದಾಳೆ.
ಇನ್‌ಫ್ಲುಯೆನ್ಸರ್ ಹಾಗೂ ನಟಿಯಾಗಿರುವ ಅರಿಷ್ಫಾ ಖಾನ್ ಮಾತನಾಡಿ,ನೀವು ನನ್ನ ಬಾಲ್ಯದ ಕ್ರಶ್. ನಾನು ನಿಮ್ಮನ್ನು ಮದುವೆಯಾಗಲೆಂದೇ ಮುಂಬೈಗೆ ಬಂದಿದ್ದೆ ಎಂದಿದ್ದಾರೆ. ತಕ್ಷಣವೇ ಮಾತು ಮುಂದುವರಿಸಿದ ಅವರು, "ಸಾರಿ ಸರ್, ಇದು ತುಂಬಾ ದೊಡ್ಡ ಮಾತು ಎಂದು ನನಗೆ ಗೊತ್ತು. ನಾನು ತುಂಬಾ ಚಿಕ್ಕವಳಿದ್ದಾಗ ನೀವು ನಿಜವಾಗಿಯೂ ನನ್ನ ಕ್ರಶ್ ಆಗಿದ್ದಿರಿ ಸ್ಪಷ್ಟಪಡಿಸಿದ್ದಾಳೆ.
ಅರಿಷ್ಫಾ ಮದುವೆ ಮಾತಿಗೆ ಸಲ್ಮಾನ್ ಖಾನ್ ನಕ್ಕಿದ್ದಾರೆ. ಇದೇ ವೇಳೆ ತಮ್ಮ ತಮಾಷೆ ಮಾತುಗಳಿಂದ ಕಾಲೆಳೆದಿದ್ದಾರೆ. ನಾನು ಕೇವಲ ಫ್ಲ್ಯಾಟರ್ ಆಗಿಲ್ಲ ಬದಲಿಗೆ ಫ್ಲ್ಯಾಟನ್ ಆಗಿಬಿಟ್ಟೆ ಎಂದು ಹಾಸ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಸ್ಯದ ನಡುವೆ ಅರಿಷ್ಫಾ ಬಾಲಿವುಡ್ ಸಿನಿಮಾದಲ್ಲಿ ಸಲ್ಮಾನ್ ಜೊತೆ ಸ್ಕೀನ್ ಶೇರ್ ಮಾಡುವ ಆಸೆ ಮುಂದಿಟಿದ್ದಾರೆ. ಎಂದಾದರೂ ನಿಮ್ಮೊಂದಿಗೆ ಸ್ಕ್ರೀನ್ ಶೇರ್ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಲ್ಮಾನ್ ಖಾನ್ ಆಕೆಯ ಕನಸನ್ನು ನನಸು ಮಾಡುವ ಭರವಸೆ ನೀಡಿದ್ದಾರೆ. ಇದಕ್ಕೂ ಮುನ್ನ ಸಂಚಿಕೆಯಲ್ಲಿ ಮಾತನಾಡಿದ್ದ ಸಲ್ಮಾನ್, ಬಿಗ್ ಬಾಸ್ 20 ಮನೆಯಲ್ಲಿ ಅರಿಷ್ಫಾ ಮುಂದೊಂದು ದಿನ ಲೀಡರ್ ಆಗುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದರು.
ಗಾಯದ ಸಮಸ್ಯೆಯಿಂದ ಸ್ಪರ್ಧಿ ಮನೀಶ್ ಗೊಯೆಲ್ ಬಿಗ್ ಬಾಸ್ 20ರ ಮನೆಯಿಂದ ಹೊರನಡೆದಿದ್ದಾರೆ. 40 ದಿನಗಳ ಕಾಲ ಮನೆಯಲ್ಲಿದ್ದ ಮನೀಶ್ ನಿರ್ಗಮನದಿಂದ ಇದೀಗ 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಖಾಜಿ ತೌಖೀರ್, ಯಂಗ್ ಡಿಎಸ್ಎ , ಮಾಹಿ ವಿಜ್ , ಸ್ಕೌಟ್ ಒಪಿ , ಉದಿತಾ ಸಿಂಗ್ , ಅರಿಷ್ಫಾ ಖಾನ್, ಲವ್ ಗಿಲ್, ಆಮ್ರಪಾಲಿ ದುಬೆ ,ಕನಿಕಾ ಮಾನ್ ಹಾಗೂ ಗುಲ್ಲು ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.\
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.