ಸ್ನೇಹಾ ಸತ್ತದ್ದಕ್ಕೆ ನಗಬೇಕಿತ್ತು, ಆದ್ರೆ ಚಿತೆ ನೋಡಿ ಅಪ್ಪನ ನೆನಪಾಗೋಯ್ತು... ಕಣ್ಣೀರಾದ ಪುಟ್ಟಕ್ಕನ ಮಕ್ಕಳು ವಿಲನ್‌ ರಾಧಾ!

Published : Dec 05, 2024, 12:02 PM ISTUpdated : Dec 05, 2024, 12:19 PM IST
ಸ್ನೇಹಾ ಸತ್ತದ್ದಕ್ಕೆ ನಗಬೇಕಿತ್ತು, ಆದ್ರೆ ಚಿತೆ ನೋಡಿ ಅಪ್ಪನ ನೆನಪಾಗೋಯ್ತು... ಕಣ್ಣೀರಾದ ಪುಟ್ಟಕ್ಕನ ಮಕ್ಕಳು ವಿಲನ್‌ ರಾಧಾ!

ಸಾರಾಂಶ

ಪುಟ್ಟಕ್ಕನ ಮಕ್ಕಳು ಸ್ನೇಹಾ ಸಾವಿನ ದೃಶ್ಯದ ಬಗ್ಗೆ ನೆನೆದು ಕಣ್ಣೀರಾಗಿದ್ದಾರೆ ಇದೇ ಸೀರಿಯಲ್‌ ವಿಲನ್‌ ರಾಧಾ ಅರ್ಥಾತ್‌ ರಮ್ಯಾ ರಾಜು.   

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸ್ನೇಹಾಳ ಸಾವಾಗಿದ್ದು, ಕಥೆ ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಿದೆ. ಆದರೆ, ನಿಜ ಜೀವನವೇ ಆಗಲಿ, ಕಥೆಯೇ ಆಗಲಿ ಸಾವಿನ ದೃಶ್ಯ ಮಾಡುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲಿಯೂ ಚಿತೆಯ ಮೇಲೆ ಮಲಗುವ ದೃಶ್ಯ, ಅದಕ್ಕೆ ಬೆಂಕಿ ಇಡುವುದು... ಇವೆಲ್ಲವೂ ಸೀರಿಯಲ್‌ಗಳಲ್ಲಿ ಕೇವಲ ಕಾಲ್ಪನಿಕ ಆಗಿದ್ದರೂ, ಅದನ್ನು ನೋಡುವ ವೀಕ್ಷಕರು ಕಣ್ಣೀರಾಗುವುದು ಇದೆ. ಎಷ್ಟೋ ಮಂದಿಗೆ ತಮ್ಮನ್ನು ಅಗಲಿದವರ ನೆನಪಾಗುವುದು ಇದೆ. ಆದರೆ ಅದೇ ಶೂಟಿಂಗ್‌ ಮಾಡುವ ಸಮಯದಲ್ಲಿ ಹಲವು ಸಂದರ್ಭಗಳಲ್ಲಿ ಅಲ್ಲಿರುವ ನಟ, ನಟಿಯರಿಗೂ ಇಂಥ ಭಾವುಕ ಸನ್ನಿವೇಶಗಳನ್ನು ನೋಡುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಅಲ್ಲಿರುವ ಆ ಕಣ್ಣೀರಿನ ದೃಶ್ಯದಲ್ಲಿಯೂ ಖುಷಿ ಪಡಬೇಕು ಎಂದರೆ ಹೇಗಿರುತ್ತದೆ? ಮನಸ್ಸಿನಲ್ಲಿ ಅಗಾಧ ನೋವು ಇಟ್ಟುಕೊಂಡು, ಹೊರಗಡೆ ನಗು ಅದೂ ಸತ್ತ ಖುಷಿಯ ನಗು ತೋರಬೇಕು ಎಂದರೆ ಅದು ತುಂಬಾ ಕಷ್ಟ ಅಲ್ವಾ? 

ಆದರೆ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ವಿಲನ್‌ ರಾಧಾ ಅವರಿಗೆ ಅಂಥದ್ದೇ ಒಂದು ಸನ್ನಿವೇಶ ಎದುರಿಸಬೇಕಾಗಿ ಬಂದಿತ್ತು. ಅದನ್ನು ಅವರು ಪಂಚಮಿ ಟಾಕ್ಸ್‌ ಯುಟ್ಯೂಬ್‌ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ. ಸ್ನೇಹಾ ಸತ್ತ ಚಿತೆಯಲ್ಲಿ ಮಲಗಿರುವ ದೃಶ್ಯವದು. ಸ್ನೇಹಾ ಕಂಡರೆ ಆಗದ ರಾಧಾಳಿಗೆ ಸ್ನೇಹಾ ಸತ್ತಿದ್ದು, ಸಿಕ್ಕಾಪಟ್ಟೆ ಖುಷಿ ಕೊಡುತ್ತಿದೆ. ತನ್ನ ಜೀವನದಿಂದ ಒಂದು ಹುಳು ಹೋಯಿತು ಎನ್ನುವ ಮನೋಭಾವ ಈ ವಿಲನ್‌ದ್ದು. ಸ್ನೇಹಾಳ ಪತಿ ಕಂಠಿಯ ಮೇಲೆ ಕಣ್ಣು ಹಾಕಿದ್ದ ರಾಧಾಳಿಗೆ ಇನ್ನು ತನ್ನ ಜೀವನ ಸುಲಭ ಎನ್ನುವ ಖುಷಿ ಖುಷಿ. ಆದರೆ ರಾಧಾ ಪಾತ್ರಧಾರಿ ರಮ್ಯಾ ರಾಜು ಅವರಿಗೆ ಮಾತ್ರ ಸ್ನೇಹಾಳನ್ನು ಚಿತೆಯಲ್ಲಿ ಮಲಗಿಸಿದ್ದನ್ನು ನೋಡಿ ಅಗಲಿದ ಅಪ್ಪನ ನೆನಪಾಯಿತಂತೆ. ಸೀರಿಯಲ್‌ನಲ್ಲಿ ನಗಬೇಕು, ಆದರೆ ಅಕಾಲಿಕವಾಗಿ ಮೃತಪಟ್ಟ ಅಪ್ಪನ ನೆನಪಾಗಿ ಆ ನೋವಿನಲ್ಲಿ ನಗುವುದಾದರೂ ಹೇಗೆ ಎನ್ನುವ ತೊಳಲಾಟವನ್ನು ನಟಿ ಈ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.

ಹೊಸ ಸ್ನೇಹಾ, ಕಂಠಿಯನ್ನು ಮದುವೆಯಾಗ್ತಾಳಾ? ಪಾತ್ರಧಾರಿ ನಟಿ ಅಪೂರ್ವ ನಾಗರಾಜ್ ಹೇಳಿದ್ದೇನು?

ರಾಧಾ ಪಾತ್ರಧಾರಿಯಾಗಿರುವ ರಮ್ಯಾ ಅವರು ತಂದೆಯನ್ನು ಕಳೆದುಕೊಂಡು ಹತ್ತು ವರ್ಷಗಳಾಗಿವೆ. ಶೆಫ್‌ ಆಗಿದ್ದ ಅವರು, ಒಮ್ಮೆ ಸಂಬಂಧಿಕರ ಮನೆಯಲ್ಲಿ ಎಲೆಕ್ಟ್ರಿಕ್‌ ರಿಪೇರಿ ಮಾಡುವ ಸಮಯದಲ್ಲಿ ಗ್ರೌಂಡ್‌ ಆಗಿ ಶಾಕ್‌ಗೆ ಒಳಗಾಗಿ ಮೃತಪಟ್ಟಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿರುವ ರಮ್ಯಾ ಅವರಿಗೆ ಅಂದು ಆಗಿರುವ ಆಘಾತ ಅಷ್ಟಿಷ್ಟಲ್ಲ. ಕುಟುಂಬದ ಆಧಾರವಾಗಿರುವ ಅಪ್ಪನನ್ನು ಕಳೆದುಕೊಂಡು ಇಡೀ ಕುಟುಂಬ ಹೇಗೆ ನೋವು ಅನುಭವಿಸಿತು ಎನ್ನುವುದನ್ನು ನಟಿ ಹೇಳಿದ್ದಾರೆ. ಇದೇ ವೇಳೆ, ಸ್ನೇಹಾಳನ್ನು ಶವದ ಪೆಟ್ಟಿಗೆಯಲ್ಲಿ ತಂದಾಗ, ನೇರವಾಗಿ ಆ ದೃಶ್ಯ ನನ್ನ ತಂದೆಯ ಜೊತೆ ಲಿಂಕ್‌ ಆಗಿ ಹೋಯಿತು, ಅಳು ತಡೆಯಲು ಆಗಲಿಲ್ಲ ಎಂದಿದ್ದಾರೆ ರಮ್ಯಾ. ಇದೇ ಸೀರಿಯಲ್‌ನಲ್ಲಿ ಈ ಹಿಂದೆ ಸಹನಾ ಸತ್ತಿದ್ದಾಳೆ ಎಂಬ ಸುದ್ದಿ ಬಂದಾಗಲೂ, ಆಕೆಯ ಅಂತಿಮ ಸಂಸ್ಕಾರ ಮಾಡುವಾಗಲೂ ನನಗೆ ಅಳು ತಡೆಯಲು ಆಗಿರಲಿಲ್ಲ. ಆದರೆ ಸ್ನೇಹಾ ಸಾವಿನ ಶೂಟಿಂಗ್‌ ಇಡೀ ದಿನ ನಡೆದಿತ್ತು. ಅದರಲ್ಲಿಯೇ ಮುಳುಗಿ ಹೋಗಿದ್ದ ನನಗೆ ಅಪ್ಪನ ನೆನಪಾಯಿತು. ಆದರೆ ಸ್ನೇಹಾ ಸತ್ತಿದ್ದಕ್ಕೆ ರಾಧಾ ಖುಷಿ ಪಡಬೇಕಿತ್ತು ಎಂದು ಆ ದಿನವನ್ನು ನೆನೆದುಕೊಂಡು ರಮ್ಯಾ ಭಾವುಕರಾಗಿದ್ದಾರೆ. ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಅವರು ಆರಾಮಾಗಿಯೇ ಇದ್ದರು. ಆದರೆ ನನಗೆ ಮಾತ್ರ ನೋವು ತಡೆಯಲು ಆಗಲಿಲ್ಲ ಎಂದಿದ್ದಾರೆ. 

ಅಂದಹಾಗೆ ನಟಿ ರಮ್ಯಾ ರಾಜು ಅವರು ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ ಬರುವುದಕ್ಕೂ ಮುಂಚೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದರೆ ಇವರು ಹೆಚ್ಚು ಫೇಮಸ್‌ ಆಗಿರುವುದು ವಿಲನ್‌ ರೋಲ್‌ ಮೂಲಕ.  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನಸೆಲ್ಲಾ ನೀನೆ' ಧಾರಾವಾಹಿಯಲ್ಲಿ ನಟಿಸಿದ್ದರು. ಬಳಿಕ  'ಗೀತಾ', 'ಕೆಂಡಸಂಪಿಗೆ' ಧಾರಾವಾಹಿಯಲ್ಲೂ ಪಾತ್ರ ಮಾಡಿದ್ದಾರೆ. ಮೊದಲಿಗೆ ನಾಯಕಿಯಾಗಿ ಮಿಂಚಿದ್ದರು. ಈಗಲೂ ವಿಲನ್‌ ರೋಲ್‌ನಿಂದ ಹೊರಕ್ಕೆ ಬಂದು ಬೇರೆ ಬೇರೆ ಪಾತ್ರಗಳಲ್ಲಿ ನಟಿಸುವ ಆಸೆ ಇವರಿಗೆ. ಆದರೆ ಸದ್ಯ ವಿಲನ್‌ ರೋಲ್‌ ಇವರ ಕೈಹಿಡಿದಿದೆ. 
 

ಪುಟ್ಟಕ್ಕನ ಮಕ್ಕಳು ನೋಡಿದ ಅಜ್ಜಿಗೆ ಹಾರ್ಟ್ ವೀಕ್, ಭಾಗ್ಯಲಕ್ಷ್ಮಿ ಮಾತ್ರ ತೋರಿಸ್ಬೇಡಿ ಅಂದ್ರು ಮತ್ತೊಬ್ಬರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!